ಹಳೆಯ ಬಾಯ್‌ಫ್ರೆಂಡ್ ಗಿಫ್ಟ್ ಕೊಟ್ಟ ಕಾರಲ್ಲೇ ಹೊಸ ಪ್ರಿಯಕರನ ಜೊತೆ ಯುವತಿಯ ಸುತ್ತಾಟ !

Published : Sep 03, 2022, 03:11 PM ISTUpdated : Sep 03, 2022, 03:13 PM IST
ಹಳೆಯ ಬಾಯ್‌ಫ್ರೆಂಡ್ ಗಿಫ್ಟ್ ಕೊಟ್ಟ ಕಾರಲ್ಲೇ ಹೊಸ ಪ್ರಿಯಕರನ ಜೊತೆ ಯುವತಿಯ ಸುತ್ತಾಟ !

ಸಾರಾಂಶ

ಹುಡುಗ ಮತ್ತು ಹುಡುಗಿಯರ ಮಧ್ಯೆ ಪ್ರೀತಿಯಾಗುವುದು ಸಾಮಾನ್ಯ. ಯಾವುದೋ ಭಿನ್ನಾಭಿಪ್ರಾಯದಿಂದ ಬ್ರೇಕಪ್ ಆಗುವುದು ಸಹ ಸಾಮಾನ್ಯ. ಮತ್ತೆ ಇಬ್ಬರೂ ಮೂವ್ ಆನ್‌ ಆಗುವುದು ಸಹ ಕಾಮನ್. ಆದರೆ ಇಲ್ಲೊಬ್ಬ ಇವೆಲ್ಲಕ್ಕಿಂತ ವಿಭಿನ್ನವಾಗಿ ವರ್ತಿಸಿದ್ದಾನೆ.

ಪ್ರೀತಿಯಲ್ಲಿದ್ದಾಗ ಆ ಲೋಕವೇ ಸುಂದರ. ಆಗಾಗ ಭೇಟಿಯಾಗುವುದು, ಗಂಟೆಗಟ್ಟಲೆ ಮಾತನಾಡುವುದು, ಕಾಸ್ಟ್ಲೀ ಗಿಫ್ಟ್‌ಗಳನ್ನು ವಿನಿಮಯ ಮಾಡಿಕೊಳ್ಳುವುದು ನಡೆಯುತ್ತಲೇ ಇರುತ್ತದೆ. ಬ್ರೇಕಪ್ ಆದಾಗ ಆ ಎಲ್ಲಾ ಜೋಶ್ ಇಳಿದು ಹೋಗುತ್ತದೆ. ಈ ಸಂದರ್ಭದಲ್ಲಿ ಕೆಲವೊಬ್ಬರು ಕಿತ್ತಾಡಿಕೊಳ್ಳುವುದನ್ನೂ ಮಾಡುತ್ತಾರೆ. ಆದ್ರೆ ಇಲ್ಲೊಬ್ಬಾತ ಬ್ರೇಕಪ್‌ ಆದ ನಂತರ ಹುಡುಗಿ ಮಾಡ್ತಿರೋ ಕೆಲಸ ನೋಡಿ, ತನ್ನೆಲ್ಲಾ ಗಿಫ್ಟ್ ವಾಪಾಸ್ ಕೇಳಿದ್ದಾನೆ. ಅಷ್ಟಕ್ಕೂ ಆ ಹುಡುಗಿ ಮಾಡಿರೋದು ಸಣ್ಣ ಪುಟ್ಟ ಕೆಲಸ ಕೂಡಾ ಅಲ್ಲ. 

ಬ್ರೇಕಪ್ ಆಯ್ತಲ್ಲಾ..ಗಿಫ್ಟೆಲ್ಲಾ ವಾಪಾಸ್ ಕೊಡು !
ಮಾಜಿ ಬಾಯ್‌ ಫ್ರೆಂಡ್ ಕೊಡಿಸಿದ ಕಾರನ್ನು ಯುವತಿ (Girl) ಹೊಸ ಬಾಯ್ ಫ್ರೆಡ್‌ಗೆ ಓಡಿಸಲು ಕೊಟ್ಟಿದ್ದಳು. ಇದನ್ನು ನೋಡಿದ ಮಾಜಿ ಬಾಯ್‌ಫ್ರೆಂಡ್‌ ತಾನು ನೀಡಿದ ಎಲ್ಲಾ ಉಡುಗೊರೆ (Gift) ವಾಪಾಸ್ ಕೇಳಿದ್ದಾನೆ. ನಾನು ಕೊಡಿಸಿದ ಕಾರನ್ನು ಬೇರೆಯವರಿಗೆ ಬಳಸಲು ಕೊಟ್ಟಿದ್ದರಿಂದ ನಾನು ಅವಮಾನಿತನಾಗಿದ್ದು, ಅದಕ್ಕಾಗಿ ನಾನು ಹೀಗೆ ಮಾಡಿದ್ದಾಗಿ ಮಾಜಿ ಬಾಯ್‌ಫ್ರೆಂಡ್ ಹೇಳಿದ್ದಾನೆ. ತನ್ನ ಗೆಳತಿಗೆ ಕಾರನ್ನು ಉಡುಗೊರೆಯಾಗಿ ನೀಡಿದ ಮಲೇಷಿಯಾದ ವ್ಯಕ್ತಿಯೊಬ್ಬ, ಆಕೆಯ ಹೊಸ ಗೆಳೆಯ ಅದನ್ನು ಓಡಿಸುವುದನ್ನು ನೋಡಿದ ನಂತರ ಅದನ್ನು ಹಿಂತಿರುಗಿಸಲು ಬಯಸಿದ್ದಾನೆ. ತಾನು ಒಂಬತ್ತು ವರ್ಷಗಳಿಂದ ಹುಡುಗಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದೆ ಆದರೆ ಇತ್ತೀಚಿಗೆ ಸಪರೇಟ್ ಆದೆವು. ಅವಳು ತನಗೆ ಮೋಸ (Cheat) ಮಾಡುತ್ತಿದ್ದಾಳೆ ಎಂದು ಗೊತ್ತಾದ ಕಾರಣ ಗಿಫ್ಟ್‌ನ್ನೆಲ್ಲಾ ವಾಪಾಸ್ ಕೇಳಿದೆ ಎಂದಿದ್ದಾನೆ. 

ಪ್ರಿಯತಮೆಗೆ ಬೇರೊಬ್ಬನ ಜೊತೆ ಮದುವೆ ನಿಗದಿ: ಪ್ರಿಯಕರನ ಬಾಡಿಗೆ ಮನೆ ಧ್ವಂಸ ಮಾಡಿದ ಸಂಬಂಧಿಕರು

ಹಳೆಯ ಬಾಯ್‌ಫ್ರೆಂಡ್ ಕೊಟ್ಟ ಕಾರು, ಹೊಸ ಬಾಯ್‌ಫ್ರೆಂಡ್ ಜತೆ ಸುತ್ತಾಟ
ಫೇಸ್‌ಬುಕ್ ಪೋಸ್ಟ್‌ನಲ್ಲಿ, 'ನಾನು 9 ವರ್ಷಗಳಿಂದ ಹುಡುಗಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದೆ ಮತ್ತು ಸ್ವಲ್ಪ ಸಮಯದ ಹಿಂದೆ ಅವಳು ಬ್ರೇಕಪ್ ಕೇಳಿದಳು, ನಾನು ಅದಕ್ಕೆ ಒಪ್ಪಿದೆ, ಮತ್ತು ನಾವು ನಮ್ಮ ಜೀವನ (Life)ದಲ್ಲಿ ಮೂವ್ ಆನ್‌ ಆದೆವು, ನಾನು ಮತ್ತೆ ಏನನ್ನೂ ಕೇಳಲಿಲ್ಲ ಆದರೆ ಇತ್ತೀಚೆಗೆ, ನಾನು ಅವಳು ಹೊಸ ಸಂಗಾತಿಯನ್ನು ಹೊಂದಿದ್ದಾಳೆ ಮತ್ತು ನಾವು ಬೇರ್ಪಡುವ ಮೊದಲು ಅವರು ಡೇಟಿಂಗ್ ಪ್ರಾರಂಭಿಸಿದ್ದರು ಎಂಬುದನ್ನು ತಿಳಿದುಕೊಂಡೆ. ಸಂಬಂಧದ ಸಮಯದಲ್ಲಿ, ನಾನು ಅವಳಿಗೆ ಹಲವಾರು ವಸ್ತುಗಳನ್ನು ಉಡುಗೊರೆಯಾಗಿ ನೀಡಿದೆ. ಇತ್ತೀಚಿಗೆ ಅತ್ಯಂತ ಮೌಲ್ಯಯುತವಾದದ್ದು ಕಾರನ್ನು ಆಕೆಯ ಹೊಸ ಪಾಲುದಾರನುಓಡಿಸುವುದನ್ನು ನೋಡಿದ ನಂತರ, ಆಕೆ ನನಗೆ ಮೋಸ ಮಾಡಿರುವುದು ಅರಿವಾಯಿತು. 

ನಾನು ಅವಳಿಗೆ ಬಹಳಷ್ಟು ಉಡುಗೊರೆಗಳನ್ನು ಖರೀದಿಸಿ ಕೊಟ್ಟಿದ್ದೇನೆ. ಆದರೆ ನಾನು ಅವಳಿಗೆ ಖರೀದಿಸಿದ ಅತ್ಯಂತ ಬೆಲೆಬಾಳುವ ಉಡುಗೊರೆ ಕಾರು ಎಂದು ನಾನು ಭಾವಿಸುತ್ತೇನೆ. ನಾನು ಖರೀದಿಸಿದ ಕಾರನ್ನು ಅವಳ ಹೊಸ ಸಂಗಾತಿ (Partner) ಚಾಲನೆ ಮಾಡುತ್ತಿದ್ದಾನೆ ಎಂದು ತಿಳಿದು ನನಗೆ ಕೋಪ ಬಂದಿತು.ಹೀಗಾಗಿ ಎಲ್ಲಾ ಉಡುಗೊರೆ ವಾಪಾಸ್ ಕೇಳಿದೆ ಎಂದು ವ್ಯಕ್ತಿ ಕೇಳಿದ್ದಾನೆ. 

ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಬಿರುಕು: ಪ್ರಿಯತಮನನ್ನೇ ಎತ್ತಾಕೊಂಡು ಹೋದ್ಲು ಪ್ರೇಯಸಿ

ನಮಗೆ ಬ್ರೇಕಪ್ ಆಗಿರುವುದನ್ನು ನಾನು ಒಪ್ಪಿಕೊಳ್ಳಬಲ್ಲೆ, ಹಾಗೆಯೇ ಅವಳು ಸುಳ್ಳು ಮತ್ತು ನನಗೆ ದ್ರೋಹ ಮಾಡಿದಳು ಎಂಬ ಅಂಶವನ್ನು ನಾನು ಒಪ್ಪಿಕೊಳ್ಳಬಹುದು. ಆದರೆ ನಾನು ಅವಳಿಗೆ ಖರೀದಿಸಿದ ಕಾರನ್ನು ಅವಳ ಹೊಸ ಸಂಗಾತಿ ಚಾಲನೆ ಮಾಡುತ್ತಿದ್ದಾನೆ ಎಂಬ ಅಂಶವನ್ನು ನಾನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ವ್ಯಕ್ತಿ ಹೇಳಿದ್ದಾನೆ. ಯಾವುದೇ ವ್ಯಕ್ತಿ ಈ ಅವಮಾನವನ್ನು ತೆಗೆದುಕೊಳ್ಳುವುದಿಲ್ಲ ಮತ್ತು ಅವಳ ಹೊಸ ಸಂಗಾತಿಯನ್ನು ದ್ವೇಷಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಹೀಗಾಗಿ ನಾನು ಈ ಹಿಂದೆ ಕೊಡಿಸಿದ ವಸ್ತುವನ್ನು ಕೇಳುವುದು ತಪ್ಪಲ್ಲ ಎಂದು ನಾನು ಭಾವಿಸುತ್ತೇನೆ ಎಂದು ವ್ಯಕ್ತಿ ಹೇಳಿದ್ದಾನೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ
ಕುಬೇರನ ಸಂಪತ್ತು ತರುವ ಡಿಫರೆಂಟ್‌ ಹೆಸರು ನಿಮ್ಮ ಮಗನಿಗೂ ಇಡಬಹುದು!