ಅತ್ತೆಯನ್ನು ಇಂಪ್ರೆಸ್ ಮಾಡೋದು ಹೇಗೆ? ಮೊನ್ನೆ ಮೊನ್ನೆ ಮದ್ವೆಯಾದ ಕಿಯಾರಾ ಆಡ್ವಾಣಿ ಹೇಳ್ತಾರೆ!

By Suvarna News  |  First Published Jul 7, 2023, 12:03 PM IST

ಸೆಲೆಬ್ರಿಟಿಗಳಿಗೂ ವೈಯಕ್ತಿಕ ಜೀವನವಿರುತ್ತೆ. ಅಲ್ಲಿನ ಸುಖ ಸಂತೋಷಕ್ಕೂ ಅವರು ಆದ್ಯತೆ ನೀಡ್ಬೇಕಾಗುತ್ತೆ. ಅತ್ತೆ- ಸೊಸೆ ವಿಷ್ಯ ಬಂದಾಗ, ಅತ್ತೆಯ ಮನಸ್ಸು ಕದಿಯಲು ಸೊಸೆ ಏನ್ಮಾಡ್ಮೇಕು ಎಂಬುದು ನಟಿ ಕಿಯಾರಾ ಅಡ್ವಾನಿಗೆ ತಿಳಿದಿದೆ.
 


ಸೆಲೆಬ್ರಿಟಿಗಳ ಮೇಲೆ ಅಭಿಮಾನಿಗಳಿಗೆ ವಿಶೇಷ ಆಸಕ್ತಿಯಿರುತ್ತದೆ. ಅದ್ರಲ್ಲೂ ಅವರ ಕೌಟುಂಬಿಕ ವಿಷ್ಯಗಳನ್ನು ಕೇಳಲು ಅವರು ಹೆಚ್ಚು ಉತ್ಸಾಹ ತೋರ್ತಾರೆ. ನವ ದಂಪತಿ, ಅವರ ಕುಟುಂಬವನ್ನು ಎರಗಿ ನೋಡೋದೆಂದ್ರೆ ಎಲ್ಲರಿಗೂ ಇಷ್ಟ. ಅತ್ತೆ – ಸೊಸೆ ಎಂಬ ಬಂಧ ಕೇವಲ ಶ್ರೀಸಾಮಾನ್ಯರಿಗೆ ಮೀಸಲಾಗಿಲ್ಲ. ಸೆಲೆಬ್ರಿಟಿಗಳಲ್ಲೂ ಈ ಅತ್ತೆ – ಸೊಸೆ ಗಲಾಟೆ, ಬಾಂಧವ್ಯ, ಪ್ರೀತಿಯನ್ನು ನಾವು ನೋಡ್ಬಹುದು. 

ಬಾಲಿವುಡ್ (Bollywood) ನಲ್ಲಿ ಅನೇಕ ಅತ್ತೆ – ಸೊಸೆಯರು ಜನರಿಗೆ ಮಾದರಿಯಾಗಿದ್ದಾರೆ. ಈಗ ಈ ಪಟ್ಟಿಗೆ ನಟಿ ಕಿಯಾರಾ (Kiara) ಮತ್ತು ಅವರ ಅತ್ತೆ ಸೇರುವ ಸಾಧ್ಯತೆಯಿದೆ. ಮದುವೆಯಾದ ಕೆಲವೇ ದಿನಗಳಲ್ಲೇ ಇಬ್ಬರ ಬಾಂಡಿಂಗ್ ಚೆನ್ನಾಗಿದೆ. ಇದನ್ನು ಕಿಯಾರಾ ಕೂಡ ಒಪ್ಪಿಕೊಂಡಿದ್ದಾರೆ.

Tap to resize

Latest Videos

ಮತ್ತೇರಿಸೋ ಮುತ್ತಿನ ಗಮ್ಮತ್ತೇ ಬೇರೆ, ಕಿಸ್‌ ಕುರಿತಾದ ಸ್ವಾರಸ್ಯಕರ ಸಂಗತಿಯಿದು

ಅತ್ತೆಯನ್ನು ಇಂಪ್ರೆಸ್ ಮಾಡಲು ಎಷ್ಟೇ ಪ್ರಸಿದ್ಧ ಸೊಸೆಯಾದ್ರೂ ಪ್ರಯತ್ನಿಸ್ತಾಳೆ. ಇದಕ್ಕೆ ಕಿಯಾರಾ ಅಡ್ವಾಣಿ ಕೂಡ ಹೊರತಾಗಿಲ್ಲ. ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ತಾಯಿ ಅಂದರೆ ಕಿಯಾರಾ ಅಡ್ವಾಣಿ ಅತ್ತೆಗೆ ಪಾನಿ ಪುರಿ (Pani Puri) ತುಂಬಾ ಇಷ್ಟವಂತೆ. ಈ ವಿಷ್ಯ ತಿಳಿದಿದ್ದ ಕಿಯಾರಾ ಅಡ್ವಾಣಿ, ಅತ್ತೆಯನ್ನು ಮೆಚ್ಚಿಸಲು ಪಾನಿಪುರಿಯನ್ನು ತಾವೇ ರೆಡಿ ಮಾಡಿ ನೀಡಿದ್ದರಂತೆ. ಮದುವೆಯಲ್ಲಿ ಪಾನಿಪುರಿ ಪ್ರತ್ಯೇಕ ಸ್ಟಾಲ್ ಕೂಡ ಇಡಲಾಗಿತ್ತು ಎನ್ನುವ ಕಿಯಾರಾ, ಅತ್ತೆ ಮುಂಬೈಗೆ ಬಂದಾಗೆಲ್ಲ ಪಾನಿಪುರಿ ತಿನ್ನಿಸದೆ ಕಳಿಸೋದಿಲ್ಲ ಎನ್ನುತ್ತಾರೆ. ಅತ್ತೆ ಮುಂಬೈಗೆ ಬಂದ ಮೊದಲ ದಿನ ಅವರು ಪಾನಿಪುರಿ ತಿನ್ನಲೇಬೇಕು. ಅವರಿಗೆ ಯಾವ ಸ್ಟ್ರೀಟ್ ಫುಡ್ ಇಷ್ಟ ಎಂಬುದನ್ನು ನಾನು ತಿಳಿದುಕೊಂಡಿದ್ದೇನೆ ಎನ್ನುತ್ತಾರೆ ಕಿಯಾರಾ ಅಡ್ವಾಣಿ.

ಅತ್ತೆ ಮೆಚ್ಚಿಸಲು ಮನೆಯಲ್ಲಿ ಮಾಡಿದ್ರು ಪಾನಿಪುರಿ : ಸದ್ಯ ಕಿಯಾರಾ ಅಡ್ವಾಣಿ ತಮ್ಮ ಸತ್ಯ ಪ್ರೇಮ್ ಕಿ ಕಥಾ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಕಿಯಾರಾ , ನನ್ನ ಅತ್ತೆಗೆ ಪಾನಿ ಪುರಿ ತುಂಬಾ ಇಷ್ಟ. ಅವರು ಸದ್ಯ ನಮ್ಮೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಮೊದಲ ದಿನ ಅವರು ಮನೆಗೆ ಬಂದಾಗ ನಾನು ಅವರನ್ನು ಮೆಚ್ಚಿಸುವ ಪ್ರಯತ್ನ ಮಾಡಿದೆ. ಮನೆಯಲ್ಲಿ ಪಾನಿ ಪುರಿ ಮಾಡಿದ್ದೆ. ಈ ವಿಷ್ಯ ಕೇಳಿಯೇ ಅತ್ತೆ ತುಂಬಾ ಖುಷಿಯಾಗಿದ್ದರು. ಪಾನಿಪುರಿ ತಿಂದ ಅತ್ತೆಯ ಸಂತೋಷಕ್ಕೆ ಮಿತಿಯೇ ಇರಲಿಲ್ಲ ಎಂದು ಕಿಯಾರಾ ಹೇಳಿದ್ದಾರೆ.

ಅಮಿತಾಭ್ ಪತ್ನಿ ಜಯಾ ಬಚ್ಚನ್​ಗೆ ಧರ್ಮೇಂದ್ರ ಮೇಲೆ ಕ್ರಷ್​ ಇತ್ತಂತೆ! ಗುಟ್ಟು ಈಗಾಯ್ತು ರಟ್ಟು

ಕಿಯಾರಾ ಇಷ್ಟಪಡುವ ಸ್ಟ್ರೀಟ್ ಫುಡ್ ಯಾವುದು? : ಜನಸಾಮಾನ್ಯರಿಗೆ ಮಾತ್ರವಲ್ಲ ಸೆಲೆಬ್ರಿಟಿಗಳಿಗೂ ಸ್ಟ್ರೀಟ್ ಫುಡ್ ಇಷ್ಟವಾಗುತ್ತದೆ. ಅದ್ರಲ್ಲಿ ಪಾನಿಪುರಿ ಮೊದಲ ಸ್ಥಾನದಲ್ಲಿದೆ. ಕಿಯಾರಾ ನನಗೂ ಪಾನಿಪುರಿ ಇಷ್ಟವೆಂದು ಹೇಳಿದ್ದಾರೆ. ಮುಂಬೈ, ದೆಹಲಿ, ಕಲ್ಕತ್ತದಲ್ಲಿ ಸಿಗುವ ಪುಚ್ಕಾ, ಗೋಲ್ಗಪ್ಪ, ಪಾನಿ ಪುರಿ ಸೇರಿದಂತೆ ವೆರೈಟಿ ಸ್ಟ್ರೀಟ್ ಫುಡ್ ಇಷ್ಟವೆಂದು ಕಿಯಾರಾ ಹೇಳಿದ್ದಾರೆ.  

ಮದುವೆಯಲ್ಲಿ ಪ್ರತ್ಯೇಕ ಸ್ಟಾಲ್ : ಅತ್ತೆಗೆ ಪಾನಿಪುರಿ ಇಷ್ಟ ಎಂಬುದು ಕಾರಣಕ್ಕೆ ಮದುವೆಯಲ್ಲಿ ಪ್ರತ್ಯೇಕ ಪಾನಿಪುರಿ ಸ್ಟಾಲ್ ಹಾಕಿದ್ದರು. ಸಿದ್ಧಾರ್ಥ್ ಮತ್ತು ಕಿಯಾರಾ ಫೆಬ್ರವರಿ 7, 2023 ರಂದು ಜೈಸಲ್ಮೇರ್‌ನ ಹೋಟೆಲ್ ಸೂರ್ಯಗಢದಲ್ಲಿ ವಿವಾಹವಾದರು. ಸಿದ್ಧಾರ್ಥ್-ಕಿಯಾರಾ ಮದುವೆಗೆ 2 ಕೋಟಿ 14 ಲಕ್ಷದ 80 ಸಾವಿರ ರೂಪಾಯಿ ಖರ್ಚಾಗಿದೆ ಎಂದು ಮಾದ್ಯಮಗಳು ವರದಿ ಮಾಡಿವೆ. 

ಸಿದ್ಧಾರ್ಥ್ ಸಿಕ್ಕಿದ್ದು ನನ್ನ ಅದೃಷ್ಟ : ಸಿದ್ಧಾರ್ಥ್ ಸಿಕ್ಕಿದ್ದು ನನ್ನ ಅದೃಷ್ಟ ಎಂದ ಕಿಯಾರಾ, ಈಗಷ್ಟೆ ಮದುವೆಯಾಗಿದೆ. ಇದೊಂದು ಲವ್ ಮ್ಯಾರೇಜ್. ನಾನು ಶುದ್ಧ ಪ್ರೀತಿಯನ್ನು ನಂಬುತ್ತೇನೆ ಎಂದಿದ್ದಾರೆ. ನನ್ನ ಪತಿ ನನ್ನ ಒಳ್ಳೆ ಸ್ನೇಹಿತ ಕೂಡ ಹೌದು. ನನಗೆ ಅವರೇ ಎಲ್ಲ ಎಂದು ಕಿಯಾರಾ, ಸಿದ್ಧಾರ್ಥ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
 

click me!