ಅವಳನ್ನು ಕಂಡಾಗ ನನ್ನೊಳಗೇನೋ ಸ್ಪಾರ್ಕ್! ಆದ್ರೆ ಅವಳಿಗೆ ಮದುವೆ ಆಗ್ಬಿಟ್ಟಿದೆ!

By Suvarna News  |  First Published May 11, 2023, 3:00 PM IST

ಮದುವೆ ಅನ್ನೋದು ಗಂಡು ಹೆಣ್ಣಿನ ಸಂಬಂಧವನ್ನು ಕಾನೂನು ಬದ್ಧಗೊಳಿಸೋ ವ್ಯವಸ್ಥೆ. ಆದರೆ ಮದುವೆ ಆದಕೂಡಲೇ ಅವಳು ಬೇರೆ ಹುಡುಗರತ್ತ ನೋಡಬಾರದು ಅಂತೇನೂ ಇಲ್ವಲ್ಲ, ಅವಳು ಬೇರೆ ಹುಡುಗರತ್ತ ಆಕರ್ಷಣೆಗೊಳಗಾದದ್ದು ಹೇಗೆ ತಿಳಿಯುತ್ತೆ?


ನಾನೊಬ್ಬ ಸಾಮಾನ್ಯ ಲುಕ್‌ನ ಹುಡುಗ. ಸೈಲೆಂಟಾಗೇ ಇರ್ತೀನಿ. ಹುಡುಗಿಯರೇ ಮಾತಾಡಿಸಿಕೊಂಡು ಬಂದರೂ ಅವರ ಜೊತೆ ಮಿಂಗಲ್ ಆಗೋದು ನನಗೆ ಕಷ್ಟ. ಆದರೆ ಒಬ್ಬ ವಿವಾಹಿತೆ ನನ್ನತ್ತ ಆಕರ್ಷಣೆಗೆ ಬಿದ್ದ ಹಾಗೆ ಕಾಣುತ್ತೆ. ಅವಳನ್ನು ಕಂಡಾಗ ನನ್ನೊಳಗೇನೋ ಸ್ಪಾರ್ಕ್. ಅವಳನ್ನು ನಿರಾಕರಿಸಲು ಸಾಧ್ಯವೇ ಇಲ್ಲ ಅನ್ನುವ ಬಗೆಯ ಫೀಲಿಂಗ್. ಅವಳನ್ನು ಅವಾಯ್ಡ್ ಮಾಡಬೇಕು ಅಂತ ಬಹಳ ಪ್ರಯತ್ನ ಪಟ್ಟೆ. ಆದರೆ ಅವಳು ಬಂದು ಎದುರು ನಿಂತ ಕೂಡಲೇ ಎದೆ ಬಡಿತ ಜೋರಾಗತ್ತೆ. ಅವಳ ಪರ್ಫ್ಯೂಮ್ ಸ್ಮೆಲ್ ಮತ್ತೇರಿಸುತ್ತೆ. ಅವಳು ಹಾಗೇ ನನ್ನ ಸಮೀಪವೇ ಎಂದೆಂದೂ ಇರಲಿ ಅನಿಸುತ್ತೆ. ಅವಳೂ ನನ್ನ ಬಳಿ ಏನಾದರೊಂದು ನೆವ ತೆಗೆದು ಹೆಚ್ಚೆಚ್ಚು ಬರ್ತಾಳೆ, ಅವಳ ಕ್ಯಾರೆಕ್ಟರ್ ಸರಿ ಇಲ್ಲ, ಮದುವೆ ಆಗಿದ್ದುಕೊಂಡೂ ಬೇರೆ ಗಂಡಸಿನ ಕಡೆ ನೋಡೋದು ತಪ್ಪು ಅಂತ ನನ್ನ ಅಕ್ಕ ಹೇಳ್ತಾಳೆ. ಇದನ್ನು ಹೇಗೆ ಡೀಲ್ ಮಾಡಬೇಕೋ ಗೊತ್ತಾಗ್ತಿಲ್ಲ..

ಇದು ಐಟಿ ಕಂಪನಿಯಲ್ಲಿ ಕೆಲಸ ಮಾಡೋ ಒಬ್ಬ ಬ್ಯಾಚುಲರ್‌ನ ಮಾತು. ಅವನದನ್ನು ಸೋಷಿಯಲ್ ಮೀಡಿಯಾದಲ್ಲಿ ಬರ್ಕೊಂಡಿದ್ದಾನೆ. ಒಬ್ಬೊಬ್ಬರು ಇದಕ್ಕೆ ಒಂದೊಂದು ಸಲಹೆ ಕೊಟ್ಟಿದ್ದಾರೆ. ಹೆಚ್ಚಿನವರು ಇದು ಬಹಳ ಡೇಂಜರ್ ಅಂದಿದ್ದಾರೆ. ಆದರೆ ರಕ್ತ ಮಾಂಸ ತುಂಬಿಕೊಂಡಿರೋ ಅವಳಿಗೂ ಆಕರ್ಷಣೆ ಇರುತ್ತಲ್ವಾ, ಮದುವೆ ಆದ ಮಾತ್ರ ಅವನನ್ನು ಬಿಟ್ಟು ಬೇರೆ ಯಾರನ್ನೂ ನೋಡಲಾರೆ ಅಂತ ಬದುಕೋದಕ್ಕೆ ಆಗಲ್ವಲ್ಲಾ ಅಂತ ಒಬ್ಬ ಲೇಡಿ ಇದಕ್ಕೆ ರಿಪ್ಲೈ ಮಾಡಿದ್ದರು. ಆಕೆಯ ಮಾತನ್ನೂ ಅಲ್ಲಗೆಳೆಯಲಾಗದು. ಅದರೆ ಎಷ್ಟೋ ಜನ ಹುಡುಗರಿಗೆ ಒಂದು ಕುತೂಹಲ ಇರುತ್ತೆ. ವಿವಾಹಿತ ಹೆಣ್ಣೊಬ್ಬಳು ತನ್ನ ಮೇಲೆ ಆಕರ್ಷಿತಳಾಗಿದ್ದಾಳೆ ಅನ್ನೋದನ್ನು ಪತ್ತೆ ಹಚ್ಚೋದು ಹೇಗೆ ಅಂತ. ಏಕೆಂದರೆ ಮದುವೆ ಆಗೋ ಮುಂಚೆ ಹುಡುಗರಿಂದ ಅಂತರ ಕಾಯ್ದುಕೊಳ್ಳುವ ಎಷ್ಟೋ ಹುಡುಗಿಯರು ಮದುವೆಯ ಬಳಿಕ ಹುಡುಗರ ಜೊತೆಗೆ ಸಲಿಗೆಯಿಂದಿರುತ್ತಾರೆ. ಇದಕ್ಕೆ ಕಾರಣಗಳು ಹಲವು.

Tap to resize

Latest Videos

ಡೋನಾಗೆ ಕ್ಲೀನ್‌ ಬೋಲ್ಡ್ ಆದ ಸೌರವ್ ಗಂಗೂಲಿ, 'ದಾದಾ' ಇಂಟ್ರೆಸ್ಟಿಂಗ್‌ ಲವ್ ಕಹಾನಿ

ಆದರೆ ವಿವಾಹಿತೆಯೊಬ್ಬಳು ಯುವಕನೊಬ್ಬನತ್ತ ಆಕರ್ಷಿತಳಾಗಿದ್ದಾಳೋ ಇಲ್ವೋ ಅನ್ನೋದನ್ನು ಪತ್ತೆ ಹಚ್ಚೋದು ಬಹಳ ಕಷ್ಟ. ಏಕೆಂದರೆ ಅವಳು ತನ್ನೊಳಗಿನ ಗುಟ್ಟು ಎಲ್ಲೂ ಹೊರಬರದ ಹಾಗೆ ಬಚ್ಚಿಟ್ಟುಕೊಂಡಿರ್ತಾಳೆ. ಮನಸ್ಸು ಹೇಗಿದೆಯೋ ಅದಕ್ಕೆ ವಿರುದ್ಧವಾಗಿ ಅವಳ ವರ್ತನೆ (Behaviour) ಇರಬಹುದು. ಇನ್ನೂ ಕೆಲವೊಮ್ಮೆ ಮೇಲಿನ ಘಟನೆಯಂತೆ ಅವಳು ನೇರವಾಗಿ ಆತನ ಜೊತೆಗೆ ಹೆಚ್ಚೆಚ್ಚು ಸಮಯ ಕಳೆಯಬಹುದು. ಇನ್ನೂ ಕೆಲವು ಸಲ ಎಲ್ಲರನ್ನೂ ಮಾತಾಡಿಸಿ ಅವರೊಬ್ಬರ ಬಳಿ ಜಾಸ್ತಿ ಮಾತಾಡದೇ ಇರಬಹುದು. ಅವರನ್ನು ಆಗಾಗ ನೋಡುತ್ತಿದ್ದು, ನಡುವೆ ಕಣ್ಣು ತಪ್ಪಿಸೋದು ಗಮನಕ್ಕೆ ಬರಬಹುದು. ಹುಡುಗ ಆಕೆಯನ್ನು ನೋಡಲು ಪ್ರಾರಂಭಿಸಿದಾಗ, ಅವಳು ಅಪರಿಚಿತಳಂತೆ ನಟಿಸಲು ಪ್ರಾರಂಭಿಸಬಹುದು.

ಆದರೆ ಎಷ್ಟೋ ಸಲ ಆ ವಿವಾಹಿತ ಹೆಣ್ಣು (Married lady) ಅವನ ಬಗ್ಗೆ ಮನಸ್ಸಲ್ಲಿ ಏನೇನೋ ಯೋಚಿಸಬಹುದು. ಒಂಟಿಯಾಗಿರುವಾಗ ಯಾರೊಂದಿಗೆ ಅವಳು ಆಕರ್ಷಣೆಯಲ್ಲಿ ಬಿದ್ದಿರುತ್ತಾಳೋ ಅದೇ ವ್ಯಕ್ತಿಯ ಬಗ್ಗೆ ಯೋಚಿಸುತ್ತಿರುತ್ತಾಳೆ. ಒಂದು ವೇಳೆ ಅವನ ಜೊತೆ ಭೇಟಿಯಾದರೆ, ಅವನ ಸಾಮೀಪ್ಯ ಸಿಕ್ಕರೆ ಏನು ಮಾಡಬೇಕು ಎಂಬೆಲ್ಲಾ ಆಲೋಚನೆಗಳು (Thoughts) ಆಕೆಯ ಮನಸ್ಸಿನಲ್ಲಿ ನಿರಂತರವಾಗಿ ಓಡುತ್ತಲೆ ಇರುತ್ತದೆ. ಅವರ ಈ ವಿಚಾರಗಳು ಇತರರಿಗೆ ತಿಳಿಯೋದಿಲ್ಲ. ಆದರೆ ಆ ಹುಡುಗಿಗೆ(Girl) ಮಾತ್ರ ಈ ಕಲ್ಪನೆ ಒಳಗೊಳಗೆ ಉತ್ಸುಕತೆ ಮತ್ತು ಸಂತೋಷವನ್ನು ನೀಡುತ್ತವೆ. ಆದರೆ ಆಕರ್ಷಿತಳಾದ ವ್ಯಕ್ತಿಯೊಂದಿಗೆ ಸೆಕ್ಸ್‌ ಅನ್ನು ಆಕೆ ತಪ್ಪು ಅಂತ ಪರಿಗಣಿಸೋದಿಲ್ಲ. ಅದನ್ನು ಮೋಜಿಗಿಂತಲೂ ಭಾವನಾತ್ಮಕ ಬಾಂಧವ್ಯ (Emotional Relationship_ ಅಂತಲೇ ಪರಿಗಣಿಸುತ್ತಾಳೆ. ಇಂಥಾ ಹೆಣ್ಣುಮಕ್ಕಳನ್ನು ಯಾಮಾರಿಸೋದೂ ಕಷ್ಟವೇ.

Relationship Tips : ಪತ್ನಿ – ಪಾಲಕರ ಮಧ್ಯೆ ಸುಸ್ತಾಗಿರುವ ಗಂಡಸರಿಗೆ ಕಿವಿ ಮಾತು

click me!