ವ್ಯಕ್ತಿಗೆ ಒಬ್ಬ ಸಂಗಾತಿಯಿರೋದು ಸಾಮಾನ್ಯ ವಿಷಯ. ಒಬ್ಬ ಬಾಯ್‌ಫ್ರೆಂಡ್ ಅಥವಾ ಗರ್ಲ್‌ಫ್ರೆಂಡ್ ಇರ್ತಾರೆ. ಇತ್ತೀಚಿನ ವರ್ಷಗಳಲ್ಲಿ ಕೆಲವೊಬ್ಬರು ನಾಲ್ಕೈದು ಗರ್ಲ್‌ಫ್ರೆಂಡ್ ಅಥವಾ ಬಾಯ್‌ಫ್ರೆಂಡ್‌ನ್ನು ಮೈಂಟೇನ್ ಮಾಡ್ತಾರೆ. ಆದ್ರೆ ಇಲ್ಲೊಬ್ಬಾಕೆಗೆ ಇರೋದು ಭರ್ತಿ 7,000 ಬಾಯ್‌ಫ್ರೆಂಡ್ಸ್. ಯಾಕಂದ್ರೆ ಈಕೆ ಸುರಸುಂದರಾಗಿಯಂತೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಜೀವನದಲ್ಲಿ ವ್ಯಕ್ತಿಯೊಬ್ಬನಿಗೆ ತನ್ನ ಕಷ್ಟಸುಖಗಳನ್ನು ಹಂಚಿಕೊಳ್ಳಲು ಸಂಗಾತಿಯಿರಬೇಕಾದುದು ಅತೀ ಅಗತ್ಯ. ಹೀಗಾಗಿ ಇವತ್ತಿನ ದಿನಗಳಲ್ಲಿ ಪ್ರತಿಯೊಬ್ಬರೂ ಬಾಯ್‌ಫ್ರೆಂಡ್ ಅಥವಾ ಗರ್ಲ್‌ಫ್ರೆಂಡ್‌ನ್ನು ಹೊಂದಿರುತ್ತಾರೆ. ಇದಲ್ಲದೆ ಶೋಕಿ ಜೀವನ ಇಷ್ಟಪಡೋರು ಇಬ್ಬಿಬ್ಬರು ಬಾಯ್‌ಫ್ರೆಂಡ್, ಗರ್ಲ್‌ಫ್ರೆಂಡ್‌ನ್ನು ಇಟ್ಕೊಂಡು ಮೋಜು ಮಾಡೋದು ಇದೆ. ಇನ್ನೂ ಕೆಲವರು ಹತ್ತಾರು ಮಂದಿ ಜೊತೆ ಮಾತನಾಡುತ್ತಾ, ತಿರುಗಾಡುತ್ತಲೂ ಇರುತ್ತಾರೆ. ಆದರೆ ಇಲ್ಲೊಬ್ಬಾಕೆಗೆ ಭರ್ತಿ 7,000 ಮಂದಿ ಬಾಯ್‌ಫ್ರೆಂಡ್ಸ್ ಇದ್ದಾರೆ. ಕೇಳೋಕೆ ಅಚ್ಚರಿಯೆನಿಸಿದರೂ ಇದು ನಿಜ.
ಯುವತಿಯೊಬ್ಬಳು ತನಗೆ 7,000 ಆನ್‌ಲೈನ್ ಬಾಯ್‌ಫ್ರೆಂಡ್‌ಗಳಿರುವುದಾಗಿ ಹೇಳಿಕೊಂಡಿದ್ದಾಳೆ ಮತ್ತು ಅವರೊಂದಿಗಿನ ತನ್ನ ಸಂಬಂಧವು ನಿಜ ಜೀವನದ ಡೇಟಿಂಗ್‌ಗಿಂತ ಉತ್ತಮವಾಗಿದೆ ಎಂದು ತಿಳಿಸಿದ್ದಾಳೆ. 25 ವರ್ಷದ ನಲಾ ರೇ ಎಂಬಾಕೆ ತಾನು ಆನ್‌ಲೈನ್‌ನಲ್ಲಿ ಡೇಟ್ ಮಾಡುವವರಿಗಾಗಿ ಅತ್ಯುತ್ತಮವಾಗಿದ್ದಾನೆ, ಸುರ ಸುಂದರಾಂಗಿಯಾಗಿದ್ದೇನೆ ಎಂದು ತನ್ನ ಬಗ್ಗೆ ಹೇಳಿಕೊಂಡಿದ್ದಾಳೆ.
undefined
Viral Post : ನಾಲ್ಕು ತಿಂಗಳು ಡೇಟ್ ಮಾಡಿದ್ರೂ ಹುಡುಗನ ಹೆಸರೇ ಗೊತ್ತಿರಲಿಲ್ವಂತೆ..!
'ಪ್ರತಿದಿನ ಬೆಳಗ್ಗೆ ನಾನು ನನ್ನ ಗೆಳೆಯರಿಗೆ ಲವಲವಿಕೆಯಿಂದ ಏನನ್ನಾದರೂ ಕಳುಹಿಸುತ್ತೇನೆ. ಆ ನಂತರ ಅವರಲ್ಲಿ ಕೆಲವರು ಉತ್ತರಿಸುತ್ತಾರೆ ಮತ್ತು ನಾವು ಸ್ವಲ್ಪ ಮಾತನಾಡುತ್ತೇವೆ. ಅವರ ಜೀವನ, ಅವರ ದಿನ ಹೇಗಿದೆ ಎಂಬುದರ ಬಗ್ಗೆ ತಿಳಿದುಕೊಳ್ಳುತ್ತೇನೆ. ನಾನು ಈ ಕಾಂಟ್ಯಾಕ್ಟ್‌ಗಳ ಬಗ್ಗೆ ನಿಜವಾಗಿಯೂ ಹೆಮ್ಮೆಪಡುತ್ತೇನೆ' ಎಂದು ಯುವತಿ ತಿಳಿಸಿದ್ದಾಳೆ. ರೇ ಹಲವು ತಿಂಗಳುಗಳ ಕಾಲ ಆಫ್‌ಲೈನ್‌ನಲ್ಲಿದ್ದರು. ಅವರ ಈ ಹಿಂದಿನ ಸಂಬಂಧಗಳು ಹದಗೆಟ್ಟಿದ್ದ ಕಾರಣ
ಅದರಿಂದ ಹೊರಬಂದು ಖಿನ್ನತೆಗೆ ಒಳಗಾಗಿದ್ದರು.
'ಕೆಟ್ಟ ಸಂಬಂಧದಿಂದ ಉಂಟಾದ ನೋವಿಂದ ಹೊರಬರಲು ನಾನು ಹೊಸ ಗಳೆಯರನ್ನು ಹುಡುಕಲು ಆರಂಭಿಸಿದೆ. ಕ್ರಮೇಣ ಹೊಸ ಗೆಳೆಯರು ಇಲ್ಲದೆ ನನಗೆ ಬದುಕುವುದೇ ಕಷ್ಟ ಎಂಬಂತಾಗಿದೆ. ಹೊಸ ಬಾಯ್‌ಫ್ರೆಂಡ್ಸ್ ಇರೋದು ಜೀವನವನ್ನು ಇನ್ನಷ್ಟು ಉಲ್ಲಾಸಕರವಾಗಿಸಿದೆ' ಎಂದು ನಲಾ ರೇ ಹೇಳಿಕೊಂಡಿದ್ದಾಳೆ. ನನಗೆ ಖುಷಿಯಿಂದ ಇರಲು ಹುಡುಗರೊಂದಿಗೆ ಸಮಯ ಕಳೆಯುವುದು ನಿಜವಾಗಿಯೂ ಮುಖ್ಯವಾಗಿದೆ. ಇದರಲ್ಲಿ ನಾನು ಖುಷಿಯನ್ನು ಕಂಡುಕೊಳ್ಳುತ್ತೇನೆ ಎಂದು ಯುವತ ತಿಳಿಸಿದ್ದಾಳೆ.
ಮತ್ತೊಬ್ಬಳ ಜೊತೆ ಡೇಟ್ ಮಾಡ್ತಿದ್ದಾಗ್ಲೇ ಸಿಕ್ಕಿಬಿದ್ದ ಬಾಯ್‌ಫ್ರೆಂಡ್, ರಸ್ತೆಯಲ್ಲೇ ಗ್ರಹಚಾರ ಬಿಡಿಸಿದ್ಲು ಹುಡುಗಿ!
ಡೇಟ್ ಮಾಡಲು ನಾನು ಸುರಸುಂದರಾಗಿ ಎಂದ ಯುವತಿ
ಡೇಟಿಂಗ್ ಮಾಡಲು ನಾನು ತುಂಬಾ ಸರಿಯಾದ ಆಯ್ಕೆ. ತುಂಬಾ ಸುಂದರವಾಗಿದ್ದೇನೆ. ಬಹಳ ಬೇಗನೇ ಎಲ್ಲರ ಮನಸ್ಸನ್ನು ಅರಿತುಕೊಳ್ಳುತ್ತೇನೆ. ಹೀಗಾಗಿಯೇ ನನಗೆ ಹೆಚ್ಚು ಜನರು ಬಾಯ್‌ಫ್ರೆಂಡ್ಸ್ ಇದ್ದಾರೆ. ಈ ಜೀವನವನ್ನೇ ಸಾಗಿಸಲು ನಾನು ಇಷ್ಟಪಡುತ್ತೇನೆ ಎಂದು ಮಹಿಳೆ ಹೇಳಿದ್ದಾಳೆ. ನನಗೆ ಇದಕ್ಕಿಂತಲೂ ಹೆಚ್ಚು ಬಾಯ್‌ಫ್ರೆಂಡ್ಸ್ ಇದ್ದರು. ಆದರೆ ಅದರಲ್ಲಿ ಬಹುತೇಕರು ಪೊಸೆಸಿವ್ ಆಗಿದ್ದ ಕಾರಣ, ತುಂಬಾ ಮಂದಿಯನ್ನು ಕೈ ಬಿಡಬೇಕಾಯಿತು. ಈಗ ಕೇವಲ ಏಳು ಸಾವಿರ ಮಂದಿ ಉಳಿದುಕೊಂಡಿದ್ದಾರೆ ಎಂದು ಯುವತಿ ಹೇಳಿದ್ದಾಳೆ. ಆದರೆ ನನಗೆ ನನ್ನ ಸೌಂದರ್ಯ ಅಥವಾ ಹಣವನ್ನು ನೋಡದೆ ಮದುವೆಯಾಗುವವರು ಬೇಕಾಗಿದ್ದಾರೆ. ಅಂಥವರನ್ನು ಹುಡುಕಲು ಕಷ್ಟವಾಗುತ್ತಿದೆ ಎಂದು ತಿಳಿಸಿದ್ದಾಳೆ.
ಬ್ರೇಕಪ್ ಲೆಟರ್ ಬರೆದ ಹುಡುಗ, ವಾವ್ಹ್..ಮತ್ತೆ ಲವ್ವಾಯ್ತು ಅಂದ್ಲು ಹುಡುಗಿ!