ಮಕ್ಕಳು ಮನೆ ತುಂಬ ಓಡಾಡ್ತಿದ್ದರೆ ಅದ್ರ ಖುಷಿಯೇ ಬೇರೆ. ಒತ್ತಡ, ನೋವನ್ನು ಮರೆಸುವ ಶಕ್ತಿ ಮಕ್ಕಳಿಗಿರುತ್ತದೆ. ಹಿಂದಿನ ಕಾಲದಲ್ಲಿ ಮಕ್ಕಳಿಂದ ತುಂಬಿರುತ್ತಿದ್ದ ಮನೆಯಲ್ಲಿ ಈಗ ಒಂದು ಮಗು ಆಗೋದು ಕಷ್ಟವಾಗಿದೆ. ಇದಕ್ಕೆ ನಮ್ಮ ಜೀವನ ಶೈಲಿ ಮುಖ್ಯ ಕಾರಣವಾಗಿದೆ.
ಸುಖ ದಾಂಪತ್ಯಕ್ಕೆ ಸೆಕ್ಸ್ (Sex )ಅತ್ಯಗತ್ಯ. ಸಂಭೋಗ ದೈಹಿಕ, ಮಾನಸಿಕ ಸುಖ ನೀಡುವ ಜೊತೆಗೆ ವಂಶಾಭಿವೃದ್ಧಿಗೆ ನೆರವಾಗುತ್ತದೆ. ಮಗು ಜನಿಸಲು ವೀರ್ಯ(Sperm)ದ ಪ್ರಮಾಣ ಹಾಗೂ ಆರೋಗ್ಯ (Health)ಕರ ವೀರ್ಯ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಪುರುಷ (Male) ಬಂಜೆತನ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗ್ತಿದೆ. ಪುರುಷರ ವೀರ್ಯದ ಗುಣಮಟ್ಟ ಕಡಿಮೆಯಾಗ್ತಿರುವುದ್ರಿಂದ ಸ್ತ್ರೀ ಸಂಗಾತಿ ಗರ್ಭಿಣಿಯಾಗುವ ಸಾಧ್ಯತೆ ಕಡಿಮೆಯಾಗ್ತಿದೆ.
ಪುರುಷರಲ್ಲಿ ವೀರ್ಯಾಣು ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಕಂಡುಬರುತ್ತದೆ. ಕಡಿಮೆ ವೀರ್ಯ ಎಣಿಕೆಯನ್ನು ಒಲಿಗೋಸ್ಪರ್ಮಿಯಾ ಎಂದೂ ಕರೆಯಲಾಗುತ್ತದೆ. ವೀರ್ಯದ ಸಂಪೂರ್ಣ ಅನುಪಸ್ಥಿತಿಯನ್ನು ಅಜೋಸ್ಪೆರ್ಮಿಯಾ ಎಂದು ಕರೆಯಲಾಗುತ್ತದೆ. ಪ್ರತಿ ಮಿಲಿಲೀಟರ್ ವೀರ್ಯಕ್ಕೆ 15 ಮಿಲಿಯನ್ ಶುಕ್ರಾಣುವನ್ನು ಹೊಂದಿದ್ದರೆ, ವೀರ್ಯದ ಸಂಖ್ಯೆಯನ್ನು ಕಡಿಮೆ ಎಂದು ಪರಿಗಣಿಸಲಾಗುತ್ತದೆ. 100 ಜೋಡಿಗಳಲ್ಲಿ 13 ದಂಪತಿಗೆ ಮಕ್ಕಳಾಗದಿರಲು ಪುರುಷರ ವೀರ್ಯಾಣುವಿನ ಸಮಸ್ಯೆ ಕಾರಣವಾಗ್ತಿದೆ. ಆರೋಗ್ಯ ಮತ್ತು ಬದಲಾದ ಜೀವನಶೈಲಿ ವೀರ್ಯದ ಸಂಖ್ಯೆ, ಗುಣಮಟ್ಟವನ್ನು ಕಡಿಮೆ ಮಾಡಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮೂಲಕ ವೀರ್ಯಾಣುವಿನ ಸಂಖ್ಯೆಯನ್ನು ಹೆಚ್ಚಿಸಿ,ಮನೆಯಲ್ಲಿ ಮಗುವಿನ ನಗು ಕೇಳುವಂತೆ ಮಾಡಬಹುದು.
ಪುರುಷರಲ್ಲಿ ವೀರ್ಯಾಣು ಕಡಿಮೆಯಾಗಲು ಕಾರಣಗಳು
ಬೊಜ್ಜು : ಅಮೆರಿಕಾದ ನಾಲ್ಕು ಪುರುಷರಲ್ಲಿ ಮೂವರು ಪುರುಷರು ಅಧಿಕ ತೂಕ ಅಥವಾ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 35 ರಷ್ಟು ಮಂದಿ ಅಧಿಕ ತೂಕ ಹೊಂದಿದ್ದಾರೆ. ದೇಹದ ಕೊಬ್ಬಿನ ಶೇಖರಣೆ ಮತ್ತು ಹೆಚ್ಚಿನ ಬಾಡಿ ಮಾಸ್ ಇಂಡೆಕ್ಸ್ ನಿಂದ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗ್ತಿದೆ. ಪುರುಷರಲ್ಲಿರುವ ಟೆಸ್ಟೋಸ್ಟೆರಾನ್ ವೀರ್ಯ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಆದ್ರೆ ಬೊಜ್ಜು ಟೆಸ್ಟೋಸ್ಟೆರಾನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಮಕ್ಕಳನ್ನು ಬಯಸುವ ಜನರು ಮೊದಲು ತೂಕ ಇಳಿಸಬೇಕು. ತೂಕ ಇಳಿದಂತೆ ವೀರ್ಯಾಣುಗಳ ಸಂಖ್ಯೆ ಹೆಚ್ಚಾಗಿ, ಫಲವತ್ತತೆ ಹೆಚ್ಚಾಗುತ್ತದೆ.
ಬಾಕ್ಸರ್ ಶಾರ್ಟ್ಸ್ : ಒಳ ಉಡುಪಿನಲ್ಲಿ ಏನಿದೆ ಎಂದುಕೊಳ್ಳುವವರೇ ಹೆಚ್ಚು. ಆದ್ರೆ ಇದು ಕೂಡ ಪುರುಷರ ವೀರ್ಯಾಣುವಿನ ಮೇಲೆ ಪರಿಣಾಮ ಬೀರುತ್ತದೆ. ಹೊಸ ಅಧ್ಯಯನದಲ್ಲಿ ಈ ವಿಷ್ಯ ಬಹಿರಂಗವಾಗಿದೆ. ಬಾಕ್ಸರ್ ಶಾರ್ಟ್ಸ್ ಧರಿಸಿದ ಪುರುಷರು ಬಿಗಿಯಾದ ಬ್ರೀಫ್ಸ್ ಧರಿಸಿದವರಿಗಿಂತ ಹೆಚ್ಚಿನ ವೀರ್ಯಾಣುಗಳನ್ನು ಹೊಂದಿದ್ದರು ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ತಂದೆಯಾಗಲು ಪ್ರಯತ್ನಿಸುತ್ತಿರುವ ಪುರುಷರು ಸಡಿಲವಾದ ಒಳ ಉಡುಪುಗಳನ್ನು ಧರಿಸಬೇಕೆಂದು ಸಂಶೋಧಕರು ಹೇಳಿದ್ದಾರೆ.
ಹೆಚ್ಚು ವೀರ್ಯಾಣುಗಳ ಉತ್ಪಾದನೆಗೆ ವೃಷಣದ ಉಷ್ಣತೆಯು ದೇಹದ ಉಷ್ಣತೆಗಿಂತ 3 ರಿಂದ 4 ಡಿಗ್ರಿಗಳಷ್ಟು ಕಡಿಮೆಯಿರುವುದು ಬಹಳ ಮುಖ್ಯ.
ಸಂಬಂಧ ಕುರಿತ Anxiety ಬಗ್ಗೆ ನಿರ್ಲಕ್ಷ್ಯ ಬೇಡ; ದಾಂಪತ್ಯಕ್ಕೆ ಮುಳ್ಳಾಗ್ಬಹುದು ಈ ಖಾಯಿಲೆ
ಧೂಮಪಾನ : ಧೂಮಪಾನ ಪುರುಷರಲ್ಲಿ ಫಲವತ್ತತೆಯನ್ನು ಕಡಿಮೆ ಮಾಡುತ್ತದೆ. ಧೂಮಪಾನವು ವೀರ್ಯದ ಸಂಖ್ಯೆ, ವೀರ್ಯದ ಗುಣಮಟ್ಟ,ವೀರ್ಯದ ಚಲನೆಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಧೂಮಪಾನ ಮಾಡುವುದ್ರಿಂದ ವೀರ್ಯವು ನಿಷ್ಕ್ರಿಯಗೊಳ್ಳುತ್ತದೆ. ಮಕ್ಕಳನ್ನು ಪಡೆಯಲು ಬಯಸುವ ಪುರುಷರು ಧೂಮಪಾನದಿಂದ ದೂರವಿರಬೇಕು.
ಹಾಟ್ ಟಬ್-ಸನ್ ಬಾತ್ : ವೀರ್ಯ ಉತ್ಪತ್ತಿಯಾಗಲು ಪುರುಷನ ಖಾಸಗಿ ಅಂಗವು ಅವನ ದೇಹದ ಉಳಿದ ಭಾಗಗಳಿಗಿಂತ ತಂಪಾಗಿರಬೇಕು. ಬಿಸಿ ನೀರಿನಲ್ಲಿ ಸ್ನಾನ ಮಾಡಿದಾಗ,ಸನ್ ಬಾತ್ ಮಾಡಿದಾಗ ವೀರ್ಯದ ಸಂಖ್ಯೆ ಕಡಿಮೆಯಾಗುತ್ತದೆ. ಕೆಲವು ವಾರಗಳವರೆಗೆ ಹಾಟ್ ಟಬ್ ಬಳಸದೆ ಹೋದಲ್ಲಿ ವೀರ್ಯಾಣುಗಳ ಸಂಖ್ಯೆ ಏರಿಕೆಯಾಗುತ್ತದೆ.
Cheating Husband: ಪತಿ ಕಾರಿನಲ್ಲಿದ್ದ ಕಾಂಡೋಮ್ ನೋಡಿ ಸೇಡು ತೀರಿಸಿಕೊಂಡ ಪತ್ನಿ..!
ಮಧುಮೇಹ : ಟೈಪ್ 2 ಮಧುಮೇಹವು ಕಡಿಮೆ ಟೆಸ್ಟೋಸ್ಟೆರಾನ್ ಮಟ್ಟ ಮತ್ತು ಬಂಜೆತನಕ್ಕೆ ಸಂಬಂಧಿಸಿದೆ. ತೂಕ ಇಳಿಕೆ ಹಾಗೂ ಮಧುಮೇಹ ನಿಯಂತ್ರಣ ಟೆಸ್ಟೋಸ್ಟೆರಾನ್ ಮಟ್ಟವನ್ನು ಸುಧಾರಿಸುತ್ತದೆ.
ಇದಲ್ಲದೆ ಆಲ್ಕೋಹಾಲ್ ಹಾಗೂ ಡ್ರಗ್ಸ್ ಸೇವನೆ ಮಾಡುವವರಲ್ಲೂ ವೀರ್ಯಾಣುಗಳ ಸಮಸ್ಯೆ ಕಾಡುತ್ತದೆ. ಮೊದಲು ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆದರೆ ಮಕ್ಕಳನ್ನು ಪಡೆಯಬಹುದು.