ಮಕ್ಕಳು ದಿನವಿಡೀ ಮೊಬೈಲ್ ನೋಡ್ತಾ ಕೂರ್ತಾರಾ ? ಹೀಗೆ ಮಾಡಿ ಕೆಟ್ಟ ಅಭ್ಯಾಸ ತಪ್ಪಿಸಿ

By Suvarna News  |  First Published Jun 15, 2022, 3:01 PM IST

ಇತ್ತೀಚಿನ ದಿನಗಳಲ್ಲಿ ಮಕ್ಕಳ (Children) ವರ್ತನೆಯನ್ನು ಗಮನಿಸಿದ್ದೀರಾ ? ಎಷ್ಟು ಹೊತ್ತಿಗೂ ಮೊಬೈಲ್‌ (Mobile) ಸ್ಕ್ರಾಲ್ ಮಾಡ್ತಿರ್ತಾರೆ. ಊಟ-ಪಾಠದ ಬಗ್ಗೆ ಗಮನವೇ ಇರೋದಿಲ್ಲ. ಮಕ್ಕಳ ಈ ಮೊಬೈಲ್‌ ಅಡಿಕ್ಷನ್ ಬಿಡಿಸೋದು ಹೇಗೆಂದು ಗೊತ್ತಾಗದೆ ಪೋಷಕರೂ (Parents) ಕಂಗಾಲಾಗಿರ್ತಾರೆ. ನಿಮ್ಗೂ ಇಂಥಾ ಸಮಸ್ಯೆ (Problem) ಕಾಡ್ತಿದೆಯಾ ? ಹಾಗಿದ್ರೆ ಇಲ್ಲಿದೆ ಪರಿಹಾರ.


ಹಿಂದಿನ ಕಾಲದಲ್ಲಿ ಮೊಬೈಲ್‌ (Mobile) ಇರಲ್ಲಿಲ್ಲ. ಹೀಗಾಗಿ ಮಕ್ಕಳ (Children) ಬಾಲ್ಯ ಅದೆಷ್ಟೋ ಚೆನ್ನಾಗಿತ್ತು. ಪಾಠ-ಊಟ-ಹೊರಾಂಗಣ ಆಟದಲ್ಲೇ ಮಕ್ಕಳ ಸಮಯ ಕಳೆಯುತ್ತಿತ್ತು. ಆದ್ರೆ ಈಗಿನ ಮಕ್ಕಳೋ ಊಟ-ಪಾಠದ ಕತೆ ಹಾಗಿರ್ಲಿ ಮೂರೂ ಹೊತ್ತು ಮೊಬೈಲ್‌ನಲ್ಲಿ ಇರ್ತಾರೆ. ಫೇಸ್‌ಬುಕ್‌, ಇನ್‌ಸ್ಟಾ ರೀಲ್ಸ್‌ ಅಂತ ಏನೇನೋ ನೋಡ್ತಿರ್ತಾರೆ. ಪುಟ್ಟ ಮಕ್ಕಳಿಗೂ ರೈಮ್ಸ್ ನೋಡೋಕು ಮೊಬೈಲ್ ಬೇಕೇ ಬೇಕು. ಇತ್ತೀಚಿನ ಪುಟ್ಟ ಮಕ್ಕಳ ಹೊಸ ಅಭ್ಯಾಸವೆಂದರೆ ಮೊಬೈಲ್‌ನಲ್ಲಿ ಯೂಟ್ಯೂಬ್‌ ಹಾಕಿಕೊಟ್ಟಿಲ್ಲಾಂದ್ರೆ ಓಟಾನೇ ಮಾಡಲ್ಲ. ಮಕ್ಕಳ ಇಂಥಾ ಅಭ್ಯಾಸದಿಂದ ಪೋಷಕರು (Parents) ಕಂಗಾಲಾಗಿಬಿಡ್ತಾರೆ. ಬುದ್ಧಿ ಹೇಳಿ ಬಾಯಿಗೆ ಸುಸ್ತಾದ್ರೂ ಮಕ್ಕಳು ಹೇಳಿದ ಮಾತು ಕೇಳಲ್ಲ. ಮೊಬೈಲ್‌ ಕೈಯಿಂದ ಕಿತ್ತುಕೊಂಡ್ರೆ ಕಿರುಚಾಡೋದು, ರೇಗಾಡೋದು ಮಾಡ್ತಾರೆ. ನಿಮ್ಮ ಮನೆಯ ಮಕ್ಕಳದ್ದೂ ಇಂಥದ್ದೇ ಗಲಾಟೆನಾ ? ಹಾಗಿದ್ರೆ ಮಕ್ಕಳ ಮೊಬೈಲ್ ಅಡಿಕ್ಷನ್ (Addiction) ಬಿಡಿಸೋಕೆ ಏನ್ ಮಾಡ್ಬೇಕು ನಾವ್ ಹೇಳ್ತೀವಿ. 

ಮಕ್ಕಳನ್ನು ಸಾಮಾಜಿಕ ಮಾಧ್ಯಮ ಮತ್ತು ವರ್ಚುವಲ್ ರಿಯಾಲಿಟಿಯಂತಹ ಹೊಸ ತಂತ್ರಜ್ಞಾನಕ್ಕೆ ಒಡ್ಡುವ ಮೊದಲು, ಮುಕ್ತ ಸಂವಹನ, ಡಿಜಿಟಲ್ ಸುರಕ್ಷತೆ ಮತ್ತು ಆರೋಗ್ಯಕರ ಮೊಬೈಲ್‌ ಅಭ್ಯಾಸಗಳ ಅಡಿಪಾಯವನ್ನು ನಿರ್ಮಿಸುವತ್ತ ಗಮನ ಹರಿಸುವುದು ಮುಖ್ಯವಾಗಿದೆ ಎಂದು ತಜ್ಞರು ಹೇಳುತ್ತಾರೆ. ಮತ್ತು ನಾವು ಈ ವಿಷಯಗಳನ್ನು ಎಷ್ಟು ಬೇಗನೆ ಕಲಿಸಲು ಪ್ರಾರಂಭಿಸುತ್ತೇವೆಯೋ ಅಷ್ಟು ಒಳ್ಳೆಯದು. ಮಕ್ಕಳಿಗಾಗಿ ಮೊಬೈಲ್ ಬಳಸುವ ಸಮಯವನ್ನು ಮಿತಿ (Time limit)ಗೊಳಿಸಲು ನಾಲ್ಕು ಪ್ರಾಯೋಗಿಕ ಮಾರ್ಗಗಳನ್ನು ತಜ್ಞರು ಸೂಚಿಸಿದ್ದಾರೆ. ಅವು ಈ ಕೆಳಗಿನಂತಿವೆ:

Tap to resize

Latest Videos

ಇಂಥಾ ಸ್ವಭಾವ ಹೊಂದಿರುವ ಮಕ್ಕಳನ್ನು ಎಲ್ಲರೂ ಹೊಗಳೋದು ಗ್ಯಾರಂಟಿ

ಮಕ್ಕಳು ಮೊಬೈಲ್ ಬಳಸುವುದನ್ನು ಕಡಿಮೆ ಮಾಡಲು ಹೀಗೆ ಮಾಡಿ

ವೇಳಾಪಟ್ಟಿಯನ್ನು ರಚಿಸಿ (Create a schedule): ಮಕ್ಕಳಿಗೆ ಓದಲು ಹೆಚ್ಚು ಸಮಯ ಹಾಗೂ ಗ್ಯಾಡೆಜ್ಸ್ ಬಳಸಲು ಕಡಿಮೆ ಸಮಯ ಲಭ್ಯವಾಗುವಂತೆ ವೇಳಾಪಟ್ಟಿಯನ್ನು ಸಿದ್ಧಡಡಿಸಿಕೊಳ್ಳಿ. ಮೊಬೈಲ್‌ ಓದು, ದಿನಚರಿಯ ಮುಖ್ಯ ಕೆಲಸ ಮುಗಿಸಿದ ನಂತರವೇ ಅವರಿಗೆ ಸಿಗುತ್ತದೆ ಎಂಬುದನ್ನು ಅರ್ಥ ಮಾಡಿಸಬೇಕು ಮನೆಕೆಲಸವನ್ನು ಮುಗಿಸಿದಾಗ ಅಥವಾ ಅವರು ಊಟ ಮಾಡಿದ ನಂತರ, ಒಂದು ಗಂಟೆ ಮೊಬೈಲ್ ಬಳಸಬಹುದು ಷರತ್ತುಬದ್ಧ ವಿಧಾನವನ್ನು ಇರಿಸಬಹುದು.

ಕುಟುಂಬ ಯೋಜನೆ (Family plan): ಮಕ್ಕಳಿಗೆ ಏಕಾಂಗಿತನ ಕಾಡದಂತೆ ಕುಟುಂಬ ಸದಸ್ಯರು ಒಟ್ಟಾಗಿ ಚಟುವಟಿಕೆಗಳಲ್ಲಿ ಭಾಗವಹಿಸಿ. 
ಮಗು ಬೋರಾದಾಗ ಮಾತ್ರ ಮೊಬೈಲ್ ಬೇಕೆಂದು ಬಯಸುತ್ತದೆ. ಹೀಗಾಗಿ ಮಗುವಿಗೆ ಹೆಚ್ಚು ಬೋರಾಗದಂತೆ ಮನೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ನೆರವಾಗಿ.

ತರ್ಲೆ ಮಾಡ್ತಿರೋ ಮಕ್ಕಳನ್ನು ನಿಭಾಯಿಸೋದು ಕಷ್ಟವಾಗ್ತಿದ್ಯಾ? ಈ ಟಿಪ್ಸ್ ಫಾಲೋ ಮಾಡಿ

ಎಲ್ಲರೂ ಒಟ್ಟಾಗಿ ಟಿವಿ ನೋಡಿ (Quality screen time): ಮಗು ಹೆಚ್ಚು ಮೊಬೈಲ್‌, ಗೇಮ್‌ಗಳನ್ನು ಕೇಳದಿರಲು ಮನೆಮಂದಿಯೆಲ್ಲಾ ಜೊತೆಯಾಗಿ ಖುಷಿಯ ಸಮಯವನ್ನು ಕಳೆಯಿರಿ. ಟಿವಿಯಲ್ಲಿ ಸಿನಿಮಾ, ಶೋ ಏನನ್ನಾದರೂ ನೋಡುತ್ತಾ ಮಕ್ಕಳಿಗೆ ಇದನ್ನು ವಿವರಿಸಿ ಹೇಳಿ. ಇದರಿಂದ ಮಕ್ಕಳು ಸಹ ಅದರಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತಾ ಹೋಗುತ್ತಾರೆ. ಇದರಿಂದ ಮೊಬೈಲ್ ಬಳಕೆ ಸಹಜವಾಗಿ ಕಡಿಮೆಯಾಗುತ್ತದೆ. 

ಮಕ್ಕಳನ್ನು ಹೊಸ ಹವ್ಯಾಸದಲ್ಲಿ ತೊಡಗಿಸಿ Teach new things to Children): ಕುಟುಂಬದ ಸದಸ್ಯರೊಂದಿಗೆ ವಾಸ್ತವಿಕವಾಗಿ ಸಂಪರ್ಕ ಸಾಧಿಸಲು ಅಥವಾ ಹೊಸ ಭಾಷೆಯನ್ನು ಕಲಿಯಲು ಅಥವಾ ಆನ್‌ಲೈನ್ ಯೋಗವನ್ನು ಮಾಡಲು ಅಥವಾ ಶೈಕ್ಷಣಿಕ ಆಟವನ್ನು ಆಡಲು ಸಮಯವನ್ನು ಬಳಸಿ. ಇದು ಮಕ್ಕಳು ಹೆಚ್ಚು ಸೃಜನಶೀಲರಾಗಿರಲು ಅವರಿಗೆ ಸಹಾಯ ಮಾಡುತ್ತದೆ.

click me!