ಎಲಾನ್‌ ಮಸ್ಕ್‌ ಬಗ್ಗೆ ನನಗೆ ಹೆಮ್ಮೆ ಇಲ್ಲ, ಇನ್ನೂ ಸಂಗಾತಿ ಹುಡುಕಿಕೊಂಡಿಲ್ಲ ಎಂದ ಅಪ್ಪ..!

By BK Ashwin  |  First Published Aug 2, 2022, 5:18 PM IST

ಎಲಾನ್‌ ಮಸ್ಕ್‌ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಹಾಗೂ ಟೆಸ್ಲಾ, ಸ್ಪೇಸ್‌ ಎಕ್ಸ್ ಮುಖ್ಯಸ್ಥ. ಆದರೂ, ನನಗೆ ಅವರ ಬಗ್ಗೆ ಹೆಮ್ಮೆ ಇಲ್ಲ ಎಂದು ಅವರ ತಂದೆ ಎರ್ರೋಲ್‌ ಮಸ್ಕ್‌ ಹೇಳಿದ್ದಾರೆ.


ಟೆಸ್ಲಾ ಮುಖ್ಯಸ್ಥ ಎಲಾನ್‌ ಮಸ್ಕ್‌ ಸದಾ ಸುದ್ದಿಯಲ್ಲಿರುತ್ತಾರೆ. ಸದ್ಯ ವಿಶ್ವದ ಅತಿ ಶ್ರೀಮಂತ ವ್ಯಕ್ತಿ ಅಂದ್ರೆ ಇವರೇ. ಎಲೆಕ್ಟ್ರಿಕ್‌ ಕಾರುಗಳ ಉತ್ಪಾದನೆ, ಮಾನವರನ್ನು ಮಂಗಳ ಗ್ರಹಕ್ಕೆ ಕಳಿಸಬೇಕೆಂದು ತುಡಿಯುತ್ತಿರುವ ಸ್ಪೇಸ್‌ ಎಕ್ಸ್ ಮಾಲೀಕ ಅಂದ್ರೆ ಹಲವರಿಗೆ ಹೆಮ್ಮೆ ಇದೆ. ಆದರೂ, ಇವರು ಆಗಾಗ್ಗೆ ವಿವಾದಕ್ಕೂ ಸಿಲುಕುತ್ತಿರುತ್ತಾರೆ. ಆದರೆ, ಎಲಾನ್‌ ಮಸ್ಕ್‌ ಬಗ್ಗೆ ತನಗೆ ಹೆಮ್ಮೆ ಇಲ್ಲ ಅಂತಿದ್ದಾರೆ ಅವರ ಹೆತ್ತ ತಂದೆ. 

ಹೌದು,‘ಕೈಲ್‌ ಹಾಗೂ ಜ್ಯಾಕಿ ಓ ಶೋ’ ಎಂಬ ಕಾರ್ಯಕ್ರಮವೊಂದರಲ್ಲಿ 76 ವರ್ಷದ ಎಲಾನ್‌ ಮಸ್ಕ್‌ ಅವರ ತಂದೆ ಎರ್ರೋಲ್‌ ಮಸ್ಕ್‌ ಈ ಮಾತುಗಳನ್ನಾಡಿದ್ದಾರೆ. ಆಸ್ಟ್ರೇಲಿಯಾದ ರೇಡಿಯೋ ಸ್ಟೇಷನ್‌ ಕೆಐಐಎಸ್‌ ಎಫ್‌ಎಂ ನಲ್ಲಿ ಪ್ರಸಾರವಾಗುವ ಶೋ ವೇಳೆ ಈ ಹೇಳಿಕೆ ನೀಡಿದ್ದಾರೆ. 20 ನಿಮಿಷಗಳ ಕಾಲ ನಡೆದ ಸಂದರ್ಶನದ ವೇಳೆ ಎಲಾನ್‌  ಮಸ್ಕ್‌ ಬಗ್ಗೆ ಹಾಗೂ ತನ್ನ ಇಡೀ ಕುಟುಂಬದ ಬಗ್ಗೆ ಎರ್ರೋಲ್‌ ಮಸ್ಕ್‌ ಹೇಳಿದ್ದಾರೆ. ಎಲಾನ್‌ ಮಸ್ಕ್‌ ಅವರ ವೃತ್ತಿ ಮಾರ್ಗದ ಹಾಗೂ ಅವರ ದೈಹಿಕ ನೋಟದ ಬಗ್ಗೆಯೂ ತಂದೆ ಮಾತನ್ನಾಡಿದ್ದಾರೆ.

Tap to resize

Latest Videos

ಜಗತ್ತಿನ ಶ್ರೀಮಂತ ವ್ಯಕ್ತಿಗಳ ಸರಳ ಅಭ್ಯಾಸಗಳಿವು, ಅಳವಡಿಸಿಕೊಂಡರೆ ಜೀವನ ಬಿಂದಾಸ್!

ಬುದ್ಧಿವಂತ ಮಸ್ಕ್ (ಎಲಾನ್‌ ಮಸ್ಕ್‌) ಬಗ್ಗೆ ನಿಮಗೆ ಹೆಮ್ಮೆ ಇದೆಯೇ ಎಂದು ಸಂದರ್ಶಕರು ಕೇಳಿದ್ದಕ್ಕೆ, ಎಂಜಿನಿಯರ್‌ ಆಗಿರುವ ತಂದೆ ಎರ್ರೋಲ್‌ ಮಸ್ಕ್‌ ‘ಇಲ್ಲ’ ಎಂದು ನೇರವಾಗಿ ಹೇಳಿದ್ದಾರೆ. ಎಲಾನ್‌  ಮಸ್ಕ್‌ ಜಗತ್ತಿನ ಅತಿ ಶ್ರೀಮಂತ ವ್ಯಕ್ತಿಯಾಗಿದ್ದು, ಲಕ್ಷಾಂತರ ಕೋಟಿ ರೂ. ಒಡೆಯರಾಗಿದ್ದಾರೆ. ‘’ಇಲ್ಲ, ನಿಮಗೆ ಗೊತ್ತಾ, ನಮ್ಮ ಕುಟುಂಬ ಬಹಳ ಸಮಯದಿಂದಲೂ ಹಲವು ಕೆಲಸಗಳನ್ನು ಮಾಡುತ್ತಿದೆ, ನಾವು ದಿಢೀರನೇ ಇದನ್ನೆಲ್ಲ ಮಾಡಲು ಆರಂಭಿಸಿದ್ದೇವೆ ಎಂದಲ್ಲ’’ ಎಂದು ಎರ್ರೋಲ್‌ ಜ್ಯಾಕಿ ಓ ಅವರಿಗೆ ಹೇಳಿದ್ದಾರೆ. 

ಅಲ್ಲದೆ, ತನ್ನ ಮೊದಲ ಪತ್ನಿ ಮೇಯ್‌ ಮಸ್ಕ್‌ ಅವರ ಮೂಲಕ ಜನಿಸಿದ ತನ್ನ ಮಕ್ಕಳಾದ ಎಲಾನ್‌, ಟೋಸ್ಕಾ ಹಾಗೂ ಕಿಂಬಾಲ್‌ ಚಿಕ್ಕವರಿದ್ದಾಗಲೇ ತನ್ನ ಜತೆಗೆ ಪ್ರಪಂಚ ಸುತ್ತಿದ್ದಾರೆ. ಅಮೆಜಾನ್‌ ಮಳೆ ಕಾಡು ಹಾಗೂ ಚೀನಾದಂತಹ ಸ್ಥಳಗಳಿಗೂ ಹೋಗಿದ್ದಾರೆ ಎಂದು ಎರ್ರೋಲ್‌ ಮಸ್ಕ್‌ ಹೇಳಿದ್ದಾರೆ. ತನ್ನ ಮಕ್ಕಳು ಹಲವು ವಿಷಯಗಳನ್ನು ನೋಡಿದ್ದಾರೆ ಹಾಗೂ ನಾವು ಒಟ್ಟಿಗೆ ಹಲವು ವಿಷಯಗಳನ್ನು ಮಾಡಿದ್ದೇವೆ, ಆದರೂ ಎಲಾನ್‌ ಗಡಿ ದಾಟಿ ಮುನ್ನುಗ್ಗಿದ್ದಾರೆ ಎಂದು ಅಪ್ಪ ಹೇಳಿಕೊಂಡಿದ್ದಾರೆ. 
 
ಮಗ ಇನ್ನೂ ಸಂಗಾತಿ ಹುಡುಕಿಕೊಂಡಿಲ್ಲ ಎಂಬ ಚಿಂತೆ..!

ಇನ್ನು, ತನ್ನ 49 ವರ್ಷದ ಮಗ ಕಿಂಬಾಲ್‌ ಮಸ್ಕ್‌ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ತಂದೆ ಹೇಳಿಕೊಂಡಿದ್ದು, ಎಲಾನ್‌ ಇನ್ನೂ ಸಂಗಾತಿಯನ್ನು ಹುಡುಕಿಕೊಳ್ಳದ ಬಗ್ಗೆ ತನ್ನ ಚಿಂತೆಯನ್ನು ವ್ಯಕ್ತಪಡಿಸಿದರು. ಅವನು (ಎಲಾನ್‌ ) ಅವಳು ಮಾಡುತ್ತಿರುವುದನ್ನು ತ್ಯಜಿಸಲು ಒಬ್ಬ ಮಹಿಳೆಯನ್ನು ಹುಡುಕಬೇಕು ಮತ್ತು ಅದು ಸುಲಭವಲ್ಲ ಎಂದು ಎರ್ರೋಲ್‌ ಸಂದರ್ಶನದಲ್ಲಿ ಹೇಳಿದ್ದಾರೆ.

ಗೂಗಲ್‌ ಸಹ ಸಂಸ್ಥಾಪಕನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಲಾನ್‌ ಮಸ್ಕ್..?

ತನ್ನ ಮಲ ಮಗಳು ಜಾನಾ ಬೆಜ್ಯುಡೆನ್‌ಹೌಟ್‌ ಳೊಂದಿಗೆ ಎರಡು ಮಕ್ಕಳಿಗೆ ತಂದೆಯಾಗಿದ್ದೆ ಎಂದು ಇತ್ತೀಚೆಗಷ್ಟೇ ಬಹಿರಂಗಪಡಿಸಿದ್ದ 76 ವರ್ಷದ ವ್ಯಕ್ತಿ ಎಲೋನ್‌ ಮಸ್ಕ್‌ ಅವರ ದೈಹಿಕ ನೋಟದ ಬಗ್ಗೆಯೂ ಮಾತನಾಡಿದ್ದು, ವಯಸ್ಸಾದಂತೆ ಕಾಣಿಸುತ್ತಾನೆ ಎಂದು ಪುತ್ರ ಎಲಾನ್‌ ಮಸ್ಕ್‌ಗೆ ಹೇಳಿದ್ದಾರೆ. ಹಾಗೂ, ತನ್ನ ವೃತ್ತಿ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಬಗ್ಗೆ ಟೆಸ್ಲಾ ಮುಖ್ಯಸ್ಥ ಎಲಾನ್‌ ಮಸ್ಕ್‌ಗೆ ಸ್ವತ: ನಿರಾಶೆಯಾಗಿದೆ ಎಂದೂ ಅಪ್ಪ ಎರ್ರೋಲ್‌ ಮಸ್ಕ್‌ ಬಹಿರಂಗಪಡಿಸಿದ್ದಾರೆ. 

click me!