ಗಂಡಂದಿರ ಗೋಳು ಕೇಳೋರು ಯಾರು?: ಪುರುಷ ಸಮಾಜಕ್ಕಿನ್ನು ಉಳಿಗಾಲವಿಲ್ಲ

By Sathish Kumar KH  |  First Published Feb 28, 2023, 12:09 PM IST

ಮಹಿಳೆಯರಿಗಿಂತ ಪುರುಷರ ಆತ್ಮಹತ್ಯೆ ಸಂಖ್ಯೆಯಲ್ಲಿ ದುಪಟ್ಟು
ವರದಕ್ಷಿಣೆ ಕಿರುಕುಳಕ್ಕೆ ಹೆದರಿಕೊಂಡು ಸಾವಿಗೆ ಶರಣು
ಎನ್‌ಸಿಆರ್‌ಬಿ ವರದಿಯಿಂದ ಪುರುಷ ಸಮಾಜಕ್ಕೆ ಭಾರಿ ಆಘಾತ
 


ಬೆಂಗಳೂರು (ಫೆ.28): ಮೊದಲೆಲ್ಲಾ ಮನೆಗಳಲ್ಲಿ ಹೆಂಡತಿಗೆ ಗಂಡಂದಿರ ಕಿರುಕುಳ ಅನ್ನೋ ಪ್ರಕರಣ ಕೇಳಿ‌ ಬರುತ್ತಿದ್ದವು. ಆದರೆ ಈಗ ಹೆಂಡತಿಯರ ಕಿರುಕುಳದಿಂದ ಬೇಸತ್ತಿದ್ದೇವೆ ಅಂತಿದ್ದಾರೆ ಗಂಡಂದಿರು. ವೈವಾಹಿಕ ಕಲಹದಿಂದ ಪುರುಷರ ಸಾವಿನ ಸಂಖ್ಯೆ ಅಧಿಕವಾಗಿದೆ ಎಂದು ನ್ಯಾಷನಲ್‌ ಕ್ರೈಂ ಬ್ಯೂರೋ ರಿಪೋರ್ಟ್‌ (ಎನ್‌ಸಿಆರ್‌ಬಿ)  ವರದಿಯಿಂದ ತಿಳಿದುಬಂದಿದೆ.

ಸಂವಿಧಾನಿಕವಾಗಿ ವಿವಾಹಿತ ಮಹಿಳೆಯರ ರಕ್ಷಣೆಗೆಂದೇ ಜಾರಿಗೊಳಿಸಲಾದ ವರದಕ್ಷಿಣೆ ಕಿರುಕುಳದ ಕಾನೂನಿನಿಂದ ಬೇಸತ್ತು ಧ್ವನಿಯೇ ಅಡಗಿ ಹೋಗಿದೆ ಎಂದು ಅವಲತ್ತುಕೊಂಡಿದ್ದಾರೆ. ಈ ವರದಕ್ಷಿಣೆ ಕಾನೂನಿನ ಅಡಿಯಲ್ಲಿ ಹೆಜ್ಜೆ ಹೆಜ್ಜೆಗೂ ಪುರುಷರ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ. ಮನೆಯಲ್ಲಿ ನೆಮ್ಮದಿಯೇ ಸಿಗುತ್ತಿಲ್ಲ. ಕಚೇರಿಗಳ ಕೆಲಸದ ಒತ್ತಡದ ಜೊತೆಗೆ, ಮನೆಯಲ್ಲಿ ಮಡದಿಯರ ಕಿರುಕುಳದಿಂದ ಬೇಸತ್ತಿರುವ ಗಂಡಂದಿರ ಪ್ರಮಾಣ ಹೆಚ್ಚಾಗುತ್ತಿದೆ. ಮಹಿಳೆಯರ ವಿರುದ್ಧ ಹೋರಾಡಲು ಪುರುಷರಿಗೆ ಕಾನೂನಿನಲ್ಲಿ ಯಾವುದೇ ಸೂಕ್ತ ಕಾನೂನು ಇಲ್ಲದಂತಾಗಿದೆ. ಹೀಗಾಗಿ, ಕೌಟುಂಬಿಕ ಕಲಹದಿಂದ ಮಹಿಳೆಯರಿಗಿಂತ‌ ಪುರುಷರೇ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಅಂಶ ಬಯಲಾಗಿದೆ.

Tap to resize

Latest Videos

undefined

ಮಹಿಳೆಗೆ ಗೊತ್ತಿದ್ದ ಸಂಬಂಧಿಗಳೇ ರೇಪ್‌ ಮಾಡ್ತಾರೆ, ಇಂದಿನ ಅರ್ಧಕ್ಕರ್ಧ ರೇಪ್‌ ಕೇಸ್‌ಗಳು ಸುಳ್ಳು: ಅಶೋಕ್‌ ಗೆಹ್ಲೋಟ್

ಡೌರಿ ಕೇಸ್‌ ಕಾನೂನಿಗೆ ಹೆದರಿಕೆ: ಇನ್ನು ಸಾಂವಿಧಾನಿಕವಾಗಿ ಜಾರಿಗೆ ತರಲಾದ 1961ರ ವರದಕ್ಷಿಣೆ ನಿಷೇಧ ಕಾಯ್ದೆ (ತಿದ್ದುಪಡಿ ಕಾಯ್ದೆಗಳು) ಅನ್ವಯ ಪುರುಷರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಹೀಗಾಗಿ, ಬಹುತೇಕ ಪುರುಷರು ಡೌರಿ ಕೇಸ್‌ನ ಕಾನೂನಿಗೆ ಹೆದರಿ ಆತ್ಮಹತ್ಯೆ ದಾರಿ‌ ಹಿಡಿಯುತ್ತಿದ್ದಾರೆ. ಇತ್ತಿಚೆಗೆ ಬಿಡುಗಡೆಯಾದ ರಾಷ್ಟ್ರೀಯ ಅಪರಾಧ ಬ್ಯೂರೋ ವರದಿಯಲ್ಲಿ (National crime bureau report-NCRB) ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ. ಇದರಿಂದ ಇಡೀ ಪುರುಷ ಸಮಾಜವೇ ಬೆಚ್ಚಿ ಬೀಳುವಂತಾಗಿದೆ. 

ಮಹಿಳೆಯರಿಗಿಂದ ಪುರುಷರ ಆತ್ಮಹತ್ಯೆ ದುಪ್ಪಟ್ಟು: ಕುಟುಂಬ ಕಲಹದಿಂದ ಮಹಿಳೆಯರಿಗಿಂತ ಪುರುಷರೇ ಹೆಚ್ಚು ಆತ್ಮಹತ್ಯೆ ಮಾಡಿಕೊಳ್ತಿರೋ‌ ಅಂಶ ಎನ್‌ಸಿಆರ್‌ಬಿಯಲ್ಲಿ ಬಹಿರಂಗ ಆಗಿದೆ. ವೈವಾಹಿಕ ಕಲಹದಿಂದಲೂ ಆತ್ಮಹತ್ಯೆ ಪ್ರಕರಣ ಹೆಚ್ಚಳವಾಗುತ್ತಿದೆ. 2021ರ ವರದಿಯ ಪ್ರಕಾರ  ಕುಟುಂಬ ಕಲಹದಿಂದ  33.2%, ವೈವಾಹಿಕ ಜೀವನ ಕಲಹದಿಂದ 4.8%,  ಪ್ರೇಮ ಪ್ರಕರಣದಿಂದ - 4.6% ಪುರುಷರು ಸಾವನ್ನಪ್ತಿದ್ದಾರೆ. ಇನ್ನು ಮಹಿಳೆ ಹಾಗೂ‌ ಪುರುಷರ ಆತ್ಮಹತ್ಯೆಯ ಅಂಕಿ ಅಂಶದಲ್ಲೂ ಆಘಾತಕಾರಿ ಅಂಶವು ಬೆಳಕಿಗೆ ಬಂದಿದೆ.

ಕೌಟುಂಬಿಕ ಕಲದಿಂದ ಆತ್ಮಹತ್ಯೆಗೆ ಶರಣಾದ ಪುರುಷ, ಮಹಿಳೆಯರ ವಿವರ

  • ಕಾರಣಗಳು    ಪುರುಷರು    ಮಹಿಳೆ 
  • ಅವಿವಾಹಿತ    28,305  12,096 
  • ವಿವಾಹಿತ    81,063    28,680
  • ವಿಡೋ    1470    1015 
  • ವಿಚ್ಛೇದನ    494    294 
  • ದೂರಾದವರು    626    243
  • ಇತರೆ ಕಾರಣ    1419    773 
  • ಕಾರಣವಿಲ್ಲ    6,602    1,925 

ಅಂತರ್ಜಾತಿ ವಿವಾಹ ಆಗಿದ್ದ ಯುವತಿ ನೇಣಿಗೆ ಶರಣು: ಕುಟುಂಬಸ್ಥರಿಂದ ಭಾರೀ ಕಿರುಕುಳ

ಮತ್ತೊಂದು ಕಠಿಣ ಕಾನೂನಿಗೆ ಬೆಚ್ಚಿದ ಪುರುಷರು: ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ವೈವಾಹಿಕ ಅತ್ಯಾಚಾರ ಕಾನೂನು ( PIL) ಜಾರಿ ತರಲು ಕೋರ್ಟ್ ಮುಂದಾಗಿದೆ. ಈ ಕಾನೂನಿನ ಅನ್ವಯ ಗಂಡಂದಿರು ಹೆಂಡತಿಯೊಂದಿಗೆ ಬಲವಂತದ ಸಂಭೋಗ ಮಾಡುವಂತಿಲ್ಲ ಎನ್ನುವುದಾಗಿದೆ. ಒಂದು ವೇಳೆ ಪತ್ನಿಯೊಂದಿಗೆ ಸಂಭೋಗ ಮಾಡಿದರೂ ಅದು ಅತ್ಯಾಚಾರ ಎಂದು ಪರಿಗಣಿಸಿ ದೂರು ನೀಡಬಹುದು. ಒಂದು ವೇಳೆ ಈ ಕಾನೂನು ಜಾರಿಗೆ ಬಂದರೆ ಸುಖಾಸುಮ್ಮನೆ ಗಂಡನಿಗೆ ಕಿರುಕುಳ ನೀಡುವ ಪ್ರಕರಣ ಮತ್ತಷ್ಟು ಹೆಚ್ಚಾಗಲಿದೆ. ಹೀಗಾಗಿ, ನೊಂದ ಪುರುಷರಿಂದ ವೈವಾಹಿಕ ಅತ್ಯಾಚಾರ ಕಾನೂನು ಬೇಡ ಎಂದು ಪ್ರತಿಭಟನೆ ಮಾಡಿದ ಘಟನೆಗಳೂ ನಡೆದಿವೆ.

ವರದಕ್ಷಿಣೆ ಕಾನೂನು ಸಡಿಲಗೊಳಿಸಿ: ಈಗ ವೈವಾಹಿಕ ಅತ್ಯಾಚಾರ ಕಾನೂನು ಜಾರಿಗೆ ಬಂದರೆ ನಾವು ಬೆಡ್ ರೂಂನಲ್ಲಿ ಸಿಸಿ ಕ್ಯಾಮರಾ ಹಾಕಿ ನಾವು ಅತ್ಯಾಚಾರ ಮಾಡಿಲ್ಲ ಅಂತ ಸಾಬೀತು ಪಡಿಸಲು ಆಗುತ್ತಾ? ನಾವು ಕೋರ್ಟ್ ನಲ್ಲಿ ನಮ್ಮ ತಪ್ಪಿಲ್ಲ ಅಂತ ಹೇಗೆ ಸಾಬೀತು ಮಾಡೋದು? ಆದ್ದರಿಂದ ವರದಕ್ಷಿಣೆ ಸೇರಿದಂತೆ ಇರುವ ಅನೇಕ ಕಾನೂನನ್ನು ಸ್ವಲ್ಪ ಸಡಿಲಗೊಳಿಸಿ ಎಂದು ಪ್ರತಿಭಟನೆ ಮಾಡುವಂತಾಗಿದೆ.

click me!