ಕುಡಿದು ಬಿದ್ದ ಮಾಲೀಕನ ಟಚ್ ಮಾಡೋಕು ಬಿಡದ ನಾಯಿ: ಫೋಟೋಸ್ ವೈರಲ್

By Anusha Kb  |  First Published May 13, 2023, 1:44 PM IST

ಕುಡುಕನೋರ್ವ  ರಸ್ತೆ ಮಧ್ಯದಲ್ಲೇ ಕುಡಿದು ಬಿದ್ದಿದ್ದಾನೆ.  ಕುಡುಕನ ಅವಾಂತರದಿಂದಾಗಿ ರಸ್ತೆ ಪೂರ್ತಿ ಸಂಚಾರ ವ್ಯತ್ಯಯವಾಗಿದೆ. ಹೀಗಾಗಿ ಆತನನ್ನು ರಸ್ತೆಯಿಂದ ಎಳೆದು ದೂರ ಮಲಗಿಸಲು ಸ್ಥಳೀಯರು ಮುಂದಾಗಿದ್ದಾರೆ. ಆದರೆ ಆತನ ಜೊತೆಗೆ ಇದ್ದ ಆತನ ಶ್ವಾನ ಆತನನ್ನು ಜಸ್ಟ್ ಟಚ್ ಮಾಡುವುದಕ್ಕೂ ಯಾರಿಗೂ ಬಿಡದೇ ತನ್ನ ಮಾಲೀಕನ ರಕ್ಷಣೆಗೆ ನಿಂತಿದೆ. 


ನಾಯಿಯಂತಹ ಸ್ವಾಮಿನಿಷ್ಠ ಪ್ರಾಣಿ ಮತ್ತೊಂದಿಲ್ಲ, ತನಗೊಂದು ಹೊತ್ತು ಊಟ ನೀಡಿದವನನ್ನು ಶ್ವಾನ ಎಂದಿಗೂ ಮರೆಯುವುದಿಲ್ಲ. ತನ್ನನ್ನು ಪ್ರೀತಿಸುವವರನ್ನು ಅವರಿಗಿಂತ ಸಾವಿರ ಪಾಲು ಹೆಚ್ಚು ಪ್ರೀತಿಸುವ ಶ್ವಾನದ ಸ್ವಾಮಿನಿಷ್ಠೆಗೆ ಸರಿಸಾಟಿ ಬೇರೇ ಯಾವುದು ಇಲ್ಲ, ನಾಯಿ ತನ್ನ ಮಾಲೀಕನ ರಕ್ಷಿಸಿದ, ತನ್ನ ಪ್ರಾಣವನ್ನೇ ಬಲಿಕೊಟ್ಟು ಮಾಲೀಕನ ಉಳಿವಿಗೆ ಹೋರಾಡಿದ ಅನೇಕ ನಿದರ್ಶನಗಳಿವೆ. ಶ್ವಾನದ ಸ್ವಾಮಿನಿಷ್ಠೆಗೆ ಸಾವಿರ ಉದಾಹರಣೆಗಳಿವೆ. ಅದೇ ರೀತಿ ಇಲ್ಲೊಂದು ಕಡೆ ಶ್ವಾನವೊಂದು ಸ್ವಾಮಿನಿಷ್ಠೆ ಎಲ್ಲರ ಸೆಳೆದಿದೆ.

ಶ್ವಾನಗಳನ್ನು ಮನುಷ್ಯನ ಒಳ್ಳೆಯ ಸ್ನೇಹಿತ ಎಂದೇ  ಪರಿಗಣಿಸಲಾಗುತ್ತದೆ. ತನ್ನ ಮಾಲೀಕ ಹೋದಲೆಲ್ಲಾ ಸಾಗುವ ಶ್ವಾನ (Dog) ಆತನಿಲ್ಲದೇ ಹೋದರೆ ಏನೋ ಕಳೆದುಕೊಂಡಂತೆ ಚಡಪಡಿಸುತ್ತದೆ. ಅದೇ ರೀತಿ ಇಲ್ಲಿ ಕುಡುಕನೋರ್ವ  ರಸ್ತೆ ಮಧ್ಯದಲ್ಲೇ ಕುಡಿದು ಬಿದ್ದಿದ್ದಾನೆ.  ಕುಡುಕನ ಅವಾಂತರದಿಂದಾಗಿ ರಸ್ತೆ ಪೂರ್ತಿ ಸಂಚಾರ ವ್ಯತ್ಯಯವಾಗಿದೆ. ಹೀಗಾಗಿ ಆತನನ್ನು ರಸ್ತೆಯಿಂದ ಎಳೆದು ದೂರ ಮಲಗಿಸಲು ಸ್ಥಳೀಯರು ಮುಂದಾಗಿದ್ದಾರೆ. ಆದರೆ ಆತನ ಜೊತೆಗೆ ಇದ್ದ ಆತನ ಶ್ವಾನ ಆತನನ್ನು ಜಸ್ಟ್ ಟಚ್ ಮಾಡುವುದಕ್ಕೂ ಯಾರಿಗೂ ಬಿಡದೇ ತನ್ನ ಮಾಲೀಕನ ರಕ್ಷಣೆಗೆ ನಿಂತಿದೆ. 

Latest Videos

undefined

ಮೊದಲ ಮಳೆಗೆ ಕುಣಿದು ಕುಪ್ಪಳಿಸಿದ ನಾಯಿ... ವೈರಲ್ ವಿಡಿಯೋ

ದಕ್ಷಿಣ ಅಮೆರಿಕಾದ ಕೊಲಂಬಿಯಾದಲ್ಲಿ (colambia) ಈ ಘಟನೆ ನಡೆದಿದೆ. ನಾಯಿಯ ಮಾಲೀಕ (Owner) ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ಬಿದ್ದಿದ್ದು, ಆತನದ್ದೇ ಲೋಕದಲ್ಲಿ ವಿಹರಿಸುತ್ತಿದ್ದರೆ, ಇತ್ತ ಶ್ವಾನ ಆತನಿಗೆ ಕಾವಲು ಕಾದಿದೆ. ಆದರೆ ರಸ್ತೆ ಮಧ್ಯೆಯೇ ಈ ಘಟನೆ ನಡೆದಿರುವುದರಿಂದ ಟ್ರಾಫಿಕ್ ಸಮಸ್ಯೆಯಾಗಿದ್ದು, ಅನೇಕರು ಆತನನ್ನು ರಸ್ತೆಯಿಂದ ಸರಿಸಲು ಮುಂದಾಗಿದ್ದಾರೆ. ಆದರೆ ಈ ನಾಯಿ ಆತನ ಹತ್ತಿರ ಬಂದವರನ್ನೆಲ್ಲಾ ಬೊಗಳಿ ದೂರ ಓಡಿಸಿದೆ. ಈ ದೃಶ್ಯವೂ ಅನೇಕರ ಕ್ಯಾಮರಾಗಳಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾಯಿಯ ಸ್ವಾಮಿನಿಷ್ಠೆಗೆ ಅನೇಕರು ಬೆರಗಾಗಿದ್ದಾರೆ. 

ರಸ್ತೆ ಮೇಲೆಯೇ ಮಲಗಿ ನಿದ್ದೆಗೆ ಜಾರಿದ ಆತನ ಸ್ಥಿತಿ ಏನು ಎಂಬುದು ಯಾರಿಗೂ ಗೊತ್ತಿಲ್ಲ.  ಕುಡಿತದ ಮತ್ತಿನಲ್ಲಿದ್ದ ಮಾಲೀಕನಿಗೆ ತಾನು ಎಲ್ಲಿದ್ದೇನೆ ಎಂಬ ಪರಿವೆಯೂ ಇಲ್ಲ, ತಾನು ಹಾಸಿಗೆ ಮೇಲೆ ಮಲಗಿ ಸುಖವಾಗಿ ನಿದ್ರಿಸುತ್ತಿದ್ದೇನೆ ಎಂದು ಭಾವಿಸಿಕೊಂಡು ಕುಡಿತದ ಅಮಲಿನಲ್ಲಿ ಆತ ಗಾಢ ನಿದ್ರೆಗೆ ಜಾರಿದ್ದಾನೆ. ಇತ್ತ ವಾಹನ ಸವಾರರು ಆತನನ್ನು ದಾಟಿಕೊಂಡು ಹೋಗಲು ಮುಂದಾಗಿದ್ದರೆ ನಾಯಿ ಜೋರಾಗಿ ಬೊಬ್ಬೆ ಹೊಡೆಯಲು ಶುರು ಮಾಡಿತ್ತು.  ಏಕಾಂಗಿಯಾಗಿ ತನ್ನ ಮಾಲೀಕನ ರಕ್ಷಣೆಗೆ ಮುಂದಾಗಿತ್ತು. ನಾಯಿ ಪೊಲೀಸರೆಡೆಗೆ ನೋಡಿ ಬೊಗಳುತ್ತಿದ್ದರೆ, ಕಡೆಗೂ ಓರ್ವ ವಾಹನ ಸವಾರ ಮುಂದೆ ಬಂದು ಕುಡುಕನ ತಲೆಯಲ್ಲಿದ್ದ ಹೆಲ್ಮೆಟ್ ಅನ್ನು ತೆಗೆದಿದ್ದಾನೆ.  ಇದಾಗಿ ಸುಮಾರು ಹೊತ್ತಿನ ನಂತರ ಆತ ಕಣ್ತರೆದಿದ್ದು,  ತನ್ನ ತಲೆ ಎತ್ತಿ ತನ್ನ ಶ್ವಾನದತ್ತ ನೋಡಿದ್ದಾನೆ. 

ಬೇಡ ಎಂದು ಮಾರಿದ್ರೂ ಹಳೆ ಮಾಲೀಕನ ಹುಡುಕಿ 27 ದಿನ 64 ಕಿಮೀ ನಡೆದ ಶ್ವಾನ

ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಅನೇಕರು ಶ್ವಾನದ ಸ್ವಾಮಿನಿಷ್ಠಗೆ ತಲೆ ಬಾಗಿದ್ದಾರೆ. ನಂತರ ಪೊಲೀಸರು ಹೀಗೆ ಸಾರ್ವಜನಿಕ ಸ್ಥಳದಲ್ಲಿ ಕುಡಿದು ಬಿದ್ದು, ಸಂಚಾರ ನಿಯಮ ಉಲ್ಲಂಘಿಸಿದ ವ್ಯಕ್ತಿಗೆ ದಂಡ ವಿಧಿಸಿದ್ದಾರೆ. ಪ್ರತ್ಯಕ್ಷದರ್ಶಿಯೊಬ್ಬರು ಈ ವಿಡಿಯೋವನ್ನು ಸೆರೆ ಹಿಡಿದಿದ್ದು, ಎಲ್ಲೆಡೆ ವೈರಲ್ ಆಗಿದೆ. ಈ ವೀಡಿಯೋ ನೋಡಿದವರು, ಈ ನಾಯಿಯು ತನ್ನ ಮಾಲೀಕರಿಗೆ ಹೆಚ್ಚು ಅಗತ್ಯವಿರುವ ಸಮಯದಲ್ಲಿ ತೋರಿದ ಬದ್ಧತೆ, ಪ್ರೀತಿ ಮತ್ತು ರಕ್ಷಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆತ ತನ್ನ ಮಾಲೀಕನ ಸ್ಥಿತಿ ಹಾಗೂ ಸುತ್ತಲಿನ ಜನರಿಂದ ಆತನಿಗೆ ಅಪಾಯವೆದುರಾಗಬಹುದು ಎಂದು ಆತಂಕಗೊಂಡಿದ್ದ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 

click me!