Sex drive: ಈರುಳ್ಳಿ, ಬೆಳ್ಳುಳ್ಳಿಗೆ ಕಾಮ ಕೆರಳಿಸೋ ಶಕ್ತಿ ಇರೋದು ನಿಜನಾ?

By Suvarna News  |  First Published May 8, 2023, 4:30 PM IST

ಈರುಳ್ಳಿ, ಬೆಳ್ಳುಳ್ಳಿ ಕಾಮಾಸಕ್ತಿ ಕೆರಳಿಸುವ ಗುಣ ಹೊಂದಿದೆ ಎಂಬ ಮಾತಿದೆ. ಇವೆರಡರ ಕೆಲವು ವಿಶೇಷ ಗುಣಗಳ ಬಗ್ಗೆ ಆಯುರ್ವೇದದಲ್ಲಿ ವಿವರಿಸಲಾಗಿದೆ. ಅದರೆ ಈ ಪದಾರ್ಥ ತಿಂದರೆ ಕಾಮಾಸಕ್ತಿ ಹೆಚ್ಚಾಗೋದು ನಿಜನಾ?


ಈರುಳ್ಳಿ ಬೆಳ್ಳುಳ್ಳಿ ಈ ಎರಡು ಪದಾರ್ಥಗಳು ಅನೇಕ ವಿಶೇಷತೆಗಳನ್ನು ಒಳಗೊಂಡಿವೆ. ಈ ಎರಡು ಪದಾರ್ಥಗಳ ರುಚಿ, ಘಮ ಅಡುಗೆಯ ರುಚಿ ಹೆಚ್ಚಿಸುವ ಹಾಗೆ ಇದನ್ನು ಸೇವಿಸಿದರೆ ಆಗುವ ಕೆಲವೊಂದು ಪ್ರಯೋಜನಗಳನ್ನು ನಾವು ಅಲ್ಲಗಳೆಯಲಾಗೋದಿಲ್ಲ. ಇತ್ತೀಚಿನ ಅಧ್ಯಯನ ವರದಿಯ ಪ್ರಕಾರ ಕರುಳಿನ ಕೆಳಭಾಗ ಹಾಗೂ ಗುದದ್ವಾರದ ಕ್ಯಾನ್ಸರ್ ತಡೆಯುವದಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿಯು ತುಂಬಾ ಪರಿಣಾಮಕಾರಿ. ಹೀಗಾಗಿ ದಿನನಿತ್ಯದ ಆಹಾರ ಕ್ರಮದಲ್ಲಿ ಬೆಳ್ಳುಳ್ಳಿ ಹಾಗೂ ಈರುಳ್ಳಿ ಸೇರ್ಪಡೆ ಮಾಡಿದರೆ ಒಳ್ಳೆಯದು ಅನ್ನೋ ಸಲಹೆಯನ್ನೂ ಈ ಅಧ್ಯಯನ ತಂಡ ನೀಡಿದೆ. ಇದಲ್ಲದೇ ಬೆಳ್ಳುಳ್ಳಿಯಲ್ಲಿ ಇರುವ ಅಲಿಸಿನ್ ಅಂಶವು ರಕ್ತದಲ್ಲಿನ ಟ್ರೈಗ್ಲಿಸರೈಡ್ ಮತ್ತು ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುತ್ತದೆ. ಈರುಳ್ಳಿಯಲ್ಲಿ ಇರುವ ಸಲ್ಫರ್ ಅಂಶ ಕೊಲೆಸ್ಟ್ರಾಲ್ ತಗ್ಗಿಸಲು ಸಹಕಾರಿ. ಇದು ಹೃದಯದ ಆರೋಗ್ಯವನ್ನೂ ಕಾಪಾಡುವುದು.

ಟೀನೇಜ್‌ನಲ್ಲಿ ಹೆಚ್ಚಾಗಿ ಕಾಣಿಸೋ ಮೊಡವೆಯನ್ನು ಈ ಎರಡು ಪದಾರ್ಥಗಳು ತಗ್ಗಿಸುತ್ತವೆಯಂತೆ. ಬೆಳ್ಳುಳ್ಳಿಯಲ್ಲಿ(Garlic) ಇರುವ ಅಲಿಸಿನ್, ಅಜೋಯಿನ್ ಮತ್ತು ಆಲಿನ್ ಅಂಶವು ರಕ್ತ ಸಂಚಾರವನ್ನು ಉತ್ತಮಪಡಿಸುವುದು ಮತ್ತು ಜೀರ್ಣಕ್ರಿಯೆ ವೃದ್ಧಿಸಿ, ದೇಹವನ್ನು ಹೆಲ್ದಿಯಾಗಿ, ಚುರುಕಾಗಿಡುತ್ತದೆ, ಆದರೆ ಆಯುರ್ವೇದ ಒಂದು ಮಿತಿಯಲ್ಲಿ ಈ ಎರಡು ಪದಾರ್ಥಗಳನ್ನು ಬಳಸಲು ಸೂಚಿಸಿದೆ. ಇದಕ್ಕೆ ಕಾರಣ ಈ ಪದಾರ್ಥಗಳಲ್ಲಿರುವ ಕೆರಳಿಸುವ ಗುಣ. ಆಯುರ್ವೇದವು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ರಕ್ತ ಶುದ್ಧಿಕಾರಿ ಎಂದು ಗುರುತಿಸುತ್ತದೆ. ಇದಲ್ಲದೆ, ಬೆಳ್ಳುಳ್ಳಿಯನ್ನು ವಿವಿಧ ಆಯುರ್ವೇದ ಔಷಧಿಗಳನ್ನು(Ayurvedic medicines) ತಯಾರಿಸಲು ಬಳಸಲಾಗುತ್ತದೆ. ಇಷ್ಟಾದರೂ ಆಯುರ್ವೇದವು ಇವುಗಳ ಅತಿಯಾದ ಬಳಕೆಯನ್ನು ಬೆಂಬಲಿಸುವುದಿಲ್ಲ. ಏಕೆಂದರೆ ಅದು ಈರುಳ್ಳಿಯನ್ನು ಪ್ರಕೃತಿಯಲ್ಲಿ ತಾಮಸಿಕ ಎಂದು ಪರಿಗಣಿಸುತ್ತದೆ ಅಂದರೆ ಈರುಳ್ಳಿಗೆ ಕೆರಳಿಸುವ ಗುಣವಿದೆ.ಈ ಎರಡೂ ಪದಾರ್ಥಗಳು ದೇಹದಲ್ಲಿ ಅತಿಯಾದ ಶಾಖವನ್ನು ಉಂಟುಮಾಡುತ್ತವೆ.

Tap to resize

Latest Videos

ಹುಡುಗರು ತಮಗಿಂತ ಹಿರಿಯ ಹುಡುಗಿಯರನ್ನೇ ಇಷ್ಟಪಡುವುದು ಯಾಕೆ?

ನಮ್ಮ ದೇಹಕ್ಕೆ ಸ್ವಲ್ಪ ಶಾಖ ಬೇಕು ನಿಜ, ಆದರೆ ಅತಿಯಾದ ಶಾಖವು ಇತರ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಕಡಿಮೆ ಪ್ರಮಾಣದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಿನ್ನೋದು ಬೆಟರ್(Better). ಜೊತೆಗೆ ಈರುಳ್ಳಿ ಮತ್ತು ಬೆಳ್ಳುಳ್ಳಿಯ ಸೇವನೆಯು ಕೋಪ, ಆಕ್ರಮಣಶೀಲತೆ, ಆತಂಕ ಹೆಚ್ಚಿಸಬಹುದು.

ಸಾಮಾನ್ಯವಾಗಿ ಈರುಳ್ಳಿ ಬೆಳ್ಳುಳ್ಳಿ ಕಾಮಾಸಕ್ತಿ ಹೆಚ್ಚಿಸುತ್ತದೆ ಎಂಬ ಮಾತಿದೆ. ಇದನ್ನು ಆಯುರ್ವೇದವೂ ಸಮರ್ಥಿಸುತ್ತದೆ. ಈ ಎರಡು ಪದಾರ್ಥಗಳು ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತದೆ ಎಂದು ಆಯುರ್ವೇದವೂ ಹೇಳುತ್ತದೆ. ಹೀಗಾಗಿ ಸಾತ್ವಿಕ ಜೀವನ ಕ್ರಮ ಅನುಸರಿಸುವವರು ಈ ಎರಡು ಪದಾರ್ಥಗಳಿಂದ ದೂರವಿಡಿ ಅನ್ನೋದನ್ನೂ ತಿಳಿಸುತ್ತದೆ.

ಈ ಕಾರಣಕ್ಕೇ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಲೈಂಗಿಕವಾಗಿ(Sexually) ಉತ್ತೇಜಿಸುವ ಆಹಾರ, ಕಾಮೋತ್ತೇಜಕ ಎಂದೆಲ್ಲ ಕರೆಯಲಾಗುತ್ತದೆ, ಜವಾಬ್ದಾರಿ, ಕೆಲಸದ ಒತ್ತಡ ಇತ್ಯಾದಿ ಕಾರಣಗಳಿಗೆ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಬೇಗ ಕಡಿಮೆ ಆಗುತ್ತೆ ಅನ್ನೋ ಮಾತಿದೆ. ಈ ಎರಡು ಪದಾರ್ಥಗಳನ್ನು ನಿಯಮಿತವಾಗಿ ಸೇವಿಸೋ ಅವರಲ್ಲಿ ಲೈಂಗಿಕ ಆಸಕ್ತಿ (Sex interest) ಬರುವಂತೆ ಮಾಡಬಹುದು. ಜೊತೆಗೆ ಈರುಳ್ಳಿ ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇದು ಪುರುಷರಿಗೂ ಲೈಂಗಿಕ ಜೀವನ ಚೆನ್ನಾಗಿರಲು ಸಹಕಾರಿ. ಅಷ್ಟೇ ಅಲ್ಲ, ಇದೀಗ ಹೆಚ್ಚಾಗುತ್ತಿರುವ ಇನ್‌ಫರ್ಟಿಲಿಟಿ ಅಥವಾ ಫಲವತ್ತತೆ ಸಮಸ್ಯೆ ನಿವಾರಣೆಗೂ ಇದು ಬೆಸ್ಟ್. ಬೆಳ್ಳುಳ್ಳಿ ವೀರ್ಯ ಉತ್ಪಾದನೆಯನ್ನು ಹೆಚ್ಚಿಸಲು ಸಹಕಾರಿ.

ಲೈಂಗಿಕವಾಗಿ ಚುರುಕಾಗಿರಬೇಕು ಅನ್ನೋರು ಈ ಪದಾರ್ಥಗಳನ್ನು ನಿಯಮಿತವಾಗಿ ಸೇವಿಸಬಹುದು.

ಯೋನಿ ಸೋಂಕಿದ್ದಾಗ ಸೆಕ್ಸ್ ಮಾಡೋದು ಎಷ್ಟು ಸೇಫ್‌?

click me!