ಬ್ರೇಕ್ ಅಪ್ ನಂತ್ರ ದುಃಖದಲ್ಲಿ ಜನರ ಮುಖ ಕಳೆಗುಂದೋದನ್ನು ನೀವು ನೋಡಿರ್ತೀರಿ. ಆದ್ರೆ ಈ ವ್ಯಕ್ತಿ ಸ್ವಲ್ಪ ಡಿಫರೆಂಟ್. ಒತ್ತಡದ ರಿಲೇಶನ್ಶಿಪ್ ನಿಂದ ಹೊರ ಬಂದ ಫುಲ್ ಚೇಂಜ್ ಆಗಿದ್ದಾನೆ.
ಮನುಷ್ಯನಿಗೆ ಜೀವನದಲ್ಲಿ ನೆಮ್ಮದಿ ಬೇಕು. ತುಂಬಾ ದಿನದ ನಂತ್ರ ಒಬ್ಬ ವ್ಯಕ್ತಿ ನಿಮ್ಮ ಮುಂದೆ ಬಂದಾಗ, ಆತನ ಮುಖ ನೋಡಿಯೇ ನೀವು ಆತ ಖುಷಿಯಾಗಿದ್ದಾನಾ, ಇಲ್ವಾ ಅನ್ನೋದನ್ನು ಹೇಳಿರ್ತೀರಿ. ವ್ಯಕ್ತಿ ಖುಷಿಯಾಗಿರೋದು ಆತನ ಮುಖದಲ್ಲಿ ಸ್ಪಷ್ಟವಾಗಿ ಕಾಣಿಸುತ್ತೆ. ದುಃಖದಲ್ಲಿದ್ರೆ, ಒತ್ತಡದಲ್ಲಿದ್ರೆ ಕೂಡ ಅದನ್ನು ನಾವು ಪತ್ತೆ ಮಾಡ್ಬಹುದು. ಪ್ರೀತಿಸಿದ ವ್ಯಕ್ತಿಗಳು ತುಂಬಾ ಆಕರ್ಷಕವಾಗಿ ಕಾಣ್ತಾರೆ. ಮನೆಯಲ್ಲಿ ನೆಮ್ಮದಿ ಇದ್ದಾಗ ನಿಮ್ಮ ಬಾಸ್ ಮುಖದಲ್ಲೊಂದು ನಗುವಿರುತ್ತದೆ. ಅದೇ ದಾಂಪತ್ಯ ಹಳಸಿದಾಗ, ಮನೆಯಲ್ಲಿ ಸದಾ ಜಗಳವಿದ್ದಾಗ ಮುಖದ ಮೇಲೋಂದು ನೋವಿನ ಗೆರೆ ಮೂಡೋದಲ್ಲದೆ ಅದು ಎಷ್ಟೋ ಬಾರಿ ಕೋಪವಾಗಿ ಬದಲಾಗಿರುತ್ತೆ.
ಲವ್ (Love) ಮಾಡ್ತಿರೋ ಹುಡುಗ್ರು, ಹುಡುಗಿ ಮುಂದೆ ಚೆಂದ ಕಾಣಲಿ ಅಂತ ಏನೇನೋ ಕಸರತ್ತು ಮಾಡ್ತಾರೆ. ಅಬ್ಬಬ್ಬ ಅಂದ್ರೆ ಒಂದು ವರ್ಷದವರೆಗೆ ಈ ಕಸರತ್ತು ನಡೆದಿರುತ್ತೆ. ನಿಧಾನವಾಗಿ ಇಬ್ಬರ ಸ್ವಭಾವ (Nature) ಅರಿವಿಗೆ ಬರ್ತಿದ್ದಂತೆ ಅಲ್ಲಿ ಅಲಂಕಾರ, ಅಂದಕ್ಕೆ ಜಾಗ ಇರೋದಿಲ್ಲ. ಪ್ರೀತಿ, ಗೌರವ ಮಹತ್ವ ಪಡೆಯಲು ಶುರುವಾಗುತ್ತೆ. ಹೊಂದಾಣಿಗೆ ಮುಖ್ಯವಾಗುತ್ತೆ. ಇಬ್ಬರ ಮಧ್ಯೆ ಹೊಂದಾಣಿಕೆ ಮುಂದುವರೆದ್ರೆ ಬಾಳು ಸುಂದರ. ಅದೇ ಹೊಂದಾಣಿಕೆಗೆ ಒದ್ದಾಟ ಶುರುವಾದ್ರೆ ಬಾಳು ನರಕ. ಪ್ರೀತಿಯ ಆರಂಭದಲ್ಲಿ ಸುಂದರವಾಗಿದ್ದ ವ್ಯಕ್ತಿ, ಸಂಬಂಧದ ಒತ್ತಡ ನಿಭಾಯಿಸ್ತಾ ಮುದುಕನಾಗ್ತಾನೆ. ಸಂಬಂಧ ಟೆನ್ಷನ್ (Tension) ಆಗಿ ಬದಲಾಗುತ್ತೆ. ಇದಕ್ಕೆ ಈ ವ್ಯಕ್ತಿ ಉತ್ತಮ ನಿದರ್ಶನ.
[22] vs [23] Post-breakup glowup
byu/ShadyPotDealer inGlowUps
ಧಿಡೀರನೇ ಸುದ್ದಿಗೋಷ್ಠಿ ಕರೆದ ಚಂದನ್ ಶೆಟ್ಟಿ ನಿವೇದಿತಾ ಗೌಡ; ಏನಿರಬಹುದು ಅರ್ಜೆಂಟ್?
ಸಾಮಾನ್ಯವಾಗಿ ಸಂಬಂಧದಲ್ಲಿ ಸಮಸ್ಯೆ ಶುರುವಾದಾಗ ಒತ್ತಡಕ್ಕೆ ಒಳಗಾಗುವ ಜನರು ಬೇರೆಯಾಗುವ ನಿರ್ಧಾರಕ್ಕೆ ಬರ್ತಾರೆ. ಈ ಬ್ರೇಕ್ ಅಪ್ ಕೆಲವರಿಗೆ ನೆಮ್ಮದಿ ನೀಡಿದ್ರೆ ಮತ್ತೆ ಕೆಲವರಿಗೆ ನೋವು ನೀಡುತ್ತೆ. ಬ್ರೇಕ್ ಅಪ್ ನಂತ್ರ ಕೆಲವರ ಮುಖ ಸೆಪ್ಪೆಯಾದ್ರೆ, ಮನಸ್ಸು ನೋವಿನಿಂದ ಕೂಡಿದ್ರೆ ಈತ ಸಂಪೂರ್ಣ ಉಲ್ಟಾ. ಬ್ರೇಕ್ ಅಪ್ ನಂತ್ರ ಈತನ ಮುಖದಲ್ಲೊಂದು ಚಾರ್ಮ್ ಬಂದಿದೆ. ಹಿಂದೆ ವಯಸ್ಸಾದಂತೆ ಕಾಣ್ತಿದ್ದ ವ್ಯಕ್ತಿ ಯಂಗ್ ಆಗಿದ್ದಾನೆ.
ಸಾಮಾಜಿಕ ಜಾಲತಾಣ ರೆಡ್ಡಿಟ್ ನಲ್ಲಿ ವ್ಯಕ್ತಿ ತನ್ನ ಕಥೆಯನ್ನು ಹಂಚಿಕೊಂಡಿದ್ದಾನೆ. ಜೊತೆಗೆ ಒಂದಿಷ್ಟು ಫೋಟೋಗಳನ್ನು ಪೋಸ್ಟ್ ಮಾಡಿದ್ದಾನೆ. ಸಂಬಂಧದಲ್ಲಿ ಇದ್ದಾಗ ಆತ ಹೇಗಿದ್ದ, ಬ್ರೇಕ್ ಅಪ್ ಆದ್ಮೇಲೆ ಹೇಗಾಗಿದ್ದಾನೆ ಎಂಬುದನ್ನು ಫೋಟೋದಲ್ಲಿ ನೋಡ್ಬಹುದು. ಶ್ಯಾಡಿಪಾಟ್ ಡೀಲರ್ ಹೆಸರಿನ ಖಾತೆಯಲ್ಲಿ ಫೋಟೋ ಹಂಚಿಕೊಳ್ಳಲಾಗಿದೆ. ಮೊದಲ ಕೆಲ ಫೋಟೋಗಳು ಸಂಬಂಧದಲ್ಲಿದ್ದಾಗ ಎಂದು ಬರೆದಿದ್ದಾನೆ. ಅದ್ರಲ್ಲಿ ಆತನ ತಲೆ ಕೂದಲು ಉದುರಿರೋದನ್ನು ನೀವು ನೋಡ್ಬಹುದು. ಹಾಗೆಯೇ ಆತನ ವಯಸ್ಸು ಕೂಡ ಹೆಚ್ಚಾದಂತೆ ಕಾಣ್ತಿದೆ. ಆದ್ರೆ ಕೊನೆ ಫೋಟೋದಲ್ಲಿ ಆತ ಸಂಪೂರ್ಣ ಬದಲಾಗಿದ್ದಾನೆ. ಬ್ರೇಕ್ ಅಪ್ ನಂತ್ರದ ಫೋಟೋ ಅದಾಗಿದೆ. ಬ್ರೇಕ್ ಅಪ್ ಆಗಿ ಒಂದು ವರ್ಷದ ನಂತ್ರ ತಾನು ಹೇಗಾಗಿದ್ದೇನೆ ಎಂಬ ಫೋಟೋವನ್ನು ಆತ ಹಂಚಿಕೊಂಡಿದ್ದಾನೆ. ತೂಕ ಇಳಿದಿರೋದಲ್ಲದೆ ಕೊನೆ ಫೋಟೋದಲ್ಲಿ ವ್ಯಕ್ತಿ ಆಕರ್ಷಕವಾಗಿ ಕಾಣ್ತಿದ್ದಾನೆ.
ರೆಡ್ಡಿಟ್ ನಲ್ಲಿ ಈ ಪೋಸ್ಟ್ ಗೆ ಅನೇಕರು ಕಮೆಂಟ್ ಮಾಡಿದ್ದಾರೆ. ಕೊನೆ ಫೋಟೋ ನಮಗೆ ಶಾಕ್ ನೀಡಿದೆ ಎಂದು ಅನೇಕರು ಹೇಳಿದ್ದಾರೆ. ಇದು ಫೋಟೋ ಎಡಿಟ್ ಅಂತ ಮತ್ತೆ ಕೆಲವರು ಅನುಮಾನಿಸಿದ್ದಾರೆ. ಏನೇ ಆಗ್ಲಿ ಬ್ರೇಕ್ ಅಪ್ ಮಾಡ್ಕೊಂಡು ಒಳ್ಳೆ ಕೆಲಸ ಮಾಡಿದ್ದೀರಿ ಅನ್ನೋರ ಸಂಖ್ಯೆ ಕೂಡ ಹೆಚ್ಚಿದೆ.
ಕನ್ನಡ ಚಿತ್ರರಂಗದಲ್ಲಿ ಡಿವೋರ್ಸ್ ಆಗಿರುವ ಸ್ಟಾರ್ ನಟಿಯರು; ಯಾರು 2ನೇ ಮದುವೆ ಆಗಿದ್ದಾರೆ?
ಮಾಜಿ ಹಿಂದೆ ಓಡಿದ್ರಾ ಎಂದು ತಮಾಷೆ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ವ್ಯಕ್ತಿ ಉತ್ತರವನ್ನು ನೀಡಿದ್ದಾನೆ. ಆಕೆ ನನ್ನ ಮೇಲೆ ಆಸಕ್ತಿ ಹೊಂದಿರಲಿಲ್ಲ. ಇದು ನನಗೆ ಬೇಸರವನ್ನುಂಟು ಮಾಡಿತ್ತು. ಹಾಗಾಗಿ ನಾನೇ ಆಕೆಯಿಂದ ದೂರವಾದೆ. ಇದ್ರಲ್ಲಿ ಅವಳ ತಪ್ಪಿಲ್ಲ. ಆದ್ರೆ ಈ ಬ್ರೇಕ್ ಅಪ್ ನನ್ನನ್ನು ಈ ಬದಲಾವಣೆಗೆ ಕಾರಣವಾಯ್ತು ಎಂದಿದ್ದಾರೆ.