ಕತ್ರಿನಾ- ವಿಕ್ಕಿ ಪುತ್ರನಿಗೆ ಒಂದು ವರ್ಷ: ಮೊದಲ ಬಾರಿಗೆ ಮಗನ ಮುಖ ರಿವೀಲ್​ ಮಾಡಿದ ತಾರಾ ಜೋಡಿ

Published : Nov 08, 2026, 07:04 PM IST
Katrina Kaif, Vicky Kaushal with son

ಸಾರಾಂಶ

ಬಾಲಿವುಡ್ ಜೋಡಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ಮಗ ವಿಹಾನ್‌ನ ಮೊದಲ ಹುಟ್ಟುಹಬ್ಬದಂದು ದೀಪಾವಳಿ ಸಂಭ್ರಮದಲ್ಲಿ ಮೊದಲ ಬಾರಿಗೆ ಮುಖವನ್ನು ರಿವೀಲ್ ಮಾಡಿದ್ದಾರೆ. ವಿಹಾನ್ ಹೆಸರು ವಿಕ್ಕಿಯವರ 'ಉರಿ' ಚಿತ್ರದ ಪಾತ್ರದಿಂದ ಪ್ರೇರಿತವಾಗಿದೆ.

ಮುಂಬೈ: ಬಾಲಿವುಡ್‌ನ ಜನಪ್ರಿಯ ಜೋಡಿ ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal) ಕಳೆದ ವರ್ಷದ ನವೆಂಬರ್​ 7ರಂದು ತಂದೆ-ತಾಯಿಯಾಗಿದ್ದಾರೆ! ನಿನ್ನೆ ಅರ್ಥಾತ್​ ನವೆಂಬರ್ 7 ಅವರ ಮಗ ವಿಹಾನ್​ಗೆ ಒಂದು ವರ್ಷದ ಸಂಭ್ರಮ. ಆದರೆ ಈವರೆಗೂ ಇವರು ತಮ್ಮ ಮಗನನ್ನು ಸಾರ್ವಜನಿಕವಾಗಿ ಪರಿಚಯಿಸಿರಲಿಲ್ಲ. ಇದೀಗ ದೀಪಾವಳಿಯ ಸಂಭ್ರಮದಂದು ಮೊದಲ ಬಾರಿ ಮಗನ ಮುಖವನ್ನು ರಿವೀಲ್​ ಮಾಡಿದ್ದಾರೆ. ಫೋಟೋದಲ್ಲಿ ವಿಹಾನ್ ತನ್ನ ತಂದೆ-ತಾಯಿಯ ನಡುವೆ ನಿಂತು ಮುದ್ದಾಗಿ ನಗುತ್ತಿದ್ದಾನೆ. ತಾಯಿ ಕತ್ರಿನಾ ಅವರ ಹಳದಿ ಅನಾರ್ಕಲಿ ಉಡುಪಿಗೆ ಹೊಂದಿಕೆಯಾಗುವ ಹಳದಿ ಜಾಕೆಟ್ ಹಾಗೂ ತಂದೆ ವಿಕ್ಕಿ ಅವರ ಉಡುಪಿನ ಮಾದರಿಯ ಐವರಿ ಕುರ್ತಾ ಪೈಜಾಮ ಧರಿಸಿದ್ದಾನೆ. ಮಗನನ್ನು ಇಬ್ಬರೂ ಪ್ರೀತಿಯಿಂದ ಅಪ್ಪಿಕೊಂಡಿರುವ ದೃಶ್ಯ ಮನಮೋಹಕವಾಗಿದೆ.

ಕಳೆದ ವರ್ಷ ಪೋಸ್ಟ್​

ಕಳೆದ ವರ್ಷ ಇದೇ ಸಂದರ್ಭದಲ್ಲಿ ಜೋಡಿ, "ನಮ್ಮ ಆನಂದದ ಸಮಯ ಬಂದಿದೆ. ಅಪಾರ ಪ್ರೀತಿ ಮತ್ತು ಕೃತಜ್ಞತೆಯೊಂದಿಗೆ, ನಾವು ನಮ್ಮ ಮಗುವನ್ನು ಸ್ವಾಗತಿಸುತ್ತೇವೆ. ನವೆಂಬರ್ 7, 2025 – ಕತ್ರಿನಾ ಮತ್ತು ವಿಕ್ಕಿ" ಎಂದು ಬರೆದು ಒಂದು ಸುಂದರ ಚಿತ್ರವನ್ನು ಹಂಚಿಕೊಂಡಿದ್ದಾರೆ. ವಿಕ್ಕಿ ತಮ್ಮ ಪೋಸ್ಟ್‌ಗೆ 'ಧನ್ಯ' ಎಂದು ಬರೆದು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದರು. ಕತ್ರಿನಾ ಮತ್ತು ವಿಕ್ಕಿ ದಂಪತಿ ಮಗು ವಿಹಾನ್ ಕೌಶಲ್‌ ಹೆಸರಿಗೂ ವಿಕ್ಕಿ ಅವರ ವೃತ್ತಿಜೀವನದೊಂದಿಗೆ ವಿಶೇಷ ಸಂಬಂಧ ಹೊಂದಿದೆ. ಬ್ಲಾಕ್‌ಬಸ್ಟರ್ ಚಿತ್ರ 'ಉರಿ: ದಿ ಸರ್ಜಿಕಲ್ ಸ್ಟ್ರೈಕ್'ನಲ್ಲಿನ ಅವರ ಪಾತ್ರ ಮೇಜರ್ ವಿಹಾನ್ ಸಿಂಗ್ ಶೆರ್ಗಿಲ್‌ನಿಂದ ಈ ಹೆಸರನ್ನು ಪ್ರೇರೇಪಿಸಲಾಗಿದೆ.

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ 2021ರ ಡಿಸೆಂಬರ್ 9ರಂದು ರಾಜಸ್ಥಾನದಲ್ಲಿ ಆತ್ಮೀಯ ಸಮಾರಂಭದಲ್ಲಿ ವಿವಾಹವಾಗಿದ್ದರು. ಮದುವೆಯ ಬಳಿಕವೂ ತಮ್ಮ ವೈಯಕ್ತಿಕ ಬದುಕಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾ ಬಂದಿರುವ ಈ ಜೋಡಿ, ಇದೀಗ ಮಗನ ಮೊದಲ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳೊಂದಿಗೆ ಸಂತಸದ ಕ್ಷಣ ಹಂಚಿಕೊಂಡಿದ್ದಾರೆ.

ಕತ್ರಿನಾ ಸಿನಿಮಾ

ಕತ್ರಿನಾ ಕೈಫ್ ಕೊನೆಯದಾಗಿ ವಿಜಯ್ ಸೇತುಪತಿ ಜೊತೆ 'ಮೆರ್ರಿ ಕ್ರಿಸ್‌ಮಸ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ವಿಕ್ಕಿ ಕೌಶಲ್ ಕೊನೆಯದಾಗಿ 'ಛಾವಾ' ಚಿತ್ರದಲ್ಲಿ ನಟಿಸಿದ್ದು, ಇದು 2025ರ ಅತಿದೊಡ್ಡ ಬಾಕ್ಸ್ ಆಫೀಸ್ ಯಶಸ್ಸುಗಳಲ್ಲಿ ಒಂದಾಗಿದೆ. ಅವರು ಮುಂದೆ ಸಂಜಯ್ ಲೀಲಾ ಬನ್ಸಾಲಿಯ 'ಲವ್ & ವಾರ್' ಮತ್ತು ಅಮರ್ ಕೌಶಿಕ್ ಅವರ 'ಮಹಾವತಾರ್' ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಯಾವುದೇ ಸಿನಿಮಾಕ್ಕೆ ಆಫರ್​ ಬಂದ್ರೂ ರಕ್ಷಿನೇ ಫೈನಲ್​ ಮಾಡೋದು: ಈ ವಿಡಿಯೋದಲ್ಲಿ ರಶ್ಮಿಕಾ ಏನ್​ ಹೇಳಿದ್ರು ಕೇಳಿ
ಸುಂದರಿಯ ಹನಿಟ್ರ್ಯಾಪ್​ ಬಲೆಗೆ ಬಿದ್ದ ಚಿಪ್​ ದೈತ್ಯ Nvidia ಸಿಇಒ! ಚೀನಾದ ಕಿತಾಪತಿಗೆ ಅಮೆರಿಕ ಅಲ್ಲೋಲ ಕಲ್ಲೋಲ