42ರ ವ್ಯಕ್ತಿಗೆ 25ರ ಹರೆಯದ ಗರ್ಲ್‌ಫ್ರೆಂಡ್‌: ಹೊಸ ವರ್ಷದ ಪಾರ್ಟಿಗೆ ಕರೆದು ಡೆಂಜಿ ಕಿಡ್ ಮಾಡಿದ್ದೇನು?

Published : Jan 02, 2026, 03:06 PM IST
men's private parts

ಸಾರಾಂಶ

ಹೊಸ ವರ್ಷಾಚರಣೆಯಂದು ಪಾರ್ಟಿ ಮಾಡೋಣ ಬಾ ಎಂದು ಬಾಯ್‌ಫ್ರೆಂಡ್‌ನ ಮನೆಗೆ ಕರೆಸಿದ ಯುವತಿ ಆತನ ಖಾಸಗಿ ಅಂಗಕ್ಕೆ ಕತ್ತರಿ ಹಾಕಿದಂತಹ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

ಹೊಸ ವರ್ಷಾಚರಣೆಯಂದು ಪಾರ್ಟಿ ಮಾಡೋಣ ಬಾ ಎಂದು ಬಾಯ್‌ಫ್ರೆಂಡ್‌ನ ಮನೆಗೆ ಕರೆಸಿದ ಯುವತಿ ಆತನ ಖಾಸಗಿ ಅಂಗಕ್ಕೆ ಕತ್ತರಿ ಹಾಕಿದಂತಹ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 25ರ ಹರೆಯದ ಯುವತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 25ರ ಹರೆಯದ ಯುವತಿ ತನಗಿಂತ 17 ವರ್ಷದ ಅಂದರೆ 42 ವರ್ಷದ ಬಾಯ್‌ಫ್ರೆಂಡ್‌ನನ್ನು ಹೊಸ ವರ್ಷ ಆಚರಣೆ ಮಾಡೋಣ ಬಾ ಎಂದು ಮನೆಗೆ ಕರೆಸಿದ್ದಾಳೆ. ಇತ್ತ ಮುಂದೆ ಏನಾಗಲಿದೆ ಎಂಬ ಯಾವ ಸಣ್ಣ ಸುಳಿವು ಕೂಡ ಆತನಿಗೆ ಇರದೇ ಆತ ಆಕೆ ಕರೆದಂತೆ ಮನೆಗೆ ಬಂದಿದ್ದಾನೆ. ಮನೆಗೆ ಬಂದ ಆತನ ಮೇಲೆ ಯುವತಿ ಹರಿತವಾದ ಆಯುಧದಿಂದ ಹಲ್ಲೆ ಮಾಡಿದ್ದಾಳೆ. ಮುಂಬೈನ ಈಸ್ಟ್ ಸಂತಾಕ್ರೂಜ್‌ನ ಕಲಿನಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಪ್ರದೇಶದಲ್ಲಿ ಯುವತಿ ವಾಸವಾಗಿದ್ದಳು.

ಮನೆಗೆ ಬಂದ ಆತನ ಬಳಿ ಯುವತಿ ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ಆದರೆ ಆತ ಮದುವೆಗೆ ನಿರಾಕರಿಸಿದ್ದಾನೆ. ಇದು ಯುವತಿಯನ್ನು ಕೆರಳಿಸಿದೆ. ಸಿಟ್ಟಿಗೆದ್ದ ಯುವತಿ ಹರಿತವಾದ ಆಯುಧದಿಂದ ಆತನ ಖಾಸಗಿ ಭಾಗದ ಮೇಲೆ ಹಲ್ಲೆ ಮಾಡಿದ್ದಾಳೆ. ಈ ರೀತಿ ಬಾಯ್‌ಫ್ರೆಂಡ್ ಮೇಲೆ ಹಲ್ಲೆ ಮಾಡಿದ ಯುವತಿಯ ವಿರುದ್ಧ ವಕೊಲಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರ ಪ್ರಕಾರ ಆರೋಪಿ ಯುವತಿ ಹಾಗೂ ಆ ವ್ಯಕ್ತಿಯ ಇಬ್ಬರೂ 7 ವರ್ಷಗಳಿಂದ ಅಂದರೆ ಯುವತಿ 19 ವರ್ಷದಲ್ಲಿರುವಾಗಲೇ ಪ್ರೇಮ ಸಂಬಂಧದಲ್ಲಿದ್ದರು. ಮಹಿಳೆ ತನ್ನನ್ನು ಮದುವೆಯಾಗುವಂತೆ ಆತನನ್ನು ಆಗಾಗ ಕೇಳುತ್ತಿದ್ದಳು. ಆದರೆ ಪ್ರತಿ ಸಲವೂ ಆತ ಮದುವೆಗೆ ನಿರಾಕರಿಸುತ್ತಿದ್ದ. ಹೀಗಾಗಿ ಆತನ ಬಗ್ಗೆ ಕುಪಿತಗೊಂಡಿದ್ದ ಯುವತಿ ಹೊಸ ವರ್ಷದ ದಿನದಂದು ಹೊಸವರ್ಷ ಆಚರಿಸೋಣ ಎಂದು ಮನೆಗೆ ಕರೆಸಿ ಈ ಕೃತ್ಯವೆಸಗಿದ್ದಾಳೆ.

ಇದನ್ನೂ ಓದಿ: ವಿವಾಹಿತ ಮಹಿಳೆಯ ಜೊತೆ ಮಾತು: 22 ವರ್ಷದ ಯುವಕನ ಹತ್ಯೆ

ಹೊಸವರ್ಷದಂದು ಗುರುವಾರ ನಸುಕಿನ ಜಾವ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವಿನ ವಾಗ್ವಾದ ವಿಕೋಪಕ್ಕೆ ಹೋಗಿದ್ದು, ಇದಾದ ನಂತರ ಸಿಟ್ಟಿಗೆದ್ದ ಯುವತಿ ಹರಿತವಾದ ಆಯುಧ ತಂದು ಹಲ್ಲೆ ಮಾಡಿದ್ದಾಳೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದರು ಆರೋಪಿ ಸ್ಥಳದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ತನ್ನ ಸಹೋದರನಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾನೆ. ನಂತರ ಸಹೋದರ ಬಂದು ಈ ಸಂತ್ರಸ್ಥ ವ್ಯಕ್ತಿಯನ್ನು ವಿಎನ್‌ ದೇಸಾಯಿ ಆಸ್ಪತ್ರೆಯ ತುರ್ತು ನಿಗಾ ಘಟಕಕಕ್ಕೆ ಕರೆದೊಯ್ದು ಸೇರಿಸಿದ್ದಾರೆ. ಘಟನೆಯ ಬಳಿಕ ಯುವತಿ ಪರಾರಿಯಾಗಿದ್ದು, ಆಕೆಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಮದುವೆ ಭರವಸೆ ನೀಡಿ ವೈದ್ಯನಿಂದಲೇ ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ಅತ್ಯಾ*ಚಾರ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗುರು ಶನಿಯ ಆಶೀರ್ವಾದದಿಂದ ಶತ್ರುಗಳ ವಿರುದ್ದ ಈ ರಾಶಿಗೆ ಮೇಲುಗೈ, ಅದೃಷ್ಟ
Chanakya Niti: ಈ 7 ಅಭ್ಯಾಸ ಇಂದೇ ಬಿಟ್ಟರೆ ನೀವು ಮುಂದೆ ಬರೋದನ್ನ ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ