Platonic Relationshipನಲ್ಲಿದ್ದ ಮುಂಬೈನ ಹಂತಕ ಮನೋಜ್‌ ಸಾನೆ-ಸರಸ್ವತಿ, ಏನಿದು?

Published : Jun 11, 2023, 08:48 AM ISTUpdated : Jun 11, 2023, 09:15 AM IST
Platonic Relationshipನಲ್ಲಿದ್ದ ಮುಂಬೈನ ಹಂತಕ ಮನೋಜ್‌ ಸಾನೆ-ಸರಸ್ವತಿ, ಏನಿದು?

ಸಾರಾಂಶ

ಮುಂಬೈನ ಮೀರಾ ರೋಡ್‌ ಅಪಾ​ರ್ಟ್‌ಮೆಂಟ್‌​ ಮರ್ಡರ್ ಪ್ರಕರಣದ ಹಂತಕ ಮನೋಜ್‌ ಸಾನೆ ಹಾಗೂ ಸರಸ್ವತಿ ವೈದ್ಯ ಪ್ಲಾಟೊನಿಕ್ ರಿಲೇಶನ್‌ ಶಿಪ್‌ನಲ್ಲಿ ಇದ್ರು ಎಂದು ಹೇಳಲಾಗುತ್ತಿದೆ. ಏನಿದು?

ಮುಂಬೈನ ಮೀರಾ ರೋಡ್‌ ಅಪಾ​ರ್ಟ್‌ಮೆಂಟ್‌​ ಮರ್ಡರ್ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿದೆ. ಆರೋಪಿ ಮನೋಜ್‌ ಸಾನೆ (56) ಹಾಗೂ ಕೊಲೆಯಾದ ಸರಸ್ವತಿ ವೈದ್ಯ (32) ವಿವಾಹವಾಗಿದ್ದರು. ಆದರೆ ಇಬ್ಬರ ನಡುವೆ ಭಾರೀ ವಯಸ್ಸಿನ ಅಂತರವಿದ್ದ ಕಾರಣ ಮದುವೆ ವಿಷಯವನ್ನು ಗುಟ್ಟಾಗಿರಿಸಿದ್ದರು ಎಂಬ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ. ತನ್ನೊಂದಿಗೆ 9 ವರ್ಷಗಳಿಂದ ವಾಸಿಸುತ್ತಿದ್ದ ಸರಸ್ವತಿ ಎಂಬ ಮಹಿಳೆಯನ್ನು ಕೊಲೆಗೈದು ಆಕೆಯ ದೇಹವನ್ನು 20ಕ್ಕೂ ಹೆಚ್ಚು ತುಂಡುಗಳನ್ನಾಗಿ ಕತ್ತರಿಸಿ ಬೇಯಿಸಿದ್ದ ಭೀಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾ​ರಣೆ ನಡೆ​ಸು​ತ್ತಿ​ದ್ದಾ​ರೆ. ಈ ಮಧ್ಯೆ ಹಂತಕ ಮನೋಜ್‌ ಸಾನೆ ಹಾಗೂ ಸರಸ್ವತಿ ವೈದ್ಯ ಪ್ಲಾಟೊನಿಕ್ ರಿಲೇಶನ್‌ ಶಿಪ್‌ನಲ್ಲಿ ಇದ್ರು ಎಂದು ಹೇಳಲಾಗುತ್ತಿದೆ. ಏನಿದು?

ಪ್ಲಾಟೋನಿಕ್ ಸಂಬಂಧ ಎಂದರೇನು?
Platonic Relationship ಎಂದರೆ ಇಬ್ಬರು ವ್ಯಕ್ತಿಗಳು ತುಂಬಾ ನಿಕಟ ಬಂಧವನ್ನು ಹಂಚಿಕೊಳ್ಳುತ್ತಾರೆ ಆದರೆ ಲೈಂಗಿಕ ಸಂಬಂಧವನ್ನು (Sexual) ಹೊಂದಿರುವುದಿಲ್ಲ. ಅವರು ಪರಸ್ಪರ ಪ್ರೀತಿ (Love)ಯನ್ನು ಮಾತ್ರ ಹಂಚಿಕೊಳ್ಳುತ್ತಾರೆ ಇದನ್ನು ಪ್ಲಾಟೋನಿಕ್ ಪ್ರೀತಿ ಎಂದು ಕರೆಯಲಾಗುತ್ತದೆ. ಈ ಪರಿಕಲ್ಪನೆಯು ಪ್ರಾಚೀನ ತತ್ವಜ್ಞಾನಿ ಪ್ಲೇಟೋನ ಕಲ್ಪನೆಗಳಲ್ಲಿ ಹುಟ್ಟಿಕೊಂಡಿದೆ, ಅವರ ಹೆಸರಿನಿಂದ ಈ ಪದವನ್ನು ಪಡೆಯಲಾಗಿದೆ.'ಪ್ಲೇಟೋನಿಕ್ ಪ್ರೀತಿ' ಆಧುನಿಕ ಬಳಕೆಯು ಲೈಂಗಿಕ ಬಯಕೆಯಿಲ್ಲದೆ ಜನರು ನಿಕಟ ಸ್ನೇಹಿತರಾಗುವ (Friends) ಕಲ್ಪನೆಯ ಮೇಲೆ ಕೇಂದ್ರೀಕೃತವಾಗಿದೆ. ಈ ಪದವು ವಿರುದ್ಧ ಲಿಂಗ ಮತ್ತು ಸಲಿಂಗ ಸ್ನೇಹ ಎರಡಕ್ಕೂ ಅನ್ವಯಿಸಬಹುದು.

ಸಂಗಾತಿ ಮೃತದೇಹ ತುಂಡು ತುಂಡು ಮಾಡಿ ಬೀದಿ ನಾಯಿಗೆ ಹಾಕ್ದ: ಶ್ರದ್ಧಾ ವಾಕರ್‌ ಹಂತಕನೇ ಇವನಿಗೆ ಸ್ಪೂರ್ತಿ!

ವಿಚಾ​ರಣೆ ವೇಳೆ ಸರ​ಸ್ವ​ತಿಯ 3 ಸೋದ​ರಿ​ಯರು ಹೇಳಿಕೆ ನೀಡಿ, ‘ಕೊಲೆಯಾದ ಸರಸ್ವತಿ ವೈದ್ಯ ಮತ್ತು ಆರೋಪಿ ಮನೋಜ್‌ ಸಾನೆ ದೇವಸ್ಥಾನದಲ್ಲಿ ವಿವಾಹವಾಗಿದ್ದರು. ಆದರೆ ನೋಂದಣಿ ಮಾಡಿ​ಸಿ​ಕೊಂಡಿ​ರ​ಲಿಲ್ಲ. ತಮ್ಮ ನಡುವಿನ ವಯಸ್ಸಿನ ಅಂತರದಿಂದ (Age gap) (24 ವರ್ಷ ಅಂತರ) ಅವರು ತಮ್ಮ ಮದುವೆಯನ್ನು (Marriage) ಇತರರಿಂದ ಮರೆಮಾಚಿದ್ದರು’ ಎಂದಿದ್ದರು. ಹಾಗೆಯೇ ಹಂತಕ ಮನೋಜ್‌ ಸಾನೆ, ‘ನಾನು ಎಚ್‌ಐವಿ ಸೋಂಕಿತನಾಗಿದ್ದೇನೆ. ಸರಸ್ವತಿಯೊಂದಿಗೆ ನಾನು ಎಂದಿಗೂ ದೈಹಿಕ ಸಂಪರ್ಕ ಬೆಳೆಸಿಲ್ಲ. ಅಕೆ ನನ್ನ ಮಗಳಿದ್ದಂತೆ’ಎಂದು ಹೇಳಿದ್ದ. ಹೀಗಾಗಿ ಇವರಿಬ್ಬರೂ ಪ್ಲಾಟೊನಿಕ್ ರಿಲೇಶನ್‌ ಶಿಪ್‌ನಲ್ಲಿ ಇದ್ರು ಎಂದು ಹೇಳಲಾಗುತ್ತಿದೆ.

ಪ್ಲಾಟೋನಿಕ್ ಸಂಬಂಧ ವರ್ಸಸ್ ರೋಮ್ಯಾಂಟಿಕ್ ಸಂಬಂಧ
ಪ್ಲಾಟೋನಿಕ್ ಸಂಬಂಧವು ಪ್ರಣಯ ಸಂಬಂಧಕ್ಕಿಂತ ಭಿನ್ನವಾಗಿದೆ. ಎರಡೂ ವಿಧದ ಸಂಬಂಧಗಳು ಸಾಮಾನ್ಯವಾಗಿ ಆಳವಾದ ಸ್ನೇಹ ಮತ್ತು ಕೆಲವೊಮ್ಮೆ ಪ್ರೀತಿಯನ್ನು ಒಳಗೊಂಡಿರುತ್ತವೆ, ಪ್ರಣಯ ಸಂಬಂಧದಲ್ಲಿರುವ ಜನರು ಸಾಮಾನ್ಯವಾಗಿ ದೈಹಿಕವಾಗಿ ನಿಕಟವಾಗಿರುತ್ತಾರೆ ಆದರೆ ಪ್ಲ್ಯಾಟೋನಿಕ್ ಸಂಬಂಧದಲ್ಲಿ ಯಾವುದೇ ಲೈಂಗಿಕತೆ ಅಥವಾ ದೈಹಿಕ ಅನ್ಯೋನ್ಯತೆ (ತಬ್ಬಿಕೊಳ್ಳುವುದು, ಚುಂಬಿಸುವುದು ಅಥವಾ ಸ್ಪರ್ಶಿಸುವುದು) ಇರುವುದಿಲ್ಲ.

ಸಂಗಾತಿಯನ್ನು ಬರ್ಬರ ಹತ್ಯೆ ಮಾಡಿ 20ಕ್ಕೂ ಹೆಚ್ಚು ತುಂಡು ತುಂಡಾಗಿ ಕತ್ತರಿಸಿದ ಪಾಪಿ: ಬೆಚ್ಚಿಬಿದ್ದ ಮುಂಬೈ

ವಿಚಾರಣೆಯಲ್ಲಿ ತಿಳಿದುಬಂದಿರುವಂತೆ ಮನೋಜ್ ಮತ್ತು ಸರಸ್ವತಿ ಯಾವುದೇ ರೀತಿ ದೈಹಿಕ ಸಂಬಂಧ ಹೊಂದಿರಲ್ಲಿಲ್ಲ.‘ನನಗೆ ಎಚ್‌ಐವಿ ಪಾಸಿಟಿವ್‌ ಇರುವುದು 2008ರಲ್ಲಿ ಗೊತ್ತಾಯಿತು. ಅಂದಿನಿಂದ ನಿಯಮಿತವಾಗಿ ಔಷಧಿ (Medicine) ತೆಗೆದುಕೊಳ್ಳುತ್ತಿದ್ದೇನೆ. ಬಹಳ ಹಿಂದೆ ನಾನು ಅಪಘಾತಕ್ಕೆ ಒಳಗಾದಾಗ ಚಿಕಿತ್ಸೆಗಾಗಿ ಎಚ್‌ಐವಿ ಸೋಂಕಿತ ರಕ್ತವನ್ನು ನನಗೆ ನೀಡಲಾಗಿತ್ತು. ಹೀಗಾಗಿ ನನಗೆ ಎಚ್‌ಐವಿ ಬಂದಿದೆ. ಸರಸ್ವತಿ ತುಂಬಾ ಸ್ವಾಮ್ಯ ಗುಣದವಳಾಗಿದ್ದಳು. ಮನೆಗೆ ತಡವಾಗಿ ಬಂದರೆ ನಾನು ಅವಳಿಗೆ ಮೋಸ ಮಾಡುತ್ತಿದ್ದೇನೆ ಎಂದು ಜಗಳವಾಡುತ್ತಿದ್ದಳು. 10ನೇ ತರಗತಿ ಪರೀಕ್ಷೆ ಬರೆಯಲು ಮುಂದಾಗಿದ್ದ ಅವಳಿಗೆ ನಾನು ಗಣಿತ ವಿಷಯವನ್ನು ಹೇಳಿಕೊಡುತ್ತಿದ್ದೆ’ ಎಂದು ಮನೋಜ್‌ ಹೇಳಿದ್ದಾನೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ
ಕುಬೇರನ ಸಂಪತ್ತು ತರುವ ಡಿಫರೆಂಟ್‌ ಹೆಸರು ನಿಮ್ಮ ಮಗನಿಗೂ ಇಡಬಹುದು!