ಮದ್ವೆ ಮನೆ ಅಂದ್ರೆ ಸಾಕು ಪಕ್ಕಾ ಮನರಂಜನೆ..ಅಲ್ಲಿ ಹೆಣ್ಮಕ್ಕಳ ಹಾಡು, ಡ್ಯಾನ್ಸ್, ಮಸ್ತಿ ಎಲ್ಲಾನೂ ಇರುತ್ತೆ. ಆದರೆ ಈ ಮದ್ವೆ ಸ್ಪಲ್ಪ ಡಿಫರೆಂಟ್. ಇಲ್ಲಿ ಗಂಡು ಹೈಕ್ಳು ಸಖತ್ ಡ್ಯಾನ್ಸ್ ಮಾಡಿದ್ರು. ಅದು ಕೂಡಾ ಹುಡುಗಿಯರಂತೆ ಸೀರೆಯುಟ್ಟು. ಆ ಕುರಿತಾದ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.
ಭಾರತೀಯ ಸಂಪ್ರದಾಯದಲ್ಲಿ ಮದುವೆ ಅಂದ್ರೆ ಹಬ್ಬವಿದ್ದಂತೆ. ಹೂವು, ಹಣ್ಣು, ಡೆಕೊರೇಷನ್, ಜನಜಂಗುಳಿ, ಹಾಡು, ಡ್ಯಾನ್ಸ್, ಮಸ್ತಿ ಅಂತ ಸಿಕ್ಕಾಪಟ್ಟೆ ಸಡಗರ, ಸಂಭ್ರಮ ಇರುತ್ತೆ. ಮದ್ವೆಯನ್ನು ಸ್ಪೆಷಲ್ ಆಗಿಸಲು ಮನೆ ಮಂದಿ ಇನ್ನಿಲ್ಲದ ಪ್ರಯತ್ನವನ್ನು ಸಹ ಮಾಡ್ತಾರೆ. ಡಿಫರೆಂಟ್ ಆಗಿ ಕ್ರಿಯೇಟಿವ್ ಆಗಿ ಏನನ್ನಾದರೂ ಪ್ಲಾನ್ ಮಾಡಿ ಆ ದಿನವನ್ನು ಮೆಮೊರೆಬಲ್ ಆಗಿಸುತ್ತಾರೆ. ಸಾಮಾನ್ಯವಾಗಿ ಮದ್ವೆಯಲ್ಲಿ ಹೆಣ್ಣುಮಕ್ಕಳು ಸುಂದರವಾಗಿ ರೆಡಿಯಾಗಿಸ ಸಖತ್ತಾಗಿ ಡ್ಯಾನ್ಸ್ ಮಾಡೋದು ಕಾಮನ್. ಆದ್ರೆ ಈ ಮದ್ವೆ ಮನೆಯಲ್ಲಿ ಹುಡುಗರು ಫುಲ್ ಡ್ಯಾನ್ಸ್ ಮೂಡ್‌ನಲ್ಲಿದ್ರು. ಅದು ಸಿಂಪಲ್ ಡ್ಯಾನ್ಸ್ ಏನಲ್ಲ. ಹುಡುಗಿಯರಂತೆ ಸೀರೆಯುಟ್ಟು ಡ್ಯಾನ್ಸ್‌ಗೆ ಭರ್ಜರಿ ಸ್ಟೆಪ್ಟ್ ಹಾಕಿದ್ರು.
ಮದುವೆ (Marriage) ಜೀವನದಲ್ಲಿ ಒಮ್ಮೆ ಆಗುವಂತಹದ್ದು. ಆ ಮದುವೆ ಕ್ಷಣ, ದಿನಗಳು ಸದಾ ನೆನಪಿನಲ್ಲಿರಬೇಕು. ಮದುವೆಗಾಗಿ ಜನರು ತಿಂಗಳ ಮೊದಲೇ ತಯಾರಿ ನಡೆಸುತ್ತಾರೆ. ಮದುವೆಗೆ ಥೀಮ್ ಸಿದ್ಧಪಡಿಸಿ, ಅದಕ್ಕೆ ತಕ್ಕಂತೆ ಡ್ರೆಸ್ (Dress) ಧರಿಸುತ್ತಾರೆ. ಡೆಕೊರೇಶನ್, ಫುಡ್, ಲೈಟಿಂಗ್ಸ್, ಮೆರವಣಿಗೆ, ಮ್ಯೂಸಿಕ್ ಎಲ್ಲವನ್ನೂ ಎಂಜಾಯ್ (Enjoy) ಮಾಡಬೇಕೆಂದು ಬಯಸುತ್ತಾರೆ. ಹಿಂದೆಲ್ಲಾ ಮದುವೆಯೆಂದ್ರೆ ಶಾಸ್ತ್ರೋಸ್ತಕವಾಗಿ, ಶಿಸ್ತುಬದ್ಧವಾಗಿ ಮಾಡಲಾಗುತ್ತಿತ್ತು. ಆದರೆ ಈಗ ಜನರ ಮನಸ್ಥಿತಿ ಬದಲಾಗಿದೆ. ಹೀಗಾಗಿ ಸಂಪ್ರದಾಯವನ್ನು (Tradition) ಪಾಲಿಸುವುದರ ಜತೆಗೆ ಮದುವೆಯಲ್ಲಿ ಮಸ್ತಿಯನ್ನೂ ಮಾಡುತ್ತಾರೆ. ಸದ್ಯ ಈ ದೇಸೀ ಮದ್ವೆಯ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಕೋಟಿ ಬೆಲೆಬಾಳುವ ಕಾರನ್ನು ಬಿಟ್ಟು ಎತ್ತಿನಬಂಡಿಯಲ್ಲಿ ಮದುವೆ ದಿಬ್ಬಣ!
ಸೀರೆಯುಟ್ಟು ಹುಡುಗರ ಮಸ್ತ್ ಮಸ್ತ್ ಡ್ಯಾನ್ಸ್
ವೈರಲ್ ಮದುವೆಯ ವೀಡಿಯೊದಲ್ಲಿ, ಹುಡುಗರು ತಮ್ಮ ಸಾಂಪ್ರದಾಯಿಕ ಉಡುಗೆಯ ಮೇಲೆ ಸೀರೆಯನ್ನು (Saree) ಧರಿಸಿದ್ದರು. ದೋಸ್ತಾನಾ ಚಿತ್ರದ ಪ್ರಿಯಾಂಕಾ ಚೋಪ್ರಾ ಹಾಡಿಗೆ ಡ್ಯಾನ್ಸ್ ಮಾಡಿದರು. ಹುಡುಗರ ಡ್ಯಾನ್ಸ್‌ಗೆ ಕೋಟ್ ಧರಿಸಿದ ಇಬ್ಬರು ಹುಡುಗಿಯರು ಸಹ ಸೇರಿಕೊಮಡರು. ವೈರಲ್ ವಿವಾಹದ ವೀಡಿಯೊದ ಶೀರ್ಷಿಕೆಯು, 'ನಗರದಲ್ಲಿರುವ ಸೆಕ್ಸಿಯೆಸ್ಟ್ ದೇಸಿ ಹುಡುಗಿಯರು @ಸಲಿಲ್‌ಸಿಂಗ್ ಅಗರ್‌ವಾಲ್ ಮತ್ತು ಅವರ ಥುಮ್ಕಾಸ್ ಮತ್ತು ಪಲ್ಲಸ್‌ನೊಂದಿಗೆ ಅವರ ಸೂಪರ್ ಫನ್ ಗ್ಯಾಂಗ್ ಉತ್ತಮವಾಗಿ ಡ್ಯಾನ್ಸ್ ಮಾಡಿದ್ದಾರೆ' ಎಂಬುದಾಗಿದೆ.
ವೈರಲ್ ಆದ ಮದುವೆಯ ವಿಡಿಯೋ ಕ್ಷಣಾರ್ಧದಲ್ಲಿ ಎಲ್ಲರ ಕಣ್ಮನ ಸೆಳೆಯಿತು. ತಮ್ಮ ನೃತ್ಯ ಪ್ರದರ್ಶನಕ್ಕಾಗಿ ಸೀರೆ ಉಟ್ಟ ಹುಡುಗರನ್ನು ನೆಟಿಜನ್‌ಗಳು ಶ್ಲಾಘಿಸಿದ್ದಾರೆ. ತುಂಬಾ ಮಂದಿ ಹಾರ್ಟ್ ಹಾಗೂ ನಗುವಿನ ಎಮೋಜಿಯ ಮೂಲಕ ವೀಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ಡ್ಯಾನ್ಸ್‌ಗೆ ಅತ್ಯುತ್ತಮ ಪ್ರದರ್ಶನ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು 'ಡಿಂಚಕ್ ಡ್ಯಾನ್ಸ್' ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು ವಂಡರ್‌ಫುಲ್ ಎಂದು ಕಾಮೆಂಟಿಸಿದ್ದಾರೆ.
ವಿವಾಹ ವಾರ್ಷಿಕೋತ್ಸವಕ್ಕೆ ವಿಶ್ ಮಾಡಲು ಮರೆತ ಪತಿಗೆ ಹಿಗ್ಗಾ ಮುಗ್ಗಾ ಗೂಸ,ಪತ್ನಿ ವಿರುದ್ಧ ದೂರು!
ವೈರಲ್ ಮದುವೆಯ ವೀಡಿಯೊವನ್ನು ವೆಡ್ಡಿಂಗ್ ಕೊರಿಯೋಗ್ರಾಫರ್ ರೇವತಿ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ಮದುವೆಯ ನೃತ್ಯದ ವೀಡಿಯೊಗಳನ್ನು ಜನರು ಯಾವಾಗಲೂ ಇಷ್ಟಪಡುತ್ತಾರೆ. ಅಲ್ಲಿ ಸ್ನೇಹಿತರು (Friends) ಮತ್ತು ಸಂಬಂಧಿಕರು ನವವಿವಾಹಿತರನ್ನು (Newly married) ಸುಂದರವಾದ ಪ್ರದರ್ಶನಗಳೊಂದಿಗೆ ಆಶ್ಚರ್ಯಗೊಳಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ವೈರಲ್ ಮದುವೆಯ ವೀಡಿಯೊ 19K ವೀಕ್ಷಣೆಗಳನ್ನು ಮತ್ತು 405 ಲೈಕ್ಸ್‌ಗಳನ್ನು ಹೊಂದಿದೆ. ಅದೇನೆ ಇರ್ಲಿ, ಗಂಡು ಹೈಕ್ಳ ಡ್ಯಾನ್ಸ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಂತೂ ನಿಜ.