ಸಂಬಂಧದಲ್ಲಿ ಅಣ್ಣ ತಂಗಿಯಾದ್ರೂ ಲವ್ ಮಾಡಿದ್ರು, ಮನೆಯವರು ವಿರೋಧಿಸಿದ್ದಕ್ಕೆ ಸಾವಿಗೆ ಶರಣಾದ್ರು!

Published : Feb 03, 2024, 01:28 PM IST
ಸಂಬಂಧದಲ್ಲಿ ಅಣ್ಣ ತಂಗಿಯಾದ್ರೂ ಲವ್ ಮಾಡಿದ್ರು, ಮನೆಯವರು ವಿರೋಧಿಸಿದ್ದಕ್ಕೆ ಸಾವಿಗೆ ಶರಣಾದ್ರು!

ಸಾರಾಂಶ

ಸಂಬಂಧದಲ್ಲಿ ಅಣ್ಣ ತಂಗಿಯಾದರೂ, ಪರಸ್ಪರ ಪ್ರೀತಿ ಮಾಡಿದ್ದಕ್ಕೆ ಮನೆಯವರು ವಿರೋಧಿಸಿದ್ದಾರೆ. ಇದರಿಂದ ಬೇಸತ್ತ ಜೋಡಿ ಸಾವಿಗೆ ಶರಣಾಗಿದೆ.

ಕಲಬುರಗಿ (ಫೆ.03): ಸಂಬಂಧದಲ್ಲಿ ನೀವಿಬ್ಬರೂ ಅಣ್ಣ- ತಂಗಿ ಆಗುತ್ತೀರಿ. ಪ್ರೀತಿ, ಪ್ರೇಮ ಅಂತಾ ಮಾಡಿ ಸಂಬಂಧಗಳಿಗೆ ಚ್ಯುತಿ ತರಬೇಡಿ ಎಂದು ಮನೆಯವರು ಬೈದು ಬುದ್ಧಿ ಹೇಳಿ ತಂಗಿಯನ್ನು ಬೇರೆಡೆ ಮದುವೆ ಮಾಡಿಕೊಡಲು ಮುಂದಾಗಿದ್ದಾರೆ. ಆದರೆ, ಅಣ್ಣ-ತಂಗಿ ಸಂಬಂಧವನ್ನೂ ಮೀರಿ ಇವರಿಬ್ಬರ ಪ್ರೀತಿಯೇ ಹೆಚ್ಚಾಗಿದ್ದರಿಂದ ಇಬ್ಬರೂ ಮನೆಯಿಂದ ಓಡಿಹೋಗಿ ಗುಟ್ಟಾಗಿ ಮದುವೆ ಮಾಡಿಕೊಂಡಿದ್ದಾರೆ. ನಂತರ ನಾವಿಬ್ಬರೂ ಜೀವನ ಮಾಡುವುದಕ್ಕೆ ಜನರು ಬಿಡುವುದಿಲ್ಲ ಎಂದರಿತು ಇಬ್ಬರೂ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.

ಈ ದುರ್ಘಟನೆ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಮಾಗಣಗೇರೆ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಶಶಿಕಲಾ (20) ಹಾಗೂ ಗೊಲ್ಲಾಳಪ್ಪ (24) ಎಂದು ಹೇಳಲಾಗುತ್ತಿದೆ. ಶಶಿಕಲಾ ಹಾಗೂ ಮೃತ ಗೊಲ್ಲಾಳಪ್ಪ ಇಬ್ಬರು ಕೂಡ ವರಸೆಯಲ್ಲೆ ಅಣ್ಣ ತಂಗಿ ಆಗಬೇಕು. ಅಣ್ಣ ತಂಗಿಯ ಪ್ರೀತಿಗೆ ಮನೆಯವರು ನಿರಾಕರಣೆ ಮಾಡಿದ್ದಾರೆ. ಇನ್ನು ಅಣ್ಣ ತಂಗಿ ಆಗಿದ್ದರೂ ಪ್ರೀತಿಸಿ ಮದುವೆಯಾದರೆ ಇಡೀ ಕುಟುಂಬಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಭಾವಿಸಿ ಶಶಿಕಲಾಳನ್ನು ಮದುವೆ ಮಾಡಿಕೊಡಲು ಮುಂದಾಗಿದ್ದಾರೆ.

ಹಣದಿಂದ ಚುನಾವಣೆ ಗೆಲ್ಲೋಕೆ ಆಗೊಲ್ಲ, ಸಂಘಟನಾ ಮಂತ್ರ ಪಠಿಸಿದ ಸಂಸದ ಡಿವಿ ಸದಾನಂದಗೌಡ

ಯುವತಿಯ ಕುಟುಂಬಸ್ಥರು ವಿಜಯಪುರ ಜಿಲ್ಲೆಯ ಸಿಂಧಗಿ ಗ್ರಾಮದ ಯುವಕನ ಜೊತೆ ನಿಶ್ಚಿತಾರ್ಥ ಮಾಡಿದ್ದರು. ಮುಂದಿನ ತಿಂಗಳು ಶಶಿಕಲಾ ಮದುವೆ ಕೂಡ ನಿಶ್ಚಯವಾಗಿತ್ತು. ಮದುವೆ ನಿಶ್ಚಯವಾದ ಹಿನ್ನಲೆಯಲ್ಲಿ ಆಕೆಯ ಪ್ರಿಯತಮ ಗೊಲ್ಲಾಳಪ್ಪ ನಿನ್ನೆ ರಾತ್ರಿ ಮನೆಯಿಂದ ಶಶಿಕಲಾಳನ್ನು ಕರೆದೊಯ್ದು ಮಾಗಣಪುರ ಗ್ರಾಮದ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದಾನೆ. ಬಳಿಕ ಮಾಗಣಪುರ ಗ್ರಾಮದ ಹೊರವಲಯದ ತೋಟದ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದಾರೆ.

ಈ ಪ್ರೇಮಿಗಳು ನೇಣಿಗೆ ಶರಣಾಗುವುದಕ್ಕೂ ಮುನ್ನ ಮದುವೆಯಾಗಿರುವ ಕುರಿತು ಸೆಲ್ಫಿ ಪೋಟೊ ತೆಗೆದು ವಾಟ್ಸಾಪ್ ಸ್ಟೇಟಸ್ ಹಾಕಿದ್ದು, ತಮ್ಮ ಸ್ನೇಹಿತರಿಗೂ ಕಳುಹಿಸಿದ್ದಾರೆ. ಈ ಘಟನೆ ಯಡ್ರಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಸ್ಥಳ ಭೇಟಿ ಮಾಡಿ, ಪರಿಶೀಲನೆ ಮಾಡಿದ್ದಾರೆ. ಪ್ರೇಮಿಗಳ ಮೊಬೈಲ್‌ ಅನ್ನು ವಶಕ್ಕೆ ಪಡೆದಿದ್ದಾರೆ.

ಮದುವೆಯಾಗಿ ಒಂದು ತಿಂಗಳಿಗೆ ಗಂಡನನ್ನು ಬಿಟ್ಟು ಓಡಿಹೋದ ಹೆಂಡತಿ: 
ಬೆಳಗಾವಿ:
ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಚಂದುಳ್ಳಿ ಚಲುವೆ ಮದುವೆಗೂ ಮೊದಲೇ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಆದರೆ, ಮನೆಯವರ ಬಲವಂತಕ್ಕೆ ಪ್ರೀತಿ ಮುಚ್ಚಿಟ್ಟು ಮದುವೆಯಾದ ಹೆಂಡತಿ ತನ್ನ ಹಳೇ ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ. ಲಕ್ಷಾಂತರ ರೂ. ಖರ್ಚು ಮಾಡಿ ಮದುವೆ ಮಾಡಿಕೊಂಡ ಗಂಡ ಇಬ್ಬರೂ ಚೆನ್ನಾಗಿರುವುದನ್ನು ನೋಡಿ ಸಹಿಸಿಕೊಳ್ಳಲಾಗದೇ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಹೌದು, ಮದುವೆಯಾಗಿ ಕೇವಲ ಒಂದು ತಿಂಗಳಿಗೆ ಕೈಕೊಟ್ಟು ಓಡಿ ಹೋದ ಹೆಂಡತಿ ಮತ್ತು ಆಕೆಯ ಪ್ರಿಯಕರನನ್ನು ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಹೊರ ವಲಯದಲ್ಲಿ ನಡೆದಿದೆ. 

ಬೆಳಗಾವಿ ಡಬಲ್ ಮರ್ಡರ್: ಮದುವೆಯಾಗಿ 30 ದಿನಕ್ಕೆ ಓಡಿಹೋದ ಹೆಂಡ್ತಿಯನ್ನು ಪ್ರಿಯಕರನೊಂದಿಗೆ ಕೊಲೆಗೈದ ಗಂಡ

ಯಾಸಿನ ಬಾಗೊಡೆ (21) ಹಾಗೂ ಹೀನಾಕೌಸರ್  ಸುದಾರಾಣೆ (19) ಕೊಲೆಯಾದ ಜೋಡಿಯಾಗಿದ್ದಾರೆ. ತೌಫಿಕ್ ಕ್ಯಾಡಿ (24) ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಇನ್ನು ಇಬ್ಬರ ಮೇಲೆ ಹಲ್ಲೆ ಮಾಡುವ ವೇಳೆ ಬಿಡಿಸಲು ಬಂದಿದ್ದ ತಾಯಿ ಅಮಿನಾಬಾಯಿ ಬಾಗೂಡ ಹಾಗೂ ಮಾವ ಮುಸ್ತಫಾ ಮುಲ್ಲಾನ ಮೇಲು ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಹಲ್ಲೆಗೊಳಗಾದ ಈ ಇಬ್ಬರನ್ನು ಮಿರಜ್  ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಡಬಲ್ ಮರ್ಡರ್ ಮಾಡಿದ ಆರೋಪಿ ತೌಫಿಕ್ ಸ್ಥಳದಿಂದ ಪರಾರಿ ಆಗಿದ್ದಾನೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೋಸ ಮಾಡುವ ಗಂಡನನ್ನು ಕಂಡು ಹಿಡಿಯೋದು ಹೇಗೆ?
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!