ಪುಟಾಣಿ ಅಕ್ಕ ತಮ್ಮನ ಸೂಪರ್ ಮ್ಯಾಜಿಕ್: ವಿಡಿಯೋ ನೋಡಿದ್ರೆ ನಗೋದೆ ಇರಲ್ಲ..!

By Anusha Kb  |  First Published May 9, 2023, 1:19 PM IST

ಇಲ್ಲೊಂದು ಕಡೆ ಬಾಲ್ಯದ ದಿನಗಳನ್ನು ಮರು ನೆನಪು ಮಾಡಿದ್ದಾರೆ ಪುಟಾಣಿ ಅಕ್ಕ ತಮ್ಮ, ಅವರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲರಿಗೂ ಬಾಲ್ಯದ ನೆನಪು ಮರುಕಳಿಸುವಂತೆ ಮಾಡಿದೆ. 


ಒಡಹುಟ್ಟಿದವರ ಜೊತೆಗಿನ ಬಾಲ್ಯದ ಒಡನಾಟ ಚಿರಕಾಲ ನಮ್ಮ ನೆನಪಿನಲ್ಲಿ ಉಳಿಯುತ್ತದ್ದೆ. ಅಕ್ಕ ತಂಗಿ ಅಣ್ಣ ತಮ್ಮಂದಿರ ಜೊತೆಗೂಡಿ ಪರಸ್ಪರ ಜುಟ್ಟು ಜುಟ್ಟು ಹಿಡಿದು ಕಿತ್ತಾಡಿ ಅಪ್ಪ ಅಮ್ಮನ ಕೈಯಲ್ಲಿ ಬೆತ್ತ ಹುಡಿಯಾಗುವಂತೆ ಹೊಡೆಸಿಕೊಂಡಿರುವುದು ಕೂಡ ನೆನಪಿನಾಳದಲ್ಲಿ ಮೂಡಿ ಈಗ ನಗು ಮೂಡಿಸುತ್ತದೆ. ಎಷ್ಟು ಕಿತ್ತಾಡಿದರೂ ಹೊಡೆದು ಪರಚಿ ಗಾಯ ಮಾಡಿಕೊಂಡರು ಮತ್ತೆ ಸ್ವಲ್ಪ ಹೊತ್ತಿನಲ್ಲೇ ಒಂದಾಗಿ ಆಟ ಶುರು ಮಾಡುವ ಬಾಲ್ಯದ ಆ ದಿನಗಳು ಸದಾ ಮಧುರ. ಇಲ್ಲೊಂದು ಕಡೆ ಇಂತಹ ಬಾಲ್ಯದ ದಿನಗಳನ್ನು ಮರು ನೆನಪು ಮಾಡಿದ್ದಾರೆ ಪುಟಾಣಿ ಅಕ್ಕ ತಮ್ಮ, ಅವರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲರಿಗೂ ಬಾಲ್ಯದ ನೆನಪು ಮರುಕಳಿಸುವಂತೆ ಮಾಡಿದೆ. 

ಹಾಗೆಯೇ ಇಲ್ಲೊಂದು ಕಡೆ ಪುಟ್ಟ ಅಕ್ಕ ತಮ್ಮ ಇಬ್ಬರು ಸೇರಿ ಮ್ಯಾಜಿಕ್ (magic) ಮಾಡುವ ಆಟ ಆಡುತ್ತಿದ್ದಾರೆ. ಅಕ್ಕ ಹಾಗೂ ತಮ್ಮ ಇಬ್ಬರು ನಿಂತುಕೊಂಡಿದ್ದು, ಅಕ್ಕ ದೊಡ್ಡದಾದ ಟವೆಲ್‌ ಒಂದನ್ನು ಬಿಡಿಸಿ ಹಿಡಿದುಕೊಂಡಿದ್ದಾಳೆ. ತಮ್ಮನನ್ನು ಮಾಯ ಮಾಡುವ ಮ್ಯಾಜಿಕ್ ಅನ್ನು ಅಕ್ಕ ಮಾಡಲು ಮುಂದಾಗಿದ್ದಾಳೆ. ಬಾಗಿಲಲ್ಲಿ ನಿಂತುಕೊಂಡು  ಅಕ್ಕ(elder sister) ತಮ್ಮ (Younger Brother) ಈ ಮ್ಯಾಜಿಕ್ ಮಾಡಲು ಮುಂದಾಗಿದ್ದು, ಅಕ್ಕ ಟವೆಲ್‌ನ್ನು ಬಾಗಿಲಿನತ್ತ ಸರಿಸುತ್ತಿದ್ದಂತೆ ಅಕ್ಕನ ಬಳಿ ನಿಂತಿರುವ ತಮ್ಮ ಆ ಟವೆಲ್ ಹಿಂದಿನಿಂದ ಹೋಗಿ  ಮೆಲ್ಲನೆ ಬಾಗಿಲ ಪಕ್ಕದಲ್ಲಿರುವ ಗೋಡೆಯ ಬದಿಯಲ್ಲಿ ಅಡಗಿಕೊಳ್ಳಬೇಕು. ನಂತರ ಅಕ್ಕ ಟವೆಲ್ ಸರಿಸಿದಾಗ ತಮ್ಮ ಅಲ್ಲಿರುವುದಿಲ್ಲ. ಆದರೆ ಪುಟ್ಟ ತಮ್ಮ ಬಾಗಿಲ ಪಕ್ಕದಲ್ಲಿ ಅಡಗುವ ವೇಳೆ ಆತನ ಎರಡು ಪುಟ್ಟ ಕಾಲು ಹಾಗೂ ಹಿಂಭಾಗ ಎದುರಿದ್ದವರಿಗೆ ಕಾಣಿಸುತ್ತಿದ್ದು, ಇದನ್ನು ನೋಡಿದ ಆತನ ಅಕ್ಕಯ್ಯ ತಮ್ಮನ ಹಿಂಭಾಗಕ್ಕೆ ಒದ್ದು, ಅತನನ್ನು ಬಾಗಿಲಿನಿಂದ ಹಿಂದಕ್ಕೆ ಸರಿಸಿ ಕಾಣದಂತೆ ಮಾಡುತ್ತಾಳೆ. ನಂತರ ಜಾದೂ ಮಾಡುವವರು ಮಾಡಿದಂತೆ ಕೈಯನ್ನು ತೋರಿಸಿ ಮಾಯಾವಾಗಿದ್ದಾಗಿ ತೋರಿಸುತ್ತಾಳೆ. 

Tap to resize

Latest Videos

Traditional Game : ನಿಮ್ಮ ಬಾಲ್ಯ ನೆನಪಿಸುವ ಈ ಆಟ ಯಾವುದು ಹೇಳಿ?

11 ಸೆಕಂಡ್‌ಗಳ ಈ ವಿಡಿಯೋ ನೋಡಿದ ಅನೇಕರಿಗೆ ತಮ್ಮ ಬಾಲ್ಯದ ನೆನಪಾಗಿದೆ. Harsh Mariwala (@hcmariwala) ಎಂಬುವವರು ಇನ್ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದು, ಇತಿಹಾಸದಲ್ಲೇ ಅತ್ಯಂತ ಉತ್ತಮವಾದ ಮ್ಯಾಜಿಕ್ ಟ್ರಿಕ್ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನು 3 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು,  ಅನೇಕರು ನಗುವ ಇಮೋಜಿ ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ದೊಡ್ಡಕ್ಕ ಯಾವಾಗಲೂ ಹೀಗೆ ಇರ್ತಾಳೆ ಎಂದು ಒಬ್ಬರು ಕಾಮೆಂಟ್ ಮಾಡಿದ್ರೆ, ಮತ್ತೊಬ್ಬರು  ಬಹಳ ಮುದ್ದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. 

ಒಟ್ಟಿನಲ್ಲಿ ಇದು ಅನೇಕರಿಗೆ ಬಾಲ್ಯದ ನೆನಪು ಮಾಡಿರುವುದಂತು ಸುಳ್ಳಲ್ಲ. ಬಾಲ್ಯದಲ್ಲಿರುವಾಗ ನೀವು ದೊಡ್ಡವರು ಸಣ್ಣವರು ಎಂಬುದ್ಯಾವುದು ಲೆಕ್ಕಕ್ಕೆ ಬರುವುದಿಲ್ಲ. ದೊಡ್ಡವರಾಗಿದ್ದರೂ ನೀವು ಸಣ್ಣವರ ಮುಂದೆ ಅವರಿಗಿಂತ ಸಣ್ಣವರಂತೆ ಆಡಿ ಪಕ್ಕಾ ಅಪ್ಪ ಅಮ್ಮನ ಕೈಯಲ್ಲಿ ಏಟ್ ತಿಂದಿರ್ತಿರಾ?  ಇನ್ನು ಮನೆಯಲ್ಲಿ ದೊಡ್ಡ ಮಗುವಾಗಿ ಹುಟ್ಟಿದ್ದರೆ ನೀವು ಗೆದ್ದರೂ ಸೋತಂತೆ ನಟಿಸಬೇಕು. ಇಲ್ಲದಿದ್ದರೆ, ನಿಮ್ಮ ಸಂಭ್ರಮ ನೋಡಿ, ನಿಮ್ಮ ಒಡಹುಟ್ಟಿದ ಸಣ್ಣವ ಅತ್ತು ಕರೆದು ಅಪ್ಪ ಅಮ್ಮನನ್ನು ಸೇರಿಸಿ ಏಟು ತಿನಿಸುವ ಆ ದಿನಗಳನ್ನು ಎಂದು ಮರೆಯಲಾಗದು. 

ನಿಮ್ಮ ಬಾಲ್ಯ ನೆನಪಿಸಿಕೊಳ್ಳಬೇಕಾದರೆ, ಒಮ್ಮೆ ಈ ಫೋಟೋಸ್ ನೋಡಿ!

ಈಗ ಪ್ರತಿ ಮನೆಯಲ್ಲಿ ಒಬ್ಬರೋ ಇಬ್ಬರೋ ಮಕ್ಕಳಿದ್ದರೆ ಆಗ ಮನೆ ತುಂಬಾ ಮಕ್ಕಳಿರುತ್ತಿದ್ದರು.  ಜೊತೆಗೆ ಅಕ್ಕ ಪಕ್ಕದ ಮನೆಯ ಮಕ್ಕಳು ಚಿಕ್ಕಪ್ಪ ದೊಡ್ಡಪ್ಪಂದಿರ ಮಕ್ಕಳು ಜೊತೆಯಾಗಿ ಅಲ್ಲಿ ಒಂದು ಪುಟ್ಟ ಅಂಗನವಾಡಿಯಂತಾಗಿರುತ್ತಿತ್ತು. ಎಲ್ಲರೂ ಸೇರಿ ಆಡುವ ಕಣ್ಣಾಮುಚ್ಚಾಲೆ,  ಕುಂಟೆಬಿಲ್ಲೆ, ಹೆಣ್ಣು ಮಕ್ಕಳ ಅಡುಗೆ, ಲಗೋರಿ (Lagori) ಆಟಗಳು ದೈಹಿಕ ಆರೋಗ್ಯದ ಜೊತೆ ಮಕ್ಕಳ ಮಾನಸಿಕ ಬೆಳವಣಿಗೆಗೂ  ಸಹಾಯ ಮಾಡುತ್ತಿತ್ತು.  

Best magic trick ever played in history. 😄pic.twitter.com/bzsPqfyZrC

— Harsh Mariwala (@hcmariwala)


 

click me!