
ಆರೋಗ್ಯಕರ ಸಂಬಂಧ ಜೀವನವನ್ನು ಆಹ್ಲಾದಕರಗೊಳಿಸುತ್ತದೆ. ಜೀವನವನ್ನು ಚಿಂತೆಯಿಂದ ಮುಕ್ತಗೊಳಿಸುತ್ತದೆ. ಸದಾ ಸಂತೋಷವಾಗಿರಲು ಪ್ರೀತಿ ತುಂಬಿದ ಸಂಬಂಧ ಬಹಳ ಮುಖ್ಯ. ಆದ್ರೆ ಅನೇಕರು ಈ ಸಂಬಂಧವನ್ನು ನಿರ್ಲಕ್ಷ್ಯ ಮಾಡ್ತಾರೆ. ಒಂದು ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುವ ಬದಲು ನಾಲ್ಕೈದು ಸಂಬಂಧದ ಹಿಂದೆ ಓಡ್ತಾರೆ. ಮಲ್ಟಿಪಲ್ ಡೇಟಿಂಗ್ ಈಗಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆರಂಭದಲ್ಲಿ ಒಂದಕ್ಕಿಂತ ಹೆಚ್ಚು ಜನರ ಜೊತೆ ಡೇಟಿಂಗ್ ಸುಖ ನೀಡುತ್ತದೆಯಾದ್ರೂ ದಿನ ಕಳೆದಂತೆ ಇದು ಸಮಸ್ಯೆಯಾಗಲು ಶುರುವಾಗುತ್ತದೆ. ನಿಮ್ಮ ಇಮೇಜ್ ಹಾಳು ಮಾಡುವುದಲ್ಲದೆ ಅನೇಕ ಅಡ್ಡಪರಿಣಾಮಗಳು ಇದ್ರಿಂದ ಉಂಟಾಗುತ್ತವೆ.
ದೀರ್ಘ ಸಮಯದವರೆಗೆ ವ್ಯಕ್ತಿ ಮಲ್ಟಿಪಲ್ (Multiple) ಡೇಟಿಂಗ್ (Dating) ನಲ್ಲಿದ್ದರೆ ತನ್ನನ್ನು ತಾನು ತಪ್ಪಿತಸ್ಥನೆಂದು ಭಾವಿಸಲು ಶುರುಮಾಡ್ತಾನೆ. ಅನೇಕರು ಆತ್ಮಹತ್ಯೆ (Suicide) ಆಲೋಚನೆ ಮಾಡ್ತಾರೆ. ಇಂಥ ವ್ಯಕ್ತಿಗಳಲ್ಲಿ ರಕ್ತದೊತ್ತಡ, ಮಧುಮೇಹ ಮತ್ತು ಲೈಂಗಿಕವಾಗಿ ಹರಡುವ ಸೋಂಕಿನಂತಹ ದೈಹಿಕ ಕಾಯಿಲೆಗಳ ಅಪಾಯವೂ ಹೆಚ್ಚಾಗುತ್ತದೆ. ಇದು ವ್ಯಕ್ತಿಯನ್ನು ಸಂಪೂರ್ಣವಾಗಿ ಹತಾಶೆಗೊಳಿಸುತ್ತದೆ. ಜೀವನ ಪರ್ಯಂತ ಮಲ್ಟಿಪಲ್ ಡೇಟಿಂಗ್ ನಿಂದ ವ್ಯಕ್ತಿ ತೊಂದರೆಗೊಳಗಾಗ್ತಾನೆ.
ಸೆಕ್ಸ್ ಲೈಫ್ ಎಂಜಾಯ್ ಮಾಡಬೇಕು ಅಂದ್ರೆ ಮೊಟ್ಟೆ ತಿನ್ನಿ!
ಮಲ್ಟಿ ಡೇಟಿಂಗ್‌ನಿಂದಾಗುವ ಅಪಾಯ?:
ಸರಿಯಾದ ನಿರ್ಧಾರ ಅಸಾಧ್ಯ : ಒಂದೇ ಸಮಯದಲ್ಲಿ ಅನೇಕ ಜನರ ಜೊತೆ ಸಂಬಂಧ ಬೆಳೆಸುವ ಜನರು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಅಸಮರ್ಥರಾಗುತ್ತಾರೆ. ಜೀವನದ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಅವರಿಂದ ಸಾಧ್ಯವಾಗೋದಿಲ್ಲ. ತಮ್ಮ ಜೀವನದ ಗುರಿ ಏನು ಎಂಬುದನ್ನು ನಿರ್ಧರಿಸಲು ಕಷ್ಟವಾಗುತ್ತದೆ. ಅವರು ತಮ್ಮಲ್ಲಿಯೇ ಕಳೆದುಹೋಗ್ತಾರೆ. ನಾಲ್ಕೈದು ಜನರನ್ನು ಸಂಭಾಳಿಸುವು ಕಾರಣ ಅವರ ವೃತ್ತಿ ಜೀವನದ ಮೇಲೂ ಇದು ಅಡ್ಡಪರಿಣಾಮ ಬೀರುತ್ತದೆ. ಮಲ್ಟಿ ಡೇಟಿಂಗ್ ಬಿಟ್ಟು, ಒಬ್ಬ ಸಂಗಾತಿ ಆಯ್ಕೆ ಮಾಡಿಕೊಳ್ಳಬೇಕೆಂಬ ನಿರ್ಧಾರಕ್ಕೆ ಬಂದ್ರೂ, ಯಾರು ನನಗೆ ಸೂಕ್ತರು ಎಂಬುದನ್ನು ಅರಿಯಲು ಅವರಿಗೆ ಸಾಧ್ಯವಾಗೋದಿಲ್ಲ.
ಸಂಬಂಧದಲ್ಲಿ ವಿಶ್ವಾಸ, ನಂಬಿಕೆ (Trust) ಕೊರತೆ : ನೀವು ಮಲ್ಟಿ ಡೇಟಿಂಗ್ ಪದ್ಧತಿ ಅನುಸರಿಸುತ್ತಿದ್ದೀರಿ ಎಂಬ ಸತ್ಯ ನಿಮ್ಮ ಸಂಗಾತಿಗೆ ತಿಳಿದ್ರೆ ಅವರು ನಿಮ್ಮ ಮೇಲೆ ವಿಶ್ವಾಸ, ನಂಬಿಕೆ ಕಳೆದುಕೊಳ್ತಾರೆ. ನಿಮ್ಮಿಂದ ದೂರವಾಗಲು ಯತ್ನಿಸುತ್ತಾರೆ. ಬರೀ ಸಂಗಾತಿ ಮಾತ್ರವಲ್ಲ ಕುಟುಂಬಸ್ಥರು, ಸ್ನೇಹಿತರು ಕೂಡ ನಿಮ್ಮಿಂದ ದೂರ ಸರಿಯುತ್ತಾರೆ. ಇದ್ರಿಂದ ಒಂಟಿತನ ನಿಮ್ಮನ್ನು ಕಾಡಲು ಶುರುವಾಗುತ್ತದೆ. ನಾಲ್ಕೈದು ಸಂಬಂಧದಲ್ಲಿ ನೀವಿದ್ದರೂ ನೀವು ಏಕಾಂಗಿಯಾಗ್ತೀರಿ. ಯಾರೂ ನಿಮ್ಮನ್ನು ನಂಬುವ ಸ್ಥಿತಿಯಲ್ಲಿ ಇರೋದಿಲ್ಲ.
Relationship Tips: ಪ್ರತಿ ಪುರುಷನೂ ಶ್ರೀರಾಮನ ದಾರೀಲಿ ನಡೆದ್ರೆ ಆದರ್ಶ ಪತಿಯಾಗೋದು ಸುಲಭ
ಹೆಚ್ಚಾಗುತ್ತೆ ಒತ್ತಡ (Stress): ಮಲ್ಟಿ ಡೇಟಿಂಗ್ ಆರಂಭದಲ್ಲಿ ಥ್ರಿಲ್ಲಿಂಗ್ ಆಗಿರಬಹುದು. ಆದ್ರೆ ದೀರ್ಘಕಾಲದಲ್ಲಿ ಅದು ಒತ್ತದದಿಂದ ಕೂಡಿರುತ್ತದೆ. ಸಂಬಂಧದಲ್ಲಿ ಸಾಕಷ್ಟು ಏರಿಳಿತಗಳಾಗುತ್ತವೆ. ಒಬ್ಬ ಸಂಗಾತಿಯಿಂದ ಒಂದು ಸಮಸ್ಯೆ ಕಾಡಿದ್ರೆ ಇನ್ನೊಬ್ಬರಿಂದ ಇನ್ನೊಂದು ಸಮಸ್ಯೆ ಎದ್ದು ನಿಲ್ಲಬಹುದು. ನಿಮ್ಮ ಮಲ್ಟಿ ಡೇಟಿಂಗ್ ಮುಚ್ಚಿಡುವುದು ಕೂಡ ಒಂದು ಸವಾಲು. ಸುಳ್ಳಿನ ಮೇಲೆ ಸುಳ್ಳು ಹೇಳುವ ಕಾರಣ ಇದು ನಿಮ್ಮನ್ನು ಸದಾ ಒತ್ತಡ ಹಾಗೂ ಆತಂಕಕ್ಕೆ ಒಳಗಾಗುವಂತೆ ಮಾಡುತ್ತದೆ.
ಸಮಯ ನಿರ್ವಹಣೆ ಕಷ್ಟ (Time Managmenet) : ಒಂದೇ ಬಾರಿ ಅನೇಕ ಜನರ ಜೊತೆ ಸಂಬಂಧ ಬೆಳೆಸುವ ಕಾರಣ ನಿಮಗೆ ಸಮಯದ ಅಭಾವ ಕಾಡಬಹುದು. ಕಚೇರಿ, ಕೌಟುಂಬಿಕ ಕೆಲಸಗಳಲ್ಲಿ ನೀವು ಹಿಂದೆ ಬೀಳುತ್ತೀರಿ. ಎಲ್ಲವನ್ನೂ ಒಬ್ಬರಿಗೆ ನಿರ್ವಹಿಸಲು ಸಾಧ್ಯವಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗುತ್ತದೆ. ಊಟ, ನಿದ್ರೆ ಎಲ್ಲದರಲ್ಲೂ ಏರುಪೇರಾಗುತ್ತದೆ.
ಅಪಾಯದಲ್ಲಿರುವ ಲೈಂಗಿಕ ಜೀವನ (Sexual Life): ಹೊಸ ಸಂಬಂಧ ಸಿಗ್ತಿದ್ದಂತೆ ಹಳೆಯ ಹಾಗೂ ನಂಬಿಕಸ್ಥ ಸಂಬಂಧವನ್ನು ಇವರು ದೂರ ಮಾಡ್ತಾರೆ. ಅನೇಕರ ಜೊತೆ ದೈಹಿಕ ಸಂಬಂಧ ಬೆಳೆಸುವ ಕಾರಣ ಲೈಂಗಿಕ ರೋಗಗಳ ಅಪಾಯ ಅವರನ್ನು ಕಾಡುತ್ತದೆ. 10 ಜನರ ಜೊತೆ ಸಂಬಂಧ ಹೊಂದಿದ ವ್ಯಕ್ತಿಗೆ, ಒಬ್ಬರ ಜೊತೆ ಸಂಬಂಧ ಹೊಂದಿದ ವ್ಯಕ್ತಿಗಿಂತ ಶೇಕಡಾ 70ರಷ್ಟು ಕ್ಯಾನ್ಸರ್ ಅಪಾಯವಿರುತ್ತದೆ ಎಂದು ಅಧ್ಯಯನ ಹೇಳಿದೆ. ಮಹಿಳೆಯರಿಗೆ ಶೇಕಡಾ 91ರಷ್ಟು ಅಪಾಯವಿರುತ್ತದೆ. ಮಲ್ಟಿ ಡೇಟಿಂಗ್ ನಿಂದ ಲೈಂಗಿಕ ಸೋಂಕು ಬೇಗ ಹರಡುತ್ತದೆ. ಅಲ್ಲದೆ ಯಾವ ಲೈಂಗಿಕ ಸಂಬಂಧದಲ್ಲೂ ಸಂಪೂರ್ಣ ತೃಪ್ತಿ ಸಿಗೋದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.