ಪಕ್ಕದ್ಮನೆ ಆಂಟಿ ಕಮಾಲ್‌, ರಸಿಕ ಗಂಡ ಬಚಾವ್‌! ಪತ್ನಿಯರೇ ಹುಷಾರ್‌, ಯಾಮಾರಿದ್ರೆ ಜೋಕೆ..

By Suvarna News  |  First Published Nov 7, 2024, 8:09 PM IST

ಪಕ್ಕದ ಮನೆ ಆಂಟಿಗೆ ಲಿಪ್‌ಸ್ಟಿಕ್‌ ಅಲರ್ಜಿ ಎಂದು ಈ ರಸಿಕ ಗಂಡನಿಗೆ ಹೇಗೆ ಗೊತ್ತಾಯ್ತು? ಬಿದ್ದೂ ಬಿದ್ದೂ ನಗುವ ವಿಡಿಯೋ ವೈರಲ್‌!
 


  ಗಂಡ- ಹೆಂಡತಿಯ ಸಂಬಂಧದ ಕುರಿತು ಮಾಡುವ ಜೋಕ್ಸ್​, ಮೀಮ್ಸ್​ಗಳಿಗೆ ಲೆಕ್ಕವೇ ಇಲ್ಲ. ಅದರಲ್ಲಿಯೂ ಹೆಚ್ಚಾಗಿ ಹೆಂಡತಿಯರ ಮೇಲಿನ ಜೋಕ್ಸ್​ಗಳೇ ಹೆಚ್ಚು ಎಂದರೂ ತಪ್ಪಾಗಲಿಕ್ಕಿಲ್ಲ. ದಂಪತಿ ನಡುವಿನ ಜೋಕ್ಸ್​ಗಳನ್ನು ಯಾರೂ ಹೆಚ್ಚಾಗಿ ಸೀರಿಯಸ್​ ತೆಗೆದುಕೊಳ್ಳದೇ ತಮ್ಮ ಮನೆಯಲ್ಲಿಯೂ ಹೀಗೆಯೇ ಎಂದು ಅಂದುಕೊಳ್ಳುವವರೇ ಹೆಚ್ಚು. ಅದಕ್ಕಾಗಿಯೇ ಇವುಗಳ ಜೋಕ್ಸ್​, ಮೀಮ್ಸ್​ಗಳು ಸಕತ್​ ವೈರಲ್​ ಆಗುತ್ತವೆ.  ಸೋಷಿಯಲ್‌ ಮೀಡಿಯಾಗಳಲ್ಲಿ ಇಂಥ ಜೋಕ್ಸ್‌ಗಳು ಎಂಥ ಸ್ಥಿತಿಯಲ್ಲಿಯೂ ನಗು ತರಿಸುವುದು ಉಂಟು. ಅದನ್ನು ಸೀರಿಯಸ್‌ ಆಗಿ ತೆಗೆದುಕೊಳ್ಳುವವರು ತುಂಬಾ ಕಡಿಮೆ. ಇದರಲ್ಲಿ ಹೆಂಡತಿಯರನ್ನು ಮೂರ್ಖರನ್ನಾಗಿ ತೋರಿಸಿದರೂ, ಅದನ್ನು ಮಹಿಳೆಯರೂ ಎಂಜಾಯ್‌ ಮಾಡುವುದು ಇದೆ. ಇದೇ ಕಾರಣಕ್ಕೆ ಇಂಥ ಜೋಕ್ಸ್‌ ಸಕತ್‌ ವೈರಲ್‌ ಆಗುತ್ತವೆ.

ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಇಂಥದ್ದೇ ಒಂದು ರೀಲ್ಸ್‌ ಸಕತ್‌ ಸೌಂಡ್‌ ಮಾಡುತ್ತಿದೆ. ಇದರಲ್ಲಿ ಪತ್ನಿ, ಪತಿಯ ಬಳಿ ಬಂದು ನನ್ನ ಲಿಪ್‌ಸ್ಟಿಕ್‌ ಕಳುವಾಗಿದೆ. ನನಗೆ ಗೊತ್ತು ಪಕ್ಕದ ಮನೆಯ ಆಂಟಿನೇ ಅದನ್ನು ತೆಗೆದುಕೊಂಡಿರೋದು ಎಂದು ಹೇಳುತ್ತಾಳೆ. ಆಗ ಗಂಡ, ಅದು ಸಾಧ್ಯನೇ ಇಲ್ಲ ಬಿಡು, ಏನೇನೋ ಹೇಳಬೇಡ ಎನ್ನುತ್ತಾನೆ. ಆಗ ಪತ್ನಿ, ಅದನ್ನು ನೀವು ಅಷ್ಟು ಕರೆಕ್ಟ್‌ ಆಗಿ ಹೇಗೆ ಹೇಳ್ತೀರಿ ಎಂದು ಪ್ರಶ್ನಿಸುತ್ತಾಳೆ. ಆಗ ತಾನು ಏನು ಹೇಳುತ್ತಿದ್ದೇನೆ ಎನ್ನುವ ಅರಿವಿಲ್ಲದ ಗಂಡ, ಅದ್ಯಾಕೆ ಎಂದ್ರೆ, ಅವಳಿಗೆ ಲಿಪ್‌ಸ್ಟಿಕ್‌ ಅಂದ್ರೆ ಅಲರ್ಜಿ. ಲಿಪ್‌ಸ್ಟಿಕ್‌ ಹಾಕಿದ್ರೆ ಅವಳ ತುಟಿಗೆ ಸಮಸ್ಯೆ ಆಗುತ್ತದೆ, ಅದಕ್ಕಾಗಿ ಅವಳು ಹಾಕುವುದಿಲ್ಲ ಎಂದುಬಿಡುತ್ತಾನೆ.

Tap to resize

Latest Videos

undefined

ಲವ್​ ಮ್ಯಾರೇಜ್​, ಅರೇಂಜ್ಡ್​ ಮ್ಯಾರೇಜ್​ ಬಿಟ್ಟು ಇನ್ನೊಂದು ಮ್ಯಾರೇಜೂ ಇದೆ... ಹಿರೇಮಗಳೂರು ಕಣ್ಣನ್ ಮಾತಲ್ಲೇ ಕೇಳಿ..

ಇನ್ನು ಪತ್ನಿ ಕೇಳಬೇಕೆ? ನಿಮಗೆ ಇದು ಹೇಗೆ ಗೊತ್ತಾಯ್ತು ಎಂದು ಸಿಟ್ಟಿನಿಂದ ಕೇಳುತ್ತಾಳೆ. ಗಂಡನಿಗೆ ಆಗ ತಾನು ಮಾಡಿದ ತಪ್ಪಿನ ಅರಿವಾಗುತ್ತದೆ. ಪೆ ಪೆ ಪೆ ಎನ್ನುತ್ತಾನೆ. ಏನು ಹೇಳಬೇಕೋ ಗೊತ್ತಾಗುವುದಿಲ್ಲ. ಆಗ ಪತ್ನಿ ಕೂಡಲೇ ಪಕ್ಕದ ಮನೆಯವಳಿಗೆ ಫೋನ್‌ ಮಾಡಿ ಎನ್ನುತ್ತಾನೆ. ಗಂಡ ವಿಧಿ ಇಲ್ಲದೇ ಫೋನ್‌ ಮಾಡುತ್ತಾನೆ. ಆಗ ಪತ್ನಿ, ನೀವು ಲಿಪ್‌ಸ್ಟಿಕ್‌ ಹಚ್ಚಲ್ವಾ ಕೇಳ್ತಾಳೆ, ಪಕ್ಕದ ಮನೆಯವರು ಹೌದು, ಹಚ್ಚಲ್ಲ ಎನ್ನುತ್ತಾಳೆ. ಆಗ ಪತ್ನಿ ನಿಮಗೆ ಲಿಪ್‌ಸ್ಟಿಕ್‌ ಅಂದ್ರೆ ಅಲರ್ಜಿನಾ ಅಂತ ಕೇಳುತ್ತಾಳೆ, ಆಗ ಪಕ್ಕದ ಮನೆಯವಳು ಅರೆ ಹೌದು. ಇದೆಲ್ಲಾ ನಿಮಗೆ ಹೇಗೆ ಗೊತ್ತಾಯ್ತು ಎಂದು ಕೇಳುತ್ತಾಳೆ.

ಪಕ್ಕದ ಮನೆಯ ಆಂಟಿಯ ಬಗ್ಗೆ ಗಂಡನಿಗೆ ಇಷ್ಟೆಲ್ಲಾ ಗೊತ್ತಿದ್ದ ಮೇಲೆ ಹೆಂಡ್ತಿ ಸುಮ್ನೆ ಇರ್ತಾಳಾ? ಪಕ್ಕದ ಮನೆಯಾಕೆ ಜೊತೆ, ನನಗೆ ಹೇಗೆ ಗೊತ್ತಾಯ್ತು ಅನ್ನೋದು ಮುಖ್ಯವಲ್ಲ, ನಿಮ್ಮ ಬಗ್ಗೆ ನನ್ನ ಗಂಡನಿಗೆ ಹೇಗೆ ಗೊತ್ತಾಯ್ತು ಹೇಳಿ ಎನ್ನುತ್ತಾಳೆ. ಇಲ್ಲಿ ಗಂಡನಿಗೋ ನಡುಕ ಶುರುವಾಗುತ್ತದೆ. ಆದರೆ ಪಕ್ಕದ ಮನೆ ಆಂಟಿ ಎಕ್ಸ್‌ಪರ್ಟ್. ಕೂಡಲೇ ಹಾಗೇನೂ ಇಲ್ಲ. ಅವರು ನಿಮಗೆ ಏನೇ ವಸ್ತು ಕೊಡುವ ಮೊದಲು ಅದು ಸರಿ ಇದ್ಯೋ ಇಲ್ಲೋ ಎಂದು ಟೆಸ್ಟ್‌ ಮಾಡಲು ನನ್ನ ಮೇಲೆ ಪ್ರಯೋಗ ಮಾಡುತ್ತಾರೆ ಅಷ್ಟೇ ಎನ್ನುತ್ತಾಳೆ. ಇದನ್ನು ಕೇಳಿ ಗಂಡನ ಮೇಲೆ ಈ ಪತ್ನಿಗೆ ಪ್ರೀತಿ ಉಕ್ಕಿ ಹರಿಯುತ್ತದೆ. ನೀವು ನನ್ನನ್ನು ಇಷ್ಟು ಪ್ರೀತಿ ಮಾಡ್ತೀರಾ ಎಂದು ನಾಚಿಕೊಂಡು ಓಡಿ ಹೋಗ್ತಾಳೆ! ಇಷ್ಟೇ ರೀಲ್ಸ್‌. ಇದಕ್ಕೆ ಥಹರೇವಾರಿ ಕಮೆಂಟ್ಸ್‌ ಸುರಿಮಳೆಯಾಗಿದ್ದು, ಎಲ್ಲರೂ ಬಿದ್ದೂ ಬಿದ್ದೂ ನಗುತ್ತಿದ್ದಾರೆ. ಪತ್ನಿಯರೇ ಹುಷಾರ್‌ ಎನ್ನುತ್ತಿದ್ದಾರೆ.

ಎಲ್ಲಿಂದಲೋ ಬಂದಳು, ಮದುಮಕ್ಕಳಿಗೆ ಆಶೀರ್ವದಿಸಿ ಮಾಯವಾದಳು! ಬೆಂಗಳೂರಿನ ಕುತೂಹಲದ ಘಟನೆ ವಿಡಿಯೋ ವೈರಲ್‌

click me!