ಪುಟ್ಟ ಬಾಲಕನೋರ್ವ ನಾಯಿಯೊಂದಿಗೆ ವೈದ್ಯನ ಆಟ ಆಡುತ್ತಿರುವ ವಿಡಿಯೋ ವೈರಲ್ ಆಗಿದೆ. ಶ್ವಾನವೂ ಬಾಲಕನಿಗೆ ಬೇಕಾದಂತೆ ಪ್ರತಿಕ್ರಿಯಿಸುತ್ತಿದೆ.
ಹಿಂದೆಲ್ಲಾ ಬೇಸಿಗೆ ರಜೆ ಬಂತೆಂದರೆ ಸಾಕು ಪೇಟೆಯ ಮಕ್ಕಳು ಹಳ್ಳಿಗೆ ಹೊರಟರೆ ಹಳ್ಳಿ ಮಕ್ಕಳು ಪೇಟೆಯಿಂದ ತಮ್ಮ ಮನೆಗೆ ಬಂದ ನೆಂಟರ ಮಕ್ಕಳು ತಮ್ಮ ನೆರೆಹೊರೆಯ ಮಕ್ಕಳೊಂದಿಗೆ ಆಟವಾಡುತ್ತಾ ಸಮಯ ಕಳೆಯುತ್ತಿದ್ದರು. ಹಳ್ಳಿಯ ಹಲವು ಗ್ರಾಮೀಣ ಕ್ರೀಡೆಗಳನ್ನು ಆಡಿ ಕಾಡುಮೇಡುಗಳಲ್ಲಿ ತಿರುಗಿ ಹೊಲ ಗದ್ದೆಗಳಲ್ಲಿ ಈಜಾಡಿ ಇಡೀ ಬೇಸಿಗೆ ರಜೆ ಮುಗಿದು ಹೋಗುವುದೇ ತಿಳಿಯುತ್ತಿರಲಿಲ್ಲ. ಆದರೆ ಇಂದು ಬಹುತೇಕ ಕುಟುಂಬಗಳಲ್ಲಿ ಮನೆಗೊಬ್ಬರೇ ಇಬ್ಬರೇ ಮಕ್ಕಳಿದ್ದು, ಮಕ್ಕಳಿಗೆ ಆಟವಾಡಲು ಜೊತೆಗಾರರಿಲ್ಲದಂತಾಗಿದೆ. ಇದೇ ಕಾರಣಕ್ಕೆ ಮಕ್ಕಳು ಸ್ಮಾರ್ಟ್ ಫೋನ್ ಹಿಡಿದು ಅವುಗಳ ಚಟಕ್ಕೆ ಒಳಗಾಗುತ್ತಿದ್ದಾರೆ. ಈ ಮಧ್ಯೆ ಪುಟ್ಟ ಬಾಲಕನೋರ್ವ ನಾಯಿಯೊಂದಿಗೆ ವೈದ್ಯನ ಆಟ ಆಡುತ್ತಿರುವ ವಿಡಿಯೋ ವೈರಲ್ ಆಗಿದೆ. ಶ್ವಾನವೂ ಬಾಲಕನಿಗೆ ಬೇಕಾದಂತೆ ಪ್ರತಿಕ್ರಿಯಿಸುತ್ತಿದೆ.
ಬಾಲ್ಯದಲ್ಲಿ ಕಳ್ಳ ಪೊಲೀಸ್, ಕುಂಟೆಬಿಲ್ಲೆ ಆಟ, ಮನೆ ಕಟ್ಟುವ, ಕಲ್ಲುಗಳನ್ನು ಜೋಡಿಸಿ ಒಲೆ ಮಾಡಿ ಅಡುಗೆ ಮಾಡುವ ಆಟಗಳನ್ನು ನೀವು ಆಡಿರಬಹುದು, ಆದರೆ ಕಾಲ ಬದಲಾಗಿದ್ದು, ಈಗಿನ ಮಕ್ಕಳ ಆಟಗಳು ಬದಲಾಗಿವೆ. ಮಕ್ಕಳ ಯೋಚನೆ ಸ್ಮಾರ್ಟ್‌ನೆಸ್‌ಗೆ (Smartness) ಪೂರಕವಾಗಿ ಇಂದು ಹೊಸ ಹೊಸ ಆಟದ ಸಾಮಾನುಗಳು ಮನೆಗೆ ಬಂದಿದ್ದು ಮಕ್ಕಳು ಮಣ್ಣಿನಲ್ಲಿ ಆಡುವ ಬದಲು ಈ ಉಪಕರಣಗಳೊಂದಿಗೆ ಆಟವಾಡುತ್ತಿರುತ್ತಾರೆ. ಅಡುಗೆ ಮಾಡುವ ಪುಟ್ಟ ಪುಟ್ಟ ಸಾಮಾನುಗಳಿರುವ ಕುಕ್ಕಿಂಗ್ ಕಿಟ್, ಡಾಕ್ಟರ್ ಆಟ ಆಡುವವರಿಗೆ ಡಾಕ್ಟರ್ಸ್ ಕಿಟ್ ಮುಂತಾದ ಆಟ ಸಾಮಾನುಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಪುಟ್ಟ ಬಾಲಕನೋರ್ವ ತನ್ನ ಪ್ರೀತಿಯ ಸಾಕುನಾಯಿ (Petdog) ಜೊತೆ ವೈದ್ಯನ ಆಟವಾಡುತ್ತಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.
ಟಿವಿ ರಿಮೋಟ್‌ಗಿಂತಲೂ ಸಣ್ಣ... ಇದು ವಿಶ್ವದ ಅತ್ಯಂತ ಪುಟಾಣಿ ನಾಯಿ
@buitengebieden ಈ ವಿಡಿಯೋವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಭವಿಷ್ಯದ ಪಶುವೈದ್ಯ ತನ್ನ ಗ್ರಾಹಕನೊಂದಿಗೆ ಎಂದು ಬರೆದುಕೊಂಡಿದ್ದಾರೆ. ಒಂದು ನಿಮಿಷದ ಈ ವಿಡಿಯೋದಲ್ಲಿ ಪುಟ್ಟ ಬಾಲಕ ತನ್ನ ಬಳಿ ಇರುವ ಮೆಡಿಕಲ್ ಕಿಟ್ (ಆಟದ ಉಪಕರಣ) ತೆಗೆದು ಶ್ವಾನವನ್ನು ತಪಾಸಣೆ ಮಾಡುತ್ತಿದ್ದಾನೆ. ಶ್ವಾನದ ಮುಂಗಾಲಿಗೆ ಬಿಪಿ ಪರೀಕ್ಷೆ ಮಾಡುವ ಉಪಕರಣವನ್ನು ಅಳವಡಿಸಿ ಬಾಲಕ ಶ್ವಾನದ ರಕ್ತದೊತ್ತಡವನ್ನು (BP) ಪರೀಕ್ಷಿಸುತ್ತಾನೆ. ಶ್ವಾನವೂ ಕೂಡ ಆತನೊಂದಿಗೆ ಪಕ್ಕಾ ಮನುಷ್ಯರಂತೆ ಕುಳಿತು ಆತನ ಆಟಪಾಠಕ್ಕೆ ಸಹಕರಿಸುತ್ತಿದೆ. ಒಂದು ನಿಮಿಷದ ಈ ವಿಡಿಯೋವನ್ನು ಮೂರು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಅನೇಕರು ಈ ವಿಡಿಯೋದೊಂದಿಗೆ ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ.
ಕೆಲವರು ತಮ್ಮ ಮಕ್ಕಳಿಗೂ ಇದೇ ರೀತಿ ವೈದ್ಯಕೀಯ ಕಿಟ್ ಗಿಫ್ಟ್ (Medical kit) ನೀಡಿದ್ದಾಗಿ ಹೇಳಿಕೊಂಡಿದ್ದಾರೆ. ನಾಯಿಗಳೊಂದಿಗೆ ಮನುಷ್ಯರು (Human) ಅವಿನಾಭಾವ ಸಂಬಂಧ ಹೊಂದಿರುತ್ತಾರೆ. ಮನೆಯಲ್ಲಿ ನಾಯಿ ಸಾಕುವ ಬಹುತೇಕರಿಗೆ ಇದರ ಅನುಭವವಾಗಿರುತ್ತದೆ. ಅದರಲ್ಲೂ ಮನೆಯಲ್ಲಿ ಪುಟ್ಟ ಮಕ್ಕಳಿದ್ದರೆ ಆ ಮಗು ಹಾಗೂ ಶ್ವಾನ ಒಳ್ಳೆಯ ಸ್ನೇಹಿತರಾಗಿರುತ್ತಾರೆ. ಅಲ್ಲದೇ ಮಕ್ಕಳಿದ್ದ ಮನೆಯ ಶ್ವಾನ ಅಪರಿಚಿತರ ಮೇಲೆ ತುಸು ಹೆಚ್ಚೆ ಕಣ್ಣಿಟ್ಟಿರುತ್ತದೆ. ಸ್ವಾಮಿನಿಷ್ಠೆಗೆ ಹೆಸರಾದ ಈ ಶ್ವಾನಗಳು ಇಂದು ಕುಟುಂಬಗಳಲ್ಲಿ ಒಂದು ಭಾಗವಾಗಿರುತ್ತವೆ. ಮನೆಯ ಪುಟ್ಟಮಕ್ಕಳೊಂದಿಗೆ ಆಟವಾಡುತ್ತಾ ಕುಟುಂಬದ ಭಾಗವಾಗಿರುವ ಶ್ವಾನಗಳ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ.
ಈ ಶ್ವಾನಕ್ಕಿದೆ ಸೋಶಿಯಲ್ ಮೀಡಿಯಾದಲ್ಲಿ ಮಿಲಿಯನ್‌ಗೂ ಹೆಚ್ಚು ಫಾಲೋವರ್
Future veterinarian and his patient.. 😊 pic.twitter.com/lJvTfDT57u
— Buitengebieden (@buitengebieden)