ತಾಜ್ ಮಹಲ್ ಮುಂದೆ ಫೋಟೋ ತೆಗೆಯುವಂತೆ ಕೇಳಿದ ವೃದ್ಧ ದಂಪತಿ: ವೀಡಿಯೋಗೆ ಭಾವುಕರಾದ ನೆಟ್ಟಿಗರು

Published : Jan 04, 2026, 02:23 PM IST
elderly couple selfie in tajmahal

ಸಾರಾಂಶ

ಇಂದಿನ ದಂಪತಿಗಳ ಕಲಹಕ್ಕೆ ಪ್ರೀತಿಯ ಕೊರತೆಯ ಹೊರತಾಗಿಯೂ ನೂರೆಂಟು ಕಾರಣಗಳಿವೆ ಎಲ್ಲರಂತೆ ನಾವಿಲ್ಲ ಎಂಬ ಹೋಲಿಕೆಯ ಜೊತೆ ಇಲ್ಲಗಳ ಪಟ್ಟಿ ಬಹಳ ದೊಡ್ಡದೇ ಇದೆ. ಆದರೆ ಈ ಸ್ಮಾರ್ಟ್‌ಫೋನ್‌ಗಳ ಕಾಲಘಟ್ಟದಲ್ಲಿ ನಾವು ಬದುಕುತ್ತಿರುವಾಗ ಇಲ್ಲೊಂದು ವೃದ್ಧ ಜೋಡಿಯ ಮುಗ್ಧತೆ ಬಾರಿ ವೈರಲ್ ಆಗಿದೆ.

ಇಂದಿನ ದಂಪತಿಗಳ ನಡುವಿನ ಕಲಹಕ್ಕೆ ಪ್ರೀತಿಯ ಕೊರತೆಯ ಹೊರತಾಗಿಯೂ ನೂರೆಂಟು ಕಾರಣಗಳಿವೆ. ಕಾರಿಲ್ಲ, ಬೈಕಿಲ್ಲ, ಕೇಳಿದ್ರು ಕೊಡಿಸಲ್ಲ ಎಲ್ಲರಂತೆ ನಾವಿಲ್ಲ ಎಂಬ ಹೋಲಿಕೆ ಹೀಗೆ ಇಲ್ಲಗಳ ಪಟ್ಟಿ ಬಹಳ ದೊಡ್ಡದೇ ಇದೆ. ಆದರೆ ಈ ಸ್ಮಾರ್ಟ್‌ಫೋನ್‌ಗಳ ಕಾಲಘಟ್ಟದಲ್ಲಿ ನಾವು ಬದುಕುತ್ತಿರುವಾಗ ಇಲ್ಲೊಂದು ವೃದ್ಧ ಜೋಡಿಯ ಮುಗ್ಧತೆ ಬಾರಿ ವೈರಲ್ ಆಗುವುದರ ಜೊತೆಗೆ ಜೊತೆಗೆ ಬದುಕುವುದಕ್ಕೆ ಬೇಕಾಗಿರುವುದು ಇವ್ಯಾವುದೂ ಅಲ್ಲವೇ ಅಲ್ಲ ಪ್ರೀತಿ, ಕಾಳಜಿ ಮಾತ್ರ ಸಹನೆ ಮಾತ್ರ ಎಂಬುದು.

ಹೌದು ವಿಶ್ವವಿಖ್ಯಾತ ಪ್ರೇಮಸೌಧ ಎಂದೇ ಕರೆಯಯಲ್ಪಡುವ ತಾಜ್‌ ಮಹಲ್‌ಗೆ ಪ್ರತಿವರ್ಷವೂ ಲಕ್ಷಾಂತರ ಜನ ಪ್ರವಾಸಿಗರು ದೇಶ ಮಾತ್ರವಲ್ಲದೇ ವಿದೇಶಗಳಿಂದಲೂ ಭೇಟಿ ನೀಡುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ವೃದ್ಧ ಜೋಡಿಯೊಂದು ಅಲ್ಲಿಗೆ ಭೇಟಿ ನೀಡಿದೆ. ಭೇಟಿಯ ನಂತರ ಎಲ್ಲರಂತೆ ಅವರಿಗೂ ಪ್ರೇಮ ಸೌಧದ ಮುಂದೆ ತಮ್ಮದೊಂದು ನೆನಪಿನ ಮುದ್ರೆ ಇರಬೇಕು ಎಂದೆನಿಸಿದೆ. ಅದರಂತೆ ಅವರು ತಮ್ಮ ಬೇಸಿಕ್‌ ಸೆಟ್‌ ನೀಡಿ ಫೋಟೋ ತೆಗೆಯುವಂತೆ ಅಲ್ಲಿದ್ದವರೊಬ್ಬರ ಬಳಿ ಕೇಳಿಕೊಂಡಿದೆ. ಆ ಬೇಸಿಕ್ ಸೆಟ್‌ನಲ್ಲಿ ಕ್ಯಾಮರಾ ಇದೆ. ಆದರೆ ಸ್ಮಾರ್ಟ್‌ಫೋನ್‌ನಲ್ಲಿ ಬರುವಷ್ಟು ಸೊಗಸಾಗಿ ಅದರಲ್ಲಿ ಫೋಟೋಗಳು ಬರುವುದಿಲ್ಲ. ಆದರೂ ನೆನಪಿಗೊಂದು ಫೋಟೋ ಇರಲಿ ಚೆನ್ನಾಗಿರೋದು ಮುಖ್ಯ ಅಲ್ಲ ನೆನಪು ಮುಖ್ಯ ಎಂದು ದಂಪತಿ ತಮ್ಮ ಸಣ್ಣ ಫೋನ್‌ನಲ್ಲಿ ಫೋಟೋ ತೆಗೆಸಿಕೊಂಡಿದ್ದಾರೆ.

ಈ ದೃಶ್ಯವನ್ನು ನೋಡಿ ನೆಟ್ಟಿಗರು ತೀವ್ರ ಭಾವುಕರಾಗಿದ್ದಾರೆ. Ya muzzammil ಎಂಬ ಕಂಟೆಂಟ್ ಕ್ರಿಯೇಟರ್ ಈ ದಂಪತಿಗಳ ವೀಡಿಯೋ ಮಾಡಿ ತಮ್ಮ ಇನ್ಸ್ಟಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಭಾರಿ ವೈರಲ್ ಆಗಿದೆ. ಅವರು ಅವರ ಫೋನ್‌ನಲ್ಲಿ ತಮ್ಮ ಫೋಟೋ ಬಯಸಿದ್ದರು. ಆದರೆ ಅವರ ಬಳಿ ಇದ್ದ ಜಿಯೋ ಬೇಸಿಕ್ ಫೋನ್‌ ಅನ್ನು ಹೇಗೆ ಬಳಸಬೇಕು ಎಂಬುದನ್ನೇ ಅವರು ಮರೆತು ಹೋಗಿದ್ದರು. ಅವರಿಗೆ ಫೋನ್‌ನಲ್ಲಿ ಕ್ಯಾಮರಾ ಇರೋದು ಗೊತ್ತಿತ್ತು. ಕೊನೆಗೂ ಅವರು ಫೋಟೋ ತೆಗೆಯುವಂತೆ ಹೇಳಿದ ವ್ಯಕ್ತಿ ಆ ಫೋನ್‌ನಲ್ಲಿ ಕ್ಯಾಮರಾ ಹುಡುಕಿ ಅವರ ಫೋಟೋ ತೆಗೆದಿದ್ದಾರೆ. ಆದರೆ ಫೋಟೋ ಮಾತ್ರ ಕ್ಯಾಮರಾದ ಕಡಿಮೆ ಕ್ಲಾರಿಟಿಯಿಂದಾಗಿ ಸ್ಪಷ್ಟವಾಗಿ ಬಂದಿರಲಿಲ್ಲ. ಅದರೂ ಆ ಜೋಡಿ ಫೋಟೋ ನೋಡಿ ಖುಷಿ ಪಟ್ಟಿದ್ದಾರೆ. ಅವರಿಗೆ ಚಂದಕ್ಕಿಂತ ಕೇವಲ ನೆನಪುಗಳು ಬೇಕಿತ್ತು ಅಷ್ಟೇ.

ಇದನ್ನೂ ಓದಿ: ಬೀದಿಯಲ್ಲೇ ಗಂಡ ಹೆಂಡತಿ ಹೊಡೆದಾಟ: ಜಗಳದ ನಂತರ ಮಗುವನ್ನು ರಸ್ತೆಯಲ್ಲೇ ಬಿಟ್ಟು ದಂಪತಿ ಎಸ್ಕೇಪ್

ಈ ವೀಡಿಯೋ ನೋಡಿದ ನೆಟ್ಟಿಗರು ಹಲವು ಕಾಮೆಂಟ್ ಮಾಡಿದ್ದಾರೆ. ಈ ಫೋನ್ ಜಿಯೋ ರಿಲಯನ್ಸ್‌ನವರದಾಗಿರುವುದರಿಂದ ರಿಲಯನ್ಸ್ ಜಿಯೋ ಈ ವೀಡಿಯೋಗೆ ಕಾಮೆಂಟ್ ಮಾಡಿದ್ದು,2026ರ ಬೆಸ್ಟ್ ದೃಶ್ಯ ಎಂದು ಈ ವೀಡಿಯೋವನ್ನು ಘೋಷಣೆ ಮಾಡಬಹುದೇ ಎಂದು ಕಾಮೆಂಟ್ ಮಾಡಿದ್ದಾರೆ. ನೆನಪುಗಳಿಗೆ ಹೈ ರೆಸಲ್ಯೂಷನ್ ಕ್ಯಾಮರಾ ಬೇಕಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದೊಂದು ಅವರ ಬದುಕಿನ ಅತ್ಯಂತ ಅಮೂಲ್ಯ ಕ್ಷಣ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದನ್ನು ನೋಡಿ ಸ್ಮಾರ್ಟ್‌ಫೋನ್‌ಗೂ ಹೊಟ್ಟೆಉರಿ ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ಹಾಗೆಯೇ ಮತ್ತೊಬ್ಬರು ಇದು ನೆನಪುಗಳಲ್ಲ ಇದೊಂದು ಬಹಳ ಅಮೂಲ್ಯವಾದ ನೆನಪು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಮಂಗಳೂರು: ಕಾಂಪೌಂಡ್ ಹಾರಿ ಮನೆ ಅಂಗಳಕ್ಕೆ ಬಂದು ಬಿದ್ದ ಕಾರು: ಚಾಲಕ ಪವಾಡದಂತೆ ಪಾರು: ವೀಡಿಯೋ

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರು: ಬೀದಿಯಲ್ಲೇ ಗಂಡ ಹೆಂಡತಿ ಹೊಡೆದಾಟ: ಜಗಳದ ನಂತರ ಮಗುವನ್ನು ರಸ್ತೆಯಲ್ಲೇ ಬಿಟ್ಟು ದಂಪತಿ ಎಸ್ಕೇಪ್
ಚಾಣಕ್ಯನ ಪ್ರಕಾರ ಹೆಣ್ಣು ಮಕ್ಕಳ ತಂದೆ ಮಾಡುವ ಈ ದೊಡ್ಡ ತಪ್ಪು, ಮಗಳ ಭವಿಷ್ಯಕ್ಕೆ ಕುತ್ತು