ನನ್ನ ಗಂಡನ ವಾರ್ಡ್‌ರೋಬ್ ಕ್ಲೀನ್ ಮಾಡುತ್ತಿದ್ದಾಗ ಅಲ್ಲಿ ಆಕೆಯ ಪ್ಯಾಂಟಿ ಸಿಕ್ಕಿತು. ಅದರೆ ಜೊತೆಗೆ ಇನ್ನೊಂದು ಬ್ರಾ ಕೂಡ ಸಿಕ್ಕಿತು, ಅದು ಯಾರದೋ ಗೊತ್ತಿಲ್ಲ. ನನಗೀಗ ತುಂಬಾ ಚಿಂತೆಯಾಗುತ್ತಿದೆ.
ಪ್ರಶ್ನೆ: ನನಗೆ ಮದುವೆಯಾಗಿದೆ. ಪತಿಗೆ ಮೂವತ್ತು ವರ್ಷ. ನನಗೆ ಇಪ್ಪತ್ತೆಂಟು. ಮದುವೆಯಾಗಿ ಮೂರು ವರ್ಷಗಳಾದವು. ನಮ್ಮ ಸೆಕ್ಸ್ ಬದುಕು ಚೆನ್ನಾಗಿಯೇ ಇದೆ. ಆದರೆ ಇತ್ತೀಚೆಗೆ ಒಂದು ವಿಷಯ ಗಮನ ಸೆಳೆಯಿತು. ಒಂದು ತಿಂಗಳ ಹಿಂದೆ ನನ್ನ ಗೆಳತಿ ಮನೆಗೆ ಬಂದು ಎರಡು ದಿನ ಇದ್ದು ಹೋದಳು. ಆಕೆಯ ಒಂದು ಪ್ಯಾಂಟಿ ಕಾಣೆಯಾಗಿತ್ತು. ಆಕೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಒಂದು ವಾರದ ನಂತರ ನನ್ನ ಗಂಡನ ವಾರ್ಡ್‌ರೋಬ್ ನಾನು ಕ್ಲೀನ್ ಮಾಡುತ್ತಿದ್ದಾಗ ಅಲ್ಲಿ ಆಕೆಯ ಪ್ಯಾಂಟಿ ಸಿಕ್ಕಿತು. ಅದರೆ ಜೊತೆಗೆ ಇನ್ನೊಂದು ಬ್ರಾ ಕೂಡ ಸಿಕ್ಕಿತು, ಅದು ಯಾರದೋ ಗೊತ್ತಿಲ್ಲ. ನನಗೀಗ ತುಂಬಾ ಚಿಂತೆಯಾಗುತ್ತಿದೆ. ನನ್ನ ಗಂಡನಿಗೆ ಇನ್ನೊಬ್ಬರ ಸಂಬಂಧ ಇದ್ದೀತು ಎಂದು ನಾನು ಶಂಕಿಸುತ್ತಿಲ್ಲ. ಆದರೆ ಕಂಡ ಕಂಡ ಹೆಂಗಸರ ಒಳ ಉಡುಪು ಕದಿಯುವ ಖಯಾಲಿ ಇರಬಹುದೇ? ಇದು ಅಸಹಜ ಅಲ್ಲವೇ? ಹಾಗಂತ ಗಂಡನಲ್ಲಿ ಅಸಹಜ ವರ್ತನೆಗಳಿರುವುದು ನನ್ನ ಗಮನಕ್ಕೆ ಬಂದಿಲ್ಲ. ನಾನೀಗ ಏನು ಮಾಡಲಿ?
ಉತ್ತರ: ನೀವು ಈಗ ಸಮಾಧಾನದಿಂದ ಈ ಘಟನೆಯ ಹಲವು ಸಾಧ್ಯತೆಗಳನ್ನು ಯೋಚಿಸಿಯೇ ಮುಂದುವರಿಯಬೇಕು. ಅಚಾನಕ್ಕಾಗಿ ಬಂದಿರಲೂಬಹುದು ಅಲ್ಲವೇ? ಹಾಗಲ್ಲ, ನಿಮ್ಮ ಪತಿ ಉದ್ದೇಶಪೂರ್ವಕವಾಗಿಯೇ ಹಾಗೆ ಮಾಡಿದ್ದಾರೆ ಎಂದಾದರೆ, ಈ ಸ್ವಭಾವ ಎಷ್ಟರ ಮಟ್ಟಿಗೆ ಅವರಲ್ಲಿದೆ ಎಂಬುದನ್ನು ಪತ್ತೆ ಹಚ್ಚಬೇಕು. ನಿಮ್ಮ ಒಳ ಉಡುಪುಗಳೂ ಹೀಗಾದ ಉದಾಹರಣೆ ಇದೆಯೇ? ಕೆಲವರಲ್ಲಿ ಒಂದು ಲೈಂಗಿಕ ಅಸಹಜತೆ ಇರುತ್ತದೆ. ಸ್ತ್ರೀಯರ ಒಳ ಉಡುಪುಗಳನ್ನು ಕದ್ದು ಅದನ್ನು ನೋಡುತ್ತ ಅಥವಾ ವಾಸನೆಯಿಂದ ಲೈಂಗಿಕ ಸುಖ ಹೊಂದುವುದು. ಇದನ್ನು ಸಾಮಾನ್ಯ ಭಾಷೆಯಲ್ಲಿ ಅಂಡರ್‌ವೇರ್ ಫೆಟಿಷ್ ಎನ್ನುತ್ತಾರೆ. ಸೆಕ್ಸಾಲಜಿಯ ಪರಿಭಾಷೆಯಲ್ಲಿ ಇದನ್ನು ಮೆಲ್‌ಕ್ರಿಸ್ಟೋವೆಸ್ಟಿಮೆಂಟಾಫೀಲಿಯಾ ಎಂಬ ಇಷ್ಟು ಉದ್ದದ ಹೆಸರಿನಿಂದ ಕರೆಯುತ್ತಾರೆ. ಇದೊಂದು ಅಸಹಜ ಲೈಂಗಿಕ ಸ್ವಭಾವ. ಇವರು ಕೇಡಿಗಳಲ್ಲ, ಪಾತಕಿಗಳಲ್ಲ. ಇವರ ವಿಕೃತಿ ಎಷ್ಟರ ಮಟ್ಟಿಗಿರುತ್ತೆ ಎಂದರೆ, ಇನ್ನೊಬ್ಬರಿಗೆ ಈ ವಿಚಾರದ ಪತ್ತೆ ಹಚ್ಚದಿದ್ದರೆ ಅದರಿಂದ ಯಾವ ಹಾನಿಯೂ ಆಗೊಲ್ಲ. ತಾನು ಇನ್ನೊಬ್ಬ ಸ್ತ್ರೀಯನ್ನು ನೆನಪಿಸಿಕೊಂಡು ಹಸ್ತಮೈಥುನ ಮಾಡಿಕೊಳ್ಳುವ ಮೂಲಕ ಲೈಂಗಿಕ ತೃಪ್ತಿ ಹೊಂದುವಂತೆಯೇ ಇದು ಕೂಡ.
Feelfree: ಹಿಂದಿನಿಂದ ಪ್ರವೇಶಿಸಿದರೆ ನೋವಾಗಲ್ವಾ?
ಕೆಲವರಲ್ಲಿ ಇದು ಅತಿಗೆ ಹೋಗುವುದಿದೆ. ಅಂಥವರು ತಮ್ಮ ವಾರ್ಡ್‌ರೋಬ್‌ಗಳಲ್ಲಿ ಎಲ್ಲೆಲ್ಲಿಂದಲೋ ಕದ್ದ ಯಾರ್ಯಾರದೋ ಪ್ಯಾಂಟಿ, ಬ್ರಾ ಇತ್ಯಾದಿಗಳನ್ನು ಶೇಖರಿಸಿಟ್ಟುಕೊಂಡಿರುತ್ತಾರೆ. ಇವರಿಗೆ ಸಹಜ ಸೆಕ್ಸ್ ಲೈಫ್ ನಡೆಸಲು ಬರೊಲ್ಲ. ಸಹಜ ಸಂಗಾತಿಗಳ ಜೊತೆಗೆ ಸುಖ ಪಡೆಯಲಾರರು. ಕದ್ದ ಮಾಲಿನಿಂದಲೇ ಇವರಿಗೆ ಸುಖ. ಇವರು ಇದನ್ನು ಕದಿಯುವಾಗ ಸಿಕ್ಕಬಿದ್ದರೆ ದೊಡ್ಡ ಅವಮಾನ ಖಚಿತ. ಜೊತೆಗೆ ಸಾರ್ವಜನಿಕ ಅಪಮಾನವನ್ನು ಮುಂದೆ ನಿರಂತರವಾಗಿ ಎದುರಿಸಬೇಕಾಗುತ್ತದೆ. ಇವರಲ್ಲಿ ಆತ್ಮವಿಶ್ವಾಸ ಇರೊಲ್ಲ ಕೀಳರಿಮೆಯಿಂದ ನರಳುತ್ತಿರುತ್ತಾರೆ. ಬಾಲ್ಯದ ಹಲವು ಅನುಭವಗಳು ಇವರನ್ನು ಇಂಥ ಕಳ್ಳರನ್ನಾಗಿ ರೂಪಿಸಿರುವ ಸಾಧ್ಯತೆ ಇರುತ್ತದೆ. ಇಂಥವರು ಕೌನ್ಸೆಲಿಂಗ್ ಪಡೆದುಕೊಳ್ಳುವುದು ಅಗತ್ಯ. ಕೆಲವು ಬಗೆಯ ಔಷಧಗಳೂ ಇವರಿಗೆ ಲಭ್ಯವಿವೆ.
#Feelfree: ಬಾ ಅಂತ ಕರೀತಾಳೆ ಬಾಸ್‌ನ ಮಡದಿ!
ಸದ್ಯ ನಿಮ್ಮ ಪತಿ ನಿಮ್ಮೊಂದಿಗೆ ಆರೋಗ್ಯಕರ ಲೈಂಗಿಕ ಸಂಬಂಧ ಕಾಪಾಡಿಕೊಂಡಿರುವುದರಿಂದ ಅವರಲ್ಲಿ ಈ ಗೀಳು ಇರಲಾರದು ಎಂದೇ ಆಶಿಸೋಣ. ಹಾಗೊಂದು ವೇಳೆ ಅವರಿಗೆ ಅದರಿಂದ ತೃಪ್ತಿ ಸಿಗುತ್ತದೆ ಎಂದಾದರೆ ನಿಮ್ಮ ಒಳ ಉಡುಪುಗಳನ್ನು ಕೊಟ್ಟು ಲೈಂಗಿಕ ತೃಪ್ತಿ ಹೊಂದುವಂತೆ ಮಾಡಬಹುದು.
#Feelfree: ಹೆಂಡ್ತಿ ಹಾದರ ನೋಡೋ ಗತಿ ವೈರಿಗೂ ಬರಬಾರ್ದು!