ಪ್ರೀತಿಗೆ ಯಾವುದೇ ಅಡೆತಡೆಗಳಿಲ್ಲ ಎಂದು ಹೇಳುತ್ತಾರೆ. ಅದು ಅಕ್ಷರಶಃ ನಿಜ ಎಂಬುದನ್ನು ಇಲ್ಲೊಂದು ಜೋಡಿ ಸಾಬೀತುಪಡಿಸಿದೆ. ಡೌನ್ಸ್ ಸಿಂಡ್ರೋಮ್ ಹೊಂದಿರುವ ಜೋಡಿ, ಪುಣೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಮದುವೆಯೆಂದರೆ ಹಾಗೆಯೇ ಅದು ತುಂಬಾನೇ ಸ್ಪೆಷಲ್. ಕುಟುಂಬಸ್ಥರು, ಬಂಧು ಬಳಗ, ಹಲವು ಶಾಸ್ತ್ರಗಳು ಮನೆಯ ವಾತಾವರಣವನ್ನು ಹಬ್ಬದಂತೆ ಮಾಡಿಬಿಡುತ್ತವೆ. ಹಾಗೆಯೇ ಇಲ್ಲೊಂದು ವಿಶೇಷ ಮದುವೆ ನಡೆದಿದೆ. ಡೌನ್ಸ್ ಸಿಂಡ್ರೋಮ್ ಹೊಂದಿರುವ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮಿಳು ಮತ್ತು ಮಹಾರಾಷ್ಟ್ರ ಶೈಲಿಯ ಎರಡು ಆಕರ್ಷಕ ಸಂಪ್ರದಾಯದೊಂದಿಗೆ ಅದ್ಧೂರಿಯಾಗಿ ಮದುವೆ ನೆರವೇರಿದೆ. ನೂರಾರು ಮಂದಿ ಮದುವೆಗೆ ಆಗಮಿಸಿ ನೂತನ ಜೋಡಿಗೆ ಶುಭ ಕೋರಿದರು.
ಮದುವೆ (Marriage)ಯೆಂದರೆ ಎಲ್ಲರ ಜೀವನದಲ್ಲೂ ತುಂಬಾ ಸ್ಪೆಷಲ್ ಆಗಿರುತ್ತದೆ. ಪ್ರತಿಯೊಬ್ಬರೂ ತಮ್ಮ ಜೀವನದ (Life) ಈ ವಿಶೇಷ ದಿನವನ್ನು ಖುಷಿಯಿಂದ ಸೆಲಬ್ರೇಟ್ ಮಾಡುತ್ತಾರೆ. ಆದರೆ ಯಾವುದಾದರೂ ಕಾಯಿಲೆ (Disease) ಇರುವವರು ಮದುವೆಯಾಗುವುದು ಕಷ್ಟವಾಗುತ್ತದೆ. ಇಂಥವರನ್ನು ಯಾರೋ ಮದುವೆಯಾಗಲು ಸಿದ್ಧರಿರುವುದಿಲ್ಲ. ವಿಶೇಷ ಚೇತನರನ್ನೂ ಇದೇ ರೀತಿಯ ಸಮಸ್ಯೆ ಕಾಡುತ್ತದೆ. ಹೀಗಿರುವಾಗ ಡೌನ್ ಸಿಂಡ್ರೋಮ್ ಇರುವ ಹುಡುಗ-ಹುಡುಗಿಯಿಬ್ಬರು ಪುಣೆಯಲ್ಲಿ ವಿವಾಹವಾಗಿದ್ದಾರೆ.
ಆಟಿಸಂ ಪೀಡಿತ ಬಾಲಕಿಗಿದೆ ಐನ್‌ಸ್ಟನ್ ಮೀರಿಸುವ ಬ್ರೈನ್: 11ರಲ್ಲೇ ಇಂಜಿನಿಯರಿಂಗ್ ಡಿಗ್ರಿ ಕಂಪ್ಲೀಟ್
ಡೌನ್ ಸಿಂಡ್ರೋಮ್ ಇರುವ ಹುಡುಗ-ಹುಡುಗಿಯ ವಿವಾಹ
ವಿಘ್ನೇಶ್ ಕೃಷ್ಣಸ್ವಾಮಿ ಮತ್ತು ಅನನ್ಯಾ ಸಾವಂತ್ ಬುಧವಾರ ಪುಣೆಯಲ್ಲಿ ವಿವಾಹವಾದರು. ಮಾನ್ಸೂನ್ ವಿವಾಹವು ಇಬ್ಬರಿಗೆ ನಿಜವಾಗಿಯೂ ಅಸಾಧಾರಣ ಮತ್ತು ಹೃದಯಸ್ಪರ್ಶಿ ಸಮಾರಂಭವಾಗಿತ್ತು. ಇಬ್ಬರೂ ಡೌನ್ ಸಿಂಡ್ರೋಮ್ ಹೊಂದಿರುವ ವ್ಯಕ್ತಿಗಳಾಗಿದ್ದರು. ನಸುಗೆಂಪು ಮತ್ತು ಬಿಳಿ ರೇಷ್ಮೆಯಲ್ಲಿ ಕಂಗೊಳಿಸುತ್ತಿದ್ದ ದಂಪತಿಗಳು ವಿವಿಧ ಶಾಸ್ತ್ರದಲ್ಲಿ ಭಾಗಿಯಾದರು. ಹೂವಿನ ಕಾರ್ಪೆಟ್ ಮೇಲೆ ಕೈ ಹಿಡಿದುಕೊಂಡು ನಡೆದರು. 22 ವರ್ಷದ ವಧು ಪುಣೆ ಮೂಲದವರಾಗಿದ್ದು, 27 ವರ್ಷದ ವರ, ದುಬೈನಲ್ಲಿ ಹೊಟೇಲ್ ಮ್ಯಾನೇಜ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.
ವಿಘ್ನೇಶ್ ಅವರ ತಂದೆ ವಿಶ್ವನಾಥನ್, 'ನನ್ನ ಮಗ ಮದುವೆಗೆ ಉತ್ಸುಕರಾಗಿದ್ದನು. ನನ್ನ ಮಗನಿಗೆ 27 ವರ್ಷ ಮತ್ತು ಅವನ ಸ್ನೇಹಿತರು ಮದುವೆಯಾಗುವುದನ್ನು ನೋಡಿದ್ದಾನೆ. ಹಾಗಾಗಿ ಅವನು ಮದುವೆಯಾಗಲು ಬಯಸಿದನು' ಎಂದು ತಿಳಿಸಿದ್ದಾರೆ. ಯುಕೆಯಲ್ಲಿ ಓದುತ್ತಿರುವ ವಿಘ್ನೇಶ್ ಅವರ ಸಹೋದರಿ ಜನನಿ ವಿಶ್ವನಾಥನ್ ಅವರು ವಧುವಿನ ಸಹೋದರಿ ಅಶ್ವಿನಿ ಸಾವಂತ್ ಜೊತೆಗೆ ಚೆನ್ನೈ ಮೂಲದ ಖಾಸಗಿ ವಿಶ್ವವಿದ್ಯಾಲಯಕ್ಕೆ ಹೋಗುತ್ತಾರೆ. ಒಂದು ವರ್ಷದ ಹಿಂದೆ ಕುಟುಂಬಗಳು ಭೇಟಿಯಾಗಿ ಪರಸ್ಪರ ಪರಿಚಯ ಮಾಡಿಕೊಂಡವು. ನಂತರ ಮದುವೆ ಮಾತುಕತೆ ನಡೆಯಿತು.
ಮಗುವಿಗೆ 2-3 ವರ್ಷವಾದ್ರೂ ಮಾತನಾಡುತ್ತಿಲ್ವಾ? ತಲೆ ಕೆಡಿಸಿಕೊಳ್ಬೇಡಿ, ಕಾರಣ ಇವಿರಬಹುದು!
ಅದ್ಧೂರಿಯಾಗಿ ನಡೆದ ಮದುವೆಯಲ್ಲಿ ಸ್ನೇಹಿತರು, ಕುಟುಂಬ ಸದಸ್ಯರು, ಸ್ನೇಹಿತರು ಭಾಗವಹಿಸಿದ್ದರು. 'ಯುಎಸ್‌ನಲ್ಲಿಯೂ ಸಹ, ಅಂತಹ ವಿವಾಹಗಳು ಸಾಮಾನ್ಯವಲ್ಲ. ವಿಶೇಷ ಅಗತ್ಯವುಳ್ಳವರಿಗೆ ಡೇಟಿಂಗ್ ಸೇವೆಗಳಿವೆ. ಆದರೆ ಅವು ಸೀಮಿತವಾಗಿವೆ. ಆದರೆ ವಿಶೇಷ ಅಗತ್ಯವುಳ್ಳ ಯುವ ವಯಸ್ಕರಿಗೆ ಇದು ತುಂಬಾ ಅಗತ್ಯವಾಗಿ ಬೇಕಾಗಿರುವ ವಿಷಯವಾಗಿದೆ' ಎಂದು ಅಶ್ವಿನಿ ಸಾವಂತ್ ತಾಯಿ ಹೇಳಿದರು.
'ಮದುವೆಯ ಹಿಂದಿನ ತಿಂಗಳುಗಳಲ್ಲಿ ವಿಘ್ನೇಶ್ ಮತ್ತು ಅನನ್ಯಾ ಹಲವಾರು ಬಾರಿ ಭೇಟಿಯಾದರು. ಇ-ಮೇಲ್ ಮತ್ತು ವಾಟ್ಸಾಪ್ ಮೂಲಕ ಸಂವಹನ ನಡೆಸಿದರು. ಇಬ್ಬರೂ ಅನ್ಯೋನ್ಯತೆಯನ್ನು ಬೆಳೆಸಿಕೊಂಡಿದ್ದಾರೆ' ಎಂದು ದುಬೈನಲ್ಲಿ ತನ್ನ ಹೊಸ ಸೊಸೆಯನ್ನು ಸ್ವಾಗತಿಸಲು ತಯಾರಿ ನಡೆಸುತ್ತಿರುವ ವಿಘ್ನೇಶ್ ಅವರ ತಾಯಿ ವೀಣಾ ಹೇಳಿದರು. ಮಾತ್ರವಲ್ಲ, 'ಅನನ್ಯಾಗೆ ಹೊಸ ಪರಿಸರದಲ್ಲಿ ಒಗ್ಗಿಕೊಳ್ಳಲು ಕಷ್ಟವಾಗಬಹುದು ಎಂಬುದು ನನಗೆ ತಿಳಿದಿದೆ ಪುಣೆಯಲ್ಲಿ ಪರಿಚಿತವಾಗಿರುವ ಎಲ್ಲವನ್ನೂ ಬಿಟ್ಟು, ಹೊಸ ಜಾಗಕ್ಕೆ ಒಗ್ಗಿಕೊಳ್ಳುವುದು ಅವರಿಗೆ ಸುಲಭವಲ್ಲ. ಆದರೆ ಅವಳು ಈಗ ನಮ್ಮ ಕುಟುಂಬಕ್ಕೆ ಸೇರ್ಪಡೆಯಾಗಿದ್ದಾಳೆ ಮತ್ತು ಅವಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತೇವೆ' ಎಂದು ವೀಣಾ ಸೇರಿಸಿದ್ದಾರೆ.