
ಭೋಪಾಲ್: ಗಂಡನ ಸೋದರಿಯ ಅಪ್ರಾಪ್ತ ಮಗಳನ್ನು(ಸೊಸೆ) ಅಪಹರಿಸಿ ಆಕೆಯೊಂದಿಗೆ ಮದ್ವೆಯಾಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಮಹಿಳೆಯೊಬ್ಬಳನ್ನು ಮಧ್ಯಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಬಂಧನದ ನಂತರ ಮಹಿಳೆ ತಾನೊಬ್ಬಳು ಸಲಿಂಗಿ ಎಂದು ಹೇಳಿಕೊಂಡಿದ್ದಾಳೆ. 24 ವರ್ಷದ ಬಂಧಿತ ಮಹಿಳೆಗೆ ವರ್ಷದ ಹಿಂದೆ ವ್ಯಕ್ತಿಯೊಬ್ಬನೊಂದಿಗೆ ಮದ್ವೆಯಾಗಿತ್ತು. ಮದ್ವೆಯ ನಂತರ ಆಕೆ ತನ್ನ ಗಂಡನ ಸೊಸೆ ಅಂದರೆ ಬಹುಶಃ ಸೋದರಿಯ ಪುತ್ರಿ ಜೊತೆ ಸಲಿಂಗಿ ಸಂಬಂಧವನ್ನು ಹೊಂದಿದ್ದಳು. ಇದಕ್ಕಾಗಿ 16 ವರ್ಷದ ಆಕೆಯನ್ನು ಮನೆಯಿಂದ ಅಪಹರಿಸಿ ಕರೆದೊಯ್ದ ಮಹಿಳೆ ಆಕೆಯ ಜೊತೆ ಲೈಂಗಿಕ ಸಂಬಂಧ ಬೆಳೆಸಿದ್ದಾಳೆ.
ಫೆಬ್ರವರಿ 17ರಂದು ತನ್ನ ಗಂಡನ ಸೊಸೆಯನ್ನು ಅಪಹರಿಸಿದ ಈಕೆ ಆಕೆಯ್ನುಇಂದೋರ್‌ನ ಧಮ್ನೊಡ್‌ಗೆ ಕರೆದೊಯ್ದು ಅಲ್ಲಿ ಜೊತೆಯಾಗಿ ಜೀವನ ಶುರು ಮಾಡಲು ಆರಂಭಿಸಿದ್ದಾರೆ. ಅಲ್ಲದೇ ಅಲ್ಲಿ ಅವರಿಬ್ಬರು ಗಂಡ ಹೆಂಡತಿಯಂತೆ ಬದುಕಲು ಶುರು ಮಾಡಿದ್ದಾರೆ ಎಂದು ಬರುದ್ ಪೊಲೀಸ್ ಸ್ಟೇಷನ್ ಇನ್‌ಚಾರ್ಜ್ ರಿತೇಶ್ ಯಾದವ್ ಹೇಳಿದ್ದಾರೆ. ಇಬ್ಬರೂ ನಾಪತ್ತೆಯಾದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿ ಪೊಲೀಸರು ತನಿಖೆ ಶುರು ಮಾಡಿದಾಗ ಇವರಿಬ್ಬರು ದಮ್ನೊಡ್‌ನಲ್ಲಿ ಜೊತೆಯಾಗಿ ಜೀವನ ಮಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಅವರನ್ನು ಅಲ್ಲಿಂದ ಪೊಲೀಸರು ನಗರಕ್ಕೆ ಕರೆತಂದಿದ್ದು, ಆಗ 24 ವರ್ಷದ ಮಹಿಳೆ ಪೊಲೀಸರ ಮುಂದೆ ತಾನು ಸಲಿಂಗಿ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಅಪಹೃತ ಅಪ್ರಾಪ್ತೆಯ ಹೇಳಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ. ಅಪ್ರಾಪ್ತೆಯ ಜೊತೆ ಸಂಬಂಧ ಬೆಳೆಸಿದ 24ರ ಹರೆಯದ ಮಹಿಳೆಯೂ ಉಮ್ರ್‌ಖಲಿ ಗ್ರಾಮದ ಮಹಿಳೆಯಾಗಿದ್ದು, ವರ್ಷದ ಹಿಂದಷ್ಟೇ ಆಕೆಗೆ ಮದ್ವೆಯಾಗಿತ್ತು. ಮದ್ವೆಯ ನಂತರ ಆಕೆ ತನ್ನ ಗಂಡನ ಸೊಸೆಯ ಜೊತೆ ಸಲಿಂಗ ಸಂಬಂಧ ಬೆಳೆಸಿದ್ದಳು. ಆರೋಪಿಯೂ ತಾನು ಸಲಿಂಗಿ ಎಂಬುದನ್ನು ನಮ್ಮ ವಿಚಾರಣೆ ವೇಳೆ ತಿಳಿಸಿದ್ದಾಳೆ. ಆಕೆ ಅಪ್ರಾಪ್ತೆಯನ್ನು ಧಮ್ನೊಡ್ ಹಾಗೂ ಇಂದೋರ್‌ಗೆ ಕರೆದೊಯ್ದಿದ್ದಾಳೆ. ಅಲ್ಲಿ ಅವರು ದಂಪತಿಯಂತೆ ವಾಸ ಮಾಡಿದ್ದಾರೆ ಎಂದು ಬರುದ್ ಪೊಲೀಸ್ ಇನ್‌ಚಾರ್ಜ್ ರಿತೇಶ್ ಯಾದವ್ ಹೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.