One Night Stand: ಸಿರಿವಂತರ ಖಯಾಲಿ ಮಧ್ಯಮ ವರ್ಗಕ್ಕೂ ಓಕೇನಾ?

Published : Sep 03, 2022, 11:28 AM IST
One Night Stand: ಸಿರಿವಂತರ ಖಯಾಲಿ ಮಧ್ಯಮ ವರ್ಗಕ್ಕೂ ಓಕೇನಾ?

ಸಾರಾಂಶ

ಕಾಲ ಬದಲಾಗಿದೆ. ಲೈಂಗಿಕತೆಯ ಕಾನ್ಸೆಪ್ಟ್ ಸಹಜವಾಗಿಯೇ ಬದಲಾಗುತ್ತಿದೆ. ಮದುವೆ ಆಗುವ ತನಕ ಲೈಂಗಿಕ ಕ್ರಿಯೆ ನಡೆಸುವ ಹಾಗಿಲ್ಲ. ಒಬ್ಬರಿಗೇ ಬದ್ಧರಾಗಿರಬೇಕು ಎನ್ನುವುದೂ ಹಳೆ ವರಸೆ. ಹದಿ ವಯಸ್ಸಿಗೆ ಕಾಲಿಟ್ಟ ಮಕ್ಕಳು ತಮ್ಮಿಷ್ಟ ಬಂದವರ ಜೊತೆ ಹೋಗುತ್ತಾರೆ, ಇಷ್ಟ ಬಂದಂತೆ ವರ್ತಿಸುತ್ತಾರೆ. ಆದರೆ, ಗೊತ್ತಿಲ್ಲದವರ ಜೊತೆ ಸೆಕ್ಸ್? ಏನಿದು ಅವಸ್ಥೆ? 

ಬೆಂಗಳೂರಿನಂಥ ಊರಲ್ಲಿ ಲೇಟ್ ನೈಟ್ ಪಾರ್ಟಿಗಳು ಮತ್ತು ಒನ್ ನೈಟ್ ಸ್ಟ್ಯಾಂಡ್ ಕಾಮನ್. ಅಲ್ಲಿ ಸಿರಿವಂತರದ್ದೇ ಕಾರುಬಾರು. ಪ್ರತಿಷ್ಠಿತ ಕುಟುಂಬಗಳಿಂದ ಬಂದವರು. ಇನ್ನೂ ಮೀಸೆ ಚಿಗುರಿರುತ್ತೆ ಅಷ್ಟೇ. ಕೈ ತುಂಬಾ ದುಡ್ಡು. ಅಪ್ಪ-ಅಮ್ಮನ ಲಂಗು ಲಗಾಮು ಸಹಜವಾಗಿಯೇ ಇರೋಲ್ಲ. ಓಡಾಡಲು ಐಷಾರಾಮಿ ಕಾರು. ಇಷ್ಟೆಲ್ಲ ಇದ್ದ ಮೇಲೆ ಗರ್ಲ್ ಫ್ರೆಂಡ್ಸ್, ಬಾಯ್ ಫ್ರೆಂಡ್ಸ್ ಇದ್ದೇ ಇರುತ್ತಾರೆ. ಮಧ್ಯ ರಾತ್ರಿ ಬಳಿಕ ಪಾರ್ಟಿ ಮಾಡುತ್ತಾರೆ. ಮದ್ಯ ಸೇವನೆ ಜೊತೆ, ಡ್ರಗ್ಸ್ ಸೇವಿಸುತ್ತಾರೆ. ಎಲ್ಲರೂ ಒಟ್ಟೊಟ್ಟಿಗೆ ಡ್ಯಾನ್ಸ್ ಮಾಡುತ್ತಾರೆ. ನಮ್ಮಿಷ್ಟ ಬಂದವರನ್ನು ಆರಿಸಿಕೊಂಡು ಹಾಸಿಗೆ ಹಂಚಿಕೊಳ್ಳುತ್ತಾರೆ. ಇವರು ಪಾರ್ಟಿ ಮಾಡೋ ಸ್ಥಳಗಳೂ ಹಾಗೆಯೇ ಇರುತ್ತೆ. 

ಸಿರಿವಂತರ ಮನೆಯಲ್ಲಿ ನಿತ್ಯ ನಡೆಯೋ ವಹಿವಾಟಿದು. ಹಾಗೆಯೇ ಒಬ್ಬನಿಗೆ ಒಂದು ಹುಡುಗಿ ಪರಿಚಯವಾಗಿದ್ದಾಳೆ. ಸಿರಿವಂತೆ. ಅವರು ಮನೆಯಲ್ಲಿಯೇ ನಡೆಯುವ ಪಾರ್ಟಿಗೆ ಈತ ಆಗಾಗ ಹೋಗುತ್ತಾನೆ. ಹಾಗೆ ಹೋದಾಗ ಅಪರಿಚತರೊಂದಿಗೆ (Strangers) ಹಾಸಿಗೆಯನ್ನು ಹಂಚಿಕೊಂಡಿದ್ದಾನೆ. ಇವನೋ ಮಧ್ಯಮ ವರ್ಗದಲ್ಲಿ (Middles Class Family) ಹುಟ್ಟಿ ಬೆಳೆದವ. ಕೈಯಲ್ಲೊಂದು ಸಣ್ಣ ಕೆಲಸ. ಈಗ ತಾನೇ ಬೆಂಗಳೂರಿಗೆ ಬಂದವನು. ಹೀಗ ಯಾರೋ ಜೊತೆಗೆ ಮಲಗಿದ್ದರಿಂದ ಗಿಲ್ಟಿ ಫೀಲ್ (Guilty Feel) ಆಗುತ್ತಿದೆ. ಆದರೆ, ಅವರು ಯಾರೂ ಎಂಬ ಪರಿಜ್ಞಾನವೂ ಇಲ್ಲ. ದಾರಿ ತಪ್ಪುತ್ತಿರುವ ಮನಸ್ಸು. ಮುಂದೇನು ಎನ್ನುವ ಭಯ ಅಷ್ಟೇನೂ ಇಲ್ಲದಿದ್ದರೂ, ತಪ್ಪೆಂದು ಗೊತ್ತಾಗುತ್ತಿದೆ. ಆದರೆ, ಸುಳಿಯಲ್ಲಿ ಸಿಲುಕಿದ ಮನಸ್ಸು. ತಪ್ಪೆಂದೂ ಒಪ್ಪಿ ಕೊಳ್ಳುತ್ತಿಲ್ಲ. ಮನಸ್ಸಿನಲ್ಲಿ ಅಳುಕು ತಪ್ಪುತ್ತಿಲ್ಲ. ಭವಿಷ್ಯದಲ್ಲಿ ತೊಂದರೆಯಾಗಬಹುದಾ ಎಂಬ ಭಯ. ಒಂದು ವೆಬ್‌ಸೈಟಿನಲ್ಲಿ ತನ್ನ ಭಯವನ್ನು ಹಂಚಿಕೊಂಡು ತಜ್ಞರ ಅಭಿಪ್ರಾಯ ಕೇಳಿದ್ದಾನೆ. ಅದಕ್ಕೆ ಮನಃಶಾಸ್ತ್ರರು ಉತ್ತರಿಸಿದ್ದು ಹೀಗೆ. 

ಕುಡಿದು ನಶೆಯಲ್ಲಿ ಖುಷಿ ಕಪೂರ್ , ನ್ಯಾಸಾ ದೇವಗನ್ Photo Viral

ಪ್ರತಿಷ್ಠಿತರು ಎನಿಸಿಕೊಂಡವರ ಮನೆಗಳಲ್ಲಿ, ಪಾರ್ಟಿಗಳಲ್ಲಿ ನಡೆಯುವ ಸಂಗತಿಗಳ ಬಂಡವಾಳವೇ ಇದು. ಕಾನೂನಿನ ದೃಷ್ಟಿಯಲ್ಲಿ ಈ ವ್ಯಕ್ತಿ ಮಾಡುತ್ತಿರುವುದು ಸಮಾಜಬಾಹಿರ ಕೃತ್ಯವೇನಲ್ಲ. ಇನ್ನೊಂದು ಅವಕಾಶ ಸಿಕ್ಕಿದರೆ ಬಳಸಿಕೊಳ್ಳುವ ಇರಾದೆಯೂ ಇದ್ದಂತೆ ಕಾಣಿಸುತ್ತಿದೆ. ಈ ಮಾಡಬಾರದ ಕೆಲಸದಿಂದ ನಿಮಗೆ ತೀರಾ ಪಶ್ಚಾತ್ತಾಪ, ಮಾನಸಿಕ ವೇದನೆ ಕಾಡಿಸುವುದಿಲ್ಲವೋ, ನಿಮ್ಮ ಕುಟುಂಬಕ್ಕೆ ಆತಂಕ ಹಾಗೂ ಅವಮಾನವಾಗುವುದಿಲ್ಲವೋ,  ಅಲ್ಲೀತನಕ ಪರ್ವಾಗಿಲ್ಲ. ನಿಮ್ಮೊಡನೆ ಸುಖಿಸುವವರ ಕುಟುಂಬದಲ್ಲೂ ಯಾವುದೇ ಬಾಧಕ ಉಂಟಾಗುವದಿಲ್ಲವೋ, ಮತ್ತು ಸಾಮಾಜಿಕವಾಗಿ ಸಮಸ್ಯೆ ಅನ್ನಿಸಿಕೊಳ್ಳುವುದಿಲ್ಲವೋ- ಅಲ್ಲಿಯವರೆಗೂ ಓಕೆ. ಯಾಕೆಂದರೆ ಇದು ಕಾನೂನು ದೃಷ್ಟಿಯಲ್ಲಿ ತಪ್ಪಲ್ಲ. 

ಆದರೆ, ಮನಸ್ಸು ನಿಂತ ನೀರಲ್ಲ. ಬದಲಾಗುತ್ತೆ. ಎಲ್ಲವೂ ಸ್ವಲ್ಪ ದಿನಗಳ ನಂತರ ಬೇಸರ ತರುತ್ತದೆ. ಪಶ್ಚತ್ತಾಪ ಪಡುವಂತಾಗುತ್ತದೆ. ಈಗ ತರುತ್ತಿರುವ ಸುಖ ಮುಂದೆಯೂ ಸುಖ ಅನಿಸುವುದಿಲ್ಲ. ಈ ರೀತಿಯ ಒನ್ ನೈಟ್ ಸ್ಟಾಂಡ್‌ (One Night Stand) ಅನ್ನು ಅನುಭವಿಸುವುದು ಕಷ್ಟವಾಗುತ್ತದೆ. ಪ್ರತಿಷ್ಠಿತರ ಸಮಾಜಕ್ಕೂ (Prestigious Family) ಮಧ್ಯಮ ವರ್ಗದ ಮಧ್ಯಮ ವರ್ಗದಲ್ಲಿ ಹುಟ್ಟಿ, ಬೆಳೆದ ಮಕ್ಕಳಿಗೂ ಇದೇ ವ್ಯತ್ಯಾಸ.  ಮಾಡಿದ ತಪ್ಪಿನಿಂದ ನೀವು ನೋವು ಅನುಭವಿಸುತ್ತೀರಿ. ಕೊರಗು ಕಾಮನ್ ಆಗುತ್ತದೆ. ಆಗ ಯಾವುದೇ ಸುಖ ಸಂತೋಷ ಇಲ್ಲದಂತಾಗುತ್ತದೆ. 

ಇಂಥ ಒಂದು ರಾತ್ರಿಯ ಸುಖದ ವೇಳೆ, ನಿಮ್ಮೊಂದಿಗೆ ರಾತ್ರಿ ಕಳೆದವರು ಗರ್ಭಿಣಿಯಾದರೆ? ಸುರಕ್ಷತೆ ವ್ಯವಸ್ಥೆ ಮಾಡಿಕೊಳ್ಳುವ ಮನಸ್ಥಿತಿಯಲ್ಲಾದರೂ ನೀವು ಇರುತ್ತೀರಾ? ಅಕಸ್ಮಾತ್ ಯಾವುದಾದರೂ ಲೈಂಗಿಕ ರೋಗ (Sexual Disease) ಅಂಟಿ ಕೊಂಡು ಬಿಟ್ಟರೆ? ಅಕಸ್ಮಾತ್ ಇಂಥ ಪಾರ್ಟಿಗಳಿಂದ ಅಕ್ಕ ಪಕ್ಕದ ಮನೆಯವರಿಗೆ ತೊಂದರೆಯಾಗಿ, ಕಂಪ್ಲೇಂಟ್ ಕೊಟ್ಟು, ಕಾನೂನು ತೊಡಕಾಗಿ ಸಿಕ್ಕಿಬಿದ್ದರೇನು ಮಾಡುತ್ತೀರಿ? ಹವ್ಯಾಸವಾಗದೇ, ಚಟವಾಗಿ (Addiction) ಬಿಟ್ಟರಂತೂ ನಿಮ್ಮ ಕಥೆ ಮುಗೀತು. ಬೇಕಾ ಇಷ್ಟೆಲ್ಲಾ ರಿಸ್ಕ್ ಜೀವನದಲ್ಲಿ? 

Extra Marital Affair: ಸ್ನೇಹಿತನ ಜೊತೆ ಒಮ್ಮೆ ಸೆಕ್ಸ್, ಗರ್ಭ ಧರಿಸಿದ ನಾರಿಗೆ ಗೊಂದಲ

ಭಾರತೀಯರಿಗೆ ಲೈಂಗಿಕತೆ (Sexual Relationship) ಎಂಬುವುದು ಕ್ಯಾಶುಯಲ್ ಸಂಬಂಧವಲ್ಲ. ಕೆಲವು ಆಧುನಿಕ ಸಮಾಜಗಳಲ್ಲಿ (Modern Society) ಹಾಗಿದೆ. ಅಪರಿಚಿತರ ಜೊತೆ ಒನ್ ನೈಟ್ ಸ್ಟಾಂಡ್ ಎಂಬುದು ಅವರ ಬದುಕಿನಲ್ಲಿ ಕಾಮನ್. ಅದು ಭಾರತೀಯ ಮಧ್ಯಮ ವರ್ಗದ ಮಕ್ಕಳಿಗೆ ಜೀವಮಾನವಿಡೀ ಕಾಡುತ್ತದೆ. ಆದ್ದರಿಂದ ಇಂಥ ಸಂಸ್ಕೃತಿಯಿಂದ ದೂರವಿದ್ದರೆ ಬದುಕು ಚೆಂದ. 

 


 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಗರ್ಭ ಶ್ರೀಮಂತನೆಂದು ಎಂಜಿನಿಯರ್‌ನನ್ನ ಮದುವೆಯಾದಳು... ಫಸ್ಟ್‌ ನೈಟ್‌ನಲ್ಲೇ ಬಯಲಾಯ್ತು ಕರಾಳ ಸತ್ಯ!
ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ