ಎರಡು ಮಕ್ಕಳ ತಾಯಿಗೆ ಮೂರು ಮಕ್ಕಳ ತಂದೆ ಮೇಲೆ ಪ್ರೀತಿ! ಪತಿಗೆ ಗೊತ್ತಾದ್ಮೇಲೆ?

By Suvarna News  |  First Published Jul 7, 2023, 2:40 PM IST

ಬಿಹಾರದಲ್ಲಿ ಹುಬ್ಬೇರಿಸುವ ಘಟನೆ ನಡೆದಿದೆ. ವಿವಾಹಿತ ಮಹಿಳೆ ವಿವಾಹಿತ ಪುರುಷನ ಜೊತೆ ಪ್ರೀತಿ ಸಂಬಂಧ ಬೆಳೆಸಿ ಈಗ ಸಿಕ್ಕಿಬಿದ್ದಿದ್ದಾಳೆ. ಪತ್ನಿಯ ಚಕ್ಕಂದ ಗೊತ್ತಾದ ಪತಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾನೆ.
 


ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ. ಯಾವಾಗ ಬೇಕಾದ್ರೂ, ಎಲ್ಲಿ ಬೇಕಾದ್ರೂ, ಯಾರಿಗೆ ಬೇಕಾದ್ರೂ ಪ್ರೀತಿ ಚಿಗುರಬಹುದು. ಆದ್ರೆ ಪ್ರೀತಿಯಲ್ಲಿ ಬಿದ್ದವರು ತಾವು ಯಾವ ಸ್ಥಾನದಲ್ಲಿದ್ದೇವೆ, ತಮ್ಮ ಜವಾಬ್ದಾರಿ ಏನು ಎಂಬುದನ್ನು ಅರಿತಿರಬೇಕು. ವಿವಾಹೇತರ ಸಂಬಂಧಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗ್ತಿದೆ. ಐಟಿ ಕಂಪನಿಗಳಿಂದ ಹಿಡಿದು ಹಳ್ಳಿಗಳಲ್ಲಿಯೂ ವಿವಾಹೇತರ ಸಂಬಂಧದ ವಿವಾದಗಳು ಕೇಳಿ ಬರ್ತಿರುತ್ತವೆ. ಮದುವೆಯಾಗಿ ಮಕ್ಕಳಾದ್ಮೇಲೆ ಮನಸ್ಸು ಬದಲಾಗಿ, ಮಕ್ಕಳನ್ನು ಬಿಟ್ಟು ಬೇರೊಬ್ಬರ ಜೊತೆ ಓಡಿ ಹೋದ ಅದೆಷ್ಟೋ ಘಟನೆಗಳಿವೆ. ಈಗ ಅದಕ್ಕೆ ಇನ್ನೊಂದು ಘಟನೆ ಸೇರಿಕೊಂಡಿದೆ. ಪರ ಊರಿನ ವ್ಯಕ್ತಿ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದ ಮಹಿಳೆಗೆ ಬಲವಂತವಾಗಿ ಮದುವೆ ಮಾಡಲಾಗಿದ್ದು. ಮದುವೆ ಮಾಡಿದ್ದು ಬೇರೆ ಯಾರೂ ಅಲ್ಲ ಆಕೆ ಗಂಡ. 

ಎರಡು ಮಕ್ಕಳ ತಾಯಿಗೆ ಮೂರು ಮಕ್ಕಳ ತಂದೆ ಮೇಲೆ ಲವ್ (Love) : ಘಟನೆ ನಡೆದಿರೋದು ಬಿಹಾರ (Bihar) ದ ನವಾಡ ಜಿಲ್ಲೆಯ ನಾರ್ಡಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಕಹುರಾ ಗ್ರಾಮದಲ್ಲಿ. ಮಹಿಳೆಯ ಪ್ರೇಮಿ (Lover) ನಾವಡಾದ ನಾರ್ಡಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಮಾಪ್ನಾ ಗರ್ಹಿಯಾ ಗ್ರಾಮದ ನಿವಾಸಿ. ಆತನಿಗೆ ವಿವಾಹಿತರಾಗಿದ್ದು 3 ಮಕ್ಕಳ ತಂದೆ. ಮಹಿಳೆ ಕಹುರಾ ಗ್ರಾಮದ ನಿವಾಸಿಯಾಗಿದ್ದು, ಅವಳಿಗೆ ಇಬ್ಬರು ಮಕ್ಕಳಿದ್ದಾರೆ.

Tap to resize

Latest Videos

Sex Life: ಪೈಲ್ಸ್ ಇರುವಾಗ ಸಂಭೋಗ ಎಷ್ಟು ಸೂಕ್ತ?

ಕೆಟ್ಟಿತ್ತು ಅದೃಷ್ಟ : ಮಹಿಳೆಯ ಪತಿ ರಾತ್ರಿ ಕೆಲಸದ ಮೇಲೆ ಪರ ಊರಿಗೆ ಹೋಗಿದ್ದ ಸಂದರ್ಭದಲ್ಲಿ ಪ್ರೇಮಿ ಮನೆಗೆ ಬಂದಿದ್ದಾನೆ. ಇದು ಕುಟುಂಬಸ್ಥರಿಗೆ ಗೊತ್ತಾಗಿದೆ. ತಕ್ಷಣ ಕಾರ್ಯಾಚರಣೆಗಿಳಿದ ಕುಟುಂಬ್ಥರು ಇಬ್ಬರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಮಹಿಳೆ ಪ್ರೇಮಿಯನ್ನು ಮನಸ್ಸಿಗೆ ಬಂದಂತೆ ಥಳಿಸಿದ್ದಾರೆ. ನಂತ್ರ ಇಬ್ಬರನ್ನು ಮನೆಯಲ್ಲೇ ಕಟ್ಟಿಹಾಕಿದ್ದಾರೆ.

ಕೋಪಗೊಂಡ ಪತಿ ಮಾಡಿದ್ದೇನು? : ಬೇರೆ ಊರಿಗೆ ಹೋಗಿದ್ದ ಪತಿಗೆ, ಪತ್ನಿ ಚಲ್ಲಾಟ ತಿಳಿಯುತ್ತಿದ್ದಂತೆ ಕೋಪಗೊಂಡು ಮನೆಗೆ ವಾಪಸ್ ಆಗಿದ್ದಾನೆ. ನಂತ್ರ ಪತ್ನಿಗೆ ಬಲವಂತದ ಮದುವೆ ಮಾಡುವ ನಿರ್ಧಾರ ಕೈಗೊಂಡಿದ್ದಾನೆ.

ದೇವಸ್ಥಾನದಲ್ಲಿ ನಡೆಯಿತು ಮದುವೆ : ಮೂರು ಮಕ್ಕಳ ಪ್ರೇಮಿ ಹಾಗೂ ಎರಡು ಮಕ್ಕಳ ಪ್ರೇಯಸಿಗೆ ಒತ್ತಾಯದ ಮದುವೆ ನಡೆದಿದೆ. ಮಹಿಳೆ ಪತಿ ದೇವಸ್ಥಾನದಲ್ಲಿ ಇಬ್ಬರ ಮದುವೆ ಮಾಡಿಸಿದ್ದಾನೆ.

ಗಂಡನಿಲ್ಲದ ಹೆಂಡತಿಗಿಂತ, ಹೆಂಡತಿ ಇಲ್ಲದ ಗಂಡನಿಗೇ ವೃದ್ಧಾಪ್ಯ ಕಷ್ಟವಾಗುತ್ತಾ?

ವೈರಲ್ ವಿಡಿಯೋ : ಇವರಿಬ್ಬರ ಮದುವೆ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಪ್ರೇಮಿ, ಮಹಿಳೆಗೆ ಸಿಂಧೂರ ಇಡುತ್ತಿದ್ದಾನೆ. ಆತನ ಮೈ, ಕೈಗೆಲ್ಲ ಗಾಯಗಳಾಗಿರೋದನ್ನು ನೋಡ್ಬಹುದು. ಮಹಿಳೆ ಒಂದೇ ಸಮನೆ ಅಳ್ತಿದ್ದರೆ, ಆಕೆಯ ಕತ್ತು ಹಿಡಿದು ಬಲವಂತವಾಗಿ ಸಿಂಧೂರ ಇಡಿಸಲಾಗ್ತಿದೆ.

ಗ್ರಾಮದಿಂದ ಹೊರ ಹಾಕಿದ ಗ್ರಾಮಸ್ಥರು : ದೇವಸ್ಥಾನದಲ್ಲಿ ನಡೆದ ಮದುವೆಗೆ ಗ್ರಾಮಸ್ಥರು ಸಾಕ್ಷಿಯಾಗಿದ್ದರು. ಇಬ್ಬರು ಪ್ರೇಮಿಗಳ ಮದುವೆಯಾಗ್ತಿದ್ದಂತೆ ಅವರನ್ನು ಗ್ರಾಮದಿಂದ ಹೊರಗೆ ಹಾಕಲಾಗಿದೆ. ಈ ಬಗ್ಗೆ ಗ್ರಾಮಸ್ಥರಾಗ್ಲಿ, ಮಹಿಳೆ ಪತಿಯಾಗ್ಲಿ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.

ಮೂರು ವರ್ಷಗಳ ಹಿಂದೆ ಶುರುವಾಗಿತ್ತು ಪ್ರೀತಿ :  ಕಳೆದ ಮೂರು ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಈ ವಿಷ್ಯ ಮನೆಯವರಿಗೂ ತಿಳಿದಿತ್ತಂತೆ. ಪತಿ ಮೌನವಾಗಿದ್ದನಂತೆ. ದಿನ ಕಳೆದಂತೆ ಪತ್ನಿ ಬದಲಾಗಬಹುದು ಎಂದು ಪತಿ ಭಾವಿಸಿದ್ದನಂತೆ. ಇಬ್ಬರ ಮಧ್ಯೆ ಅಂತರವುಂಟಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದನಂತೆ. ಆದ್ರೆ ಇಬ್ಬರ ಮಧ್ಯೆ ಪ್ರೀತಿ ಮತ್ತಷ್ಟು ಗಟ್ಟಿಯಾಗಿತ್ತಂತೆ. ಪ್ರೇಮಿ ಮನೆಗೆ ಬರುವಷ್ಟು ಮಿತಿಮೀರಿದಾಗ ಕುಟುಂಬಸ್ಥರ ಕೋಪ ಕೆರಳಿದೆ. 

ಪೊಲೀಸ್ ಅಧಿಕಾರಿಗಳು ಹೇಳೋದೇನು? : ನಡೆದಿರೋದು ಬಿಹಾರದ ನವಾಡ ಜಿಲ್ಲೆಯ ನಾರ್ಡಿಗಂಜ್ ನಲ್ಲಿ ಪ್ರೇಮಿಗಳಿಬ್ಬರ ಮದುವೆಯನ್ನು ಬಲವಂತವಾಗಿ ಮಾಡಲಾಗಿದೆ ಎಂಬ ಸುದ್ದಿಯಿದೆ. ಆದ್ರೆ ಯಾವುದೇ ದೂರು ದಾಖಲಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. 
 

click me!