ಸಾವಿನ ಮನೆಯಲ್ಲಿ ದುಃಖ, ನೋವಿರುತ್ತದೆ. ಆದ್ರೆ ಈ ಮನೆ ಸ್ವಲ್ಪ ಭಿನ್ನವಾಗಿತ್ತು. ಪತಿ ಶವಸಂಸ್ಕಾರದ ವೇಳೆ ದುಃಖಪಡುವ ಬದಲು ಮಹಿಳೆ ಪಾರ್ಟಿ ಮಾಡಿದ್ದಾಳೆ. ಸಂಬಂಧಿಕರನ್ನು ಕರೆದು ಉಡುಗೊರೆ ನೀಡಿದ್ದಾರೆ.
ಸಾವು ಪ್ರತಿಯೊಬ್ಬರ ಜೀವನದಲ್ಲಿ ಬರುವಂತಹದ್ದು. ಹುಟ್ಟಿದಾಗ ಸಂಭ್ರಮಾಚರಣೆ (Celebration of Birth) ಮಾಡುವ ಜನರು ಸತ್ತಾಗ ಶೋಕ ಆಚರಣೆ ಮಾಡುತ್ತಾರೆ. ಸಾವಿನ ಮನೆಯಲ್ಲಿ ಅಳು, ನೋವು, ನೀರವ ಮೌನವಿರುತ್ತದೆ. ದೂರದೂರಿನಲ್ಲಿರುವ ಸಂಬಂಧಿಕರೊಬ್ಬರು ಸಾವನ್ನಪ್ಪಿದಾಗ್ಲೇ ನೋವು ಸಹಿಸಲು ಸಾಧ್ಯವಾಗೋದಿಲ್ಲ. ಇನ್ನು ಮನೆಯವರು, ರಕ್ತ ಸಂಬಂಧಿಗಳು ಸಾವನ್ನಪ್ಪಿದಾಗ ದುಃಖ ಸದಾ ಇರುತ್ತದೆ. ಪತಿ ಅಥವಾ ಪತ್ನಿಯಿಲ್ಲದೆ ಜೀವನ ನಡೆಸೋದು ಮತ್ತಷ್ಟು ಕಷ್ಟವಾಗುತ್ತದೆ. ಅವರಿಲ್ಲದ ನೋವು ಜೀವನ ಪರ್ಯಂತ ಕಾಡುತ್ತದೆ. ಅವರ ನೆನಪು ಕಣ್ಣಲ್ಲಿ ನೀರು ತರಿಸ್ತಿರುತ್ತದೆ. ಸಾವಿನ ಮನೆಗೆ ಹೋಗಿ, ಅವರನ್ನು ಎದುರಿಸೋದು ಸುಲಭವಲ್ಲ. ಆಪ್ತರನ್ನು ಕಳೆದುಕೊಂಡವರಿಗೆ ಸಾಂತ್ವಾನ ಹೇಳಲು ಧೈರ್ಯ ಬೇಕು. ಸಾವಿನ ಮನೆಯಲ್ಲೊಂದು ಶೋಕವಿರುತ್ತದೆ. ಒಂದು ತಿಂಗಳವರೆಗೆ ಆ ಮನೆಯಲ್ಲಿ ನಗು, ಸಂತೋಷ ನೋಡಲು ಸಾಧ್ಯವೆ ಇಲ್ಲ. ನಿಧಾನವಾಗಿ ಜನರು ಸಹಜ ಸ್ಥಿತಿಗೆ ಬರ್ತಾರೆ. ನೋವಿದ್ದರೂ, ಕಳೆದುಕೊಂಡ ದುಃಖವಿದ್ದರೂ ಅದ್ರ ಜೊತೆ ಜೀವನ ನಡೆಸೋದನ್ನು ಕಲಿಯುತ್ತಾರೆ. ವರ್ಷಗಳು ಕಳೆದಂತೆ ಅವರಿಲ್ಲದ ಜೀವನ ಅಭ್ಯಾಸವಾಗುತ್ತದೆ. ಆದ್ರೆ ಆ ಕ್ಷಣದಲ್ಲಿ ದುಃಖ ಸಹಿಸಿಕೊಳ್ಳೋದು ಸುಲಭವಲ್ಲ.
ಶೋಕದ ಮನೆಯಲ್ಲಿ ಶುಭ ಕೆಲಸ ಮಾಡಬಾರದು ಎನ್ನುವ ನಂಬಿಕೆ ನಮ್ಮಲ್ಲಿದೆ. ಆದ್ರೆ ಇಲ್ಲೊಬ್ಬ ಮಹಿಳೆ ಪತಿಯನ್ನು ಕಳೆದುಕೊಂಡ ನೋವ (pain) ನ್ನು ಪಾರ್ಟಿ (party) ಮಾಡುವ ಮೂಲಕ ಮರೆಯುವ ಪ್ರಯತ್ನ ನಡೆಸಿದ್ದಾಳೆ. ಇಲ್ಲಿ ಜನರು ಶವಸಂಸ್ಕಾರಕ್ಕೆ ಬರಲಿಲ್ಲ, ಪಾರ್ಟಿಗೆ ಬಂದಿದ್ದರು.
ಬೇಡ ಬೇಡ ಅಂತ ಮನಸ್ಸು ಹೇಳ್ತಿದ್ರೂ… ಇಂಥ ಹುಡುಗರ ಕಡೆ ಹುಡುಗೀರ ಹೃದಯ ವಾಲೋದು ಖಚಿತ
ಪತಿ ಸಾವನ್ನಪ್ಪಿದ ಮೇಲೆ ಪಾರ್ಟಿ (Party) ಮಾಡಿದ ಪತ್ನಿ : ಕೇಟೀ ಯಂಗ್ ಎಂಬ 40 ವರ್ಷದ ಮಹಿಳೆಯ ಪತಿ ಬ್ರಾಂಡನ್ ಸಾವಿನ ನಂತ್ರ ಪಾರ್ಟಿ ಆಯೋಜನೆ ಮಾಡಿದ್ದಳು. ಬ್ರಾಂಡನ್, ಪಾರ್ಶ್ವವಾಯು (stroke) ಹಾಗೂ ಅನಾರೋಗ್ಯದಿಂದ ಸಾವನ್ನಪ್ಪಿದ್ದ. ಕೇಟೀ ಯಂಗ್ ಗೆ ಮೂವರು ಮಕ್ಕಳಿದ್ದಾರೆ. ಅವರ ವಯಸ್ಸು 12, 10 ಮತ್ತು ಎಂಟು ವರ್ಷವಾಗಿದೆ. ಕೇಟೀ ಯಂಗ್, ಪತಿ ಸಾವನ್ನಪ್ಪಿದ ನಂತ್ರ ದುಃಖದಲ್ಲಿ ಅಳ್ತಾ ಕುಳಿತುಕೊಳ್ಳುವ ಬದಲು ಪಾರ್ಟಿಯನ್ನು ಆಯೋಜನೆ ಮಾಡಿದ್ದಳು. ಇದಕ್ಕೆ ಬಲವಾದ ಕಾರಣವಿದೆ. ಮಕ್ಕಳು ತಂದೆ ಸಾವಿನ ನೋವಿನಲ್ಲಿರಬಾರದು, ಅದ್ರಿಂದ ಹೊರ ಬರಬೇಕು ಎನ್ನುವ ಕಾರಣಕ್ಕೆ ಕೇಟೀ ಈ ನಿರ್ಧಾರಕ್ಕೆ ಬಂದಿದ್ದಳು.
ಕೇಟೀ ಪಾರ್ಟಿಗೆ ಸುಮಾರು 500 ಅತಿಥಿಗಳನ್ನು ಆಹ್ವಾನಿಸಿದ್ದಳು. ಅದು ಸಾವಿನ ಮನೆ ಎನ್ನಲು ಸಾಧ್ಯವೇ ಇರಲಿಲ್ಲ. ಒಬ್ಬರ ಮುಖದಲ್ಲೂ ಬ್ರಾಂಡನ್ ಕಳೆದುಕೊಂಡ ನೋವಿರಲಿಲ್ಲ. ಆತನ ಸಾವಿನ ಬಗ್ಗೆ ಒಬ್ಬರೂ ಮಾತನಾಡಲಿಲ್ಲ. ಆತನನ್ನು ನೆನೆದು ಕಣ್ಣೀರು ಹಾಕಲಿಲ್ಲ. ಅದ್ರ ಬದಲು ಎಲ್ಲರೂ ಎಂಜಾಯ್ ಮಾಡ್ತಾ, ಖುಷಿಯಾಗಿ ನಗ್ತಾ ಮಾತನಾಡುತ್ತಿದ್ದರು.
ಕೇಟೀ ಪಾರ್ಟಿಗೆ ಸಾಕಷ್ಟು ವ್ಯವಸ್ಥೆ ಮಾಡಿದ್ದಳು. ಪತಿಗೆ ಇಷ್ಟವಾದ ಚಿಪ್ಸ್, ಖಾದ್ಯಗಳನ್ನು ತಯಾರಿಸಿದ್ದಳು. ಅಷ್ಟೇ ಅಲ್ಲ ಕರಕುಶಲ ವಸ್ತುಗಳು (Handicrafts), ಕಲೆ ಪ್ರದರ್ಶನ, ಪಾರ್ಟಿಗೆ ಬರುವ ಜನರು ಎಂಜಾಯ್ ಮಾಡಲು ಅಗತ್ಯವಿರುವ ಎಲ್ಲ ವಸ್ತುಗಳು ಅಲ್ಲಿದ್ದವು. ಪಾರ್ಟಿಗೆ ಬಂದ ಎಲ್ಲರಿಗೂ ಕೀಟೀ ಉಡುಗೊರೆ ಕೂಡ ನೀಡಿದ್ದಳು. ಸಂಗೀತಾಸಕ್ತಿ (Music Lovers) ಇರುವವರಿಗೆ ಅಲ್ಲಿ ಸಂಗೀತ ಕೇಳುವ ಅವಕಾಶವಿತ್ತು. ಪತಿ ಹೆಚ್ಚು ಇಷ್ಟಪಡ್ತಿದ್ದ ಜಾಗದಲ್ಲಿಯೇ ಕೇಟೀ ಪಾರ್ಟಿಯನ್ನು ಏರ್ಪಡಿಸಿದ್ದಳು.
ಗಂಡಿನಿಂದ ಸಪರೇಟ್ ಆಗಿದ್ದ ಪುಟ್ಟಕ್ಕನ ಮಕ್ಕಳು ರಾಜಿ! ರಿಯಲ್ ಸ್ಟೋರಿ ಹೇಳಿ ಕಣ್ಣೀರಾದ ಹಂಸ ಪ್ರತಾಪ್...
ಪತಿಯನ್ನು ಕಳೆದುಕೊಂಡ ಕೇಟೀ ಅಳ್ತಿದ್ದಂತೆ ಮಕ್ಕಳು ದುಃಖದಲ್ಲಿರುತ್ತಿದ್ದರು. ಕೇಟೀ ಪಾರ್ಟಿ ಆಯೋಜನೆ ಮಾಡಿದ್ದರಿಂದ ಹಾಗೂ ಪಾರ್ಟಿಗೆ ಬಂದವರು, ಅಮ್ಮ ಕೇಟೀ ಖುಷಿಯಾಗಿರೋದನ್ನು ನೋಡಿ ಮಕ್ಕಳು ಕೂಡ ಪಾರ್ಟಿಯನ್ನು ಎಂಜಾಯ್ ಮಾಡಿದ್ರು. ತಂದೆ ಇಲ್ಲ ಎಂಬ ನೋವನ್ನು ಮರೆತರು. ಅವರು ಸಂತೋಷವಾಗಿರೋದನ್ನು ನೋಡಿ ಬ್ರಾಂಡನ್ ಗೆ ಖುಷಿಯಾಗಿರಬೇಕೆಂದು ಕೇಟೀ ಹೇಳಿದ್ದಾಳೆ.