ಕಿರುಚಾಡುತ್ತಾಳೆ ಹೆಂಡತಿ, ಸಾಕಪ್ಪ ಸಾಕು ಅನಿಸಿದೆ ಅಂತಿದ್ದಾನೆ ಪತಿರಾಯ

By Suvarna NewsFirst Published Aug 3, 2022, 4:04 PM IST
Highlights

ಮದುವೆಯಾದ್ಮೇಲೆ ಸುಖವಾಗಿರಬಹುದು ಅಂತಾ ಹುಡುಗ್ರು ಅಂದುಕೊಳ್ತಾರೆ. ಆದ್ರೆ ಪತ್ನಿಯಾಗಿ ಬಂದವಳು ಪ್ರೀತಿ ಬದಲು ಕಿರುಕುಳ ನೀಡಿದ್ರೆ ಹುಡುಗ್ರ ಪಾಡು ಯಾರಿಗೂ ಬೇಡಿ. ಬಿಸಿ ತುಪ್ಪ ನುಂಗಿದ್ರೂ ಕಷ್ಟ, ಉಗುಳಿದ್ರೂ ಕಷ್ಟ.
 

ಮದುವೆ ಆದವರೆಲ್ಲ ಸುಖವಾಗಿ ಸಂಸಾರ ನಡೆಸಲು ಸಾಧ್ಯವಿಲ್ಲ. ಹಾಗೆ ಎಲ್ಲ ಮದುವೆ ಮುರಿದು ಬೀಳಲು ಪುರುಷರೇ ಕಾರಣರಲ್ಲ. ಮದುವೆ ಒಂದು ಬಂಧ. ಇಬ್ಬರು ಒಬ್ಬರಾಗುವ ಸಮಯ. ಮದುವೆಯಾದ್ಮೇಲೆ ಅನೇಕ ಜವಾಬ್ದಾರಿಗಳು ಮೈಮೇಲೆ ಬರುತ್ತವೆ. ಅದನ್ನು ಇಬ್ಬರು ನಿಭಾಯಿಸಿಕೊಂಡು ಹೋಗಬೇಕು. ಇಬ್ಬರ ನಡುವೆ ಹೊಂದಾಣಿಕೆ, ಪ್ರೀತಿ, ವಿಶ್ವಾಸ, ಗೌರವ ಸಮಾನವಾಗಿರಬೇಕು. ಒಂದು ತಕ್ಕಡಿ ಮೇಲಿದ್ದು, ಇನ್ನೊಂದು ಕೆಳಗಿದ್ದರೆ ಸಂಸಾರ ದೀರ್ಘಕಾಲ ನಡೆಯುವುದಿಲ್ಲ. ಮದುವೆ ಬಂಧನ ಉಸಿರುಗಟ್ಟಿಸಿದಂತಾಗುತ್ತದೆ. ಅನೇಕ ಮಹಿಳೆಯರು ಮದುವೆಯಾದ್ಮೇಲೂ ತಮ್ಮ ಸ್ವಭಾವ ಬಿಡುವುದಿಲ್ಲ. ಮದುವೆಗೆ ಮುನ್ನ ತಂದೆ – ತಾಯಿಯ ಪ್ರೀತಿಯಲ್ಲಿ ಬೆಳೆದ ಕೆಲ ಹೆಣ್ಣು ಮಕ್ಕಳು ತುಂಬಾ ಮೊಂಡರಾಗಿರ್ತಾರೆ. ಮದುವೆಯಾದ್ಮೇಲೆ ಹೊಂದಾಣಿಕೆ ಮುಖ್ಯ ಎಂಬುದು ಅವರ ಅರಿವಿಗೆ ಬಂದಿರುವುದಿಲ್ಲ. ಇದು ಸಂಗಾತಿ ಜೀವನವನ್ನು ನರಕ ಮಾಡುತ್ತದೆ. ಮನೆ ಕೆಲಸದಲ್ಲಿ ಪತ್ನಿಗೆ ಅವಶ್ಯಕವಾಗಿ ಸಹಾಯ ಮಾಡಬೇಕು. ಇದು ಪತಿಯಾದವನ ಕರ್ತವ್ಯ. ಆದ್ರೆ ಪ್ರತಿಯೊಂದು ಮನೆ ಕೆಲಸವನ್ನೂ ಆತನೇ ಮಾಡ್ಬೇಕು ಎಂದಾದ್ರೆ ಕಷ್ಟವಾಗುತ್ತದೆ. ಅದು ಮಾತ್ರವಲ್ಲ, ಪತ್ನಿ ಪ್ರೀತಿ ಬದಲು ಮಾತು ಮಾತಿಗೂ ಕಿರುಚಾಡಿದ್ರೆ ಪತಿಗೆ ಹಿಂಸೆಯಾಗುತ್ತದೆ. ನೊಂದ ಪತಿಯೊಬ್ಬ ತನ್ನ ಅಳಲು ತೋಡಿಕೊಂಡಿದ್ದಾನೆ.

ಮದುವೆ (Marriage) ಯಾಗಿ ತುಂಬಾ ದಿನ ಕಳೆದಿಲ್ಲ ಎನ್ನುವ ವ್ಯಕ್ತಿ ಆರಂಭದಲ್ಲಿ ಸಂತೋಷ (Happiness) ವಾಗಿದ್ದನಂತೆ. ಆದ್ರೆ ದಿನ ಕಳೆದಂತೆ ಪತ್ನಿಯ ಅಸಲಿ ಬಣ್ಣ ಗೊತ್ತಾಗಿದೆ ಎನ್ನುತ್ತಾನೆ ಪತಿ. ಮಾತು ಮಾತಿ (speech) ಗೂ ಕಿರುಚಾಡುವ ಪತ್ನಿ ತುಂಬಾ ಸೋಮಾರಿಯಂತೆ. ಮನೆಯ ಒಂದೂ ಕೆಲಸವನ್ನು ಮಾಡದ ಪತ್ನಿ, ಪತಿ ಸಹಾಯ ಕೇಳಿದ್ರೆ ರೇಗಾಡುತ್ತಾಳಂತೆ. ಅಣ್ಣನಿಗೆ ಹೇಳ್ತೇನೆಂದು ಧಮಕಿ ಹಾಕ್ತಾಳಂತೆ. ಯಾವುದೇ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಮನಸ್ಸಿಲ್ಲದ ಪತ್ನಿ, ಎಲ್ಲವನ್ನೂ ನನ್ನಿಂದ ಮಾಡಿಸ್ತಾಳೆ ಎನ್ನುತ್ತಾನೆ ಪತಿ. 

ನಾನು ಮದುವೆ ಎಂಬ ಬಂಧದಲ್ಲಿ ಸಿಕ್ಕಿಬಿದ್ದಿದ್ದೇನೆ. ನನಗೆ ಅದರಿಂದ ಹೊರಗೆ ಬರಲು ಕಷ್ಟವಾಗ್ತಿದೆ. ಯಾವುದ್ರಲ್ಲೂ ಆಸಕ್ತಿ ಇಲ್ಲದಂತಾಗಿದೆ. ಈ ಮದುವೆ, ಸಂಸಾರದಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದು ಗೊತ್ತಾಗ್ತಿಲ್ಲ ಎನ್ನುತ್ತಾನೆ ವ್ಯಕ್ತಿ. ನಿನ್ನ ವರ್ತನೆ ನನಗೆ ಸರಿ ಬರ್ತಿಲ್ಲ, ನಿನ್ನ ಮೇಲಿನ ಪ್ರೀತಿ ಕಡಿಮೆಯಾಗ್ತಿದೆ ಎಂದು ಪತ್ನಿಗೆ ಹೇಗೆ ಹೇಳಲಿ ಎಂದು ಆತ ಪ್ರಶ್ನೆ ಮಾಡಿದ್ದಾನೆ.

ತಜ್ಞರ ಸಲಹೆ : ನೊಂದ ಪತಿಯ ಪ್ರಶ್ನೆಗೆ ತಜ್ಞರು ಉತ್ತರ ನೀಡಿದ್ದಾರೆ. ನೀವು ಒತ್ತಡ-ಟೀಕೆ, ಕೋಪ-ಭಯವನ್ನು ಎದುರಿಸುತ್ತಿದ್ದರೆ  ಅವಶ್ಯಕವಾಗಿ ನಿಮ್ಮ ಹೆಂಡತಿಯೊಂದಿಗೆ ಮಾತನಾಡಬೇಕು ಎಂದು ತಜ್ಞರು ಹೇಳಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದ್ರೆ ನಿಮ್ಮ ಜೀವನ ಹಾಗೂ ನಿಮ್ಮ ಸಂಸಾರ ಸಂಪೂರ್ಣ ಹಾಳಾಗುತ್ತದೆ ಎಂದವರು ಹೇಳಿದ್ದಾರೆ. 

ಮಹಿಳೆಯರಲ್ಲಿ ಸೆಕ್ಸ್ ಡ್ರೈವ್ ಹೆಚ್ಚಿಸುವ ಆಹಾರಗಳಿವು

ಪತ್ನಿ ಬೇಜವಾಬ್ದಾರಳಾಗಿದ್ದು, ಯಾವುದೇ ಕೆಲಸ ಮಾಡುವ ಇಚ್ಛೆ ಹೊಂದಿಲ್ಲ ಎಂದಾದ್ರೆ ನೀವು ಆಕೆ ಜೊತೆ ಮಾತನಾಡಬೇಕು ಎನ್ನುತ್ತಾರೆ ತಜ್ಞರು. ಆಕೆ ಸ್ವಭಾವದಿಂದ ಸಂಸಾರ ದಾರಿ ತಪ್ಪುತ್ತಿದೆ ಎಂಬುದನ್ನು ಆಕೆಗೆ ಮನವರಿಕೆ ಮಾಡ್ಬೇಕು. ಹಾಗೆ ಆಕೆ ಮೇಲಿನ ಪ್ರೀತಿಯನ್ನು ಕಿಂಚಿತ್ತು ಕಡಿಮೆ ಮಾಡ್ಬೇಡಿ ಎನ್ನುತ್ತಾರೆ ತಜ್ಞರು. ಆಕೆ ಮಾಡಿದ ಸಣ್ಣ ಕೆಲಸವನ್ನು ಶ್ಲಾಘಿಸಿ. ಆಕೆ ಸಹೋದರನ ಮೇಲೆ ನಿಮಗೆ ಎಷ್ಟು ಗೌರವಿದೆ ಎಂಬುದನ್ನು ತೋರಿಸಿ. ಪ್ರೀತಿಯಿಂದ ಆಗದೆ ಇರೋದು ಏನೂ ಇಲ್ಲ. ಹಾಗಾಗಿ ಪ್ರೀತಿಯಿಂದ ಆಕೆಯನ್ನು ಬದಲಿಸಲು ಪ್ರಯತ್ನಿಸಿ ಎನ್ನುತ್ತಾರೆ ತಜ್ಞರು. 

ಯಾವ ಹುಡುಗೀನೂ ಇಷ್ಟ ಪಡ್ತಿಲ್ಲಾಂತ ಗೋಳಾಡ್ಬೇಡಿ, ಹೀಗೆ ಇಂಪ್ರೆಸ್ ಮಾಡಿ

ಅನೇಕ ಬಾರಿ ಸಮಸ್ಯೆಯನ್ನು ಒಬ್ಬರೇ ನಿಭಾಯಿಸುವುದು ಕಷ್ಟವಾಗುತ್ತದೆ. ನಿಮ್ಮ ಆಪ್ತರು ಅಥವಾ ಕುಟುಂಬ ಸದಸ್ಯರ ಜೊತೆ ಮಾತನಾಡಿ, ಅವರ ಸಹಾಯ ಪಡೆಯಿರಿ. ಅವರಿಂದ ಪತ್ನಿಯನ್ನು ಬದಲಿಸುವ ಪ್ರಯತ್ನ ನಡೆಸಿ. ಪತ್ನಿಗೆ ಇಷ್ಟವಾಗುವವರು ಆಕೆಗೆ ತಿಳುವಳಿಕೆ ಹೇಳಿದ್ರೆ ಆಕೆ ಬದಲಾಗುವ ಸಂಭವವಿದೆ ಎನ್ನುತ್ತಾರೆ ತಜ್ಞರು. 
 

click me!