ಗಂಡ ಅಡ್ಜೆಸ್ಟ್ ಮಾಡಿಕೊಳ್ಳಲ್ಲ, ಹೆಂಡ್ತಿ ಅಡ್ಜೆಸ್ಟ್ ಮಾಡಿಕೊಳ್ಳಲ್ಲ ಅನ್ನೋ ದೂರು ಪತಿ-ಪತ್ನಿ ಮಧ್ಯೆ ಯಾವಾಗ್ಲೂ ಇದ್ದಿದ್ದೇ. ಆದ್ರೆ ಇಲ್ಲಿ ಪತ್ನಿಯ 'ಹೊಂದಿಕೊಳ್ಳದ ವರ್ತನೆ'ಯಿಂದ ಮಾನಸಿಕ ಹಿಂಸೆಯನ್ನು ಅನುಭವಿಸಿರುವ ವ್ಯಕ್ತಿಯೊಬ್ಬ ವಿಚ್ಛೇದನ ಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದಾನೆ.
ನವದೆಹಲಿ: ಪತ್ನಿಯ 'ಹೊಂದಿಕೊಳ್ಳದ ವರ್ತನೆ'ಯಿಂದ ಮಾನಸಿಕ ಹಿಂಸೆಯನ್ನು ಅನುಭವಿಸಿರುವ ವ್ಯಕ್ತಿಯೊಬ್ಬನ ವಿಚ್ಛೇದನವನ್ನು ದೆಹಲಿ ಹೈಕೋರ್ಟ್ ಅಂಗೀಕರಿಸಿದೆ. ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ನೀನಾ ಕುಮಾರ್ ಬನ್ಸಾಲ್ ಅವರ ವಿಭಾಗೀಯ ಪೀಠವು ಆರಂಭದಲ್ಲಿ ಪತಿಯಿಂದ ವಿಚ್ಛೇದನದ ಮನವಿಯನ್ನು ನಿರಾಕರಿಸಿತು. ನಂತರ ಪತ್ನಿಯ ನಡವಳಿಕೆ, ಗಂಡನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಮಾನಸಿಕ ಕ್ರೌರ್ಯವನ್ನು ರೂಪಿಸುತ್ತದೆ ಎಂದು ನ್ಯಾಯಾಲಯವು ಪತಿಯ ಮನವಿಯನ್ನು ಅಂಗೀಕರಿಸಿತು.
'ಕಕ್ಷಿದಾರರು ಒಟ್ಟಿಗೆ ವಾಸಿಸಲು ಪ್ರಯತ್ನಿಸಿದರೂ, 16 ವರ್ಷಗಳ ಕಾಲ ಅವರ ಪ್ರಯತ್ನಗಳ ಹೊರತಾಗಿಯೂ, ಅವರ ಸಂಬಂಧದಲ್ಲಿ ನಿರಂತರ ಜಗಳಗಳು ಮತ್ತು ಅಸಮಾಧಾನಗಳು ಇದ್ದವು, ಅದು ಅವರ ಸಂಬಂಧ ಯಾವುದೇ ರೀತಿ ಉತ್ತಮವಾಗಲ್ಲಿಲ್ಲ' ಎಂದು ನ್ಯಾಯಾಲಯ ಹೇಳಿದೆ.
ಹೆಂಡತಿಗೆ ಅಡುಗೆ ಬರಲ್ಲ ಎಂದು ದೂರುವುದು ಕ್ರೌರ್ಯವಲ್ಲ; ಹೈಕೋರ್ಟ್
2001ರಲ್ಲಿ ವಿವಾಹವಾದ ದಂಪತಿಗಳು 16 ವರ್ಷಗಳ ಒಟ್ಟಿಗೆ ವಾಸಿಸಿದ ಬಳಿಕ ಬೇರ್ಪಟ್ಟರು. ಪತಿ ತನ್ನ ಹೆಂಡತಿಯಿಂದ ಕ್ರೌರ್ಯವನ್ನು ಆರೋಪಿಸಿದರೆ, ಹೆಂಡತಿ, ಗಂಡನ ಕುಟುಂಬವು ವರದಕ್ಷಿಣೆಗೆ ಒತ್ತಾಯಿಸಿದೆ ಎಂದು ಹೇಳಿಕೊಂಡಿದ್ದಾಳೆ. ವರದಕ್ಷಿಣೆ ಬೇಡಿಕೆಗಳ ಬಗ್ಗೆ ಪತ್ನಿಯ ಸಾಬೀತಾಗದ ಆರೋಪಗಳು ಮತ್ತು ಪತಿ ಸಹೋದ್ಯೋಗಿಗಳು ಮತ್ತು ಸ್ನೇಹಿತರೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಆಧಾರರಹಿತ ಆರೋಪಗಳು ವ್ಯಕ್ತಿಗೆ ಡಿವೋರ್ಸ್ ಸಿಗಲು ನೆರವಾಯಿತು.
'ಪ್ರತ್ಯೇಕವಾಗಿ ನೋಡಿದಾಗ ಘಟನೆಗಳು ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿಲ್ಲದಿರಬಹುದು, ಆದರೆ ಒಟ್ಟಿಗೆ ನೋಡಿದಾಗ ಗಂಡನೊಂದಿಗಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸುವ ಪ್ರಬುದ್ಧತೆ ಇಲ್ಲದ, ಹೆಂಡತಿಯ ಹೊಂದಾಣಿಕೆಯಾಗದ ಮನೋಭಾವವನ್ನು ಸ್ಪಷ್ಟವಾಗಿ ಚಿತ್ರಿಸುತ್ತದೆ. ಮೇಲ್ಮನವಿದಾರರು ಮಾನಸಿಕ ಕ್ರೌರ್ಯವನ್ನು ಅನುಭವಿಸಿದ್ದಾರೆ' ಎಂದು ನ್ಯಾಯಾಲಯ ಹೇಳಿದೆ.
ಹೆಂಡ್ತಿ, ಗಂಡನ ಜೊತೆ ಸೆಕ್ಸ್ ನಿರಾಕರಿಸುವುದು ಕ್ರೌರ್ಯ, ಪತಿ ಡಿವೋರ್ಸ್ ಕೊಡ್ಬೋದು; ಹೈಕೋರ್ಟ್ ತೀರ್ಪು
ಹಿಂದೂ ವಿವಾಹ ಕಾಯಿದೆ, 1955 ರ ಸೆಕ್ಷನ್ 13 (1) (IA) ಅಡಿಯಲ್ಲಿ ಕ್ರೌರ್ಯದ ಆಧಾರದ ಮೇಲೆ ವಿಚ್ಛೇದನವನ್ನು ನೀಡುವ ವೈವಾಹಿಕ ಸಂಬಂಧವನ್ನು ಮುಂದುವರೆಸುವಲ್ಲಿ ಯಾವುದೇ ಫಲಪ್ರದ ಉದ್ದೇಶವನ್ನು ಪೂರೈಸಲಾಗುವುದಿಲ್ಲ ಎಂದು ಕೋರ್ಟ್ ಗಮನಿಸಿದೆ. ಹೀಗಾಗಿ 'ಗಂಡನಿಗೆ ಆಗಿರುವ ಮಾನಸಿಕ ಹಿಂಸೆಯ ಆಧಾರದ ಮೇಲೆ ವಿಚ್ಛೇದನವನ್ನು ನೀಡುತ್ತೇವೆ' ಎಂದು ನ್ಯಾಯಾಲಯ ಹೇಳಿದೆ.