ಒಬ್ಬ ವ್ಯಕ್ತಿಯ ಬಗ್ಗೆ ಅವನ ಜಾತಕ ಮತ್ತು ಗ್ರಹಗಳ ನಕ್ಷತ್ರಪುಂಜಗಳಿಂದ ಮಾತ್ರ ತಿಳಿದುಕೊಳ್ಳಬೇಕಾಗಿಲ್ಲ, ಆದರೆ ವ್ಯಕ್ತಿಯ ದೇಹದ ರಚನೆಯಿಂದಲೂ ವ್ಯಕ್ತಿಯ ಅನೇಕ ರಹಸ್ಯಗಳು ಬಹಿರಂಗಗೊಳ್ಳುತ್ತವೆ. ಬೆರಳುಗಳನ್ನು ನೋಡಿ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳಬಹುದು ಅನ್ನೋದು ನಿಮ್ಗೆ ಗೊತ್ತಿದ್ಯಾ? ಆ ಬಗ್ಗೆ ಇಲ್ಲಿದೆ ಮಾಹಿತಿ.
ವ್ಯಕ್ತಿತ್ವ ಅನ್ನೋದು ವ್ಯಕ್ತಿಯಿಂದ ವ್ಯಕ್ತಿಗೆ ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ. ಒಬ್ಬ ವ್ಯಕ್ತಿಯ ಪರ್ಸನಾಲಿಟಿ ಆತನ ಬಾಡಿ ಲಾಂಗ್ವೇಜ್, ಮಾತನಾಡುವ ರೀತಿ, ನಡತೆ ಹೀಗೆ ಹಲವು ವಿಧಗಳ ಮೂಲಕ ಬಹಿರಂಗಗೊಳ್ಳುತ್ತದೆ. ಕಣ್ಣು, ಕೂದಲನ್ನು ನೋಡಿ ವ್ಯಕ್ತಿತ್ವ ತಿಳಿದುಕೊಳ್ಳುವ ಹಾಗೆಯೇ ಕೈ ಬೆರಳನ್ನು ನೋಡಿ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳಬಹುದು ಅನ್ನೋದು ನಿಮ್ಗೆ ಗೊತ್ತಿದ್ಯಾ? ಹೌದು ಇದು ನಿಜ. ಹೆಬ್ಬೆರಳು ಹೇಗಿದೆ ಎಂಬುದನ್ನು ಗಮನಿಸಿದರೆ ಪರ್ಸನಾಲಿಟಿಯ ಬಗ್ಗೆ ತಿಳಿದುಕೊಳ್ಳಬಹುದು.
ಹೆಬ್ಬೆರಳಿನ ಶೇಪ್ ವ್ಯಕ್ತಿತ್ವದ ಒಳನೋಟವನ್ನು ನೀಡುತ್ತದೆ. ಪಾದದ ಕಮಾನುಗಳು, ಲೆಗ್ ಕ್ರಾಸಿಂಗ್ ಮಾದರಿಗಳು ಅಥವಾ ಬೆರಳಿನ ಅಂತರಗಳಂತೆಯೇ, ಹೆಬ್ಬೆರಳಿನ ವಕ್ರತೆಯು ಕೆಲವು ಗುಣಲಕ್ಷಣಗಳನ್ನು ಸೂಚಿಸುತ್ತದೆ. ಥಂಬ್ಸ್ ಸಾಮಾನ್ಯವಾಗಿ ನೇರವಾಗಿರುತ್ತವೆ. ಆದರೆ ಕೆಲವೊಂದು ಹೆಬ್ಬೆರಳು ಬೆಂಡ್ ಆಗಿರುತ್ತದೆ. ಈ ಹೆಬ್ಬೆರಳಿನ ಆಕಾರಗಳು ಮತ್ತು ವಿವಿಧ ನಡವಳಿಕೆಯ ಮಾದರಿಗಳು, ಸಾಮರ್ಥ್ಯಗಳು, ದೌರ್ಬಲ್ಯಗಳು ಮತ್ತು ವ್ಯಕ್ತಿತ್ವದ ಗುಣಗಳ ನಡುವಿನ ಸಂಬಂಧಗಳನ್ನು ತಿಳಿಸುತ್ತದೆ.
ಶಿಂಡು ಮೂಗಿರೋರಿಗೆ ಅಹಂ ಹೆಚ್ಚಂತೆ, ನಿಮ್ಮ ಮೂಗಿನ ಆಕಾರ ಹೇಗಿದೆ? ಸ್ವಭಾವವೇನು?
ನೇರ ಹೆಬ್ಬೆರಳು
ಹೆಬ್ಬೆರಳು ನೇರವಾಗಿದ್ದರೆ, ವ್ಯಕ್ತಿ ಹೆಚ್ಚು ಹಠಮಾರಿಯಾಗಿದ್ದಾನೆ ಎಂದರ್ಥ. ಆದರೆ ಇಂಥವರು ಜೀವನದ ಬಗ್ಗೆ ಸಂವೇದನಾಶೀಲ ಮತ್ತು ಸಮಂಜಸವಾದ ದೃಷ್ಟಿಕೋನವನ್ನು ಹೊಂದಿರುತ್ತಾರೆ. ಅದು ಇತರರನ್ನು ಉತ್ತಮವಾಗಿ ಮುನ್ನಡೆಸಲು ಸಹಾಯ ಮಾಡುತ್ತದೆ. ಈ ರೀತಿ ಬೆರಳಿರುವವರು ಸುತ್ತಲಿರುವವರನ್ನು ವೀಕ್ಷಿಸಲು ಮತ್ತು ವಿಶ್ಲೇಷಿಸಲು ಗಮನಾರ್ಹ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇಂಥವರು ತಮಗೆ ಅಪಾಯ ಬಂದಾಗ ಸುಲಭವಾಗಿ ತಿಳಿದುಕೊಳ್ಳುತ್ತಾರೆ. ಈ ವ್ಯಕ್ತಿಯಲ್ಲಿ ಸ್ವಯಂ ಶಿಸ್ತು ಮತ್ತು ಇಚ್ಛಾಶಕ್ತಿ ಇರುತ್ತದೆ. ಆದರೆ ಆಗಾಗ ಅಸಹನೆ ಕಾಡುತ್ತದೆ. ಯಾರಾದರೂ ತಪ್ಪು ಮಾಡಿದಾಗ ಅವರನ್ನು ಕ್ಷಮಿಸುವ ಮನೋಭಾವ ಇರುವುದಿಲ್ಲ.
ಬಾಗಿದ ಹೆಬ್ಬೆರಳು
ಬಾಗಿದ ಹೆಬ್ಬೆರಳು ಹೊಂದಿರುವ ಜನರು, ಮುಕ್ತವಾಗಿ ಮಾತನಾಡುವ ಮತ್ತು ಭಾವನಾತ್ಮಕ ವ್ಯಕ್ತಿಯಾಗಿರುತ್ತಾರೆ. ಹೊಸ ಸಂದರ್ಭಗಳು ಮತ್ತು ಸುತ್ತಮುತ್ತಲಿನ ಪರಿಸ್ಥಿತಿಗಳಿಗೆ ಸುಲಭವಾಗಿ ಹೊಂದಿಕೊಳ್ಳುತ್ತಾರೆ. ಇತರ ಜನರ ಬಗ್ಗೆ ಸಹಾನುಭೂತಿ ಹೆಚ್ಚಿರುತ್ತದೆ. ಆದ್ರೆ ಈ ಸಹಾನೂಭೂತಿಯು ಕೆಲವೊಮ್ಮೆ ಅಹಿತಕರ ಸಂದರ್ಭಗಳಿಗೆ ಕಾರಣವಾಗಬಹುದು. ಸ್ವ-ಮೌಲ್ಯದ ಆರೋಗ್ಯಕರ ಪ್ರಜ್ಞೆಯನ್ನು ಬೆಳೆಸಿಕೊಳ್ಳಲು ಸಮಯ ಬೇಕಾಗಬಹುದು.
ನೀವ್ ತುಂಬಾ ರೋಮ್ಯಾಂಟಿಕ್ ವ್ಯಕ್ತಿನಾ.. ಅಲ್ಲ ಬೋರಿಂಗ್ ಪರ್ಸನ್ನಾ..ಫೋಟೋ ನೋಡಿ ತಿಳ್ಕೊಳ್ಳಿ
ಬಾಗಿದ ಹೆಬ್ಬೆರಳು ಹೊಂದಿರುವವರು ಉದ್ದೇಶಗಳನ್ನು ಸಾಧಿಸಲು ಹೊಸ ಮಾರ್ಗಗಳನ್ನು ರಚಿಸುವ ಸಹಜ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಸಾಮರ್ಥ್ಯಗಳು ಕಲಾತ್ಮಕ ಸಾಮರ್ಥ್ಯ ಮತ್ತು ಸೃಜನಶೀಲತೆ, ಜೊತೆಗೆ ರೋಮಾಂಚಕ ಕಲ್ಪನೆ ಮತ್ತು ಜೀವನದ ಬಗ್ಗೆ ಮುಕ್ತ ಮನಸ್ಸಿನ ದೃಷ್ಟಿಕೋನವನ್ನು ಒಳಗೊಂಡಿರುತ್ತದೆ. ನೀವು ಈ ಗುಣಲಕ್ಷಣಗಳನ್ನು ಹೊಂದಿದ್ದರೆ ಕಲೆ, ನಟನೆ, ರಂಗಭೂಮಿ, ಸ್ವಯಂ ಅಭಿವ್ಯಕ್ತಿ, ಧೈರ್ಯಶಾಲಿ ಕ್ರೀಡೆಗಳು ಮತ್ತು ಹೆಚ್ಚಿನವುಗಳಲ್ಲಿ ಉದ್ಯೋಗಗಳಿಗೆ ನೀವು ಅರ್ಹರಾಗಿದ್ದೀರಿ. ಆದರೆ ಇಂಥವರಿಗೆ ಯಾವುದೇ ವಿಚಾರದ ಬಗ್ಗೆ ಸುಲಭವಾಗಿ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.