ಮಕ್ಕಳಿಗೆ ಅಗತ್ಯ ಲೈಂಗಿಕ ಶಿಕ್ಷಣವಿಲ್ಲದೇ, ಮಾಧ್ಯಮಗಳ ಪ್ರಭಾವದಿಂದ ತಪ್ಪು ದಾರಿಯಲ್ಲಿ ನಡೆಯುತ್ತಿದ್ದಾರೆ. ಸುರಕ್ಷಿತ ಸಾಧನಗಳಿಲ್ಲದೇ ನಡೆಸುವ ಲೈಂಗಿಕ ಕ್ರಿಯೆಯಿಂದ ಹದಿ ಹರೆಯದ ಹೆಣ್ಣು ಮಕ್ಕಳು ಬಸುರಾಗುತ್ತಿದ್ದಾರೆ. ಇಂಥ ಪರಿಸ್ಥಿತಿ ಎದುರಾದರೆ ಹೇಗೆ ಎದುರಿಸಬೇಕು?
ಟೀನೇಜ್ ಅನ್ನೋದು ಬದುಕಿನ ಮಹತ್ವದ ಘಟ್ಟ. ದೈಹಿಕ ಬದಲಾವಣೆಗಳು, ಮಾನಸಿಕವಾದ ಸಮಸ್ಯೆಗಳು, ಹಾರ್ಮೋನಲ್ ಚೇಂಜಸ್, ಅದು ಇದು ಅಂತ ಏನೇನೋ ಆಗ್ತಾ ಇರುತ್ತೆ. ಈ ವೇಳೆ ಮಕ್ಕಳು ಹುಡುಗಾಟಿಕೆಯಲ್ಲಿ ಅರಿಯದೇ ಮಾಡಿದ ಸಂಗದಿಂದ ಪ್ರಮಾದ ಆಗಿ ಬಿಟ್ಟರೆ ಅವರ ಲೈಫ್‌ನ ಕಥೆಯೇನು, ಇಂಥಾ ಸನ್ನಿವೇಶದಲ್ಲಿ ಈ ಮಕ್ಕಳ ಪೋಷಕರು ಏನು ಮಾಡಬೇಕು, ಈ ಬಗೆಗಿನ ಶಾರ್ಟ್ ಫಿಲಂ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಿಯಲ್ ಲೈಫ್ ಅನ್ನೋ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಈ ಬಗೆಯ ಅನೇಕ ಸ್ಟೋರಿಗಳಿವೆ. ನಮ್ಮ ಬದುಕಿನಲ್ಲಿ ನಿತ್ಯ ಘಟಿಸುವ ಸಾಧ್ಯತೆ ಇರುವ ಸಂಗತಿಗಳನ್ನು ಹೇಳಿ ಅವುಗಳನ್ನು ಹೇಗೆಲ್ಲ ಪರಿಹರಿಸಬಹುದು ಅನ್ನೋದನ್ನು ಈ ಶಾರ್ಟ್ ಫಿಲಂಗಳ ಮೂಲಕ ಮೂಲಕ ವಿವರಿಸುತ್ತಾರೆ. ಈ ಹಿಂದೆ ವಿದೇಶಗಳಲ್ಲಿ ಟೀನ್ ಮಕ್ಕಳು ಪ್ರೆಗ್ನೆಂಟ್ ಆಗುವ ಸುದ್ದಿ ಕೇಳಿದ್ದೆವು. ಇದೀಗ ಇಂಥಾ ಪ್ರಕರಣಗಳು ನಮ್ಮ ದೇಶದಲ್ಲೂ ನಡೆಯುತ್ತವೆ.
ನಮ್ಮ ದೇಶದಲ್ಲಿ ಹೀಗಾದರೆ ಬಹುಶಃ ಆ ಬಾಲಕಿಗೆ ಅಬಾರ್ಶನ್ ಮಾಡಿಸಿಕೊಳ್ಳುವ ಸಲಹೆ ಸಿಗಬಹುದು. ಆದರೆ ಕೆಲವೊಮ್ಮೆ ಆ ಚಿಕ್ಕ ಹುಡುಗಿಗೆ ತನಗೇನಾಗುತ್ತಿದೆ ಅನ್ನೋದರ ಅರಿವಾಗಲ್ಲ. ಮಗಳು ಹೀಗೊಂದು ಕೆಲಸ ಮಾಡಿರಬಹುದು ಅನ್ನೋದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದ ಹೆತ್ತವರು ಏನೋ ಟೀನೇಜ್ ಸಮಸ್ಯೆ ಅಂತ ನಿರ್ಲಕ್ಷಿಸಬಹುದು. ಒಂದು ಸಮಯದ ಬಳಿಕ ತಮ್ಮ ಮಗು ಪ್ರೆಗ್ನೆಂಟ್ ಅಂತ ಗೊತ್ತಾದರೆ ಕಥೆ ಏನಾಗಬಹುದು, ಆಗ ಅಬಾರ್ಶನ್ ಮಾಡಿಸೋ ಸ್ಟೇಜ್ ದಾಟಿ ಹೋಗಿರುತ್ತೆ. ಒಂದು ವೇಳೆ ಹಾಗೇನಾದ್ರೂ ಮಾಡಿದರೆ ತಮ್ಮ ಮಗಳ ಜೀವಕ್ಕೆ ಅಪಾಯ. ಇಂಥ ಸನ್ನಿವೇಶವನ್ನಿಟ್ಟುಕೊಂಡು ಈ ಶಾರ್ಟ್ ಫಿಲಂ ಇದೆ. ಇದರಲ್ಲಿ ವಿಕ್ಟೋರಿಯ ಹದಿಮೂರರ ಹರೆಯದ ಪುಟ್ಟ ಹುಡುಗಿ.
ಶಾಲೆಯ ಹುಡುಗನೊಬ್ಬನ ಜೊತೆ ಹೋಂವರ್ಕ್ ಮಾಡುವ ನೆವದಲ್ಲಿ ಜೊತೆಗೆ ಕಾಲ ಕಳೆದಿದ್ದಾಳೆ. ಒಂದು ಹಂತದಲ್ಲಿ ಇಬ್ಬರೂ ಅರಿಯದೇ ಸೆಕ್ಸ್ ಮಾಡಿದ್ದಾರೆ. ಈಗ ಮಕ್ಕಳಿಗೆ ಹೆತ್ತವರು ತಿಳಿಸೋ ಮೊದಲೇ ಅವರು ಪ್ರತಿಯೊಂದನ್ನೂ ಇಂಟರ್‌ನೆಟ್ ಮೂಲಕ ತಿಳಿದುಕೊಳ್ತಾರೆ. ಈ ಹುಡುಗಿಗೂ ಗರ್ಭಧಾರಣೆಯ ಆರಂಭದ ಲಕ್ಷಣಗಳು(Symptopms) ಕಾಣಿಸಿಕೊಂಡಿವೆ. ಆಕೆ ಆ ಬಗ್ಗೆ ಚೆಕ್ ಮಾಡಿದಾಗ ಅದು ಪ್ರೆಗ್ನೆನ್ಸಿ ಲಕ್ಷಣ ಇರಬಹುದು ಅಂತ ಗೊತ್ತಾಗಿದೆ. ಈ ಹುಡುಗಿ ಪ್ರಗ್ನೆನ್ಸಿ ಕಿಟ್ ಬಗ್ಗೆ ತಿಳಿದುಕೊಂಡು ಟೆಸ್ಟ್ ಮಾಡಿದ್ದಾಳೆ. ಎರಡು ಲೈನ್ ಬಂದುಬಿಟ್ಟಿದೆ. ಇದು ಅವಳ ಅಮ್ಮನ ಗಮನಕ್ಕೆ ಬರುತ್ತೆ. ಈ ಹುಡುಗಿಯ ಅಪ್ಪ ಸಿಡುಕ, ಹಠಮಾರಿ. ತನ್ನ ಮಗಳಿನ್ನೂ ಪುಟ್ಟ ಮಗು(Little child) ಅಂತಲೆ ಆತನ ಭಾವನೆ.
ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ, ಪಾಸಿಟಿವ್ ಮೈಂಡ್ ಬೆಳೆಸಿಕೊಳ್ಳಲು ಇಲ್ಲಿವೆ ಟಿಪ್ಸ್
ಒಂದು ಹಂತದಲ್ಲಿ ತನ್ನ ಪುಟ್ಟ ಮಗಳು ಪ್ರೆಗ್ನೆಂಟ್ ಅನ್ನೋದನ್ನು ಆತನಿಂದ ಜೀರ್ಣಿಸಿಕೊಳ್ಳಲಾಗೋದಿಲ್ಲ. ತಾಯಿ, ಮಗಳಿಬ್ಬರನ್ನೂ ಮನೆಯಿಂದ ಹೊರಗೆ ಕಳಿಸುತ್ತಾನೆ. ಡಾಕ್ಟರ್ ಈ ತಾಯಿ ಮಗಳಿಗೆ ಒಂದು ಆಪ್ಶನ್ ನೀಡುತ್ತಾರೆ. ಈ ಬಾಲಕಿ ಮಗುವನ್ನು ಸಾಕುವಷ್ಟು ಪ್ರೌಢಳಲ್ಲದ ಕಾರಣ ಈ ಮಗುವನ್ನು ದತ್ತು ನೀಡಬಹುದು ಅಂತ. ಆದರೆ ಈ ಅಮ್ಮ ಮಗಳಿಗೆ ಆ ಮಗುವನ್ನು(Baby) ಇನ್ನೊಬ್ಬರಿಗೆ ನೀಡುವ ಮನಸ್ಸಿಲ್ಲ. ಆ ಹುಡುಗಿ ಮಗುವಿಗೆ ಜನ್ಮ ನೀಡುತ್ತಾಳೆ. ಅವಳ ಅಮ್ಮ ಆ ಮಗುವಿಗೂ ಅಮ್ಮನಾಗಿ ಪೊರೆಯುತ್ತಾಳೆ. ಇನ್ನೇನು 'ಮದರ್ಸ್ ಡೇ'(Mothers day) ಹತ್ತಿರ ಬಂತು. ತಾಯಿಯೊಬ್ಬಳು ತನ್ನ ಮಗುವಿಗಾಗಿ ಏನು ಬೇಕಾದರೂ ಮಾಡಬಲ್ಲಳು ಅನ್ನೋದಕ್ಕೆ ಉದಾಹರಣೆಯಾಗಿ ಈ ಕಿರುಚಿತ್ರ ಇದೆ. ಒಂದು ಕಡೆ ಇದು ಅಮ್ಮನ ಮಹತ್ವ ಸಾರಿದರೆ ಇನ್ನೊಂದು ಕಡೆ ಟೀನೇಜ್‌ನಲ್ಲಿ ಹುಡುಗಿ ಪ್ರೆಗ್ನೆಂಟ್ ಆದರೂ ಆ ಬಗ್ಗೆ ಪಾನಿಕ್ ಆಗಿ ಅವಳನ್ನು ಹಿಂಸಿಸಬೇಕಿಲ್ಲ. ಮನಸ್ಸು ಮಾಡಿದರೆ ಇಂಥ ಕೇಸ್‌ಗಳನ್ನು ತಾಳ್ಮೆಯಿಂದ ಹ್ಯಾಂಡಲ್ ಮಾಡಬಹುದು ಅನ್ನೋದಕ್ಕೆ ಸಾಕ್ಷಿಯಂತೆ ಈ ಚಿತ್ರವಿದೆ. ಹದಿಹರೆಯದ ತಂದೆ ತಾಯಿ ಸ್ಫೂರ್ತಿ ನೀಡುವಂತಿರುವ ಈ ಶಾರ್ಟ್ ಫಿಲಂ(Short movie) ಅನ್ನು ಜಗತ್ತಿನಾದ್ಯಂತ ಲಕ್ಷಾಂತರ ಜನ ನೋಡಿ ಮೆಚ್ಚಿಕೊಂಡಿದ್ದಾರೆ.
ಕಿರಿ ಮಗಳ ಕಿತಾಪತಿ: ವಧುವಿನ ಬದಲು ಆಕೆಯ ಸಹೋದರಿಯನ್ನು ಮದ್ವೆಯಾದ ವರ