ಯಾವುದೇ ಸಿನಿಮಾಕ್ಕೆ ಆಫರ್​ ಬಂದ್ರೂ ರಕ್ಷಿನೇ ಫೈನಲ್​ ಮಾಡೋದು: ಈ ವಿಡಿಯೋದಲ್ಲಿ ರಶ್ಮಿಕಾ ಏನ್​ ಹೇಳಿದ್ರು ಕೇಳಿ

Published : Nov 08, 2026, 06:45 PM IST
Rashmika Mandanna and Rakshit Shetty

ಸಾರಾಂಶ

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆಯಾಗಿರುವ ಹಿನ್ನೆಲೆಯಲ್ಲಿ, ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿ ನಡುವಿನ ಹಳೆಯ ನಿಶ್ಚಿತಾರ್ಥದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ತಮ್ಮ ಎಲ್ಲಾ ಪ್ರಾಜೆಕ್ಟ್​ಗಳನ್ನೂ ರಕ್ಷಿನೇ ಫೈನಲ್​ ಮಾಡೋದು ಎಂದಿದ್ದಾರೆ ರಶ್ಮಿಕಾ. ರಕ್ಷಿತ್ ಶೆಟ್ಟಿ ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಮತ್ತು ಅವರಿಬ್ಬರ ನಡುವಿನ ಬ್ರೇಕಪ್ ಬಗ್ಗೆ ಜನರಲ್ಲಿ ಕುತೂಹಲ ಮೂಡಿಸಿದೆ.

ನ್ಯಾಷನಲ್ ಕ್ರಷ್​ ರಶ್ಮಿಕಾ ಮಂದಣ್ಣ ಮತ್ತು ಬಹುಕಾಲದ ಗೆಳೆಯ ವಿಜಯ ದೇವರಕೊಂಡ (Rashmika Mandanna and Vijaya Devarakonda marriage) ಮದುವೆಯಾಗಿ ಸುಖಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಇದಾಗಲೇ ಇಬ್ಬರೂ ಸಿನಿಮಾಕ್ಕೆ ವಾಪಸ್​ ಕೂಡ ಆಗಿದ್ದು, ಸಕತ್​ ಬಿಜಿ ಇದ್ದಾರೆ. ಆದರೆ ರಶ್ಮಿಕಾ ಮಂದಣ್ಣ ಹೆಸರು ಬಂದಾಗಲೆಲ್ಲಾ, ಸ್ಯಾಂಡಲ್​ವುಡ್​ ಸ್ಟಾರ್​ ರಕ್ಷಿತ್​ ಶೆಟ್ಟಿ ಅವರ ಹೆಸರು ಬರುತ್ತಲೇ ಇರುತ್ತವೆ. ಇದಕ್ಕೆ ಕಾರಣ, ಈ ಹಿಂದೆ ರಶ್ಮಿಕಾ ಮತ್ತು ರಕ್ಷಿತ್​ ಶೆಟ್ಟಿ ಎಂಗೇಜ್​ಮೆಂಟ್​ ಆಗಿತ್ತು. ಆದರೆ ಅವರು ಮದುವೆಯಾಗಿರಲಿಲ್ಲ. ಆದ್ದರಿಂದ ರಕ್ಷಿತ್​ ಶೆಟ್ಟಿ ಹೆಸರು ಮತ್ತೆ ಕೇಳಿಬರುತ್ತಿದೆ.

ಆ ಸಮಯದಲ್ಲಿ ರಶ್ಮಿಕಾ ಮಂದಣ್ಣ ಪ್ರತಿಯೊಂದನ್ನೂ ರಕ್ಷಿತ್​ ಶೆಟ್ಟಿ ಬಳಿ ಕೇಳಿಯೇ ಡಿಸೈಡ್​ ಮಾಡುತ್ತಿದ್ದರು ಎನ್ನುವಂಥ ವಿಡಿಯೋ ಒಂದು ಮತ್ತೀಗ ವೈರಲ್​ ಆಗುತ್ತಿದೆ. ಅದರಲ್ಲಿ ರಶ್ಮಿಕಾ ಮಂದಣ್ಣ, ನಾನು ಯಾವುದೇ ಸ್ಕ್ರಿಪ್ಟ್​ ಬಂತು ಎಂದೂ ರಕ್ಷಿಯನ್ನೇ ಕೇಳೋದು. ಅವನೇ ಪ್ರೊಡ್ಯೂಸರ್​ ಯಾರು, ಡೈರೆಕ್ಟರ್​ ಯಾರು, ನಟ ಯಾರು, ನಿನಗೆ ಕನ್​ಫರ್ಟ್​ ಇದ್ಯಾ ಎಂದೆಲ್ಲಾ ಕೇಳ್ತಾನೆ. ಆಮೇಲೆ ನಾನು ಒಪ್ಪಿಕೊಳ್ಳುವುದು ಎಂದಿದ್ದಾರೆ. ಇಷ್ಟೆಲ್ಲಾ ಇದ್ದ ಮೇಲೆ ಇವರಿಬ್ಬರ ನಡುವೆ ಬಿರುಕು ಏಕೆ ಬಿಟ್ಟಿತು ಎನ್ನೋದೇ ಎಲ್ಲರ ಪ್ರಶ್ನೆಯಾಗಿದೆ.

ರಶ್ಮಿಕಾ ಕೊಟ್ಟಿದ್ದರು ಈ ಕಾರಣ

ಅದಕ್ಕೂ ಮುನ್ನ, ರಕ್ಷಿತ್​ ಶೆಟ್ಟಿ ಅವರ ಎಂಗೇಜ್​ಮೆಂಟ್​ ಮುರಿದು ಬಿದ್ದಾಗ, ಇವರಿಬ್ಬರ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ರಶ್ಮಿಕಾ ತಮ್ಮ ಪೋಷಕರೊಂದಿಗೆ ಸಮಾಲೋಚಿಸಿ ತಮ್ಮ ವೃತ್ತಿಜೀವನವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ, ಕಾರಣ ಕೊನೆಗೂ ಬಹಿರಂಗಗೊಳ್ಳಲಿಲ್ಲ. ಆದರೆ, ರಶ್ಮಿಕಾ ಅವರು ಸ್ಯಾಂಡಲ್​ವುಡ್​ನಲ್ಲಿ ಎಂಟ್ರಿ ಪಡೆಯುವುದಕ್ಕಾಗಿ ರಕ್ಷಿತ್​ ಅವರನ್ನು ದಾಳವಾಗಿ ಬಳಸಿಕೊಂಡರು ಎನ್ನುವ ಮಾತು ಬಹಳ ಕೇಳಿಬರತೊಡಗಿತ್ತು. ರಕ್ಷಿತ್ ಮತ್ತು ರಶ್ಮಿಕಾ ಜುಲೈ 2017 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸೂಪರ್‌ಹಿಟ್ ಚಿತ್ರ ಕಿರಿಕ್ ಪಾರ್ಟಿಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಇದು ರಶ್ಮಿಕಾ ಅವರು ಕನ್ನಡ ಚಿತ್ರರಂಗದಲ್ಲಿ ನೆಲೆಯೂರಲು ಸಾಧ್ಯವಾಗಿತ್ತು. ಆದರೆ, ಕೊನೆಗೆ ಸಂಬಂಧ ಮುರಿದು ಹೋಯ್ತು.

ಸೋಷಿಯಲ್​ ಮೀಡಿಯಾದಿಂದ ದೂರ

2018ರಲ್ಲಿ ಇವರಿಬ್ಬರೂ ಬೇರೆಯಾಗಿದ್ದ ಸಂದರ್ಭದಲ್ಲಿ ರಕ್ಷಿತ್​ ಶೆಟ್ಟಿ (Rakshit Shetty) ಸೋಷಿಯಲ್​ ಮೀಡಿಯಾದಿಂದ ಭಾರಿ ದೂರ ಉಳಿದಿದ್ದರು. ಅಷ್ಟಕ್ಕೂ ಈಗಲೂ ಅದೇಸ್ಥಿತಿ ಇದೆ. 2018ರಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಯಾಗಿದ್ದಾಗ ರಕ್ಷಿತ್​ ಅವರು ಮಾಡಿರುವ ಪೋಸ್ಟ್​ ಇದೀಗ ಮತ್ತೊಮ್ಮೆ ವೈರಲ್​ ಆಗುತ್ತಿದೆ. ರಶ್ಮಿಕಾ-ವಿಜಯ್​ ಮದುವೆಯ ಸುದ್ದಿ ಸದ್ದು ಮಾಡಿದಾಗಿನಿಂದ ಇಂದಿನವರೆಗೂ ಈ ಪೋಸ್ಟ್​ ವೈರಲ್ ಆಗುತ್ತಲೇ ಇರುತ್ತದೆ. ಇದರಲ್ಲಿ, ರಕ್ಷಿತ್​ ಶೆಟ್ಟಿ ಅವರು, ನಾನು ನನ್ನ ಕೆಲಸದ ಮೇಲೆ ಕೇಂದ್ರೀಕರಿಸಲು ಬಯಸಿದ್ದರಿಂದ ಸಾಮಾಜಿಕ ಮಾಧ್ಯಮದಿಂದ ದೂರವಿದ್ದೇನೆ. ಇದಕ್ಕೂ, ರಶ್ಮಿಕಾ ಮಂದಣ್ಣ ಸಂಬಂಧಕ್ಕೆ ಯಾವುದೇ ಲಿಂಕ್​ ಇಲ್ಲ. ದಯವಿಟ್ಟು ಎರಡನ್ನೂ ಒಟ್ಟಿಗೇ ಸೇರಿಸಬೇಡಿ. ನೀವೇ ಏನೋ ಒಂದನ್ನು ನಿರ್ಣಯಿಸಬೇಡಿ ಎಂದಿದ್ದರು.ಗೌರವಾನ್ವಿತ ಜನರೇ, ನಾನು ಇತರ ವಿಷಯಗಳ ಮೇಲೆ ಗಮನಹರಿಸಲು ಸಾಮಾಜಿಕ ಮಾಧ್ಯಮದಿಂದ ಹೊರಗುಳಿಯುತ್ತೇನೆ ಎಂದು ಘೋಷಿಸಿದ್ದೆ. ಆದರೆ ಕೆಲವು ವಿಷಯಗಳನ್ನು ಸ್ಪಷ್ಟಪಡಿಸಲು ನಾನು ಹಿಂತಿರುಗಬೇಕಾಯಿತು ಎನ್ನುವ ಮೂಲಕ ಈ ಸ್ಪಷ್ಟನೆ ಕೊಟ್ಟಿದ್ದರು. ಇದೇ ವೇಳೆ, ಅವರು ಇದೇ ಪೋಸ್ಟ್​ನಲ್ಲಿ ನನ್ನನ್ನು ಶಾಂತಿಯಿಂದ ಬದುಕಲು ಬಿಟ್ಟುಬಿಡಿ. ಏನನ್ನೂ ಪ್ರಶ್ನಿಸಬೇಡಿ ಎನ್ನುವ ಮೂಲಕ, ತಾವು ನೋವಿನಲ್ಲಿ ಇರುವ ಬಗ್ಗೆ ಪರೋಕ್ಷವಾಗಿ ತಿಳಿಸಿದ್ದರು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕತ್ರಿನಾ- ವಿಕ್ಕಿ ಪುತ್ರನಿಗೆ ಒಂದು ವರ್ಷ: ಮೊದಲ ಬಾರಿಗೆ ಮಗನ ಮುಖ ರಿವೀಲ್​ ಮಾಡಿದ ತಾರಾ ಜೋಡಿ
ಸುಂದರಿಯ ಹನಿಟ್ರ್ಯಾಪ್​ ಬಲೆಗೆ ಬಿದ್ದ ಚಿಪ್​ ದೈತ್ಯ Nvidia ಸಿಇಒ! ಚೀನಾದ ಕಿತಾಪತಿಗೆ ಅಮೆರಿಕ ಅಲ್ಲೋಲ ಕಲ್ಲೋಲ