ಬಾಲಿವುಡ್ ನಟಿ ಕಂಗನಾ ಉದ್ಯಮಿ ಈಸಿ ಮೈ ಟ್ರಿಪ್ ಸಂಸ್ಥಾಪಕ ನಿಶಾಂತ್ ಪಿಟ್ಟಿ ಜೊತೆಗೆ ಸಂಬಂಧದಲ್ಲಿದ್ದಾರೆ ಎಂಬ ಸುದ್ದಿಯೊಂದು ಕೆಲ ದಿನಗಳಿಂದ ಸಿನಿ ವೆಬ್‌ಸೈಟ್‌ಗಳಲ್ಲಿ ಬಲವಾಗಿ ಹರಿದಾಡುತ್ತಿದೆ. ಆದರೆ ಈ ಗಾಸಿಪ್ ವರದಿಗಳ ಬಗ್ಗೆ ಕ್ವೀನ್ ಮಾತ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಂಗನಾ ರಣಾವತ್ ಅವರು ಸಿನಿಮಾದ ಜೊತೆ ಜೊತೆಗೆ ತಮ್ಮ ವೈಯಕ್ತಿಕ ಕಾರಣಕ್ಕೂ ಸದಾ ಸುದ್ದಿಯಲ್ಲಿರುವ ನಟಿ, ವಿವಾದಗಳಿಗೆ ರಾಣಿ ಎನಿಸಿರುವ ಬಾಲಿವುಡ್‌ನ ಈ ಕ್ವೀನ್ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಅದೇ ರೀತಿ ಈಗ ಅವರು ಉದ್ಯಮಿ ಈಸಿ ಮೈ ಟ್ರಿಪ್ ಸಂಸ್ಥಾಪಕ ನಿಶಾಂತ್ ಪಿಟ್ಟಿ ಜೊತೆಗೆ ಸಂಬಂಧದಲ್ಲಿದ್ದಾರೆ ಎಂಬ ಸುದ್ದಿಯೊಂದು ಕೆಲ ದಿನಗಳಿಂದ ಸಿನಿ ವೆಬ್‌ಸೈಟ್‌ಗಳಲ್ಲಿ ಬಲವಾಗಿ ಹರಿದಾಡುತ್ತಿದೆ. ಆದರೆ ಈ ಗಾಸಿಪ್ ವರದಿಗಳ ಬಗ್ಗೆ ಕ್ವೀನ್ ಮಾತ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಲೂನ್ ಒಂದರ ಎದುರು ಕಂಗನಾ ಹಾಗೂ ಈಸಿ ಮೈ ಟ್ರಿಪ್‌ನ ಸಂಸ್ಥಾಪಕ ನಿಶಾಂತ್ ಪಿಟ್ಟಿ ಕೈ ಕೈ ಹಿಡಿದು ಓಡಾಡುತ್ತಿರುವ ಫೋಟೋವೊಂದನ್ನು ಸಿನಿಮಾ ಪಪಾರಾಜಿಗಳು ಸೆರೆ ಹಿಡಿದು ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಕಂಗನಾ ಉದ್ಯಮಿ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಎಂಬ ರೂಮರ್ಸ್‌ಗಳು ಹರಿದಾಡಿದ್ದವು. ಇದಾದ ನಂತರ ಕಂಗನಾ ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಸಮಾರಂಭದಲ್ಲಿಯೂ ಇವರು ಜೊತೆಯಾಗಿ ಕಾಣಿಸಿಕೊಂಡಿದ್ದರು. ಇದರಿಂದ ಈ ಗಾಸಿಪ್‌ಗೆ ಮತ್ತಷ್ಟು ರೆಕ್ಕೆಪುಕ್ಕ ಹುಟ್ಟಿಕೊಂಡಿದ್ದವು. ಆದರೆ ಈ ಸುದ್ದಿಗಳನ್ನು ನಟಿ ಕಂಗನಾ ರಣಾವತ್ ನಿರಾಕರಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ತೇಜಸ್ ನಟಿ, ತಾನು ಹಾಗೂ ನಿಶಾಂತ್ ಪಿಟ್ಟಿ ಡೇಟಿಂಗ್ ಮಾಡುತ್ತಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿರುವ ಸ್ಕ್ರೀನ್ ಶಾಟ್ ಶೇರ್ ಮಾಡಿ ಹೀಗೆ ಬರೆದುಕೊಂಡಿದ್ದಾರೆ. ' ತಾನು ನಿಶಾಂತ್ ಪಿಟ್ಟಿ ಜೊತೆ ಡೇಟಿಂಗ್ ಮಾಡ್ತಿಲ್ಲ, ಈಸಿ ಮೈ ಟ್ರಿಪ್ ಸಂಸ್ಥಾಪಕರಾಗಿರುವ ನಿಶಾಂತ್ ಪಿಟ್ಟಿ ಅವರಿಗೆ ಈಗಾಗಲೇ ಮದ್ವೆಯಾಗಿದ್ದು,ಅವರು ಖುಷಿಯಾಗಿ ಇದ್ದಾರೆ. ಮಾಧ್ಯಮಗಳಿಗೆ ನನ್ನ ವಿನಮ್ರ ಮನವಿ, ದಯವಿಟ್ಟು ಇಂತಹ ಸುಳ್ಳು ಸುದ್ದಿಯನ್ನು ದಯವಿಟ್ಟು ಹಬ್ಬಿಸಬೇಡಿ, ನಿಶಾಂತ್ ತಮ್ಮ ದಾಂಪತ್ಯದಲ್ಲಿ ಖುಷಿಯಾಗಿದ್ದು, ನಾನು ಬೇರೆ ಯಾರೊಂದಿಗೋ ಡೇಟಿಂಗ್‌ನಲ್ಲಿ ಇದ್ದೇನೆ. ಒಳ್ಳೆಯ ಸಮಯಕ್ಕಾಗಿ ನಿರೀಕ್ಷಿಸುತ್ತಿದ್ದೇನೆ. ನಮ್ಮನ್ನು ಮುಜುಗರಕ್ಕೊಳಪಡಿಸಬೇಡಿ, ಜೊತೆಯಾಗಿ ಫೋಟೋ ಕ್ಲಿಕ್ಕಿಸಿದ್ದೇವೆ ಎಂಬ ಕಾರಣಕ್ಕೆ ಅವಿವಾಹಿತ ಹೆಣ್ಣು ಮಕ್ಕಳ ಹೆಸರು ಬೇರೆ ಯಾವುದೋ ಹೊಸ ವ್ಯಕ್ತಿ ಜೊತೆ ಸದಾ ಲಿಂಕ್ ಆಗುವುದು ಅಷ್ಟೊಂದು ಸರಿ ಕಾಣುವುದಿಲ್ಲ' ಎಂದು ಕಂಗನಾ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ನಿಶಾಂತ್ ಪಿಟ್ಟಿ ಜೊತೆ ಡೇಟಿಂಗ್ ವದಂತಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದಿರಾಗಾಂಧಿಯಾಗಿ ಕಂಗನಾ ರಣಾವತ್- ಅಯೋಧ್ಯೆ ಭೇಟಿ ಬೆನ್ನಲ್ಲೇ ಎಮರ್ಜೆನ್ಸಿ ಬಿಡುಗಡೆಗೆ ಡೇಟ್ ಫಿಕ್ಸ್!
ರೆಡ್ಡಿಟ್ ಯೂಸರ್ ಒಬ್ಬರು ಕಂಗನಾ ಅವರು ಈಸಿ ಟ್ರಿಪ್ ಮಾಲೀಕ ನಿಶಾಂತ್ ಪಿಟ್ಟಿ ಜೊತೆ ಹಲವು ಸಂದರ್ಭಗಳಲ್ಲಿ ಜೊತೆಯಾಗಿ ಇರುವ ಪೋಸ್ಟನ್ನು ಎಲ್ಲಿಂದಲೋ ಹೆಕ್ಕಿ ತೆಗೆದು ವೈರಲ್ ಮಾಡಿದ ನಂತರ ಇವರಿಬ್ಬರೂ ಡೇಟಿಂಗ್ ಮಾಡ್ತಿದ್ದಾರೆ ಎಂಬ ರೂಮರ್ಸ್ ಹಬ್ಬಿತ್ತು. ಇದಕ್ಕೂ ಮೊದಲು ಕಂಗನಾ ತಮ್ಮ ಹೇರ್ ಸ್ಟೈಲಿಸ್ಟ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ರೂಮರ್ಸ್ ಹಬ್ಬಿದ್ದವು. ಆದರೆ ಇದನ್ನು ಕೂಡ ಕಂಗನಾ ನಿರಾಕರಿಸಿದ್ದರು. ಈ ಗಾಸಿಪ್‌ಗಳಿಗೆ ಇನ್ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿದ ನಟಿ, 'ನನಗೆ ಈ ಸಂಬಂಧ ಸ್ನೇಹಿತರು ಆತ್ಮೀಯರಿಂದ ಸಾಕಷ್ಟು ಕರೆಗಳು ಬರುತ್ತಿವೆ. ಒಬ್ಬ ಹುಡುಗ ಹಾಗೂ ಹುಡುಗಿ ರಸ್ತೆಯಲ್ಲಿ ಜೊತೆಯಾಗಿ ಓಡಾಡುತ್ತಿದ್ದರೆ ಅವರ ಮಧ್ಯೆ ದೈಹಿಕ ಸಂಬಂಧವಿದೆ ಎಂದು ಅರ್ಥವಲ್ಲ, ಅವರು ಬಹುಶಃ ಒಡಹುಟ್ಟಿದವರು, ಸಹೋದ್ಯೋಗಿಗಳು, ಕೆಲಸ ಮಾಡುವ ಸ್ಥಳದಲ್ಲಿನ ಸ್ನೇಹಿತರು ಆಗಿರಬಹುದು ಎಂದು ಕಂಗನಾ ಬರೆದುಕೊಂಡಿದ್ದರು.