ಅಂದು ಕೊಟ್ಟ ಸೋಪ್​ನಿಂದ ಶುರುವಾದ ಲವ್​, ಇಂದು ಮದ್ವೆವರೆಗೆ; ಶಿಶಿರ್​-ಐಶ್ವರ್ಯಾ ರೋಚಕ ಪ್ರೇಮ ಕಥೆ

Published : Nov 08, 2026, 04:55 PM IST
Shishir Sharstri and Aishwarya Shindhogi

ಸಾರಾಂಶ

ಬಿಗ್‌ಬಾಸ್ ಖ್ಯಾತಿಯ ಐಶ್ವರ್ಯ ಸಿಂಧೋಗಿ ಮತ್ತು ಶಿಶಿರ್‌ ಶಾಸ್ತ್ರಿ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇವರಿಬ್ಬರ ಪ್ರೀತಿಯ ಕಥೆಯು ಕೈಯಿಂದ ಮಾಡಿದ ಸೋಪಿನ ವ್ಯಾಪಾರದಿಂದ ಶುರುವಾಗಿದೆ. ಅಭಿಮಾನಿಗಳ ಊಹೆಗಳೆಲ್ಲವೂ ಈಗ ನಿಜವಾಗಿವೆ.

ಬಿಗ್‌ಬಾಸ್‌ ಮನೆಯಲ್ಲಿ ಲವ್‌, ರೊಮಾನ್ಸ್‌ ಅಲ್ಲಿಂದ ಹೊರಕ್ಕೆ ಬರುತ್ತಿದ್ದಂತೆಯೇ ಕಿತ್ತಾಟ, ನಾನ್ಯಾರೋ ನೀನ್ಯಾರೋ ಎಂದುಕೊಳ್ಳುವುದೆಲ್ಲ ಸರ್ವೇ ಸಾಮಾನ್ಯ. ಇದು ಎಲ್ಲಾ ಭಾಷೆಗಳ ಬಿಗ್‌ಬಾಸ್‌ನಲ್ಲಿ ಕೇಳಿ ಬರುವುದೇ. ಆದರೆ ಹಾಗೆ ಮಾಡದೇ ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರಿಂದ ಹೊರಕ್ಕೆ ಬಂದ ಮೇಲೂ ಅದೇ ರೀತಿ ಫ್ರೆಂಡ್‌ಷಿಪ್‌ ಉಳಿಸಿಕೊಂಡವರು ಐಶ್ವರ್ಯ ಸಿಂಧೋಗಿ (Aishwarya Sindhogi) ಮತ್ತು ಶಿಶಿರ್‌ ಶಾಸ್ತ್ರಿ (Shishir Shastry). ಈ ಜೋಡಿ ಹೊರಗಡೆ ಸಾಕಷ್ಟು ಬಾರಿ ಕಾಣಿಸಿಕೊಂಡಿದ್ದರಿಂದ, ಜೊತೆಗೆ ಒಟ್ಟಾಗಿ ವಿವಿಧ ಸ್ಥಳಗಳಿಗೆ ಹೋಗಿ ಬರುತ್ತಿದ್ದುದರಿಂದ ಇವರಿಬ್ಬರ ಬಾಂಡಿಂಗ್‌ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿತ್ತು. ಇವರಿಬ್ಬರೂ ನಿಜ ಜೀವನದಲ್ಲಿ ಒಂದಾಗಲಿ, ಮದುವೆಯಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದರು. ಆದರೆ ನೀವಿಬ್ಬರೂ ಮದ್ವೆಯಾಗ್ತೀರಾ ಎಂದು ಕೇಳಿದಾಗ ಜೋಡಿ, ನಮಗಿಬ್ಬರಿಗೂ ಸಾಕಷ್ಟು ಮದುವೆ ಪ್ರಪೋಸಲ್‌ ಬಂದಿವೆ. ನಾವಿಬ್ಬರೂ ಬ್ಯುಸಿನೆಸ್‌ ಪಾರ್ಟನರ್‌ ಆಗಬಹುದು ಅಷ್ಟೇ, ಆದರೆ ಸಂಗಾತಿಗಳಾಗಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಹೀಗಾಗಿ ಈ ಮೂಲಕ ನಾವು ಪ್ರೇಮಿಗಳಲ್ಲ, ಮದುವೆ ಆಗಲ್ಲ ಎಂದಿದ್ದರು.

ಸಾಕಷ್ಟು ರೀಲ್ಸ್​

ಇದಾದ ನಂತರವೂ ಇವರಿಬ್ಬರೂ ಮೈಚಳಿ ಬಿಟ್ಟು ಸಾಕಷ್ಟು ರೀಲ್ಸ್​ಗಳಲ್ಲಿ ಕಾಣಿಸಿಕೊಂಡಿದ್ದರಿಂದ ಇವರಿಬ್ಬರ ನಡುವೆ ಏನೋ ಇದೆ ಎಂದು ಅಭಿಮಾನಿಗಳು ಹೇಳಿದ್ದುಂಟು. ಕೊನೆಗೆ ಎಲ್ಲದ್ದಕ್ಕೂ ತೆರೆ ಎಳೆದಿದ್ದ ಜೋಡಿ, ಈಚೆಗೆ ತಾವು ಎಂಗೇಜ್​ ಆಗಿರುವ ವಿಷ್ಯ ರಿವೀಲ್​ ಮಾಡಿದ್ದರು. 'ಊಹೆಗಳ ಹಿಂದೆ ಒಂದು ಕಥೆಯಿತ್ತು. ನಗುವಿನ ಹಿಂದೆ ಒಂದು ಪ್ರೀತಿಯಿತ್ತು.Comments ಹಿಂದೆ ನಿಮ್ಮ ಕುತೂಹಲವಿತ್ತು. ಇಂದು ಆ ಕಥೆಗೆ ಒಂದು ಸುಂದರವಾದ ಹೆಸರಿದೆ — AISHIR. ಇಷ್ಟು ದಿನ ನಮ್ಮ ಕಥೆಯನ್ನು ನಿಮ್ಮದೇ ಕಥೆಯಂತೆ ಪ್ರೀತಿಸಿದ ಎಲ್ಲರಿಗೂ ಧನ್ಯವಾದಗಳು. From all the speculations to a lifetime of celebrations. Not just a rumour anymore. It’s our forever beginning' ಎಂದು ಅವರು ತಮ್ಮ ವಿಡಿಯೋಗೆ ಬರೆದುಕೊಳ್ಳುವ ಮೂಲಕ ಎಂಗೇಜ್​ಮೆಂಟ್​ ಆಗಿರುವ ವಿಷ್ಯವನ್ನು ಹೇಳಿಕೊಂಡಿದ್ದರು.

ಸೋಪ್​ನಿಂದ ಶುರುವಾದ ಲವ್​

ಇದೀಗ ನ್ಯೂಸೋ ನ್ಯೂಸು ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಅವರು, ತಮ್ಮಿಬ್ಬರ ಲವ್​ ಸ್ಟೋರಿ ಎಲ್ಲಿಂದ ಶುರುವಾಗಿದ್ದು ಎನ್ನುವ ಬಗ್ಗೆ ಮಾತನಾಡಿದ್ದಾರೆ. ಈ ಕುರಿತು ಮಾತನಾಡಿರುವ ಐಶ್ವರ್ಯ ಸಿಂಧೋಗಿ, ತಮ್ಮ ಅಪ್ಪ ಹೋದಮೇಲೆ ಅವರ ಬಿಜಿನೆಸ್​​ ಹ್ಯಾಂಡ್​ಓವರ್​ ಮಾಡಿ ನಾನು ಹ್ಯಾಂಡ್​ಮೇಡ್​ ಸೋಪ್​ ಮತ್ತು ಇತರ ಪರ್ಫ್ಯೂಮ್​ ಬಿನಿನೆಸ್​ ಶುರು ಮಾಡಿದ್ದೆ. ಅಮೆರಿಕದಲ್ಲಿ ಈ ಬಗ್ಗೆ ಕೋರ್ಸ್ ಕೂಡ ಮಾಡಿದ್ದೆ. ಮಾಲ್​ಗಳಲ್ಲಿ ಹಾಗೂ ಇತರ ಕಡೆಗಳಲ್ಲಿ ಮಳಿಗೆಗಳನ್ನು ಇಟ್ಟುಕೊಂಡು ಬಿಜಿನೆಸ್​ ಮಾಡುತ್ತಿದ್ದೆ. ಈಗಲೂ ಅದನ್ನು ಮಾಡುತ್ತಿದ್ದೇನೆ' ಎಂದಿದ್ದಾರೆ.

ಆ ಸಮಯದಲ್ಲಿ ಶಿಶಿರ್​ ನನ್ನ ಕ್ಲೈಂಟ್​ ಆಗಿದ್ದರು. ಅವರಿಗೂ ನಾನು ಸೋಪ್​ ತೆಗೆದುಕೊಳ್ಳುವಂತೆ ಹೇಳಿದ್ದೆ. ಅದರ ಜೊತೆ ಫೋಟೋ ಕ್ಲಿಕ್ಕಿಸಿ ಪ್ರಮೋಟ್​ ಮಾಡಲು ಹೇಳಿದ್ದೆ. ಆಗ ಅವರು ಅದೇ ರೀತಿ ಮಾಡಿದ್ದರು ಎಂದಿದ್ದಾರೆ ನಟಿ. ಹೀಗೆ ಸೋಪ್​ನಿಂದ ನಮ್ಮಿಬ್ಬರ ಪರಿಚಯವಾಗಿ, ಅದಾದ ಬಳಿಕ ಪ್ರೀತಿಗೆ ತಿರುಗಿ ಈಗ ಮದುವೆಯವರೆಗೂ ಅದು ಬಂದು ನಿಂತಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕ್ರಿಕೆಟ್‌ನಲ್ಲಿ ವೇಗದ ದಾಖಲೆ, ಪ್ರೀತಿಯಲ್ಲಿ ಹೊಸ ಅಧ್ಯಾಯ! ಜಾವಗಲ್ ಶ್ರೀನಾಥ್ ಎರಡನೇ ಪತ್ನಿ ಯಾರು ಗೊತ್ತಾ?
'ನಾನು - ಶಿವಣ್ಣ ಹೋಗೋ.. ಬಾರೇ ಅಂತಲೇ ಮಾತಾಡೋದು, ಪಾರ್ವತಮ್ಮ ಬೈಯೋರು': ನಟಿ ತಾರಾ ಮೆಲುಕು!