ಹೆಂಡ್ತಿ ಸ್ನೇಹಿತೆಯನ್ನೇ ಮದುವೆಯಾದ ಗಂಡ, ಇದು ಪತ್ನಿಯ ಮಹದಾಸೆಯಂತೆ !

By Vinutha Perla  |  First Published Feb 16, 2023, 2:39 PM IST

ಗಂಡ ಇನ್ನೊಬ್ಬನ ಜೊತೆ ಮಾತನಾಡ್ತಾ ಇದ್ರೇನೆ ಸಾಕು ಹೆಂಡ್ತಿಯ ಮುಖ ಕೆಂಪಗಾಗುತ್ತೆ. ಮತ್ತೊಬ್ಬಳ ಜೊತೆ ಸಂಬಂಧ ಇದೇಂತ ಗೊತ್ತಾದ್ರೆ ಮನೆ ರಣಾಂಗಣಾನೇ ಆಗಿಬಿಇಡುತ್ತೆ. ಆದ್ರೆ ಇದೆಲ್ಲಕ್ಕಿಂತ ತದ್ವಿರುದ್ಧವಾಗಿ ಇಲ್ಲೊಬ್ಬಾಕೆ ತನ್ನ ಗಂಡನಿಗೆ ಎರಡನೇ ಮದ್ವೆ ಮಾಡಿಸಿದ್ದಾಳೆ. ಅಚ್ಚರಿ ಎನಿಸಿದರೂ ಇದು ಸದ್ಯ.


ದಾಂಪತ್ಯ ಅನ್ನೋದು ಸುಂದರವಾದ ಸಂಬಂಧ. ಇಲ್ಲಿ ಗಂಡ-ಹೆಂಡತಿ ಇಬ್ಬರೂ ಅನುಸರಿಸಿಕೊಂಡು ಜೀವನ ನಡೆಸಬೇಕು. ಇನ್ನೊಬ್ಬರ ಜೊತೆ ಯಾರಾದರೂ ಸಂಬಂಧ ಇಟ್ಟುಕೊಂಡರೆ ದಾಂಪತ್ಯ ಅಲ್ಲಿಗೇ ಮುಕ್ತಾಯವಾಯಿತು ಎಂದೇ ಅರ್ಥ. ಹೀಗಾಗಿಯೇ ಗಂಡ ಇನ್ನೊಬ್ಬನ ಜೊತೆ ಮಾತನಾಡ್ತಾ ಇದ್ರೇನೆ ಸಾಕು ಹೆಂಡ್ತಿಯ ಮುಖ ಕೆಂಪಗಾಗುತ್ತೆ. ಮತ್ತೊಬ್ಬಳ ಜೊತೆ ಸಂಬಂಧ ಇದೇಂತ ಗೊತ್ತಾದ್ರೆ ಮನೆ ರಣಾಂಗಣಾನೇ ಆಗಿಬಿಇಡುತ್ತೆ. ಆದ್ರೆ ಇದೆಲ್ಲಕ್ಕಿಂತ ತದ್ವಿರುದ್ಧವಾಗಿ ಇಲ್ಲೊಬ್ಬಾಕೆ ತನ್ನ ಗಂಡನಿಗೆ ಎರಡನೇ ಮದ್ವೆ ಮಾಡಿಸಿದ್ದಾಳೆ. ನವದೆಹಲಿಯಲ್ಲಿ ಈ ಘಟನೆ ನಡೆದಿದೆ. ಗಂಡ, ಹೆಂಡ್ತಿಯ ಆಸೆಯಂತೆ ಆಕೆಯ ಸ್ನೇಹಿತಯನ್ನು ಮದುವೆಯಾಗಿದ್ದಾನೆ.

ಪತ್ನಿಯನ್ನು ಸಂತೋಷವಾಗಿ ಇಡಲೆಂದೇ ಆಕೆಯ ಸ್ನೇಹಿತೆಯನ್ನು ಎರಡನೇ ಮದುವೆ (Second marriage) ಆಗಿದ್ದಾಗಿ ಆತ ಹೇಳಿಕೊಂಡಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದ್ದು, ಮೂವರ ನಡುವೆ ನಡೆದಿರುವ ಸಂಭಾಷಣೆ ನೆಟ್ಟಿಗರ ಗಮನ ಸೆಳೆದಿದೆ. ಗಂಡ, ಹೆಂಡತಿ ಮತ್ತು ಸ್ನೇಹಿತೆಯ (Friend) ಈ ವೀಡಿಯೋ ಇಲ್ಲಿಯವರೆಗೆ 10 ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಹೆಚ್ಚಿನ ಲೈಕ್ಸ್‌ ಪಡೆದುಕೊಂಡಿದೆ.

Tap to resize

Latest Videos

ಹೀಗೆಲ್ಲಾ ಮಾಡಿದ್ರೆ ಹೇಗೆ ಸಾರ್‌..ಮೊದಲ ಪತ್ನಿ ಇರುವಾಗ್ಲೇ ಶಾಲೆಯಲ್ಲೇ ಶಿಕ್ಷಕನ ಮರುಮದುವೆ!

ಗಂಡ, ತನ್ನ ಸ್ನೇಹಿತೆಯನ್ನು ಮದ್ವೆಯಾಗ್ಬೇಕು ಅನ್ನೋದೆ ಆಕೆಯ ಆಸೆ
ಹೌದು, ಮಹಿಳೆಯೊಬ್ಬಳು (Women) ತನ್ನ ಗಂಡನಿಗೆ ತನ್ನ ಸ್ನೇಹಿತೆಯ ಜೊತೆ ಎರಡನೇ ಮದುವೆ (Marriage) ಮಾಡಿಸಿದ್ದಾಳೆ. ಸೆಲ್ಫಿ ವಿಡಿಯೋ ರೆಕಾರ್ಡ್​ ಮಾಡಿರುವ ವ್ಯಕ್ತಿ ಮೊದಲು ತನ್ನ ಹಿಂದಿರುವ ಮೊದಲ ಪತ್ನಿಯ ಪರಿಚಯ ಮಾಡುತ್ತಾನೆ. ಈಕೆ ನನ್ನ ಪತ್ನಿ ಎಂದು ಪರಿಚಯಿಸಿದ ಬಳಿಕ ನಿನ್ನ ಬಯಕೆ ಏನು ಎಂದು ಪತ್ನಿ (Wife)ಯನ್ನು ಪ್ರಶ್ನಿಸುತ್ತಾನೆ. ಇದಕ್ಕೆ ಉತ್ತರಿಸುವ ಪತ್ನಿ ನನ್ನ ಫ್ರೆಂಡ್​ ಜೊತೆ ನಾನು ಹೆಚ್ಚಿಗೆ ಸಮಯ ಕಳೆಯಬೇಕೆಂದು ಕೇಳುತ್ತಾಳೆ. ಇದಕ್ಕೆ ಮರು ಪ್ರಶ್ನಿಸುವ ಗಂಡ ನಿನ್ನ ಸಮಸ್ಯೆಯನ್ನು ನಾನು ಬಗೆಹರಿಸಿದ್ದೇನೆಯೇ? ಎನ್ನುತ್ತಾನೆ. ಅದಕ್ಕೆ ಪತ್ನಿ ಹೌದು, ನೀನು ಪರಿಹರಿಸಿದ್ದೀಯ ಎನ್ನುತ್ತಾಳೆ. ಇದಾದ ಬಳಿಕ ಆ ವ್ಯಕ್ತಿ ತನ್ನ ಕ್ಯಾಮೆರಾವನ್ನು ತನ್ನ ಪಕ್ಕದಲ್ಲಿ ಕುಳಿತಿರುವ ಮತ್ತೊಂದು ಮಹಿಳೆಯ ಬಳಿ ತಿರುಗಿಸುತ್ತಾನೆ. ಇವಳೇ ನನ್ನ ಎರಡನೇ ಪತ್ನಿ. ಹೆಸರು ಸಕಿನಾತ್​. ನನ್ನ ಮೊದಲ ಪತ್ನಿಯ ಸ್ನೇಹಿತೆ ಎಂದು ಪರಿಚಯಿಸುತ್ತಾನೆ. 

ಈ ವೇಳೆ ಮೊದಲ ಪತ್ನಿ ಜವಿಮ್​ ಅದು ನಾನಲ್ಲ ಎಂದು ಹೇಳಿದಾಗ ಸುಮ್ಮನೇ ಇರವಂತೆ ಕೊಂಚ ಧ್ವನಿಯೇರಿಸುತ್ತಾನೆ. ಕೊನೆಗೆ ಕ್ಯಾಮೆರಾವನ್ನು ಎರಡನೇ ಪತ್ನಿಯ ಕಡೆ ತಿರುಗಿಸಿ, ನನ್ನ ಕುಟುಂಬಕ್ಕೆ ಸ್ವಾಗತ ಸಕಿನಾತ್​ ಎಂದು ಹೇಳುತ್ತಾನೆ. ಈ ವೇಳೆ ಎರಡನೇ ಪತ್ನಿ ನಾಚಿಕೊಳ್ಳುತ್ತಾಳೆ. ಬಳಿಕ ಗುಡ್​ಬೈ ಹೇಳುವ ಮೂಲಕ ವಿಡಿಯೋ ಕೊನೆಯಾಗುತ್ತದೆ. ಈ ವಿಡಿಯೋವನ್ನು ಘರ್​ ಕೆ ಕಲೇಶ್​ ಹೆಸರಿನ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಲಾಗಿದೆ.

ಇದೆಂಥಾ ವಿಚಿತ್ರ, ಈ ದೇಶದಲ್ಲಿ ಮಹಿಳೆಯರು ಗಂಡನನ್ನು ಎಕ್ಸ್‌ಚೇಂಜ್ ಮಾಡಿಕೊಳ್ಬೋದು!

ಇಂಟರ್‌ನೆಟ್‌ನಲ್ಲಿ ವೈರಲ್ ಆಗಿರೋ ವೀಡಿಯೋಗೆ ಜನರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಪವಿತ್ರವಾದ ಮದುವೆ ಸಂಸ್ಕೃತಿಯನ್ನು ಈ ರೀತಿ ಹಾಳು ಮಾಡಲಾಗುತ್ತಿದೆ ಎಂದು ದೂರಿದ್ದಾರೆ. ಇನ್ನು ಕೆಲವರು ವಿಚ್ಛೇದನ ಪಡೆಯದೆ ಇನ್ನೊಂದು ಮದುವೆಯಾಗಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ವಿಡಿಯೋ ಅಸಲಿಯತ್ತೇನು ಎಂಬುದು ದೃಢವಾಗಿಲ್ಲ. ವಿಡಿಯೋ ಮಾತ್ರ ಎಲ್ಲರ ಗಮನ ಸೆಳೆದಿದೆ. ಕೆಲವರು ತಮಾಷೆಯ ಕಾಮೆಂಟ್‌ಗಳನ್ನು ಮಾಡಿದರೆ, ಇನ್ನು ಕೆಲವರು ಮೊದಲ ಹೆಂಡತಿಯನ್ನು ಈ ರೀತಿ ನಡೆಸಿಕೊಳ್ಳುವುದಕ್ಕಾಗಿ ಮತ್ತು ಅವಳನ್ನು ಮೋಸಗೊಳಿಸಿದ್ದಕ್ಕಾಗಿ ಆತನನ್ನು ನಿಂದಿಸಿದ್ದಾರೆ. 

Cute kalesh B/w Husband,Wife and her Friend pic.twitter.com/rnC92kiGpw

— Ghar Ke Kalesh (@gharkekalesh)
click me!