ಇದೆಂಥಾ ವಿಚಿತ್ರ, ಈ ದೇಶದಲ್ಲಿ ಮಹಿಳೆಯರು ಗಂಡನನ್ನು ಎಕ್ಸ್‌ಚೇಂಜ್ ಮಾಡಿಕೊಳ್ಬೋದು!

By Vinutha Perla  |  First Published Feb 16, 2023, 10:22 AM IST

ಜಗತ್ತಿನ ಹಲವೆಡೆ ಹಲವು ವಿಚಿತ್ರ ವಿವಾಹ ಪದ್ಧತಿಗಳಿದ್ದು, ಇಂದಿಗೂ ಅದನ್ನು ಅನುಸರಿಸಲಾಗುತ್ತಿದೆ. ಇಲ್ಲೊಂದೆಡೆ ಮಹಿಳೆಯರು ಅಪರಿಚಿತರೊಂದಿಗೆ ಲೈಂಗಿಕ ಸಂಬಂಧ ಹೊಂದೋದು ಸಹ ತಪ್ಪಲ್ಲ. ಅಷ್ಟೇ ಯಾಕೆ, ಈ ದೇಶದಲ್ಲಿ ಮಹಿಳೆಯರು ಗಂಡನನ್ನು ಎಕ್ಸ್‌ಚೇಂಜ್ ಸಹ ಮಾಡಿಕೊಳ್ಬೋದು.


ಜಗತ್ತಿನ ನಾನಾ ದೇಶಗಳಲ್ಲಿ ಜನರು, ಭಾಷೆ, ಆಚಾರ-ವಿಚಾರ ಎಲ್ಲದರದಲ್ಲೂ ವ್ಯತಸ್ಥತೆಯನ್ನು ಕಾಣಬಹುದು. ಆಚರಣೆ, ಆಹಾರ, ಉಡುಗೆ-ತೊಡುಗೆ, ಭಾಷೆ ಎಲ್ಲದರಲ್ಲೂ ವಿಭಿನ್ನತೆಯನ್ನು ಕಾಣಬಹುದು. ಮದುವೆ ಸಂಪ್ರದಾಯದಲ್ಲಿಯೂ ಈ ವ್ಯತ್ಯಾಸವನ್ನು ಗುರುತಿಸಬಹುದು. ಜಗತ್ತಿನ ಹಲವೆಡೆ ವಿವಿಧ ಜಾತಿಗಳು ಮತ್ತು ಬುಡಕಟ್ಟುಗಳು ಇರುವುದರಿಂದ ಅವರ ಸಂಪ್ರದಾಯಗಳು ಸಹ ವಿಭಿನ್ನವಾಗಿವೆ. ಜಗತ್ತಿನ ಮೂಲೆ ಮೂಲೆಯಲ್ಲೂ ಹಲವು ವಿಚಿತ್ರ ವಿವಾಹ ಪದ್ಧತಿಗಳಿದ್ದು, ಇಂದಿಗೂ ಅದನ್ನು ಅನುಸರಿಸಲಾಗುತ್ತಿದೆ. ಕೆಲವೊಂದೆಡೆ ಎಲ್ಲಾ ಸಹೋದರರು ಒಂದೇ ಹುಡುಗಿಯನ್ನು ಮದುವೆಯಾಗುತ್ತಾರೆ, ಇನ್ನೊಂದೆಡೆ ತಾಯಿಯ ಚಿಕ್ಕಪ್ಪ-ಸೊಸೆಯ ವಿವಾಹವನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಜಗತ್ತಿನ ಹಲವೆಡೆ ಇರೋ ಇಂಥಾ ವಿಶಿಷ್ಟ ವಿವಾಹ ಪದ್ಧತಿಗಳು ಮತ್ತು ಆಚರಣೆಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

ಅಪರಿಚಿತರೊಂದಿಗೆ ಸಂಬಂಧ ಹೊಂದಲು ಮಹಿಳೆಯರಿಗೆ ಅವಕಾಶ
ಜಗತ್ತಿನ ಹಲವೆಡೆ ಜೀವನಶೈಲಿ (Lifestyle) ಮತ್ತು ಸಂಸ್ಕೃತಿಯು ವಿಭಿನ್ನವಾಗಿದೆ. ಇಲ್ಲೊಂದೆಡೆ ಮಹಿಳೆಯರಿಗೆ (Women) ಅಪರಿಚಿತರೊಂದಿಗೆ ಸಂಬಂಧ (Relationship) ಹೊಂದಲು ಸ್ವಾತಂತ್ರ್ಯವಿದೆ. ಈ ಸ್ಥಳವನ್ನು 'ಐಲ್ಯಾಂಡ್ ಆಫ್ ಲವ್' ಎಂದು ಕರೆಯಲಾಗುತ್ತದೆ. ಇಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಸಮಾನ ಹಕ್ಕುಗಳಿವೆ. ಕಾಡಿನಲ್ಲಿ ನೆಮ್ಮದಿಯ ಜೀವನ ನಡೆಸುತ್ತಿರುವ ಇಲ್ಲಿನ ಮಹಿಳೆಯರು ಯಾವ ಸಮಯದಲ್ಲಾದರೂ ಅಪರಿಚಿತರೊಂದಿಗೆ ದೈಹಿಕ ಸಂಬಂಧ (Physical relationship) ಹೊಂದಬಹುದು. ತನಗೆ ಬೇಕಾದಾಗ ಗಂಡನನ್ನು ಸಹ ಬದಲಾಯಿಸಿಕೊಳ್ಳಬಹುದು.

Tap to resize

Latest Videos

Transgender Marriage: ಕೇರಳದಲ್ಲಿ ಪ್ರೇಮಿಗಳ ದಿನದಂದೇ ತೃತೀಯ ಲಿಂಗಿ ಜೋಡಿಯ ಮದುವೆ

ವಿಚಿತ್ರ ಪದ್ಧತಿ ಇರೋದು ಯಾವ ದೇಶದಲ್ಲಿ ?
ಇಂಡೋನೇಷ್ಯಾ ಸಮೀಪವಿರುವ ನ್ಯೂ ಗಿನಿಯಾದಲ್ಲಿ ಟ್ರೋಬ್ರಿಯಾಂಡ್ ಎಂಬ ಮೂಲನಿವಾಸಿಗಳು ವಾಸಿಸುತ್ತಾರೆ. ಸುಂದರವಾದ ದ್ವೀಪದಲ್ಲಿ ವಾಸಿಸುವ ಈ ಬುಡಕಟ್ಟು ಸಮುದಾಯದ ಜೀವನಶೈಲಿ ವಿಭಿನ್ನವಾಗಿದೆ. ಈಗಲೂ ಅವರು ಸಾಂಪ್ರದಾಯಿಕ ರೀತಿಯಲ್ಲಿ ಬದುಕುತ್ತಿದ್ದಾರೆ. ಇಲ್ಲಿ ಜನರು ಬಟ್ಟೆ ಇಲ್ಲದೆ ವಾಸಿಸುತ್ತಿದ್ದಾರೆ. ಅಷ್ಟೇ ಅಲ್ಲ, ಇಲ್ಲಿಯ ಹೆಂಗಸರಿಗೆ ನಾವು ಮತ್ತು ನೀವು ಊಹಿಸಲೂ ಸಾಧ್ಯವಾಗದಷ್ಟು ಸ್ವಾತಂತ್ರ್ಯವಿದೆ. ಟ್ರೋಬಿಯನ್ ಜಾತಿಯ ಮಹಿಳೆಯರು ಯಾರೊಂದಿಗಾದರೂ ದೈಹಿಕ ಸಂಬಂಧವನ್ನು ಹೊಂದಲು ಸ್ವತಂತ್ರರು.

ಮಾತ್ರವಲ್ಲ ಅವಳು ಅನೇಕ ಪುರುಷ (Men)ರೊಂದಿಗೆ ಸಂಬಂಧವನ್ನು ಹೊಂದಬಹುದು. ಅದನ್ನು ತಪ್ಪಾಗಿ ಅರ್ಥೈಸಲಾಗಿಲ್ಲ. ಈ ನಿಯಮವು ವಿವಾಹಿತ ಮತ್ತು ಅವಿವಾಹಿತ ಹುಡುಗಿಯರಿಗೆ ಅನ್ವಯಿಸುತ್ತದೆ. ಅವಳು ಸಂಪೂರ್ಣವಾಗಿ ಸ್ವತಂತ್ರ ಜೀವನವನ್ನು ನಡೆಸುತ್ತಾಳೆ. ಪುರುಷರಿಗೆ ಒಳ್ಳೆಯದು ಅಥವಾ ಕೆಟ್ಟದ್ದನ್ನು ಹೇಳುವ ಸ್ವಾತಂತ್ರ್ಯವೂ ಇದೆ.

ಗಂಡನನ್ನು ಬದಲಾಯಿಸಿಕೊಳ್ಳಲು ಅವಕಾಶ
ಮಹಿಳೆಗೆ ತನ್ನ ಗಂಡನೊಂದಿಗೆ ಹೊಂದಿಕೆಯಾಗದಿದ್ದರೆ ಅಥವಾ ಅವನು ಚೆನ್ನಾಗಿರದಿದ್ದರೆ, ಅವಳು ಅವನನ್ನು ಬದಲಾಯಿಸಬಹುದು. ಅವನಿಂದ ಬೇರ್ಪಟ್ಟ ನಂತರ, ಅವಳು ಇನ್ನೊಬ್ಬ ಪಾಲುದಾರನನ್ನು ಆಯ್ಕೆ ಮಾಡಬಹುದ. ಪುರುಷರಿಗೂ ಈ ಸ್ವಾತಂತ್ರ್ಯ ಸಿಕ್ಕಿದೆ. ನಂತರ ಅವರು ಇತರ ಮಹಿಳೆಯರೊಂದಿಗೆ ಸಂಬಂಧವನ್ನು ಮಾಡಬಹುದು. ಹೆಣ್ಣುಮಕ್ಕಳು ಮದುವೆಗೂ (Marriage) ಮುನ್ನ ದೈಹಿಕ ಸಂಬಂಧ ಹೊಂದಲು ಅವಕಾಶವಿದೆ. ಮದುವೆಯ ನಂತರ ಕನ್ಯತ್ವವನ್ನು ಮುರಿಯುವ ಪರಿಕಲ್ಪನೆ ಇಲ್ಲ. ಕನ್ಯೆಯರಿಗಾಗಿ, ಮನೆಯ ಹೊರಗೆ ಪ್ರತ್ಯೇಕ ರೀತಿಯ ಗುಡಿಸಲು ತಯಾರಿಸಲಾಗುತ್ತದೆ, ಇದನ್ನು ಬುಕುಮಾತುಲಾ ಎಂದು ಕರೆಯಲಾಗುತ್ತದೆ. ಇಲ್ಲಿ ಹುಡುಗಿಯರು ತಮ್ಮ ಪ್ರೇಮಿಯೊಂದಿಗೆ ಸಮಯ ಕಳೆಯಬಹುದು.

ಬರ್ತಾ ಇದೆ ಗಂಡಸರಿಗೂ ಗರ್ಭ ನಿರೋಧಕ ಮಾತ್ರೆ! ಯಾವಾಗ ತಗೋಬೇಕು, ಹೇಗೆ ಕೆಲಸ ಮಾಡುತ್ತೆ?

ಹೆಂಗಸರು ಯಮೋತ್ಸವದಲ್ಲಿ ಈ ಕೆಲಸವನ್ನು ಮಾಡುತ್ತಾರೆ
ಈ ಸಮುದಾಯದಲ್ಲಿ ಯಾಮ್ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಹೆಂಗಸರು ಪೊದೆಗಳಲ್ಲಿ ಕುಳಿತು ಗಂಡಸರು ಹಾದು ಹೋಗುವುದನ್ನು ಕಾಯುತ್ತಾರೆ. ಯಾರನ್ನು ಇಷ್ಟ ಪಡುತ್ತಾರೋ ಅವರನ್ನು ತಮ್ಮ ಬಳಿಗೆ ಕರೆದು ದೈಹಿಕ ಸಂಬಂಧ ಬೆಳೆಸುತ್ತಾರೆ. ಈ ಸಮುದಾಯದ ಜನರು ಬದುಕಲು ಕಾಡಿನಲ್ಲಿ ಸಿಗುವ ಹಣ್ಣು, ತರಕಾರಿ, ಪ್ರಾಣಿಗಳನ್ನು ಅವಲಂಬಿಸಿದ್ದಾರೆ. ಅಲ್ಲಿ ಪುರುಷರು ಸಣ್ಣ ಪ್ರಾಣಿಗಳನ್ನು ಬೇಟೆಯಾಡುತ್ತಾರೆ. ಆದರೆ, ಮಹಿಳೆಯರು ಅಣಬೆಗಳು, ಹಣ್ಣುಗಳು ಮತ್ತು ತರಕಾರಿಗಳನ್ನು ಸಂಗ್ರಹಿಸುತ್ತಾರೆ.

click me!