Relationship Tips: ಸಂಗಾತಿ ಮಾತು ಕೇಳಿಸ್ಕೊಳ್ಳೋಕೆ ತಲೆನೋವಾ? ಸಂಬಂಧ ಸುಧಾರಣೆ ಹೇಗೆ?

By Contributor Asianet  |  First Published Jun 10, 2023, 3:09 PM IST

ನಿಮ್ಮ ಸಂಬಂಧ ಆಪ್ತವಾಗಬೇಕೆ? ಸಂಗಾತಿಗೆ ನೀವು, ನಿಮಗೆ ಅವರು ಪರಸ್ಪರ ಸುರಕ್ಷಿತ ಭಾವನೆಯಲ್ಲಿ ನೆಮ್ಮದಿ ಕಾಣಬೇಕೆ? ಆಳವಾದ ಸಾಂಗತ್ಯ ನಿಮ್ಮದಾಗಬೇಕೆ? ಹಾಗಿದ್ದರೆ ನೀವು ಸಹಾನುಭೂತಿಯಿಂದ ಸಂಗಾತಿಯ ಭಾವನೆಗಳನ್ನು ಆಲಿಸಿ. 
 


ಯಾವುದೇ ಸಂಬಂಧ ಆತ್ಮೀಯವೆನಿಸುವುದು ಪರಸ್ಪರ ಉತ್ತಮ ಸಂಪರ್ಕವಿದ್ದಾಗ ಮಾತ್ರ. ಅದರಲ್ಲೂ ವೈವಾಹಿಕ ಸಂಬಂಧದಲ್ಲಿ ಇನ್ನಷ್ಟು ಆತ್ಮೀಯತೆ, ಸಾಂಗತ್ಯದ ಅಗತ್ಯವಿರುತ್ತದೆ. ಎಷ್ಟೋ ಬಾರಿ ಪತಿ ನಿರ್ಲಕ್ಷ್ಯ ಮಾಡುತ್ತಾರೆಂದು ಪತ್ನಿಗೆ ಅನಿಸುತ್ತಲೇ ಇರುತ್ತದೆ. ಪತ್ನಿ ತನ್ನನ್ನು ಗಮನಿಸುವುದಿಲ್ಲ ಎಂದು ಪತಿ ದೂರುತ್ತಾರೆ. ಪರಸ್ಪರ ಉತ್ತಮ ಕೇಳುಗರಾಗದೇ ದಾಂಪತ್ಯದ ಈ ಸಮಸ್ಯೆಯನ್ನು ಗೆಲ್ಲಲಾಗುವುದಿಲ್ಲ. ಹೀಗಾಗಿ, ನಿಮ್ಮ ಸಂಬಂಧ ಚೆನ್ನಾಗಿರಬೇಕು ಎಂದರೆ ಮೊದಲು ಒಳ್ಳೆಯ ಕೇಳುಗರಾಗಬೇಕು. ಪತ್ನಿ ಹೇಳುವುದನ್ನು ಸುಮ್ಮನೆ ಕೇಳಿಸಿಕೊಂಡು ಹೂಂ ಗುಡುವುದಕ್ಕೂ, ಸರಿಯಾಗಿ ಆಲಿಸುವುದಕ್ಕೂ ವ್ಯತ್ಯಾಸವಿದೆ. ಕೇಳುವಿಕೆಯಲ್ಲಿ ಸಹಾನುಭೂತಿ, ಕರುಣೆ ತುಂಬಿದ್ದಾಗ ಅದಕ್ಕೆ ಪರಿಪೂರ್ಣತೆ ಬರುತ್ತದೆ. ಇದನ್ನು ಆಕ್ಟಿವ್ ಲಿಸನಿಂಗ್ ಎಂದೂ ಹೇಳಲಾಗುತ್ತದೆ. ಸಂಬಂಧದಲ್ಲಿ ಯಾವುದೇ ಸಮಸ್ಯೆ ಸೃಷ್ಟಿಯಾಗದಿರಲು ಹಾಗೂ ಸಮಸ್ಯೆ ಉಂಟಾದಾಗ ನಿವಾರಿಸಿಕೊಳ್ಳಲು ಪರಸ್ಪರ ಮಾತುಕತೆ ಭಾರೀ ಪರಿಣಾಮಕಾರಿ ಮಾರ್ಗ. ಅವರು ಹೇಳುವುದನ್ನು ಕೇಳಿಸಿಕೊಳ್ಳುತ್ತ ಅವರೊಂದಿಗೆ ನಿಜವಾಗಿಯೂ ಒಂದಾದಾಗ ಅವರು ಹೇಳುವುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಆಗ ಏನು ಪ್ರತಿಕ್ರಿಯೆ ಅಥವಾ ಸಲಹೆ ನೀಡಬೇಕು ಎಂದು ಯೋಚಿಸುವ ಬದಲು ಅವರು ಹೇಳುವುದನ್ನು ಅರ್ಥ ಮಾಡಿಕೊಂಡಾಗ ಜೀವನವೂ ಅರ್ಥವಾಗುತ್ತ ಸಾಗುತ್ತದೆ. ಸಹಾನುಭೂತಿಭರಿತ ಕೇಳುವಿಕೆ ಸಂಬಂಧದಲ್ಲಿ ಏಕೆ ಅಗತ್ಯ ಎನ್ನುವುದಕ್ಕೆ ಇನ್ನೂ ಹಲವು ಕಾರಣಗಳಿವೆ.

•    ಸಂಗಾತಿಯನ್ನು (Partner) ಅರ್ಥಮಾಡಿಕೊಳ್ಳಲು ಸಹಕಾರಿ
ಯಾವುದೇ ಸಂಬಂಧ (Relation) ಉತ್ತಮವಾಗಲು ಪರಸ್ಪರ ಅರ್ಥ ಮಾಡಿಕೊಳ್ಳುವುದು (Understand) ಅಗತ್ಯ. ಪತಿ-ಪತ್ನಿ (Husband Wife) ಇಬ್ಬರೂ ಉತ್ತಮ ಕೇಳುಗರಾದರೆ (Active Listener) ಮತ್ತೊಬ್ಬರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಮೇಲ್ನೋಟಕ್ಕೆ ಸಂಗಾತಿ ಹೇಳಿದ್ದನ್ನು ಕೇಳಿಸಿಕೊಂಡರೂ ಅವರನ್ನು ಅರ್ಥ ಮಾಡಿಕೊಳ್ಳಲು ಯತ್ನಿಸುವವರು ಕಡಿಮೆ. ತಮ್ಮ ದೃಷ್ಟಿಕೋನದಿಂದ ಯೋಚಿಸುತ್ತಾರೆಯೇ ವಿನಾ ಸಂಗಾತಿಯ ನಿಲುವನ್ನು ಅರಿತುಕೊಳ್ಳುವವರು ಕಡಿಮೆ. ಇದರಿಂದಾಗಿ ಅವರಲ್ಲಿ ತಮ್ಮನ್ನು ನಿರ್ಲಕ್ಷ್ಯ (Ingone) ಮಾಡುತ್ತಿರುವ ಭಾವನೆ ಮೂಡುತ್ತದೆ. 

Relationship Tips : ಅತಿಯಾಗಿ ಆಲೋಚಿಸೋ ಸಂಗಾತಿ ಹೀಗೆ ಸಂಭಾಳಿಸಿ

Tap to resize

Latest Videos

•    ಸಹಾನುಭೂತಿಯಿಂದ (Empathy) ಭಾವನೆ (Feelings) ವ್ಯಕ್ತ
ಕೇಳುಗರಲ್ಲಿ ಸಹಾನುಭೂತಿ ಇದ್ದಾಗ ಹೇಳಿಕೊಳ್ಳುವವರು ತಮ್ಮ ಭಾವನೆಗಳನ್ನು (Emotions) ಮುಕ್ತವಾಗಿ ವ್ಯಕ್ತಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಎಷ್ಟೇ ಸಮೀಪದಲ್ಲಿರುವ ವ್ಯಕ್ತಿಗಳೊಂದಿಗೂ ಕೆಲವೊಮ್ಮೆ ಮುಕ್ತವಾಗಿ ಎಲ್ಲವನ್ನೂ ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಎಷ್ಟು ಬಾರಿ ಪ್ರಯತ್ನಿಸಿದರೂ ಅವರ ಅಲಕ್ಷ್ಯದಿಂದಾಗಿ ಸಾಧ್ಯವಾಗುವುದಿಲ್ಲ. ನೀವೂ ಇಂಥದ್ದೇ ಸಂಗಾತಿಯಾಗಿದ್ದರೆ ನಿಮ್ಮ ಧೋರಣೆ ಬದಲಿಸಿಕೊಳ್ಳಿ. ಏಕೆಂದರೆ, ನೀವು ಸಹಾನುಭೂತಿಯಿಂದ ಕೇಳಿಸಿಕೊಂಡಾಗ ನಿಮ್ಮ ಸಂಗಾತಿಗೆ ತಮ್ಮ ಎಲ್ಲ ಭಾವನೆಗಳನ್ನು ಹೇಳಿಕೊಳ್ಳಲು ಸಾಧ್ಯವಾಗುತ್ತದೆ. ದಿನದಲ್ಲಿ ಕೆಲವು ಸಮಯವನ್ನು ಇದಕ್ಕಾಗಿ ಮೀಸಲಿಡಿ. ಸಂಬಂಧ ಖಂಡಿತವಾಗಿ ಸುಧಾರಣೆಯಾಗುತ್ತದೆ.

•    ನಂಬಿಕೆ (Trust)
ಹಲವು ದಂಪತಿ (Couple) ನಂಬಿಕೆ ಇಲ್ಲದ ಸಮಸ್ಯೆಯಿಂದ ಬಳಲುತ್ತಾರೆ. ಸಹಾನುಭೂತಿಯಿಂದ ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳುವುದರಿಂದ ನಂಬಿಕೆ ಸಮಸ್ಯೆ ದೂರವಾಗುತ್ತದೆ. ಸಂಬಂಧದಲ್ಲಿ ನಂಬಿಕೆ ಹೆಚ್ಚುತ್ತದೆ. ಪರಿಣಾಮವಾಗಿ, ಸುರಕ್ಷತೆ (Secure) ಭಾವನೆಯೂ ಹೆಚ್ಚುತ್ತದೆ. ನಂಬಿಕೆ ಇಲ್ಲವಾದಾಗ ಸಂಬಂಧ ಭಾರವೆನಿಸುತ್ತದೆ. ಭಾವನೆಗಳನ್ನು ಹಂಚಿಕೊಳ್ಳುವುದನ್ನು (Share Feelings) ತಲೆನೋವಿನ ಕೆಲಸವೆಂಬಂತೆ ಭಾವಿಸಬಾರದು. 

•    ಸಂಬಂಧ ಸುಧಾರಣೆ (Reform)
ದಾಂಪತ್ಯದಲ್ಲಿ ಏನೋ ಸರಿಯಿಲ್ಲ, ಸಂಬಂಧ ಆತ್ಮೀಯವಾಗಿಲ್ಲ, ಆಳವಾಗಿಲ್ಲ (Deep) ಎನ್ನುವ ಭಾವನೆಯಿಂದ ತೊಳಲಾಡುತ್ತಿರುವವರು ನೀವಾಗಿದ್ದರೆ ಮೊದಲು ಒಳ್ಳೆಯ ಕೇಳುಗರಾಗಿ. ಸಂಗಾತಿಯ ಭಾವನೆಗಳಿಗೆ ಕಿವಿಯಾಗಿ. ನೀವೂ ಅವರಲ್ಲಿ ಭಾವನೆ ಹಂಚಿಕೊಳ್ಳಿ. ಸಹಾನುಭೂತಿಯಿಂದ ಮಾತುಕತೆ ನಡೆಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಸಂಬಂಧ ಸದೃಢವಾಗುತ್ತದೆ.

ಲವ್ ಮಾಡಿ ಮದ್ವೆ ಆದ್ರೂ ಮತ್ತೊಬ್ಬಳ ಬಗ್ಗೆ ಆಕರ್ಷಣೆ! ಇದ್ಯಾಕಾಗುತ್ತೆ ಗೊತ್ತಾ?

•    ಸಮಸ್ಯೆಗಳ ನಿವಾರಣೆ (Problem Solving)
ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳುತ್ತ ಸಾಗುವುದು ಯಾವುದೇ ದಂಪತಿಗೆ ಸವಾಲಾಗುತ್ತದೆ. ಸೂಕ್ತ ಸಂವಹನ (Communication) ಇಲ್ಲವಾದರೆ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳುವುದು ಸಾಧ್ಯವೇ ಇಲ್ಲ. ಆಗ ಗೊಂದಲವೇ (Doubt) ಹೆಚ್ಚಿ ಮತ್ತಷ್ಟು ಅವರಿಂದ ದೂರವಾಗುವಂತಾಗುತ್ತದೆ. ಕೆಲವು ದಂಪತಿ ಪದೇ ಪದೆ ಘರ್ಷಣೆ (Fight) ಮಾಡಿಕೊಳ್ಳುವುದು ಇದೇ ಕಾರಣಕ್ಕೆ. ಅದರ ಬದಲಿಗೆ, ಸಂಗಾತಿಯೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದರೆ ಅಪನಂಬಿಕೆ, ಗೊಂದಲ ಕಡಿಮೆಯಾಗಿ ಸಮಸ್ಯೆಗಳೂ ದೂರವಾಗುತ್ತವೆ. 
 

click me!