
ಮನಾಲಿ(ಏ.08) ಮದುವೆ ಬಳಿಕ ಹನಿಮೂನ್ ಇದೀಗ ಸಾಮಾನ್ಯ. ಬಹುತೇಕರು ಮದುವೆಯಾದ ಬೆನ್ನಲ್ಲೇ ಹನಿಮೂನ್ ಟ್ರಪ್ ಪ್ಲಾನ್ ಮಾಡುತ್ತಾರೆ. ಇನ್ನೂ ಇತ್ತೀಚೆಗೆ ಹನಿಮೂನ್ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದು ಹೋಸದೇನಲ್ಲ. ಇದೇ ರೀತಿಯ ಮದುವೆಯಾದ ಜೋಡಿ ಮನಾಲಿಗೆ ಹನಿಮೂನ್ ಟ್ರಿಪ್‌ಗೆ ತೆರಲಿದೆ. ಇಲ್ಲಿನ ಹನಿಮೂನ್ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ಭಾರಿ ವೈರಲ್ ಆಗಿದೆ.
ನವ ಜೋಡಿಗಳ ಆಪ್ತ ಸಮಯ
ನವ ಜೋಡಿಗಳು ಬಹುತೇಕರಂತೆ ಜನಪ್ರಿಯ ಪ್ರವಾಸಿ ತಾಣ ಮನಾಲಿಗೆ ಹನಿಮೂನ್ ತೆರಳಿದೆ. ನವಜೋಡಿಗಳು ಈ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ ಮನಾಲಿಯಲ್ಲಿ ಹನಿಮೂನ್ ರಾತ್ರಿ ವಿಡಿಯೋ ಎಂದ ಬರೆದುಕೊಂಡಿದ್ದಾರೆ. ನವ ಜೋಡಿಗಳು ಆತ್ಮೀಯವಾಗಿ ಕಳೆದಿರುವ ಸುಂದರ ಸಮಯದ ವಿಡಿಯೋ ಇದಾಗಿದೆ.
ಪ್ರಯಾಣದಲ್ಲೂ ಖಾಸಗಿ ಸಮಯ ಕಳೆಯಲು ಜೋಡಿಗಳಿಗಾಗಿ ಬೆಂಗಳೂರಿನಲ್ಲಿ ಸ್ಮೂಚ್ ಕ್ಯಾಬ್ ಆರಂಭ
ಸಿಂಗರಿಸಿದ ಬೆಡ್, ಕೇಕ್ ಸೇರಿ ಒಂದಷ್ಟು
ಈ ವಿಡಿಯೋ ನವ ಜೋಡಿಗಳಿಗೆ ನೀಡಿದ ಸಿಂಗರಿಸಿದ ಹನಿಮೂನ್ ಥೀಮ್ ಬೆಡ್ ರೂಂನಿಂದ ಆರಂಭಗೊಳ್ಳುತ್ತದೆ. ಬೆಡ್‌ನ್ನು ಸಂಪೂರ್ಣ ಹೂವುಗಳಿಂದ ಅಲಂಕರಿಸಲಾಗಿದೆ. ಬೆಡ್ ಮೇಲೂ ಇಬ್ಬರ ಹೆಸರನ್ನು ಬರೆಯಲಾಗಿದೆ. ಬಳಿಕ ಹಾರ್ಟ್ ಶೇಪ್ ಇದರೊಳಗೆ ಲವ್ ಎಂದು ಬರೆಯಲಾಗಿದೆ. ಜೊತೆಗೆ ಹನಿಮೂನ್ ಎಂದೂ ಹೂವುಗಳಿಂದ ಬರೆಯಲಾಗಿದೆ. ಜೊತೆಗೆ ಸಂಪೂರ್ಣ ಕೋಣೆಯನ್ನು ಸುಂದರವಾಗಿ ಅಲಂಕರಿಸಲಾಗಿದೆ. ಬೆಡ್ ಪಕ್ಕದಲ್ಲಿರುವ ಟೇಬಲ್ ಮೇಲೆ ಶಾಂಪೇನ್ ಬಾಟಲಿ, ಎರಡು ಗ್ಲಾಸ್, ಹಣ್ಣುಗಳನ್ನು ಇಡಲಾಗಿದೆ.ಜೊತೆಗೆ ಹೂವುಗಳಿಂದ ಅಲಂಕರಿಸಲಾಗಿದೆ. ಬಳಿಕ ಇಬ್ಬರು ಬೆಡ್ ರೂಂಗೆ ಬಂದು ಕೇಕ್ ಕತ್ತರಿಸಿ ಸಿಹಿ ತಿನ್ನಿಸಿದ್ದಾರೆ. ಬಳಿಕ ಇಬ್ಬರು ಒಂದೊಂದು ಗ್ಲಾಸ್ ಶಾಂಪೇನ್ ಹಿಡಿದು ಒಂದಷ್ಟು ಹರಟೆ ಹೊಡೆಯುತ್ತಾ ಕುಳಿತಿದ್ದಾರೆ. ಇದಾದ ಬಳಿಕ ಕ್ಯಾಂಡಲ್‌ಲೈಟ್ ಡಿನ್ನರ್. ಡಿನ್ನರ್ ಟೇಬಲ್ ಕೂಡ ಸುಂದರವಾಗಿ ಅಲಂಕರಿಸಲಾಗಿತ್ತು.
ಕ್ಯಾಂಡಲ್ ಲೈಟ್ ಡಿನ್ನರ್‌ಗೆ ಈ ವಿಡಿಯೋ ಅಂತ್ಯಗೊಂಡಿದೆ. ಹೀಗಾಗಿ ಸಾಕಷ್ಟು ಕುತೂಹಲದಿಂದ ಕಾಯುತ್ತಿದ್ದ ಹಲವರಿಗೆ ನಿರಾಸೆಯಾಗಿರಬಹುದು. ಆದರೆ ಈ ಜೋಡಿಗಳು ತಮ್ಮ ಮನಾಲಿ ಹನಿಮೂನ್ ವಿಡಿಯೋ ಎಂದು ಹಂಚಿಕೊಂಡಿದ್ದಾರೆ. ಹಲವರು ಈ ವಿಡಿಯೋಗೆ ಭಾರಿ ಕಮೆಂಟ್ ಮಾಡಿದ್ದಾರೆ.
ರೋಮ್ಯಾಂಟಿಕ್ ಥೀಮ್ ವಿಡಿಯೋಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಭಾರಿ ವಿರೋಧಗಳು ವ್ಯಕ್ತವಾಗುತ್ತಿದೆ. ನವ ಜೋಡಿಗಳಿಗೆ ಶುಭಾಶಯಗಳು ಎಂದು ಕಮೆಂಟ್ ಆರಂಭಿಸಿದರೆ ಬಳಿಕ ಪಾಠ ಮಾಡಿದ್ದಾರೆ. ಮದುವೆಯಾಗಿ ಖುಷಿಯಾಗಿರಿ. ಆದರೆ ಈ ರೀತಿ ವಿಡಿಯೋಗಳನ್ನು ಹಂಚಿಕೊಳ್ಳುವುದು ಉತ್ತಮ ಬೆಳವಣಿಗೆ ಅಲ್ಲ ಎಂದು ಹಲವರು ಹೇಳಿದ್ದಾರೆ.
ನಟ ಸಿದ್ದಾರ್ಥ್ ಜೊತೆಗಿನ ವೈವಾಹಿಕ ಜೀವನದ ರಹಸ್ಯ ಬಿಚ್ಚಿಟ್ಟ ಅದಿತಿ ರಾವ್!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.