ಬುದ್ಧಿವಂತ ಪಕ್ಷಿಗಳಾದ ಕಾಗೆಗಳು ಮನುಷ್ಯನಿಂದ ಒಂದು ಅಂತರ ಕಾಯ್ದುಕೊಂಡು ದೂರವೇ ಇರುತ್ತವೆ. ಆದರೆ, ಇಲ್ಲೊಬ್ಬ ವ್ಯಕ್ತಿ ಕಾಗೆಯಂತೆಯೇ ವಿಶಿಷ್ಟ ದನಿ ಹೊರಡಿಸಿ ನೂರಾರು ಕಾಗೆಗಳನ್ನು ಕೆಲವೇ ಕ್ಷಣಗಳಲ್ಲಿ ಕರೆಯುವುದೊಂದು ವಿಚಿತ್ರ.
ಏನಾದರೂ ಒಂದು ಚಿಕ್ಕ ಆಹಾರದ ತುಂಡು ಸಿಕ್ಕರೆ ಸಾಕು, ತನ್ನ ಬಳಗವನ್ನೆಲ್ಲ ಕರೆದು ಅದರಲ್ಲೇ ಹಂಚಿಕೊಳ್ಳುವ ಉದಾರ ಬುದ್ಧಿ ಹೊಂದಿರುವ ಕಾಗೆ ನಮ್ಮ ಮನೆಯ ಸುತ್ತಮುತ್ತ ಕಂಡುಬರುವ ಸಾಮಾನ್ಯ ಪಕ್ಷಿ. ಮನುಷ್ಯನ ಸಮೀಪದಲ್ಲಿದ್ದೂ ಆತನ ಸಹವಾಸದಿಂದ ದೂರವಿರುವ ಜೀವ. ಕಾಗೆಗೆ ನಮ್ಮ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನವಿದೆ. ಅದನ್ನು ಪಿತೃಗಳ ರೂಪ ಎನ್ನಲಾಗುತ್ತದೆ. ಈ ಹಿನ್ನೆಲೆಯಲ್ಲಿ, ಪಿತೃಗಳ ದಿನದಂದು ಕಾಗೆಗೆ ಊಟವಿಕ್ಕುವ ಪದ್ಧತಿ ಕಂಡುಬರುತ್ತದೆ. ಕಾಗೆಯನ್ನು ಯಮಸ್ವರೂಪಿ ಎಂದೂ ಹೇಳಲಾಗುತ್ತದೆ. ಅದು ತಲೆಯ ಮೇಲೆ ಮೊಟಕಿದರೆ, ಮನೆಯೆದುರು ಕೂಗಿದರೆ ಹಲವು ರೀತಿಯಲ್ಲಿ ವಿಶ್ಲೇಷಣೆ ಮಾಡಲಾಗುತ್ತದೆ. ನಮ್ಮಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಕಾಗೆಯ ಕುರಿತು ಹಲವು ನಂಬಿಕೆಗಳಿವೆ. ಅಸಲಿಗೆ ಕಾಗೆ ಒಂದು ಬುದ್ಧಿವಂತ ಜೀವಿ. ಇದನ್ನು “ಗರಿಯಿರುವ ಮಂಗ’ ಎಂದೂ ಬಣ್ಣಿಸಲಾಗುತ್ತದೆ. ಕಾಗೆಗಳು ತಾವು ವಾಸಿಸುವ ಪರಿಸರವನ್ನು ತುಂಬ ಆಳವಾಗಿ ಅಧ್ಯಯನ ಮಾಡುತ್ತವೆಯಂತೆ. ಅಷ್ಟೇ ಅಲ್ಲ, ಅವು ಮನುಷ್ಯನ ಧ್ವನಿ ಮತ್ತು ಮುಖವನ್ನು ಸ್ಪಷ್ಟವಾಗಿ ಗುರುತಿಸುತ್ತವೆಯಂತೆ. ಅಧ್ಯಯನದ ಪ್ರಕಾರ, ಕಾಗೆಗಳು ಒಂದು ವ್ಯಕ್ತಿಯನ್ನು ಅಪಾಯಕಾರಿಯೆಂದು ಗುರುತಿಸಿದರೆ ಆತನನ್ನು ಐದು ವರ್ಷಗಳ ಬಳಿಕ ಕೂಡ ಗುರುತು ಹಿಡಿಯುತ್ತವೆಯಂತೆ!
ಇಷ್ಟೆಲ್ಲ ಬುದ್ಧಿವಂತಿಕೆ (Intelligence) ಹೊಂದಿರುವ ಕಾಗೆ (Crow) ಮನುಷ್ಯನ (Man) ಸಮೀಪದಲ್ಲಿ ಸುಳಿದಾಡುವುದಿಲ್ಲ. ಎಂದಾದರೂ ಒಮ್ಮೆ ಸಮೀಪದಲ್ಲಿ ಹಾರಬಹುದು ಅಷ್ಟೇ. ಆದರೆ, ಅವುಗಳನ್ನು ಕರೆಯುವುದು ಕಷ್ಟ. ಆದರೆ, ಎಲ್ಲದಕ್ಕೂ ಒಂದು ಅಪವಾದ ಎನ್ನುವುದು ಇದ್ದೇ ಇರುತ್ತದೆ. ವ್ಯಕ್ತಿಯೊಬ್ಬ (Person) ಕಾಗೆಯಂತೆಯೇ ದನಿ (Mimic) ಹೊರಡಿಸಿ, ಕೆಲವೇ ಕ್ಷಣಗಳಲ್ಲಿ ಕಾಗೆಗಳ ಬಳಗವನ್ನೇ ಕರೆಯುವ ಚೋದ್ಯವೊಂದು ಇದೀಗ ಅಂತರ್ಜಾಲದಲ್ಲಿ ವೈರಲ್ (Viral) ಆಗಿದೆ. ಈ ವೀಡಿಯೋ ನೋಡಿದವರಿಗೆ ಅಚ್ಚರಿಯಾಗುವುದು ಖಂಡಿತ.
ಅಯೋಧ್ಯೆಯಲ್ಲಿ ವಿರಾಟ್ ಕೊಹ್ಲಿ ಎಂದು ಭಾವಿಸಿ ಆತನ ಡೋಪಲ್ ಗ್ಯಾಂಗರ್‌ಗೆ ಫೋಟೋಗಾಗಿ ಮುತ್ತಿದ ಜನ; ವಿಡಿಯೋ ವೈರಲ್
ಕಾಗೆಗಳೇ ತುಂಬಿಹೋದವು
ವೈರಲ್ ವೀಡಿಯೋದಲ್ಲಿ ವ್ಯಕ್ತಿಯೊಬ್ಬರು ಸಣ್ಣ ಮೈದಾನದಲ್ಲಿ (Open Ground) ನಿಂತಿದ್ದಾರೆ. ಅವರು ಕಾಗೆಯಂತೆ ದನಿ ಹೊರಡಿಸಿ ಕೂಗುತ್ತಾರೆ. ಒಂದೆರಡು ಬಾರಿ ಹಾಗೆ ಕೂಗುತ್ತಿರುವಂತೆಯೇ ಸುತ್ತಮುತ್ತ ಅದೆಲ್ಲಿರುತ್ತವೆಯೋ ಕಾಗೆಗಳ ಹಿಂಡು ಆ ಮೈದಾನಕ್ಕೆ ಆಗಮಿಸುತ್ತವೆ. ಕಾ ಕಾ ಎನ್ನುವ ಅವುಗಳ ಕೂಗಿನಿಂದ ಇಡೀ ಪ್ರದೇಶ ತುಂಬಿಹೋಗುತ್ತದೆ. ಅಲ್ಲಿಯವರೆಗೆ ತಿಳಿನೀಲಿ ಬಣ್ಣದಲ್ಲಿ ಶುಭ್ರವಾಗಿದ್ದ ಆಕಾಶ ಕಾಗೆಗಳಿಂದ ಆವರಿಸಿದಂತೆ ಕಾಣುತ್ತದೆ.
ಪ್ರಾಣಿಗಳಂತೆಯೇ (Animals) ಸ್ವರ ಹೊರಡಿಸಿ ಮಿಮಿಕ್ರಿ ಮಾಡುವ ಕಲಾವಿದರನ್ನು ನೋಡಿದ್ದೇವೆ. ಬಹಳಷ್ಟು ಜನ ಒರಿಜಿನಲ್ ದನಿಯಂತೆಯೇ ಮಿಮಿಕ್ ಮಾಡುತ್ತಾರೆ. ಆದರೆ, ಇದು ಇನ್ನೊಂದು ಹಂತಕ್ಕೇರಿದ ವಿಚಾರ. ಮಿಮಿಕ್ ಜತೆಗೆ ನಿಜಕ್ಕೂ ಅವು ಬಂದೇ ಬಿಡುವುದು ಅಚ್ಚರಿದಾಯಕ. ಸೋಷಿಯಲ್ ಮೀಡಿಯಾ (Social Media) ಬಳಕೆದಾರರು ಈ ವಿಚಿತ್ರ ವಿದ್ಯಮಾನಕ್ಕೆ ಬೆರಗಾಗಿದ್ದಾರೆ. ಸಿಕ್ಕಾಪಟ್ಟೆ ಕಾಮೆಂಟ್ ಗಳೂ ಬಂದಿವೆ.
ಕಾಗೆಗಳ ಒಗ್ಗಟ್ಟು
ನೆಟ್ಟಿಗರೊಬ್ಬರು, “ಕಾಗೆಗಳದ್ದು ನಿಜಕ್ಕೂ ಒಗ್ಗಟ್ಟು (Unity). ನಾವು ಮನುಷ್ಯರು, ಕಾಗೆಗಳನ್ನು ನೋಡಿ ಕಲಿತುಕೊಳ್ಳಬೇಕಿದೆ. ಯಾವುದೋ ಒಂದು ಕಾಗೆ ಅಪಾಯದಲ್ಲಿದ್ದು, ನಮ್ಮನ್ನೆಲ್ಲ ಸಹಾಯಕ್ಕೆ (Help) ಕರೆಯುತ್ತಿದೆ ಎಂದು ಭಾವಿಸಿ ಎಲ್ಲ ಕಾಗೆಗಳೂ ತಕ್ಷಣ ಮೈದಾನಕ್ಕೆ ಬಂದಿವೆ. ಆ ವ್ಯಕ್ತಿಯ ಮಿಮಿಕ್ ಕೂಡ ಚೆನ್ನಾಗಿದೆ’ ಎಂದು ಹೇಳಿದ್ದಾರೆ. ಮತ್ತೊಬ್ಬರು, “ಮಾರ್ವೆಲ್ ಗೆ ಹೊಸ ಕ್ಯಾರೆಕ್ಟರ್ ದೊರೆತಿದೆ-ಕ್ರೋಮ್ಯಾನ್ (Crowman)’ ಎಂದು ತಮಾಷೆ ಮಾಡಿದ್ದಾರೆ.
ಈಸ್ ಮೈ ಟ್ರಿಪ್ ಸಂಸ್ಥಾಪಕನ ಜೊತೆ ಕಂಗನಾ ಡೇಟಿಂಗ್?; ನಿಶಾಂತ್ ಜೊತೆಗಿನ ನಟಿಯ ಫೋಟೋ ವೈರಲ್
“ಈ ವ್ಯಕ್ತಿಯ ವಿಶಿಷ್ಟ ಸಾಮರ್ಥ್ಯಕ್ಕೆ ಸಲಾಂ’ ಎಂದು ಒಬ್ಬರು ಹೇಳಿದ್ದಾರೆ. ಯಾರೋ ಒಬ್ಬರು, “ಇದು ನಿಜಕ್ಕೂ ಮುಂದಿನ ಹಂತ’ ಎಂದು ಮೆಚ್ಚುಗೆ ಸೂಸಿದ್ದಾರೆ.
ನೂರಾರು ಸಂಖ್ಯೆಯಲ್ಲಿ ಕಾಗೆಗಳು ಆಗಮಿಸುವ ಈ ವಿಚಿತ್ರ ವಿದ್ಯಮಾನ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೇರೊಂದು ಜೀವಿಯ ಬಳಿ, ಸುಲಲಿತವಾಗಿ ಸಂವಹನ (Communicate) ಮಾಡುವ ಈ ಮನುಷ್ಯನ ಪ್ರತಿಭೆಗೆ ಎಲ್ಲರೂ ತಲೆದೂಗಿದ್ದಾರೆ.