ಆಗಾಗ ಬಾವಿಗೆ ಬಿಳೋ ಚಿರತೆಗಳು: ನಿನ್ನೆ ಮಂಚ ಕಳ್ಸಿದ್ರು ಇವತ್ತು ಏಣಿ ಇಳ್ಸಿದ್ರು

Published : Jun 10, 2022, 05:22 PM IST
ಆಗಾಗ ಬಾವಿಗೆ ಬಿಳೋ ಚಿರತೆಗಳು: ನಿನ್ನೆ ಮಂಚ ಕಳ್ಸಿದ್ರು ಇವತ್ತು ಏಣಿ ಇಳ್ಸಿದ್ರು

ಸಾರಾಂಶ

ನಿನ್ನೆಯಷ್ಟೇ ಮಹಾರಾಷ್ಟ್ರದ ಪುಣೆ ಸಮೀಪ ಬಾವಿಗೆ ಬಿದ್ದಿದ್ದ ಚಿರತೆಯೊಂದನ್ನು ರಕ್ಷಿಸಲು ಗ್ರಾಮಸ್ಥರು ಬಾವಿಗೆ ಮಂಚ ಇಳಿಸಿದ್ದರು. ಈಗ ಒಡಿಶಾದಲ್ಲಿಯೂ ಚಿರತೆಯೊಂದು ಬಾವಿಗೆ ಬಿದ್ದಿದ್ದು ಇದರ ರಕ್ಷಣೆಗೆ ಅರಣ್ಯ ಇಲಾಖೆ ಸಿಬ್ಬಂದಿ ಏಣಿ ಇಳಿಸಿದ್ದಾರೆ. ಚಿರತೆಯನ್ನು (Leopard )ಬಾವಿಯಿಂದ ರಕ್ಷಿಸುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಿನ್ನೆಯಷ್ಟೇ ಮಹಾರಾಷ್ಟ್ರದ ಪುಣೆ ಸಮೀಪ ಬಾವಿಗೆ ಬಿದ್ದಿದ್ದ ಚಿರತೆಯೊಂದನ್ನು ರಕ್ಷಿಸಲು ಗ್ರಾಮಸ್ಥರು ಬಾವಿಗೆ ಮಂಚ ಇಳಿಸಿದ್ದರು. ಈಗ ಒಡಿಶಾದಲ್ಲಿಯೂ ಚಿರತೆಯೊಂದು ಬಾವಿಗೆ ಬಿದ್ದಿದ್ದು ಇದರ ರಕ್ಷಣೆಗೆ ಅರಣ್ಯ ಇಲಾಖೆ ಸಿಬ್ಬಂದಿ ಏಣಿ ಇಳಿಸಿದ್ದಾರೆ. ಚಿರತೆಯನ್ನು (Leopard )ಬಾವಿಯಿಂದ ರಕ್ಷಿಸುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಒಡಿಶಾದ ಸಾಂಬಾಲ್‌ಪುರ (Sambalpur) ಜಿಲ್ಲೆಯಲ್ಲಿ ಈ ಘಟನೆ ನಡಿದಿದೆ. ಅರಣ್ಯ ಹಾಗೂ ಅಗ್ನಿ ಶಾಮಕ ಇಲಾಖೆ ಜೊತೆಯಾಗಿ ಈ ಚಿರತೆಯನ್ನು ರಕ್ಷಿಸಿದ್ದಾರೆ. ಸುದ್ದಿಸಂಸ್ಥೆ ಎಎನ್ಐ ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದೆ. ವಿಡಿಯೋದಲ್ಲಿ ಕಾಣಿಸುವಂತೆ ಚಿರತೆ ಮೊದಲಿಗೆ ನೀರೊಳಗೆ ಇರುವ ಮರದ ತುಂಡೊಂದರ ಮೇಲೆ ನೇತಾಡುತ್ತಾ ಜೀವ ಉಳಿಸಿಕೊಳ್ಳಲು ಒದ್ದಾಡುತ್ತಿದ್ದಾರೆ. ನಂತರ ಮರದ ಏಣಿಯೊಂದನ್ನು ರಕ್ಷಣಾ ತಂಡ ಬಾವಿಯೊಳಗೆ ಇಳಿಸುತ್ತಾರೆ. ನಂತರ ಮೆಲ್ಲ ಮೆಲ್ಲನೇ ಏಣಿ ಏರುವ ಚಿರತೆ ಛಂಗನೆ ನೆಗೆದು ಸ್ಥಳದಿಂದ ಎಸ್ಕೇಪ್ ಆಗುತ್ತದೆ. 

ಅರಣ್ಯ ಇಲಾಖೆಯಿಂದ ನಮಗೆ ಮಾಹಿತಿ ಸಿಕಿತ್ತು. ನಂತರ ನಾವು ಸ್ಥಳಕ್ಕೆ ತೆರಳಿ ಬಾವಿಗೆ ಮರದ ಏಣಿ (wooden ladder) ಇಳಿಸಿ ಚಿರತೆಯನ್ನು ರಕ್ಷಿಸಿದ್ದೇವೆ ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿಯಾದ ಮಿಶ್ರಾ ಕಿಶನ್ ಹೇಳಿದರು ಎಂದು ಎಎನ್‌ಐ ತನ್ನ ಟ್ವಿಟ್‌ನಲ್ಲಿ ಉಲ್ಲೇಖಿಸಿದೆ. ತಾಯಿಯಿಂದ ಬೇರ್ಪಟ್ಟಿದ್ದ 10 ದಿನಗಳ ಪ್ರಾಯದ ಚಿರತೆ ಮರಿಯನ್ನು ಅರಣ್ಯ ಇಲಾಖೆ (Forest department) ಸಿಬ್ಬಂದಿ ಮತ್ತೆ ತಾಯಿಯೊಂದಿಗೆ ಸೇರಿಸಿ ಘಟನೆ ಕೆಲ ದಿನಗಳ ಹಿಂದೆ ನಡೆದಿತ್ತು. ಅರಣ್ಯ ಇಲಾಖೆಯ ಈ ಕಾರ್ಯಕ್ಕೆ ಜನರು ಶ್ಲಾಘನೆ ವ್ಯಕ್ತಪಡಿಸಿದ್ದರು. ಮಹಾರಾಷ್ಟ್ರದ(Maharashtra) ನಾಸಿಕ್‌ನ (Nashik) ಸಮೀಪದ ಕಬ್ಬಿನ ಗದ್ದೆಯಲ್ಲಿ 10 ದಿನದ ಚಿರತೆ ಮರಿ ಕಾಣಿಸಿಕೊಂಡಿತ್ತು.

ಅರಣ್ಯಾಧಿಕಾರಿ, ಪೊಲೀಸರ ಮೇಲೆ ಎಗರಿಬಿದ್ದ ಚೀತಾ: ವಿಡಿಯೋ ವೈರಲ್

ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು ಮುಂಬೈ (Mumbai) ಮೂಲದ ಎನ್‌ಜಿಒ ಸಹಾಯದಿಂದ ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಿ ತಾಯಿ ಹಾಗೂ ಮಗುವಿನ ಪುನರ್ಮಿಲನವನ್ನು ಖಚಿತಪಡಿಸಿದ್ದರು. ಯೂಟ್ಯೂಬ್‌ನಲ್ಲಿ ಮರಾಠಿ ಮಾಧ್ಯಮವಾದ ದೇಶ್‌ದೂತ್ ಹಂಚಿಕೊಂಡ ವೀಡಿಯೊದಲ್ಲಿ ತಾಯಿ ಬುಟ್ಟಿಯನ್ನು ತೆರೆದು ಅದರೊಳಗಿದ್ದ ಮರಿಯನ್ನು ನೋಡಿದ್ದಾಳೆ. ಕೂಡಲೇ ತಾಯಿ ಮರಿಯನ್ನು ತನ್ನ ಬಾಯಿಯಿಂದ ಕಚ್ಚಿ ಹಿಡಿದು ಬೇರೆ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಾಳೆ. ಚಿರತೆ ಮರಿಯೊಂದು ನಿರ್ಜನ ಪ್ರದೇಶದಲ್ಲಿ ಕ್ಯಾಮರಾ ನೋಡುತ್ತಿರುವುದನ್ನು ಮತ್ತು ತಾಯಿ ಒಂಟಿಯಾಗಿ ಕುಳಿತಿರುವ ಫೋಟೋಗಳನ್ನು ಎಎನ್‌ಐ ಟ್ವೀಟ್ ಮಾಡಿದೆ.

ಕಾದಾಡಿ ಪ್ರಾಣ ಉಳಿಸಿಕೊಂಡ ಸಾಕು ನಾಯಿ, ಬೇಟೆಯಾಡಲು ಬಂದ ಚಿರತೆ ಬರಿಗೈಲಿ ವಾಪಸ್

ನಾವು 10 ದಿನದ ಚಿರತೆ ಮರಿಯನ್ನು ಅದರ ತಾಯಿಯೊಂದಿಗೆ ಸುರಕ್ಷಿತವಾಗಿ ಮತ್ತೆ ಸೇರಿಸಿದ್ದೇವೆ. ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿ ಪತ್ತೆಯಾಗಿತ್ತು. ನಾವು ಇಕೋ-ಎಕೋ ಫೌಂಡೇಶನ್‌ನ ಸಹಾಯದಿಂದ ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಿದ್ದೆವು ಮತ್ತು ಮರಿಯನ್ನು ಯಶಸ್ವಿಯಾಗಿ ಮತ್ತೆ ಒಂದಾಗಿಸಲಾಗಿದೆ ಎಂದು ನಾಸಿಕ್‌ನ ಉಪ ಅರಣ್ಯ ಸಂರಕ್ಷಣಾಧಿಕಾರಿ ಉಮೇಶ್ ವಾವೇರ್ (Umesh Waware) ಅವರು ಹೇಳಿದ್ದನ್ನು ಟ್ವೀಟ್‌ನಲ್ಲಿ ಎಎನ್‌ಐ ಉಲ್ಲೇಖಿಸಿತ್ತು. ಈ ಕಾರ್ಯಾಚರಣೆಯಲ್ಲಿ ತೊಡಗಿದ ಅರಣ್ಯ ಇಲಾಖೆಯ ತಂಡದ ಪ್ರಯತ್ನಕ್ಕೆ ನೆಟಿಜನ್‌ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಎಲ್ಲಾ ಚೆನ್ನಾಗಿದೆ, ಆದರೆ ಸರ್ ದಯವಿಟ್ಟು ಮಗುವನ್ನು ತಾಯಿ ಚಿರತೆಯೊಂದಿಗೆ ಇರಿಸಿ'ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌