MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Relationship
  • ನಿಮ್ಮ ಬಾಲ್ಯ ನೆನಪಿಸಿಕೊಳ್ಳಬೇಕಾದರೆ, ಒಮ್ಮೆ ಈ ಫೋಟೋಸ್ ನೋಡಿ!

ನಿಮ್ಮ ಬಾಲ್ಯ ನೆನಪಿಸಿಕೊಳ್ಳಬೇಕಾದರೆ, ಒಮ್ಮೆ ಈ ಫೋಟೋಸ್ ನೋಡಿ!

ಈ 90 ದಶಕದ ಮಕ್ಕಳ ಜಗತ್ತೆ ವಿಭಿನ್ನವಾಗಿತ್ತು. ತಂತ್ರಜ್ಞಾನ ಆಗಷ್ಟೇ ಹುಟ್ಟಿಕೊಳ್ಳುತ್ತಿರುವ ಸಮಯವದು. ಮೊಬೈಲ್, ಕಂಪ್ಯೂಟರ್ನಿಂದ ದೂರವೇ ಇದ್ದ ದಿನಗಳವು. ಹಾಗಾಗಿ ಆ ದಿನಗಳು ಹಲವಾರು ನೆನಪುಗಳನ್ನು ಬಿಚ್ಚಿಡುತ್ತವೆ. ನೀವು 90 ದಶಕದವರಾಗಿದ್ರೆ ಈ ಎಲ್ಲಾ ನೆನಪುಗಳನ್ನು ನೀವು ಮಿಸ್ ಮಾಡಿಕೊಳ್ಳೋದು ಖಂಡಿತ.  

2 Min read
Suvarna News
Published : Apr 13 2023, 02:18 PM IST| Updated : Apr 13 2023, 02:21 PM IST
Share this Photo Gallery
  • FB
  • TW
  • Linkdin
  • Whatsapp
110

ಪಾರ್ಲೆ ಕಿಸ್ಮಿ (Parle Kismi)
ಚಾಕೊಲೇಟ್‌ಗಳು ಮತ್ತು ಕ್ಯಾಂಡಿಗಳು ನಮ್ಮ ಬಾಲ್ಯದ ಅತ್ಯಂತ ಕುತೂಹಲಕಾರಿ ನೆನಪುಗಳಲ್ಲಿ ಒಂದಾಗಿದೆ. ಚಾಕೊಲೇಟ್ ಮೊದಲ ಬಾರಿಗೆ ಮಾರುಕಟ್ಟೆಗೆ ಪ್ರವೇಶಿಸಿದಾಗ ಅದರ ಬೆಲೆ 25 ಪೈಸೆ ಆಗಿತ್ತು. ಈ ಪಾರ್ಲೆ ಕಿಸ್ಮಿ ಅಂದ್ರೆ ನಾವು ಜೀವ ಬಿಡ್ತಿದ್ದಂತೂ ನಿಜ. 

210

WWF ಟ್ರೇಡಿಂಗ್ ಕಾರ್ಡ್ (WWF trading card)
ಈ ಆಟದ ಮಜಾನೆ ಬೇರೆ. ಈ ಆಟವಿಲ್ಲದೆ ಯಾರ ಬಾಲ್ಯವೂ ಪೂರ್ಣಗೊಳ್ಳಲು ಸಾಧ್ಯವಿಲ್ಲ. WWF - ವರ್ಲ್ಡ್ ವ್ರೆಸ್ಲಿಂಗ್ ಫೆಡರೇಶನ್ (ಈಗ WW ಎಂದು ಕರೆಯಲ್ಪಡುತ್ತದೆ) ನಾವೆಲ್ಲರೂ ನಂಬುವ ವಿಷಯವಾಗಿತ್ತು, ರೆಸ್ಲರ್ ಗಳ ಕಾರ್ಡ್ ಗಳನ್ನು ಇಟ್ಟುಕೊಂಡು, ಆ ಸೂಪರ್ಸ್ಟಾರ್ಗಳು ಎತ್ತರ, ತೂಕ, ಬೈಸೆಪ್ಸ್ , ಎಷ್ಟು ಸಲವಿನ್ ಆಗಿದ್ರೂ ಇದೆಲ್ಲವನ್ನು ಇಟ್ಕೊಂಡು ಕಾರ್ಡ್ಸ್ ರೀತಿ ಆಡುತ್ತಿದುದರ ಮಜಾನೆ ಬೇರೆ. ಕೊನೆಗೆ ಯಾರ ಬಳಿ ಜಾಸ್ತಿ ಕಾರ್ಡ್ಸ್ ಇರುತ್ತಿತ್ತೋ ಅವರೇ ಸೂಪರ್ ಸ್ಟಾರ್ ಆಗುತ್ತಿದ್ರು.

310

ಶಕ್ತಿಮಾನ್ (Shaktiman)
ಕ್ರಿಶ್, ಥಾರ್, ಸ್ಪೈಡರ್ ಮ್ಯಾನ್, ಸೂಪರ್ ಮ್ಯಾನ್… ಯಾವ ಮ್ಯಾನ್ ಕೂಡ ಇಲ್ಲಾಯ್ತು ಆವಾಗ. ಆವಾಗ ಪ್ರಸಿದ್ಧ ಭಾರತೀಯ ಸೂಪರ್ ಹೀರೋ ಅಂದ್ರೆ ದೂರದರ್ಶನ ಕಾರ್ಯಕ್ರಮವಾದ ಶಕ್ತಿಮಾನ್. ಇದರಲ್ಲಿ ಶಕ್ತಿಮಾನ್ ಆಗಿ ಮುಖೇಶ್ ಖನ್ನಾ ನಟಿಸಿದ್ದರು. ಈ ಕಾರ್ಯಕ್ರಮ ವೀಕ್ಷಿಸಲು ಭಾನುವಾರಕ್ಕಾಗಿ ಕಾತುರದಿಂದ ಕಾಯುತ್ತಿದ್ದ ದಿನಗಳವು. 
 

410

ದೇಸಿ ಹೋಮ್ ಥಿಯೇಟರ್ (Desi Home theater)
ಆವಾಗೆಲ್ಲಾ ಟಿವಿ ಎಲ್ಲರ ಮನೆಯಲ್ಲಿ ಇರಲಿಲ್ಲ. ಥಿಯೇಟರ್ ಗಂತೂ ಹೋಗೋದು ಕಡಿಮೆ. ಆ ಸಮಯದಲ್ಲಿ ಬಯೋಸ್ಕೋಪ್ ಪ್ರದರ್ಶನವು ಪ್ರಯಾಣಿಸುವ ಚಲನಚಿತ್ರ ಮಂದಿರವಾಗಿದ್ದು, ಇದು ಸಂಗೀತ ಸಭಾಂಗಣ ಮತ್ತು ಫೇರ್ ಗ್ರೌಂಡ್ ಆಕರ್ಷಣೆಯಾಗಿ ಕಾರ್ಯನಿರ್ವಹಿಸಿತು.

510

ಪೆಪ್ಸಿ ಕೋಲಾ (Pepso Cola)
ಈಗೀನ ಐಸ್ ಕ್ರೀಮ್ ಕೋನ್, ಕಪ್, ಬಫೆಟ್ ಮುಂದೆ ಆ ಕಾಲದ ಪೆಪ್ಸಿ ಕಾಣಿಯಾಗಿದೆ ಎಂದೇ ಹೇಳಬಹುದು. ಇದನ್ನು 90ರ ದಶಕದ ಮಕ್ಕಳ ಫೆವರಿಟ್ ವಸ್ತು ಎಂದೇ ಹೇಳಬಹುದು. ಒಂದು ರೂಪಾಯಿ ಹಿಡಿದುಕೊಂಡು ಅಂಗಡಿಗೆ ಹೋಗಿ ಅಥವಾ ಇನ್ನೆಲ್ಲೋ ಗಂಟೆ ಸದ್ದು ಮಾಡುತ್ತಾ ಐಸ್ ಕ್ಯಾಂಡಿಯವನು ಬಂದ ಎಂದ್ರೆ ಸಾಕು ಓಡೋಡಿ ಹೋಗಿ ಖರೀದಿ ಮಾಡ್ತಿದ್ವಿ.

610

ಕೋಲ್ಗೇಟ್ ಟೂತ್ ಪೌಡರ್ (Colgate Tooth Powder)
ವಸ್ತುಗಳು, ಸ್ಥಳಗಳು ಮತ್ತು ಜನರ ಹಳೆಯ ಚಿತ್ರಗಳು ಆಗಾಗ್ಗೆ ನಮ್ಮನ್ನು ಹಳೆಯ ಸಮಯಕ್ಕೆ ಕರೆದೊಯ್ಯುತ್ತವೆ, ಸಂತೋಷದ ಸಮಯಗಳ ಬಗ್ಗೆ ನೆನಪಿಸುತ್ತವೆ. ಅದು ಕೋಲ್ಗೇಟ್ ಹಲ್ಲಿನ ಪುಡಿಯಾಗಿರಲಿ, ನಾವೆಲ್ಲರೂ ಜೀವನವು ತುಂಬಾ ಸುಲಭವಾಗಿದ್ದ ದಿನಗಳನ್ನು ಮಿಸ್ ಮಾಡಿಕೊಳ್ಳುತ್ತೇವೆ. ಈ ರಾಶಿ ರಾಶಿ ಪೇಸ್ಟ್ ಗಳ ಅಬ್ಬರದಲ್ಲಿ ಕೋಲ್ಗೇಟ್ ಟೂತ್ ಪೌಡರ್ ಕಾಣೆಯಾಗಿದೆ.

710

ಕ್ಯಾಸೆಟ್ ಟೇಪ್  (Casset Tape)
ಸಾಮಾನ್ಯವಾಗಿ ಕ್ಯಾಸೆಟ್ ಟೇಪ್ ಎಂದು ಕರೆಯಲ್ಪಡುವ ಕಾಂಪ್ಯಾಕ್ಟ್ ಕ್ಯಾಸೆಟ್ ಅನ್ನು ಲೌ ಒಟ್ಟೆನ್ಸ್ ಮತ್ತು ಅವರ ತಂಡವು ಕಂಡುಹಿಡಿದಿದೆ. ಈ ಕ್ಯಾಸೆಟ್ ಹಾಕಿಕೊಂಡು ಹಾಡು ಕೇಳೋದು, ಸಿನಿಮಾ ಆಡಿಯೋ ಕೇಳೋದು, ಫಾರ್ವರ್ಡ್, ಬ್ಯಾಕ್ ವರ್ಡ್ ಮಾಡ್ಕೊಂಡು ಡ್ಯಾನ್ಸ್ ಕಲಿತಿದ್ದದ್ದೂ ವಾವ್… ಇನ್ನೂ ನೆನಪಾಗುತ್ತೆ.

810

ಚಂಪಕ, ಬಾಲಮಂಗಳ (Champaka, Balamangala)
ಈವಾಗ ಮಕ್ಕಳಿಗೆ ಕಾರ್ಟೂನ್ ನ ವಿವಿಧ ಚಾನೆಲ್ ಗಳಿವೆ, ಮಕ್ಕಳು ಅದನ್ನೇ ನೋಡುತ್ತಾ ಬೆಳೆದುಕೊಂಡು ಬರ್ತಿದ್ದಾರೆ. ಆದ್ರೆ ನಮ್ಮ ಆ ಕಾಲದಲ್ಲಿ ಪುಸ್ತಕವೇ ಪ್ರಪಂಚವಾಗಿತ್ತು. ಈ ಚಂಪಕ, ಬಾಲಮಂಗಳ ಮೊದಲಾದ ಪುಸ್ತಕಗಳು ನಮ್ಮ ಕುತೂಹಲ ಹೆಚ್ಚಿಸಿದಂತೆ, ನೀತಿಯನ್ನು ತಿಳಿಸಿದಂತೆ ಮತ್ಯಾವ ಕಥೆಗಳು ಸಹ ತಿಳಿಸಿರಲಾರದು. 
 

910

ಬೂಮರ್ (Boomer)
ಅದೆಷ್ಟೇ ಚೂಯಿಂಗ್ ಗಮ್ ಬರಬಹುದು. ಆದರೆ ನಮ್ಮ ಫೆವರಿಟ್ ಯಾವಾಗ್ಲೂ ಬೂಮರ್ ಆಗಿರುತ್ತೆ. ಚೂಯಿಂಗ್ ಗಮ್ ನ ನಿಜವಾದ ಕಿಂಗ್ ನ್ನು ಬಾಲ್ಯದಲ್ಲಿ ನಮಗೆ ಪರಿಚಯಿಸಿದ್ದು ಇದೇ ಬೂಬರ್. ದೊಡ್ಡ ಗಮ್ ಬಲೂನ್ ಅನ್ನು ಯಾರು ತಯಾರಿಸಬಹುದು ಎಂದು ನೋಡಲು ನಾವು ಸ್ಪರ್ಧಿಸುತ್ತಿದ್ದೆವು. ಆದ್ರೆ ಆವಾಗ ತಿನ್ನೋದಕ್ಕೂ ಭಯ ಪಡ್ತಿದ್ವಿ, ಎಲ್ಲಾದ್ರೂ ನುಂಗಿದ್ರೆ ಏನು ಮಾಡೋದು ಅನ್ನೋ ಭಯ ಕೂಡ ಇತ್ತು.
 

1010

ಕಳ್ಳ ಪೋಲೀಸ್
ಈ ಆಟ ನಮ್ಮ ಬಾಲ್ಯ ಜೀವನದ ಅತ್ಯಂತ ಸಂತೋಷದ ಸಮಯವನ್ನು ನೆನಪಿಸುತ್ತೆ. ಹೌದು.. ಕಳ್ಳ, ಪೊಲೀಸ್, ರಾಜ, ರಾಣಿ ಎಂದೆಲ್ಲಾ ಚೀಟಿಯಲ್ಲಿ ಬರೆದು ಪೋಲೀಸ್ ಕಳ್ಳನನ್ನು ಹುಡುಕುವಂತೆ ಮಾಡುವ ಈ ಆಟ, ಬಾಲ್ಯದ ರಜಾದಿನಗಳಲ್ಲಿ ಕಸಿನ್ಸ್ ಎಲ್ಲಾ ಸೇರಿದಾಗ ಅಜ್ಜಿಮನೆಯಲ್ಲಿ ಆಡುವಂತಹ ಮುಖ್ಯ ಆಟವಾಗಿತ್ತು.

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved