ನಿನ್ನಂಥಾ ಕಂದ ಇಲ್ಲ..ಅನಾರೋಗ್ಯಕ್ಕೀಡಾದ ಅಮ್ಮನಿಗೆ ಊಟ ತಯಾರಿಸಿದ ಪುಟ್ಟ ಮಗ

By Vinutha Perla  |  First Published Feb 22, 2023, 2:54 PM IST

ಪ್ರಪಂಚದಲ್ಲಿ ತಾಯಿ-ಮಗುವಿನ ಬಾಂಧವ್ಯಕ್ಕೆ ಬೆಲೆ ಕಟ್ಟಲಾಗದು. ಮಕ್ಕಳಲ್ಲಿ ತಾಯಿ ತನ್ನ ಪ್ರಪಂಚವನ್ನೇ ಕಾಣುತ್ತಾಳೆ. ಹಾಗೆಯೇ ಮಗುವೂ ತನ್ನ ತಾಯಿಯನ್ನು ಸರ್ವಸ್ವ ಎಂದುಕೊಳ್ಳುತ್ತದೆ. ತಾಯಿ-ಮಗನ ಸಂಬಂಧ ಅದೆಷ್ಟು ಅದ್ಭುತ ಅನ್ನೋದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ.


ಅಮ್ಮ-ಮಗುವಿನ ಬಾಂಧವ್ಯವೆಂದರೆ ಅದು ಪದಗಳಿಗೆ ನಿಲುಕದ್ದು. ಇಬ್ಬರ ನಡುವಿನ ಪ್ರೀತಿ, ಆಪ್ತತೆ, ಮಮಕಾರ ಎಂಥವರನ್ನೂ ಮಂತ್ರಮುಗ್ಧಗೊಳಿಸುತ್ತದೆ. ಅದರಲ್ಲೂ ತಾಯಿಯಾದವಳು ತನ್ನ ಮಗುವಿನಲ್ಲಿ ಪ್ರಪಂಚವನ್ನೇ ಕಾಣುತ್ತಾಳೆ. ಮಗುವಿನ ಲಾಲನೆ-ಪಾಲನೆ, ಕಾಳಜಿ ವಹಿಸುವುದರಲ್ಲೇ ಸಮಯ ಕಳೆದುಬಿಡುತ್ತಾಳೆ. ಮಗುವಿಗೆ ಸ್ಪಲ್ಪ ಹುಷಾರು ತಪ್ಪಿದರಂತೂ ಆಕೆಯ ಪಾಲಿಗೆ ಪ್ರಪಂಚವೇ ಮುಳುಗಿ ಹೋದಂತೆ ಆಗಿಬಿಡುತ್ತದೆ. ಮಗುವಿಗೆ ಆರೋಗ್ಯಯುತ ಆಹಾರ ಕೊಡುವುದು, ಸರಿಯಾದ ಸಮಯಕ್ಕೆ ಔಷಧಿ ಕೊಡುವುದು ಹೀಗೆ ದಿನಪೂರ್ತಿ ಆರೈಕೆಯಲ್ಲೇ ಕಳೆದುಬಿಡುತ್ತಾಳೆ. ಮಗು ಹುಷಾರಾಗಿ ಓಡಾಡುವಂತಾದಾಗಲೇ ಆಕೆಗೆ ನೆಮ್ಮದಿ. ಮಗು ಸಹ ಆರೋಗ್ಯ ಸರಿಯಿಲ್ಲದಿದ್ದಾಗ ತಾಯಿಯನ್ನು ಬಿಟ್ಟು ಇನ್ಯಾರನ್ನೂ ತನ್ನ ಸನಿಹ ಬಯಸುವುದಿಲ್ಲ.

ಮಕ್ಕಳಿಗೆ ಆರೋಗ್ಯ (Health) ಸರಿಯಿಲ್ಲದಿದ್ದಾಗ ಪೋಷಕರು ಕಂಗೆಡುವಂತೆಯೇ, ಮಕ್ಕಳು ಸಹ ಪೋಷಕರು (Parents) ಹುಷಾರು ತಪ್ಪಿದಾಗ ಬೇಜಾರಾಗುತ್ತಾರೆ. ಅವರ ಕಾಳಜಿ (Care) ವಹಿಸಲು ಮುಂದಾಗುತ್ತಾರೆ. ಹಾಗೆಯೇ ಇಲ್ಲೊಬ್ಬ ಬಾಲಕ ಆರೋಗ್ಯ ಸರಿಯಿಲ್ಲದ ತನ್ನ ತಾಯಿಯ ಕಾಳಜಿ ವಹಿಸಿರೋ ಪೋಸ್ಟ್ ಎಲ್ಲೆಡೆ ವೈರಲ್ ಆಗ್ತಿದೆ. ತಾಯಿ ಎರಿನ್‌ ರೀಡ್ ಎಂಬವರು ಈ ಪೋಸ್ಟ್‌ನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Tap to resize

Latest Videos

ಕಂದಾ ಭಯಭೇಡ ನಾನಿರುವೆ..ಏಳು ನಿಮಿಷ ಚಿರತೆಯೊಂದಿಗೆ ಕಾದಾಡಿ ಮಗುವನ್ನು ರಕ್ಷಿಸಿದ ತಾಯಿ

ಕೋವಿಡ್‌ನಿಂದ ಬಳಲುತ್ತಿರುವ ತಾಯಿಗಾಗಿ ಆಹಾರ ತಯಾರಿಸಿದ ಪುಟ್ಟ ಬಾಲಕ
ಕೋವಿಡ್-19ನಿಂದ ಬಳಲುತ್ತಿರುವ ತನ್ನ ತಾಯಿಗಾಗಿ ಬಾಲಕನೊಬ್ಬ ಊಟವನ್ನು ಸಿದ್ಧಪಡಿಸುತ್ತಾನೆ. ಅದನ್ನು ಭಾವುಕವಾದ ಒಂದು ನೋಟ್‌ ಜೊತೆಯಲ್ಲಿ ತಾಯಿಯ ಕೋಣೆಯ ಹೊರಗಡೆ ಇಡುತ್ತಾನೆ. 'ಅಮ್ಮ, ನಾನು ಈ ಆಹಾರವನ್ನು ನಿಮಗಾಗಿ ಮಾಡಿದ್ದೇನೆ. ಇದು ಪರಿಪೂರ್ಣವಾಗಿಲ್ಲದಿದ್ದರೆ, ಕ್ಷಮಿಸಿ' ಎಂದು ಪುಟ್ಟ ಚೀಟಿಯಲ್ಲಿ ಬಾಲಕ (Little boy) ಬರೆದಿಟ್ಟಿದ್ದಾನೆ. ಅಂಕುಡೊಂಕಾದ ಅಕ್ಷರಗಳಲ್ಲಿ ಬಾಲಕ ಬರೆದಿರುವುದು ಮನಮುಟ್ಟುವಂತಿದೆ.

ಬಾಲಕ ತಯಾರಿಸಿದ ಆಹಾರದ (Food) ಫೋಟೋ ಮತ್ತು ಪುಟ್ಟದಾದ ನೋಟ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಾಯಿ ಎರಿನ್ ರೀಡ್ ತನ್ನ ಮಗ ತನಗಾಗಿ ಸಿದ್ಧಪಡಿಸಿದ ಊಟದ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಇದಕ್ಕೆ 'ನಾನು ಕೋವಿಡ್‌ನಿಂದ ಅಸ್ವಸ್ಥಳಾಗಿದ್ದೇನೆ. ಆದರೆ ನನ್ನ ಮಗ ಏನು ಮಾಡಿದ್ದಾನೆ ನೋಡಿ. ನನಗಾಗಿ ಆಹಾರ ತಯಾರಿಸಿ ಕೋಣೆಯ ಮುಂದೆ ಇಟ್ಟಿದ್ದಾನೆ' ಎಂದು ಶೀರ್ಷಿಕೆ ನೀಡಿದ್ದಾರೆ.

'ಅಮ್ಮ ನನ್ನನ್ನು ಪ್ರೀತಿ ಮಾಡಲ್ಲ' ಅನ್ನೋ ಕಾರಣಕ್ಕೆ ತಾಯಿಯ ಎದೆಗೆ ಗುಂಡಿಕ್ಕಿದ್ದ ಅಪ್ರಾಪ್ತ ಬಾಲಕ!

ಎರಿನ್ ರೀಡ್ ಮಾಡಿರೋ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, 3.1 ಮಿಲಿಯನ್‌ಗಿಂತಲೂ ಹೆಚ್ಚು ವೀವ್ಸ್ ಮತ್ತು 82,000ಕ್ಕೂ ಹೆಚ್ಚು ಲೈಕ್ಸ್‌ ಗಳಿಸಿದೆ. ಬಳಕೆದಾರರು ಬಾಲಕ ತಾಯಿಯ ಮೇಲಿಟ್ಟಿರುವ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಮಗುವಿನ ಕಾರ್ಯ ಮೆಚ್ಚುವಂತದ್ದು, ಈ ತಾಯಿ ತನ್ನ ಮಗುವಿಗೆ ಉತ್ತಮ ಸಂಸ್ಕಾರವನ್ನು ನೀಡಿದ್ದಾರೆ' ಎಂದು ಹೇಳಿದ್ದಾರೆ. ಇನ್ನೂ ಹಲವರು ಇದು ಅತ್ಯಂತ ಅದ್ಭುತವಾಗಿದೆ ಎಂದು ತಿಳಿಸಿದ್ದಾರೆ. ಒಟ್ನಲ್ಲಿ ಏನೂ ಅರಿಯದ ಬಾಲಕ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಆಹಾರ ತಯಾರಿಸಿರೋದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ತಾಯಿಯ ಹೋರಾಟ, ನಂಬಿಕೆಯೇ ಗೆದ್ದಿತು..ಏಳು ವರ್ಷ ಜೈಲಿನಲ್ಲಿದ್ದ ಮಗ ನಿರಪರಾಧಿ

Y’all I am sick with Covid and look what my son made for me and left on the table right outside my bedroom door 😭 pic.twitter.com/MotOlsZoA4

— Erin Reed (@ErinInTheMorn)
click me!