ಹುಡುಗಿ ಅಂತಾ ನಂಬಬೇಡಿ: ಫೋಟೋ ತೆಗೆದು ಬ್ಲಾಕ್ಮೇಲ್ ಮಾಡ್ಬಹುದು ಹುಷಾರ್!

By Suvarna News  |  First Published Jul 17, 2023, 2:55 PM IST

ಯಾರನ್ನೂ ಬ್ಲೈಂಡ್ ಆಗಿ ನಂಬಬಾರದು. ಈಗಿನ ದಿನಗಳಲ್ಲಿ ಮೋಸ ಮಾಡೋರ ಸಂಖ್ಯೆ ಹೆಚ್ಚಾಗಿರುವ ಕಾರಣ ಬೆಣ್ಣೆ ಮಾತಿಗೆ ಮರುಳಾದ್ರೆ ಪಂಗನಾಮ ಬೀಳೋದು ನಿಶ್ಚಿತ. ಪಾಪಾ.. ಈ ಯುವಕನ ಕಥೆಯೂ ಹಾಗೇ ಆಗಿದೆ.
 


ಪ್ರೀತಿ ಹೆಸರಿನಲ್ಲಿ ಮೋಸ ಮಾಡೋರ ಸಂಖ್ಯೆ ಹೆಚ್ಚಾಗ್ತಿದೆ. ಪ್ರೀತಿ ಮಾಡುವಾಗ ಖಾಸಗಿ ಫೋಟೋಗಳನ್ನು ತೆಗೆದುಕೊಳ್ಳುವ ಜನರು ನಂತ್ರ ಪಶ್ಚಾತಾಪಪಡ್ತಾರೆ. ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವಂತೆ ಬೆದರಿಸಿ ಹಣ ಲೂಟಿ ಮಾಡುವವರ ಸಂಖ್ಯೆ ಸಾಕಷ್ಟಿದೆ. ಮತ್ತೆ ಕೆಲವರು ಹಣ ಸಿಗಲಿಲ್ಲ ಎನ್ನುವ ಕಾರಣಕ್ಕೆ ಫೋಟೋಗಳನ್ನು ವೈರಲ್ ಮಾಡಿ, ಪೀಡಿತರ ಸಾವಿಗೆ ಕಾರಣವಾದ ಉದಾಹರಣೆಯಿದೆ. 

ಬರೀ ಪ್ರೀತಿ (Love) ಸಿದ ವ್ಯಕ್ತಿಗಳು ಮಾತ್ರವಲ್ಲ ಸ್ನೇಹದ ಹೆಸರಿನಲ್ಲಿ ಹತ್ತಿರಬರುವ ಅಪರಿಚಿತರ ಬಗ್ಗೆಯೂ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ವ್ಯಕ್ತಿ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಸ್ನೇಹ ಬೆಳೆಸಿದ್ರೆ ಅಥವಾ ಅವರನ್ನು ಕುರುಡಾಗಿ ನಂಬಿದ್ರೆ ಮುಂದೆ ಸಮಸ್ಯೆ ಎದುರಿಸಬೇಕಾಗುತ್ತದೆ. ಲಕ್ನೋ (Lucknow) ದ ವ್ಯಕ್ತಿ ಪರಿಸ್ಥಿತಿಯೂ ಅದೇ ಆಗಿದೆ. ಒಂದೇ ಕಟ್ಟಡದಲ್ಲಿರುವ ಯುವತಿಯನ್ನು ನಂಬಿ ಮೋಸ ಹೋಗಿದ್ದಾನೆ.  ಆತನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗಿದ್ದಲ್ಲದೆ ಕೆಲಸ ಕಳೆದುಕೊಂಡಿದ್ದಾನೆ. ಮದುವೆಯಾಗಬೇಕಿದ್ದ ಹುಡುಗಿ ಕೂಡ ಒಲ್ಲೆ ಎಂದಿದ್ದಾಳೆ. ಎಲ್ಲವನ್ನೂ ಕಳೆದುಕೊಂಡ ಯುವಕ ಈಗ ತಲೆ ಚಚ್ಚಿಕೊಳ್ತಿದ್ದಾನೆ. ಅಷ್ಟಕ್ಕೂ ಆತನ ಕಥೆ ಏನು ಅನ್ನೋದು ಇಲ್ಲಿದೆ.

Latest Videos

undefined

ಹಾರ್ವರ್ಡ್‌ ವಿಜ್ಞಾನಿಗಳ ಸಂಶೋಧನೆ ಯಶಸ್ವಿ, 'ಇನ್ನು ಮುಂದೆ ಜಗತ್ತಲ್ಲಿ ಅಜ್ಜ-ಅಜ್ಜಿ ಆಗೋರೇ ಇಲ್ಲ'!

ನಂಬಿ ಮೋಸ ಹೋದವನ ಕಥೆ ಹೀಗಾಯ್ತು : ಘಟನೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ನಡೆದಿದೆ. ಯುವಕನೊಬ್ಬನ ಅಶ್ಲೀಲ ಫೋಟೋ ತೆಗೆದ ನಂತ್ರ 10 ಲಕ್ಷ ರೂಪಾಯಿ ನೀಡುವಂತೆ ಹುಡುಗಿಯೊಬ್ಬಳು ಬೆದರಿಕೆ ಹಾಕಿದ್ದಾಳೆ. ಯುವಕ ಹಣ ನೀಡದ ಕಾರಣ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಫೋಟೋ ವೈರಲ್ ಆಗ್ತಿದ್ದಂತೆ ಯುವಕ ಕೆಲಸ ಕಳೆದುಕೊಂಡಿದ್ದಾನೆ. ಫಿಕ್ಸ್ ಆಗಿದ್ದ ಮದುವೆ ಕೂಡ ಮುರಿದು ಬಿದ್ದಿದೆ. ಯುವಕ ಸೈಬರ್ ಸೆಲ್ ನಲ್ಲಿ ದೂರು ದಾಖಲಿಸಿದ್ದಾನೆ. 

ಪ್ರಯಾಗ್ ರಾಜ್ ನಿವಾಸಿ ಪೀಡಿತ ಯುವಕ ಸರೋಜಿನಿ ನಗರ ಕೈಗಾರಿಕಾ ಪ್ರದೇಶದಲ್ಲಿ ಆಟೋಫಾರ್ಮ್ ಒಂದರಲ್ಲಿ ಕೆಲಸ ಮಾಡ್ತಿದ್ದ. ಲಕ್ನೋದ ಆಜಾದ್ ನಗರದಲ್ಲಿರುವ ಬಾಡಿಗೆ ಮನೆಯನ್ನು ಈತ ಬಾಡಿಗೆಗೆ ಪಡೆದಿದ್ದ. ಪಕ್ಕದ ಮನೆಯಲ್ಲಿ ಉನ್ನಾವೋದ ಬಿಘಾಪುರ ನಿವಾಸಿ ಹೇಮಾ ಎಂಬ ಹುಡುಗಿ ವಾಸವಾಗಿದ್ದಳು. ಒಂದೇ ಕಟ್ಟಡದಲ್ಲಿ ವಾಸವಾಗಿದ್ದ ಇಬ್ಬರ ಮಧ್ಯೆ ಮೊದಲು ಸ್ನೇಹ ಚಿಗುರಿದೆ. ನಂತ್ರ ಮೊಬೈಲ್ ನಲ್ಲಿ ಚಾಟಿಂಗ್ ಶುರುವಾಗಿದೆ. ಇಬ್ಬರು ಮೊಬೈಲ್ ನಲ್ಲಿ ಮಾತುಕತೆ ಮುಂದುವರೆಸಿದ್ದಾರೆ.

ಅಯೋಧ್ಯೆಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ 25 ರಾಮಸ್ತಂಭ ನಿರ್ಮಾಣ

ಈ ಮಧ್ಯೆ ಹೇಮಾ, ಯುವಕನ ಅಶ್ಲೀಲ ಫೋಟೋವನ್ನು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾಳೆ. ನಂತ್ರ ಅದನ್ನು ವೈರಲ್ ಮಾಡೋದಾಗಿ ಯುವಕನಿಗೆ ಬೆದರಿಸಿದ್ದಾಳೆ. ಹೇಮಾಳ ಮನಸ್ಸು ಬದಲಿಸುವ ಅನೇಕ ಪ್ರಯತ್ನವನ್ನು ಯುವಕ ಮಾಡಿದ್ದಾನೆ. ಆದ್ರೆ ಯುವಕನ ಮಾತನ್ನು ಹೇಮಾ ಕೇಳಲಿಲ್ಲ. ಆಕೆ 10 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ. ಆದ್ರೆ ಯುವಕ ಹಣ ನೀಡಲು ಒಪ್ಪಲಿಲ್ಲ. ಇದ್ರಿಂದ ಕೋಪಗೊಂಡ ಹೇಮಾ, ಯುವಕನ ಮರ್ಯಾದೆ ತೆಗೆಯುವ ಪ್ರಯತ್ನ ನಡೆಸಿದ್ದಾಳೆ. ಹೇಮಾ, ಫೇಸ್ಬುಕ್ ನಲ್ಲಿ ಯುವಕನ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದಾಳೆ. ಫೇಸ್ಬುಕ್ ಖಾತೆ ಮೂಲಕ ಯುವಕನ ಸ್ನೇಹಿತರು ಮತ್ತು ಕುಟುಂಬಸ್ಥರಿಗೆ ರಿಕ್ವೆಸ್ಟ್ ಕಳುಹಿಸಿ ಫ್ರೆಂಡ್ಸ್ ಮಾಡಿಕೊಂಡಿದ್ದಲ್ಲದೆ, ಯುವಕನ ಫೋಟೋಗಳನ್ನು ಪೋಸ್ಟ್ ಮಾಡಲು ಶುರು ಮಾಡಿದ್ದಾಳೆ. 

ಇದ್ರಿಂದ ಯುವಕನಿಗೆ ಅಪಮಾನವಾಗಿದೆ. ಇದೇ ಕಾರಣಕ್ಕೆ ಆತ ಕೆಲಸ ಕೂಡ ಕಳೆದುಕೊಂಡಿದ್ದಾನೆ. ಯುವಕನಿಗೆ ಮದುವೆ ಕೂಡ ಫಿಕ್ಸ್ ಆಗಿತ್ತಂತೆ. ಫೋಟೋ ವೈರಲ್ ಆದ್ಮೇಲೆ ಹುಡುಗಿ ಕಡೆಯವರು ಮದುವೆ ಒಪ್ಪಂದ ಮುರಿದುಕೊಂಡಿದ್ದಾರೆ. ಈಗ ಯುವಕ ಸೈಬರ್ ಸೆಲ್ ಗೆ ಹೋಗಿ ದೂರು ನೀಡಿದ್ದಾನೆ. 

click me!