ಮಾಡಿಕೊಂಡಿದ್ದು ಕಾನೂನು ಬಾಹಿರವಾಗಿ ಎರಡೆರಡು ಮದುವೆ. ಆದರೆ, ಮಕ್ಕಳು ದೊಡ್ಡವಾರಗುತ್ತಿದ್ದಂತೆ 2ನೇ ಹೆಂಡ್ತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು (ಜೂ.09): ಬಹುಪತ್ನಿತ್ವಕ್ಕೆ ಕಾನೂನಾತ್ಮಕವಾಗಿ ಮಾನ್ಯತೆಯಿಲ್ಲ. ಇದೊಂದು ಅಪರಾಧೀ ಕೃತ್ಯ ಎಂಬುದು ಗೊತ್ತಿದ್ದರೂ ಇಲ್ಲೊಬ್ಬ ವ್ಯಕ್ತಿ ಎರಡು ಮದುವೆ ಮಾಡಿಕೊಂಡಿದ್ದೂ ಅಲ್ಲದೇ, ಮೊದಲ ಹೆಂಡತಿಯೊಂದಿಗೆ ಸೇರಿಕೊಂಡು ಎರಡನೇ ಹೆಂಡತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಈ ಘಟನೆ ಬೆಂಗಳೂರಿನ ಹೊರವಲಯ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ಸುರೇಶ್ ತನ್ನ ಮೊದಲ ಹೆಂಡತಿ ಲಕ್ಷ್ಮೀ ಜೀವಂತವಾಗಿದ್ದಾಗಲೇ 20 ವರ್ಷಗಳ ಹಿಂದೆಯೇ ಸರಸ್ವತಿ ಎನ್ನುವ ಮಹಿಳೆಯನ್ನು 2ನೇ ಮದುವೆಯಾಗಿದ್ದನು. ಆರಂಭದಲ್ಲಿ ಇಬ್ಬರೂ ಹೆಂಡತಿಯರು ಒಂದೇ ಮನೆಯಲ್ಲಿದ್ದರು. ಆದರೆ, ಮೊದಲ ಹೆಂಡತಿಯ ಮಕ್ಕಳು ದೊಡ್ಡವರಾಗುತ್ತಿದ್ದಂತೆ ಮೊದಲ ಹೆಂಡತಿ ಮತ್ತು ಆಕೆಯ ಮಕ್ಕಳು ಸೇರಿಕೊಂಡು 2ನೇ ಹೆಂಡತಿ ಸರಸ್ವತಿಗೆ ಕಾಟ ಕೊಡಲು ಆರಂಭಿಸಿದ್ದಾರೆ. ಇದರಿಂದ ಬೇಸತ್ತ 2ನೇ ಹೆಂಡತಿ ಕಳೆದೊಂದು ವರ್‍ದ ಹಿಂದೆ ಬೇರೊಂದು ಬಾಡಿಗೆ ಮನೆ ಮಾಡಿಕೊಂಡು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾಳೆ.
ಮೊಮ್ಮಗಳ ಬೆತ್ತಲೆ ವಿಡಿಯೋ ತೋರಿಸಿ ಬೆದರಿಕೆ; ಮರ್ಯಾದೆಗೆ ಹೆದರಿ ವಿಷ ಸೇವಿಸಿದ ಕುಟುಂಬ
ಗಂಡ ಸುರೇಶ್, ಹೆಂಡತಿ ಲಕ್ಷ್ಮೀ ಹಾಗೂ ಮಕ್ಕಳು ಸೇರಿಕೊಂಡು 2ನೇ ಹೆಂಡತಿಯ ಮನೆಯ ಬಳಿ ಹೋಗಿ ಆಗಿಂದಾಗ್ಗೆ ಜಗಳ ಮಾಡಿ ಬರುತ್ತಿದ್ದರು. ಆದರೆ, ನಿನ್ನ ತಡರಾತ್ರಿ ಸರಸ್ವತಿ ಮನೆಯ ಬಳಿ ಹೋದ ಗಂಡ ಸುರೇಶ್ ಹೆಂಡತಿ ಲಕ್ಷ್ಮಿ ಸೇರಿ ಎರಡನೇ ಹೆಂಡತಿ ಸರಸ್ವತಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈಗ ಸರಸ್ವತಿಗೆ 40 ವರ್ಷವಾಗಿದ್ದು, ಹಲ್ಲೆಗೆ ಕೌಟುಂಬಿಕ ಸಮಸ್ಯೆಯೇ ಕಾರಣ ಎಂದು ತಿಳಿದುಬಂದಿದೆ. ಇನ್ನು ಹಲ್ಲೆಗೊಳಗಾದ ಸರಸ್ವತಿ ಅವರ ಮೂಗಿನ ಮೂಳೆ ಮುರಿತವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಸಂಬಂಧಪಟ್ಟಂತೆ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.