ಪ್ರೀತಿಸಲ್ಲ ಅನ್ನೋ ಕಾರಣಕ್ಕಲ್ಲ, ಹೆಚ್ಚು ಪ್ರೀತಿಸ್ತಾರೆ ಅಂತಾನೂ ಡಿವೋರ್ಸ್ ಕೊಡ್ತಾರೆ!

By Suvarna News  |  First Published Oct 18, 2023, 11:51 AM IST

ದಾಂಪತ್ಯದಲ್ಲಿ ತಾಳ್ಮೆ, ಹೊಂದಾಣಿಕೆ ಬಹಳ ಮುಖ್ಯ. ಅದೇ ಇಲ್ಲವೆಂದ್ರೆ ಮದುವೆ ವಿಚ್ಛೇದನದ ದಾರಿ ತುಳಿಯುತ್ತದೆ. ಏನಾಗ್ತಿದೆ ಎಂಬುದನ್ನು ಕುಳಿತು ಆಲೋಚನೆ ಮಾಡುವ ವ್ಯವಧಾನ ಕಳೆದುಕೊಳ್ಳುವ ಜನರು ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ನೀಡ್ತಾರೆ. 
 


ಮದುವೆಯಾಗಿ ವಾರ, ತಿಂಗಳು ಪೂರ್ಣಗೊಂಡ್ರೆ ಅದನ್ನು ಸಂಭ್ರಮಿಸುವ ಪರಿಸ್ಥಿತಿ ಈಗ ಇದೆ. ಯಾಕೆಂದ್ರೆ ತಿಂಗಳ ನಂತ್ರ ದಂಪತಿ ಒಟ್ಟಿಗೆ ಇರ್ತಾರೆ ಎನ್ನವ ಗ್ಯಾರಂಟಿ ಇಲ್ಲ. ಮೊದಲ ರಾತ್ರಿಯೇ ಬೇರೆಯಾದ ದಂಪತಿ ಇದ್ದಾರೆ. ಹನಿಮೂನ್ ಮುಗಿಸಿ ಬಂದ ತಕ್ಷಣ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಜನರನ್ನು ನೀವು ನೋಡ್ಬಹುದು. ಹಿಂದೆ ಚಿಕ್ಕ ವಯಸ್ಸಿನಲ್ಲೇ ಮದುವೆಯಾದ್ರೂ ಇಬ್ಬರು ದೊಡ್ಡವರ ಮಾರ್ಗದರ್ಶನದಲ್ಲಿ ಹೊಂದಿಕೊಂಡು ಬದುಕುತ್ತಿದ್ದರು. ಪತಿ – ಪತ್ನಿ ಮಧ್ಯೆ ಬರುವ ಸಣ್ಣ ಸಣ್ಣ ಸಮಸ್ಯೆಗಳನ್ನು ಸಮಸ್ಯೆ ಎಂದುಕೊಳ್ಳದೆ ಅದನ್ನು ನಿಭಾಯಿಸಿ ಜೀವನ ನಡೆಸುತ್ತಿದ್ದರು. ಆದ್ರೆ ಈಗಿನ ಜನರ ಮನಸ್ಥಿತಿ ಸಂಪೂರ್ಣ ಬದಲಾಗಿದೆ.

ಇಬ್ಬರ ಮಧ್ಯೆ ಹೊಂದಾಣಿಕೆ (Adjustment) ಯಾಗೋದೇ ಬಹಳ ಅಪರೂಪ ಎನ್ನುವಂತಾಗಿದೆ. ಇನ್ನು ಕೂಡಿ ಬದುಕಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ತಲುಪಿದಾಗ ಜನರು ವಿಚ್ಛೇದನ ನಿರ್ಧಾರಕ್ಕೆ ಬರ್ತಾರೆ. ಹಿಂದೆ ವರದಕ್ಷಿಣೆ ಕಿರುಕುಳ, ಕೌಟುಂಬಿಕ ಹಿಂಸೆ, ದಂಪತಿ ಮಧ್ಯೆ ದೊಡ್ಡ ಮಟ್ಟದ ಜಗಳ ವಿಚ್ಛೇದನ (Divorce) ಕ್ಕೆ ಕಾರಣವಾಗ್ತಾಯಿತ್ತು. ಈಗ ಜನರು ಅತೀ ಸಣ್ಣ, ಕ್ಷುಲ್ಲಕ ಕಾರಣಕ್ಕೆ ಬೇರೆಯಾಗುವ ನಿರ್ಧಾರಕ್ಕೆ ಬರ್ತಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಲಾಯರ್ ಒಬ್ಬರು, ವಿಚ್ಛೇದನಕ್ಕೆ ಕಾರಣವಾಗ್ತಿರುವ ವಿಚಿತ್ರ ಕಾರಣವನ್ನು ಜನರ ಮುಂದಿಟ್ಟಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Tap to resize

Latest Videos

ಸೆಕ್ಸ್‌ ಟೈಂನಲ್ಲಿ ಬೇಗ ಸುಸ್ತಾಗುತ್ತಾ? ಲೈಂಗಿಕ ಶಕ್ತಿ ಹೆಚ್ಚಿಸಲು ಇವನ್ನು ತಿನ್ನಿ ಸಾಕು

ಮದುವೆ (Marriage) ಅನ್ನೋದೇ ಇಬ್ಬರು ಕೂಡಿ ಬಾಳೋದು. ಹೊಂದಾಣಿಕೆ, ವಿಶ್ವಾಸ, ಪ್ರೀತಿ ಬೆರೆಸಿ ಜೀವನ ನಡೆಸಲು. ಆದ್ರೆ ಅತೀ ಸಣ್ಣ ವಿಷ್ಯದಲ್ಲೇ ಇಬ್ಬರಿಗೆ ಹೊಂದಾಣಿಕೆ ಇಲ್ಲವೆಂದ್ರೆ ಕಷ್ಟವಾಗುತ್ತದೆ. ಭಾರತದಲ್ಲಿ ದಿನ ದಿನಕ್ಕೂ ವಿಚ್ಛೇದನ ಸಂಖ್ಯೆ ಹೆಚ್ಚಾಗ್ತಿದೆ. ವಕೀಲೆ ತಾನ್ಯಾ ಅಪ್ಪಾಚು ಕೌಲ್, ವಿಚ್ಛೇದನಕ್ಕೆ ಏನು ಕಾರಣ ಎಂಬುದನ್ನು ವಿಡಿಯೋ ಮೂಲಕ ಹೇಳಿದ್ದಾರೆ.

ಈ ಎಲ್ಲ ಕಾರಣಕ್ಕೆ ವಿಚ್ಛೇದನ ಪಡೆಯುತ್ತಾರೆ ಗೊತ್ತಾ? : ಲಾಯರ್ ತಾನ್ಯಾ ಅಪ್ಪಾಚು ಕೌಲ್ ವಿಡಿಯೋ ಪ್ರಕಾರ, 
• ಹನಿಮೂನ್ ಸಮಯದಲ್ಲಿ ತನ್ನ ಹೆಂಡತಿ ಅಸಭ್ಯವಾಗಿ ಡ್ರೆಸ್ಸಿಂಗ್ ಮಾಡಿಕೊಂಡಿದ್ದಳು ಎನ್ನುವ ಕಾರಣಕ್ಕೆ ವ್ಯಕ್ತಿಯೊಬ್ಬ ವಿಚ್ಛೇದನ ಪಡೆಯಲು ಅರ್ಜಿ ಸಲ್ಲಿಸಿದ್ದಾನೆ. 
• ಇನ್ನೊಬ್ಬ ಮಹಿಳೆಗೆ ಪತಿ ಅತಿಯಾಗಿ ಪ್ರೀತಿಸೋದೆ ಕಷ್ಟ ತಂದಿದೆ. ಆಕೆ  ಪತಿ ಅತಿಯಾದ ಪ್ರೀತಿ ನೀಡ್ತಾನಂತೆ. ಸದಾ ಆಕೆಯ ಬಗ್ಗೆ ಗಮನ ಹರಿಸ್ತಾನಂತೆ. ಇದು ಆಕೆಗೆ ಇಷ್ಟವಿಲ್ಲ ಎನ್ನುವ ಕಾರಣಕ್ಕೆ ವಿಚ್ಛೇದನ ನೀಡಲು ಮುಂದಾಗಿದ್ದಾಳೆ.
•  ಇನ್ನೊಬ್ಬ ಮಹಿಳೆಗೆ ಪತಿ ಓದೇ ಶತ್ರುವಾಗಿದೆ. ಆಕೆ ಪತಿ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾನಂತೆ. ಇಡೀ ದಿನ ಓದಿನಲ್ಲಿ ಮಗ್ನವಾಗಿರುವ ಪತಿ ತನಗೆ ಸಾಕಷ್ಟು ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ತನಗೆ ವಿಚ್ಛೇದನ ಬೇಕು ಎಂದು ಅರ್ಜಿ ಸಲ್ಲಿಸಿದ್ದಾಳೆ.  
• ಈಗಿನ ದಿನಗಳಲ್ಲೂ ಜನರು ಕಲ್ಪನೆಗೆ ಮೀರಿದ್ದನ್ನು ನಿರೀಕ್ಷೆ ಮಾಡ್ತಾರೆ. ಈತನ ಪತ್ನಿ, ಗಂಡನ ಪಾದ ಮುಟ್ಟಿ ನಮಸ್ಕಾರ ಮಾಡ್ತಿಲ್ಲವಂತೆ. ಹಾಗಾಗಿ ಆತ ಪತ್ನಿಗೆ ಡೈವೋರ್ಸ್ ನೀಡಲು ಮುಂದಾಗಿದ್ದಾನೆ. 

ಮದ್ವೆ ಆದ್ಮೇಲೂ ಖುಷಿಯಾಗಿರ್ಬೇಕು ಅಂದ್ರೆ ಈ ಗೋಲ್ಡನ್ ರೂಲ್ ಫಾಲೋ ಮಾಡಲೇ ಬೇಕು!

• ಮದುವೆಗೆ ಮುನ್ನ ಎಲ್ಲ ವಿಚಾರಿಸಿ ಮದುವೆಯಾಗುವ ಬದಲು ಈಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಈ ವ್ಯಕ್ತಿ ಪ್ರಾಬ್ಲಂ ಪತ್ನಿಗೆ ಅಡುಗೆ ಬರೋದಿಲ್ಲ ಎನ್ನುವುದು. ಪತ್ನಿಗೆ ಅಡುಗೆ (Cooking) ಬಾರದ ಕಾರಣ ಆಕೆ ಬೆಳಿಗ್ಗೆ ಉಪಹಾರ ಸಿದ್ಧ ಮಾಡ್ತಿಲ್ಲ. ಹಾಗಾಗಿ ನಾನು ಹಸಿದುಕೊಂಡೆ ಕಚೇರಿಗೆ ಹೋಗ್ಬೇಕು ಎಂಬ ಕಾರಣ ಇಟ್ಟುಕೊಂಡು ಈತ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ.  

ವಿಡಿಯೋ ಹಾಕಿದ ವಕೀಲೆ, ಮದುವೆಯಾದ್ರೂ ಏಕೆ ಮಾಡಿಕೊಳ್ಬೇಕು ಎಂದು ಶೀರ್ಷಿಕೆ ಹಾಕಿದ್ದಾರೆ. ಇದಕ್ಕೆ ಸಾಕಷ್ಟು ಕಮೆಂಟ್ಸ್ ಬಂದಿದೆ. ಕೆಲ ಪುರುಷರಿಗೆ ಪತ್ನಿ ಬೇಡ, ಅಮ್ಮ ಬೇಕು ಎಂದು ವ್ಯಕ್ತಿಯೊಬ್ಬ ಕಮೆಂಟ್ ಮಾಡಿದ್ದಾನೆ. ಇನ್ನೊಬ್ಬ ಜನರು ಮದುವೆಯಾಗದಿರುವುದೇ ಬೆಸ್ಟ್ ಎಂದಿದ್ದಾನೆ. 
 

click me!