ಚೆನ್ನಾಗಿ ಅಡುಗೆ ಮಾಡಲು ಹೆಂಡತಿಗೆ ಬರೋದಿಲ್ಲ ಎನ್ನುವುದು ಕ್ರೌರ್ಯವಲ್ಲ ಎಂದ ಕೇರಳ ಹೈಕೋರ್ಟ್‌!

By Santosh Naik  |  First Published Oct 18, 2023, 4:18 PM IST

ಒಬ್ಬ ವ್ಯಕ್ತಿಯು ಏಕಪಕ್ಷೀಯವಾಗಿ ವಿವಾಹದಿಂದ ಹೊರನಡೆಯಲು ನಿರ್ಧರಿಸುವುದಿಲ್ಲ ಮತ್ತು ನಂತರ ಅವರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬ ಕಾರಣಕ್ಕಾಗಿ ವಿಚ್ಛೇದನವನ್ನು ಪಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

Kerala High Court says Wife not having cooking skills to prepare food for husband does not amount to cruelty san

ಕೊಚ್ಚಿ (ಅ.18): ಅಡುಗೆ ಮಾಡುವ ಕಲೆ ಗೊತ್ತಿಲ್ಲದೆ ಇರುವ ಕಾರಣಕ್ಕೆ ತನ್ನ ಪತಿಗೆ ಆಹಾರವನ್ನು ತಯಾರಿಸದೇ ಇರುವ ವಿಚಾರವನ್ನು ದಾಂಪತ್ಯದಲ್ಲಿ ಕ್ರೌರ್ಯ ಎಂದು ಪರಿಗಣನೆ ಮಾಡಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ ಮದುವೆಯನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್‌ ಮಂಗಳವಾರ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಸೋಫಿ ಥಾಮಸ್ ಅವರ ಪೀಠವು ಕ್ರೌರ್ಯದ ಆಧಾರದ ಮೇಲೆ ವಿಚ್ಛೇದನ ಕೋರಿ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವಾಗ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು. ವ್ಯಕ್ತಿಯೊಬ್ಬ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌, ಅದರಲ್ಲಿ ಆತ ವಿಚ್ಛೇದನಕ್ಕಾಗಿ ನೀಡಿರುವ ಕಾರಣಗಳ ಬಗ್ಗೆ ತನ್ನ ಅಭಿಪ್ರಾಯ ತಿಳಿಸಿದೆ.  ನನ್ನ ಪತ್ನಿಗೆ ಅಡುಗೆ ಮಾಡೋದು ತಿಳಿದಿಲ್ಲ. ಇದರಿಂದಾಗಿ ಆಕೆ ನನಗೆ ಮನೆಯಲ್ಲಿ ಅಡುಗೆ ಮಾಡುತ್ತಿಲ್ಲ' ಇದು ನನಗೆ ನೀಡುತ್ತಿರುವ ಕ್ರೌರ್ಯ ಎಂದು ವ್ಯಕ್ತಿಯೊಬ್ಬ ತನ್ನ ಅರ್ಜಿಯಲ್ಲಿ ಬರೆದುಕೊಂಡಿದ್ದ. ಅರ್ಜಿ ಹಾಕಿರುವವರು ಹೇಳಿದ, ಕ್ರೌರ್ಯದ ಇನ್ನೊಂದು ಕಾರಣವೆಂದರೆ ಆತನ ಪತ್ನಿಗೆ ಅಡುಗೆ ತಿಳಿದಿಲ್ಲ ಮತ್ತು ಆದ್ದರಿಂದ ಅವಳು ಅವನಿಗೆ ಆಹಾರವನ್ನು ತಯಾರಿಸಲಿಲ್ಲ. ಅದನ್ನು ಕಾನೂನುಬದ್ಧ ವಿವಾಹವನ್ನು ವಿಸರ್ಜಿಸಲು ಕ್ರೌರ್ಯ ಎಂದು ಕರೆಯಲು ಸಾಧ್ಯವಿಲ್ಲ ಎಂದು ಕೋರ್ಟ್ ತಿಳಿಸಿದೆ. 

2012ರ ಮೇ 7 ರಂದು ವಿವಾಹವಾಗಿರುವ ಈ ಜೋಡಿ, ಅಬುಧಾಬಿಯಲ್ಲಿ ಪತಿ-ಪತ್ನಿಯಾಗಿ ವಾಸಿಸುತ್ತಿದ್ದರು. ಸಂಬಂಧಿಕರ ಸಮ್ಮುಖದಲ್ಲಿ ಪತ್ನಿ ತನಗೆ ಅವಮಾನ ಮಾಡಿ ಅಸಭ್ಯವಾಗಿ ವರ್ತಿಸಿದ್ದಾಳೆ ಎಂದು ಪತಿ ವಾದಿಸಿದ್ದಾನೆ. ನನಗೆ ಆಕೆ ಎಂದೂ ಗೌರವ ನೀಡಿರಲಿಲ್ಲ. ನನ್ನಿಂದ ಅಂತರವನ್ನು ಕಾಯ್ದುಕೊಂಡಿದ್ದ ಆಕೆ, ಎಂದೂ ನನಗೆ ಗೌರವ ನೀಡಿರಲಿಲ್ಲ. ಒಂದು ದಿನ ಈಕೆ ನನ್ನ ಮೇಲೆ ಉಗುಳಿದ್ದಳು. ಬಳಿಕ ಅದಕ್ಕಾಗಿ ಕ್ಷಮೆಯನ್ನೂ ಕೇಳಿದ್ದರು ಎಂದು ವಾದಿಸಿದ್ದಾರೆ.

ನನ್ನನ್ನು ಉದ್ಯೋಗದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿ ನನ್ನ ಪತ್ನಿ, ನನ್ನ ವಿರುದ್ಧವೇ ಅವಹೇಳನಕಾರಿ ಹೇಳಿಕೆಯನ್ನು ನೀಡಿ ನಾನು ಕೆಲಸ ಮಾಡುತ್ತಿದ್ದ ಕಂಪನಿಯ ಮಾಲೀಕರಿಗೆ ದೂರು ನೀಡಿದ್ದಳು. ನನಗಾಗಿ ಮನೆಯಲ್ಲಿ ಅಡುಗೆ ಮಾಡಲು ಆಕೆ ಸಿದ್ಧವಿಲ್ಲ. ಅಲ್ಲದೆ, ಸಣ್ಣಪುಟ್ಟ ಕಾರಣಕ್ಕೆ ನನ್ನ ತಾಯಿಯೊಂದಿಗೆ ಪ್ರತಿದಿನ ಜಗಳವಾಡುತ್ತಿದ್ದರು ಎಂದಿದ್ದಾರೆ.ಆದರೆ, ಪತ್ನಿಯು ಎಲ್ಲಾ ಆರೋಪಗಳನ್ನು ವಿರೋಧಿಸಿದ್ದು ಮಾತ್ರವಲ್ಲದೆ, ತನ್ನ ಪತಿ ಲೈಂಗಿಕ ವಿಕೃತಿಗಳನ್ನು ಹೊಂದಿದ್ದಾನೆ ಮತ್ತು ಬಾಡಿ ಶೇಮಿಂಗ್‌ ಮಾಡುತ್ತಿದ್ದರು ಎಂದಿದ್ದಾಳೆ. ತನ್ನ ಪತಿಗೆ ಮಾನಸಿಕ ಆರೋಗ್ಯ ಸಮಸ್ಯೆಗಳಿದ್ದು, ಆತನಿಗೆ ಬರೆದಿದ್ದ ಔಷಧಗಳನ್ನು ಸೇವಿಸುವುದನ್ನು ನಿಲ್ಲಿಸಿದ್ದಾರೆ.

ಕೆಲಸ ಮಾಡುತ್ತಿದ್ದ ಕಂಪನಿಯ ಮಾಲೀಕರಿಗೆ ಪತ್ರ ಬರೆದಿದ್ದಾರೆ ಎನ್ನುವ ಗಂಡನ ಆರೋಪದ ಮೇಲೆ, ತನ್ನ ಪತಿಯೊಂದಿಗೆ  ವೈವಾಹಿಕ ಜೀವನವನ್ನು ಮುಂದುವರಿಸಲು ಉದ್ದೇಶಿಸಿರುವ ಕಾರಣ ತನ್ನ ಪತಿಯೊಂದಿಗೆ ವಿಷಯಗಳನ್ನು ಸರಿಪಡಿಸಲು ಉದ್ಯೋಗದಾತರ ಸಹಾಯವನ್ನು ಕೋರಿದ್ದಾಗಿ ತಿಳಿಸಿದ್ದಾಳೆ. ತನ್ನ ಪತಿಯಲ್ಲಿ ಕಂಡುಬರುವ ವರ್ತನೆಯ ಬದಲಾವಣೆಗಳ ಬಗ್ಗೆ ಪತ್ನಿ ಆತಂಕ ವ್ಯಕ್ತಪಡಿಸಿದ್ದಾರೆ ಮತ್ತು ಆತನನ್ನು ಸಾಮಾನ್ಯ ಜೀವನಕ್ಕೆ ಮರಳಿ ತರಲು ಅವನಲ್ಲಿ ಏನು ತಪ್ಪಾಗಿದೆ ಎಂಬುದನ್ನು ಕಂಡುಹಿಡಿಯಲು ಅವನ ಉದ್ಯೋಗದಾತರ ಸಹಾಯವನ್ನು ಕೋರುತ್ತಿದ್ದಾಳೆ ಎಂದು ಹೈಕೋರ್ಟ್ ಗಮನಿಸಿದೆ. ಗಂಡನ ಮೇಲೆ ಉಗುಳಿದ್ದಾಳೆ ಎಂಬ ಆರೋಪವನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ ಎಂದು ತಿಳಿಸಿದೆ.

Tap to resize

Latest Videos

ಮಗಳ ಅತ್ಯಾಚಾರಕ್ಕೆ ಮಲತಂದೆಗೆ ಅವಕಾಶ, ತಾಯ್ತನಕ್ಕೆ ಕಳಂಕ ಎಂದು ಜಾಮೀನು ನಿರಾಕರಿಸಿದ ಕೋರ್ಟ್!

ಕಕ್ಷಿದಾರರು ಹತ್ತು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಹಾಗಾಗಿ ಈ ವಿವಾಹವು 'ಪ್ರಾಯೋಗಿಕವಾಗಿ ಮತ್ತು ಭಾವನಾತ್ಮಕವಾಗಿ ಸತ್ತಿದೆ' ಎಂದು ನ್ಯಾಯಾಲಯ ಹೇಳಿದೆ. "ಆದ್ದರಿಂದ ಕಾನೂನುಬದ್ಧವಾಗಿ, ವಿಚ್ಛೇದನವನ್ನು ಸಮರ್ಥಿಸಲು ಸಾಕಷ್ಟು ಆಧಾರಗಳಿಲ್ಲದಿದ್ದಾಗ, ಒಂದು ಪಕ್ಷವು ಏಕಪಕ್ಷೀಯವಾಗಿ ಮದುವೆಯಿಂದ ಹೊರನಡೆಯಲು ನಿರ್ಧರಿಸುವುದಿಲ್ಲ ... ಗಣನೀಯವಾಗಿ ದೀರ್ಘಾವಧಿಯವರೆಗೆ ಸಹ-ವಾಸ ಮಾಡದ ಕಾರಣ, ಅವರ ವಿವಾಹವು ಪ್ರಾಯೋಗಿಕವಾಗಿ ಮತ್ತು ಭಾವನಾತ್ಮಕವಾಗಿ ಸತ್ತಿದೆ ಎಂದು ಹೇಳುತ್ತದೆ ಎಂದು ಕೋರ್ಟ್‌ ತಿಳಿಸಿದೆ. ಆದ್ದರಿಂದ, ಮದುವೆಯನ್ನು ವಿಸರ್ಜಿಸಲು ಪತಿಯ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಹೆಸರಿಡುವ ವಿಚಾರಕ್ಕೆ ಅಪ್ಪ ಅಮ್ಮನ ನಡುವೆ ಜಗಳ: ಮಗುವಿಗೆ ಕೋರ್ಟ್‌ನಿಂದಲೇ ನಾಮಕರಣ...!

vuukle one pixel image
click me!
vuukle one pixel image vuukle one pixel image