ಮದುವೆಯ ಮೊದಲ ವರ್ಷದ ಸಂಭ್ರಮವೇ ಸದಾ ಇರಬೇಕೆಂದು ಎಲ್ಲರೂ ಬಯಸ್ತಾರೆ. ಇಬ್ಬರ ತಪ್ಪು – ಒಪ್ಪುಗಳು ದಿನ ಕಳೆದಂತೆ ಅರಿವಿಗೆ ಬರುತ್ತವೆ. ಅದನ್ನು ಒಪ್ಪಿ ನಡೆದ್ರೆ ದಾಂಪತ್ಯ, ತಪ್ಪನ್ನು ಎತ್ತಿ ಹೇಳಿದ್ರೆ ವಿಚ್ಛೇದನ
ಇಬ್ಬರು ಪರಸ್ಪರ ಒಪ್ಪಿ, ಮುಂದಿನ ಭವಿಷ್ಯವನ್ನು ಒಟ್ಟಿಗೆ ಕಳೆಯುವ ನಿರ್ಧಾರಕ್ಕೆ ಬಂದ್ಮೇಲೆ ಮದುವೆಯಾಗ್ತಾರೆ. ಮದುವೆಗೂ ಮುನ್ನ ಸಾಕಷ್ಟು ಪ್ರಯತ್ನ, ಪರಿಶ್ರಮವಿರುತ್ತದೆ. ಆದ್ರೆ ಮದುವೆ ಮೂಲಕ ಒಂದಾಗುವ ಎರಡು ಕುಟುಂಬಗಳು ಕಾಗದದ ಮೇಲೆ ಒಂದು ಸಹಿ ಹಾಕುವ ಮೂಲಕ ದೂರವಾಗುತ್ತವೆ. ಎಲ್ಲ ಬಂಧಗಳು ಕಳಚಿ ಬೀಳುತ್ತವೆ. ದಾಂಪತ್ಯ ಮುರಿದು ಬೀಳಲು ನಾನಾ ಕಾರಣಗಳನ್ನು ನಾವು ನೋಡ್ಬಹುದು. ಇಬ್ಬರ ಮಧ್ಯೆ ಹೊಂದಾಣಿಕೆ ಸಾಧ್ಯವಿಲ್ಲ ಎಂದಾಗ, ಒಂದು ಕಡೆಯಿಂದ ಹಿಂಸೆಗಳು ಕಾಣಿಸಿಕೊಂಡಾಗ, ಇಬ್ಬರ ಮಧ್ಯೆ ನಂಬಿಕೆ ಸತ್ತಾಗ ಹೀಗೆ ಅನೇಕಾನೇಕ ಕಾರಣಕ್ಕೆ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ವಿಚ್ಛೇದನಕ್ಕೆ ವಿಚಿತ್ರ ಕಾರಣಗಳನ್ನು ಹೇಳಲಾಗುತ್ತದೆ. ಹಿಂದೆ ಕ್ಷುಲ್ಲಕ ಎನ್ನಿಸುತ್ತಿದ್ದ ವಿಷ್ಯಗಳೇ ಇಂದು ವಿಚ್ಛೇದನಕ್ಕೆ ದಾರಿ ಮಾಡಿಕೊಡ್ತಿವೆ. ನಾವಿಂದು ನಾಲ್ಕೈದು ಪುರುಷರು ಸಂಗಾತಿಯಿಂದ ತಾವು ದೂರವಾಗಲು ಕಾರಣವೇನು ಎಂಬುದನ್ನು ಹೇಳಿದ್ದಾರೆ. ಅದನ್ನು ನಿಮ್ಮ ಮುಂದೆ ಇಡ್ತೇವೆ.
ವಿಚ್ಛೇದನ (Divorce) ಕ್ಕೆ ಇವು ಕಾರಣ…! :
ಪತಿಗಿಂತ ವೃತ್ತಿ (Career) ಹೆಚ್ಚಾಯ್ತು : ವೃತ್ತಿ ವಿಷ್ಯ ಬಂದಾಗ ಪುರುಷರನ್ನು ನಾವು ಗಮನದಲ್ಲಿಟ್ಟು ನೋಡ್ತೇವೆ. ಆದ್ರೆ ಕೆಲ ಹೆಣ್ಮಕ್ಕಳು ಕೂಡ ವೃತ್ತಿಗೆ ಹೆಚ್ಚು ಒತ್ತು ನೀಡ್ತಾರೆ. ಈತನ ವಯಸ್ಸು 39. ಕೆಲ ದಿನಗಳ ಹಿಂದೆ ಈತ ವಿಚ್ಛೇದನ ಪಡೆದಿದ್ದಾನೆ. ಅದಕ್ಕೆ ಕಾರಣವಾಗಿದ್ದು ಆಕೆಯ ವೃತ್ತಿ ಪ್ರೀತಿ (love). ಪತ್ನಿಗೆ ನನಗಿಂತ ಕೆಲಸದ ಮೇಲೆ ಹೆಚ್ಚು ಪ್ರೀತಿ. ಸದಾ ಕೆಲಸದ ಬಗ್ಗೆ ಕಾಳಜಿ ವಹಿಸುವ ಆಕೆ, ನನ್ನನ್ನು ನಿರ್ಲಕ್ಷ್ಯ ಮಾಡ್ತಾಳೆ. ಮದುವೆ (Marriage) ಹಾಗೂ ಕುಟುಂಬದ ಬಗ್ಗೆ ಗಮನ ಹರಿಸದ ಆಕೆ ಜೊತೆ ಸಂಸಾರ ನಡೆಸೋದು ಕಷ್ಟವಾಗಿದ್ದ ಕಾರಣ ವಿಚ್ಛೇದನ ಪಡೆದೆ ಎನ್ನುತ್ತಾನೆ ಆತ.
ಯೋನಿ ಸೋಂಕಿದ್ದಾಗ ಸೆಕ್ಸ್ ಮಾಡೋದು ಎಷ್ಟು ಸೇಫ್?
ಬೆಕ್ಕಿನ ಮೇಲೆ ಪ್ರೀತಿ : ಈತನ ಪತ್ನಿಗೆ ಬೆಕ್ಕೆಂದ್ರೆ ಪ್ರಾಣವಂತೆ. ಬೆಕ್ಕನ್ನು ಆಕೆ ಅತಿಯಾಗಿ ಪ್ರೀತಿ ಮಾಡ್ತಾಳೆ. 29 ವರ್ಷದ ವ್ಯಕ್ತಿಯ ಬದುಕಿನಲ್ಲಿ ಬೆಕ್ಕು ಶಾಪವಾಗಿದೆ. ಮನೆಯ ಸೋಫಾದಿಂದ ಬೆಡ್ ರೂಮಿನವರೆಗೆ ಎಲ್ಲ ಕಡೆ ಬೆಕ್ಕಿನ ಮೂತ್ರ (Urine) ದ ವಾಸನೆ ಬರುತ್ತಿತ್ತಂತೆ. ಶರ್ಟ್ ಗಳನ್ನು ಹಾಳು ಮಾಡುವ ಬೆಕ್ಕು, ನೆಮ್ಮದಿಯಿಂದ ಮನೆಯಲ್ಲಿರೋಕೆ ಬಿಡಲ್ಲವಂತೆ. ಸಿಟ್ಟಿನಲ್ಲಿ ಬೆಕ್ಕು ಬೇಕಾ ಇಲ್ಲ ನಾನಾ ಎಂದಾಗ ಆಕೆ ಬೆಕ್ಕನ್ನು ಆಯ್ಕೆ ಮಾಡಿಕೊಂಡಳು. ಹಾಗಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದೆ ಎನ್ನುತ್ತಾನೆ ಈತ.
ಜಿಪುಣೆ ನನ್ನ ಪತ್ನಿ : ಮದುವೆಯಾಗಿ ನಾಲ್ಕು ವರ್ಷದ ನಂತ್ರ ವಿಚ್ಛೇದನದ ನಿರ್ಧಾರಕ್ಕೆ ಬರಲು ಕಾರಣ ಜಿಪುಣ ಪತ್ನಿ. ಮುಟ್ಟಿದ್ರೆ ಹಣ ಖರ್ಚಾಗುತ್ತೆ ಎನ್ನುವ ಪತ್ನಿ, ಆಸ್ಪತ್ರೆಗೆ ಹೋಗೋಕೂ ಮನಸ್ಸು ಮಾಡಲ್ವಂತೆ. ಮನೆ ಮದ್ದಿನಲ್ಲೇ ಎಲ್ಲವನ್ನು ಮುಗಿಸುವ ಆಕೆ, ಪತಿಯನ್ನು ಟ್ರಿಪ್ ಗೆ ಕಳಿಸಿಲ್ಲವಂತೆ. ನಾಲ್ಕು ವರ್ಷದಿಂದ ಎಲ್ಲಿಗೂ ಹೋಗದ ನನಗೆ ಹುಚ್ಚು ಹಿಡಿದಂತಾಗಿತ್ತು. ಆಕೆ ಜಿಪುಣತಕ್ಕೆ ಬೇಸತ್ತು ವಿಚ್ಛೇದನ ತೆಗೆದುಕೊಂಡೆ ಎನ್ನುತ್ತಾನೆ.
ಹುಡುಗರು ತಮಗಿಂತ ಹಿರಿಯ ಹುಡುಗಿಯರನ್ನೇ ಇಷ್ಟಪಡುವುದು ಯಾಕೆ?
ಕ್ಲೀನಿಂಗ್ ಮುಳುವಾಯ್ತು : ಮನೆಯನ್ನು ಒಂದು ಹಂತದಲ್ಲಿ ಕ್ಲೀನ್ ಮಾಡ್ಬೇಕು. ಆದ್ರೆ ಇಡೀ ದಿನ ಕ್ಲೀನ್ ಮಾಡ್ತಿದ್ರೆ ಹೆಂಗಾಗುತ್ತೆ ಹೇಳೆ? ಪತ್ನಿಯ ಅತಿ ಕ್ಲೀನ್ ಕಾರಣಕ್ಕೆ ಇಬ್ಬರ ಮಧ್ಯೆ ಜಗಳ ನಡೆದಿದೆ. ಮನೆ ನೀಟಾಗಿಲ್ಲವೆಂದ್ರೆ ಮಧ್ಯರಾತ್ರಿ ಕೂಡ ಎದ್ದು ಸ್ವಚ್ಛತಾ ಕಾರ್ಯ ಮಾಡ್ತಿದ್ದಳಂತೆ ಪತ್ನಿ. ಇಬ್ಬರ ಮಧ್ಯೆ ಡೈವರ್ಸ್ ಗೆ ಕಾರಣವೇನು ಅಂತಾ ಆಲೋಚನೆ ಮಾಡಿದ್ರೆ ನನ್ನ ನೆನಪಲ್ಲಿ ಬರೋದು ಆಕೆ ಮಾಡುತ್ತಿದ್ದ ಕ್ಲೀನಿಂಗ್ ಮಾತ್ರ ಎನ್ನುತ್ತಾನೆ ಈತ.