
ಮನುಷ್ಯನ ವ್ಯಕ್ತಿತ್ವ, ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಕೆಲವೊಬ್ಬರಿಗೆ ಎಲ್ಲರ ಜೊತೆ ಮಿಂಗಲ್ ಆಗುವುದು ಇಷ್ಟವಾದರೆ. ಇನ್ನು ಕೆಲವರಿಗೆ ಒಂಟಿಯಾಗಿರೋದೆ ಇಷ್ಟ, ಎಲ್ಲರ ಜೊತೆ ಬೆರೆಯೋದು ಕಷ್ಟ. ಹಾಗೆಯೇ ಪಾರ್ಟಿ, ಕಾರ್ಯಕ್ರಮಗಳಿಂದ ದೂರವಿರೋ ವ್ಯಕ್ತಿಯೊಬ್ಬರು ತಮಗಾಗ್ತಿರೋ ಹಿಂಜರಿಕೆ ಬಗ್ಗೆ ಹೇಳ್ಕೊಂಡಿದ್ದಾರೆ. ಅದ್ಕೆ ತಜ್ಞರು ಏನ್ ಹೇಳಿದ್ದಾರೆ ತಿಳಿಯೋಣ.
ಪ್ರಶ್ನೆ: ನನಗೆ ಬರ್ತ್‌ಡೇ ಪಾರ್ಟಿ, ಮ್ಯಾರೇಜ್ ಪಾರ್ಟಿ ಇನ್ನಿತರ ಯಾವುದೇ ಕಾರ್ಯಕ್ರಮಗಳನ್ನು ಕಂಡ್ರೇನೆ ಆಗಲ್ಲ. ನಾನು ಯಾವುದೇ ಕಾರ್ಯಕ್ರಮಗಳಿಗೆ ಹೋಗುವುದಿಲ್ಲ ನನ್ನಲ್ಲಿರುವ ಕೊರತೆ ಏನೆಂದು ನನಗೆ ತಿಳಿಯುತ್ತಿಲ್ಲ...?
ತಜ್ಞರ ಉತ್ತರ: ನಿಮ್ಮ ಮಾತಿನಿಂದ ನಿಮಗೆ ಇಂಟ್ರೋವರ್ಟ್ ಅಥವಾ ಅಂತರ್ಮುಖಿ ವ್ಯಕ್ತಿತ್ವ ಇದೆ ನಾವು ಸ್ಪಷ್ಟವಾಗಿ ತಿಳಿದುಕೊಳ್ಳಬಹುದು. ಆದರೆ ನೀವಿದನ್ನು ಕೊರತೆಯೆಂದು ತಿಳಿದುಕೊಳ್ಳುವ ಅಗತ್ಯವಿಲ್ಲ. ವ್ಯಕ್ತಿತ್ವ (Personality) ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಿರುತ್ತದೆ. ಕೆಲವೊಬ್ಬರು ಹೆಚ್ಚು ಮಾತನಾಡುತ್ತಾರೆ. ಕೆಲವೊಬ್ಬರು ಕಡಿಮೆ. ಕೆಲವೊಬ್ಬರಿಗೆ ಎಲ್ಲರೊಂದಿಗೂ ಬೇಗ ಗೆಳೆತನ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರಿಗೆ ಇದು ಸಾಧ್ಯವಾಗುವುದಿಲ್ಲ. ಇದನ್ನು ಸಮಸ್ಯೆ (Problem) ಅಥವಾ ಕೊರತೆಯೆಂದು ಅಂದುಕೊಳ್ಳವುದು ಸರಿಯಲ್ಲ. ಆದರೂ ಮನುಷ್ಯ ಅಂದ್ಮೇಲೆ ಸೋಷಿಯಲ್ ಆಗಿ ಮಿಂಗಲ್ ಆಹಬೇಕಾದುದು ಮುಖ್ಯ. ಹೀಗಾಗಿ ನಿಮ್ಮ ಈ ನಡವಳಿಕೆಯನ್ನು (Behaviour) ಹೇಗೆ ಬದಲಾಯಿಸಬಹುದು ಎಂಬುದಕ್ಕೆ ನಾವು ಕೆಲವೊಂದು ಸಲಹೆ ಕೊಡುತ್ತೇವೆ.
ಆಫೀಸ್ ಹುಡುಗೀನಾ ಪ್ರೀತಿಸ್ತಿದ್ದೇನೆ, ಆಕೆ ಹೊಸದಾಗಿ ಜಾಯಿನ್ ಆದವನನ್ನು ಲವ್ ಮಾಡ್ತಿದ್ದಾಳೆ, ಏನ್ಮಾಡ್ಲಿ ?
ಕಂಫರ್ಟ್ ಝೋನ್‌ನಿಂದ ಹೊರಬನ್ನಿ: ಮುಖ್ಯವಾಗಿ ನೀವೀಗ ನಾನು, ಮನೆ, ಕಚೇರಿ ಎಂಬ ಕಂಫರ್ಟ್ ಝೋನ್‌ನಲ್ಲಿದ್ದೀರಿ. ಅದರಿಂದಾಚೆಗೆ ನೀವು ಹೋಗ ಬಯಸುತ್ತಿಲ್ಲ. ಹೀಗಾಗಿಯೇ ನಿಮಗೆ ಇಂಥಾ ಪಾರ್ಟಿಗಳು ಇಷ್ಟವಾಗುತ್ತಿಲ್ಲ. ಮೊದಲು ಆ ಝೋನ್‌ನಿಂದ ಹೊರಬನ್ನಿ. ಹೊಸ ಪ್ರದೇಶ, ಹೊಸ ಜನರೊಂದಿಗೆ ಬೆರೆಯಲು ಸಿದ್ಧರಾಗಿ. ಮೊದಲಿಗೆ ಅಪರಿಚಿತ ಜನರೊಂದಿಗೆ ಮಾತನಾಡಲು, ಸಂಪರ್ಕ ಬೆಳೆಸಲು ನಿಮಗೆ ಕಷ್ಟವಾಗಬಹುದು. ಆದರೆ ಕ್ರಮೇಣ ಅದು ಸಾಧ್ಯವಾಗುತ್ತದೆ. ಆರಂಭದಲ್ಲಿ ಸಮಾನ ಮನಸ್ಕರೊಂದಿಗೆ ಮಾತನಾಡಿ. ಇದು ಉತ್ತಮ ಸಂವಹನ ನಡೆಸಲು ನೆರವಾಗುತ್ತದೆ. ಆ ನಂತರ ಒಬ್ಬೊಬ್ಬರನ್ನೇ ಪರಿಚಯ ಮಾಡಿಕೊಳ್ಳುತ್ತಾ ಹೋಗಿ. ಕ್ರಮೇಣ ನೀವು ವಾತಾವರಣವನ್ನು ಇಷ್ಟಪಡಲು ತೊಡಗುತ್ತೀರಿ.
ಯಾರು ಏನಂದುಕೊಳ್ಳುತ್ತಾರೋ ಎಂಬುದನ್ನು ಬಿಟ್ಟುಬಿಡಿ: ಜನರು ಸೋಷಿಯಲ್ ಆಗಿ ಮಿಂಗಲ್ ಆಗಲು ಹಿಂಜರಿಯಲು ಮುಖ್ಯ ಕಾರಣ ಯಾರು ಏನು ಅಂದುಕೊಳ್ಳುತ್ತಾರೋ ಅನ್ನೋ ಭಾವನೆ. ಅದನ್ನು ಮನಸ್ಸಿನಿಂದ ತೆಗೆದು ಹಾಕಿ. ಯಾರು ಏನೇನು ಯೋಚಿಸುತ್ತಾರೆ ಎಂಬುದು ಅವರವರಿಗೆ ಬಿಟ್ಟಿದ್ದು ಆ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಅವರು ನಿಮ್ಮ ಜೀವನದ ಭಾಗವಲ್ಲ. ಅವರ ಜೀವನ (Life) ಬೇರೆಯೇ ಇದೆ. ಹೀಗಾಗಿ ನೀವು ಅಂಥವರ ಮಾತಿನ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ನೀವು ನೀವಾಗಿಯೇ ಇದ್ದು, ಪಾರ್ಟಿಯನ್ನು ಎಂಜಾಯ್ ಮಾಡಿ.
ಸಮಾನ ಮನಸ್ಕರನ್ನು ಹುಡುಕಿಕೊಳ್ಳಿ: ಪಾರ್ಟಿಯಲ್ಲಿ ವ್ಯತ್ಯಸ್ಥ ಮನಸ್ಥಿತಿಯ ಜನರು ಬರುವ ಕಾರಣ ನೀವು ಪಾರ್ಟಿಯಲ್ಲಿ ಭಾಗಿಯಾಗಲು ಹಿಂಜರಿಯುತ್ತಿರಬಹುದು. ಡ್ರಿಂಕ್ಸ್ ಮಾಡುವವರು, ಡ್ಯಾನ್ಸ್ ಮಾಡುವವರು ಹೀಗೆ ಎಲ್ಲಾ ರೀತಿಯ ಅಭಿರುಚಿಯನ್ನು ಹೊಂದಿರುವವರು ಅಲ್ಲಿರುತ್ತಾರೆ. ಆದ್ರೆ ನಿಮಗೆ ಅದರಲ್ಲಿ ಆಸಕ್ತಿಯಿಲ್ಲವಾದಲ್ಲಿ ನಿಮ್ಮಂಥಹಾ ಸ್ವಭಾವ ಇರುವವರನ್ನೇ ಹುಡುಕಿಕೊಳ್ಳಿ. ಸಮಾನ ಮನಸ್ಕರೊಂದಿಗೆ ನೀವು ಸುಲಭವಾಗಿ ಕನೆಕ್ಟ್ ಆಗುತ್ತೀರಿ. ಪಾರ್ಟಿಯ ಬಗ್ಗೆ ಹೆಚ್ಚು ಆಸಕ್ತಿ ತಾಳುತ್ತೀರಿ.
ಗೆಳತಿ ಇನ್ನೊಬ್ಬನನ್ನು ಮದ್ವೆಯಾಗ್ತಿದ್ದಾಳೆ, ಮೂವ್ ಆನ್ ಆಗೋಕಾಗ್ತಿಲ್ಲ ಏನ್ಮಾಡ್ಲಿ ?
ಪಾರ್ಟಿಯಲ್ಲಿ ಭಾಗವಹಿಸಲು ನಿಯಮಗಳಿಲ್ಲ: ಪಾರ್ಟಿಯಲ್ಲಿ ಭಾಗವಹಿಸುವವರು ಡ್ರಿಂಕ್ಸ್ ಮಾಡಲೇಬೇಕು, ಡ್ಯಾನ್ಸ್ ಮಾಡಲೇಬೇಕು ಎಂಬ ನಿಯಮಗಳೇನಿಲ್ಲ. ಅಲ್ಲಿಗೆ ಹೋಗುವವರು ಹಾಗೇ ಮಾಡುತ್ತಾರೆ ಅಷ್ಟೆ. ನಿಮಗೆ ಇಂಥಾ ಅಭ್ಯಾಸಗಳು ರೂಢಿಯಿಲ್ಲವೆಂಬ ಕಾರಣಕ್ಕೆ ಪಾರ್ಟಿಯಿಂದ ದೂರವಿರಬೇಕಿಲ್ಲ. ಪಾರ್ಟಿಗೆ ಹೋಗಿ ನೀವು ಫುಡ್ ಎಂಜಾಯ್ ಮಾಡುತ್ತಾ, ಮಾತನಾಡುತ್ತಲೂ ಸಮಯ ಕಳೆಯಬಹುದು.
ನಿಮ್ಮನ್ನು ನೀವು ಇಂಪ್ರೂವ್ ಮಾಡಿಕೊಳ್ಳುವುದು ಮುಖ್ಯ: ವ್ಯಕ್ತಿತ್ವ ರೂಪೀಕರಣಕ್ಕೆ ಅತಿ ಮುಖ್ಯವಾದ ವಿಚಾರವೆಂದರೆ ನಮ್ಮನ್ನು ನಾವು ಇಂಪ್ರೂವ್ ಮಾಡಿಕೊಳ್ಳುವುದು ಮುಖ್ಯ. ಮನುಷ್ಯ ಎಂದರೆ ಸಾಮಾಜಿಕ ಜೀವಿ. ಎಲ್ಲರೊಂದಿಗೂ ಬೆರೆತು ಜೀವನ ನಡೆಸಬೇಕಾಗುತ್ತದೆ. ಸೋಷಿಯಲ್ ಆಗಿ ಮಿಂಗಲ್ ಆದಾಗಲೇ ಮನುಷ್ಯನ ಬದುಕು ಅರ್ಥಪೂರ್ಣವೆನಿಸುತ್ತದೆ. ಜಂಜಡದ ಬದುಕಿನ ಒತ್ತಡವನ್ನು ತೊಡೆದು ಹಾಕಿ ರಿಲ್ಯಾಕ್ಸ್ ಆಗಿರಲು ಸಾಧ್ಯವಾಗುತ್ತದೆ. ಹೀಗಾಗಿ ನಿಮ್ಮಿಂದ ಯಾವುದು ಸಾಧ್ಯವಾಗುತ್ತಿಲ್ಲವೋ ಅದನ್ನು ಸಾಧಿಸುವ ಮೂಲಕ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ.
ಸೂಚನೆ: ನೀವು ಎಲ್ಲರೊಂದಿಗೆ ಹಂಚಿಕೊಳ್ಳಲು ಬಯಸುವ ಯಾವುದೇ ಸಂಬಂಧ ಸಂಬಂಧಿತ ಕಥೆ, ಸಮಸ್ಯೆಯನ್ನು ಹೊಂದಿದ್ದರೆ, ನೀವು ಅದನ್ನು digitalblr@suvarnanews.inಗೆ ಕಳುಹಿಸಬಹುದು. ನಿಮ್ಮ ಹೆಸರನ್ನು ಗೌಪ್ಯವಾಗಿ ಇಡಲಾಗುವುದು
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.