ಚಾಟ್‌ಜಿಪಿಟಿ ನೆರವಿನಿಂದ ಡೇಟಿಂಗ್ ಆ್ಯಪ್‌ನಲ್ಲಿ ಹುಡುಗಿ ಪಟಾಯಿಸಿ ಮದುವೆಯಾದ ಟೆಕ್ಕಿ!

By Suvarna NewsFirst Published Feb 2, 2024, 10:03 PM IST
Highlights

ಆರ್ಟಿಫಿಶೀಯಲ್ ಇಂಟಲಿಜೆನ್ಸ್ ಎಲ್ಲಾ ಕ್ಷೇತ್ರಕ್ಕೂ ಕಾಲಿಟ್ಟಿದೆ. ಆದರೆ ಪ್ರೀತಿ, ಪ್ರೇಮ, ಡೇಟಿಂಗ್, ಮದುವೆಗೂ AI ನೆರವಾಗುತ್ತೆ ಅನ್ನೋದು ಇದೀಗ ಸಾಬೀತಾಗಿದೆ. ಚಾಟ್‌ಜಿಪಿಟಿ ನೆರವಿನಿಂದ ಟೆಕ್ಕಿಯೊಬ್ಬ ಡೇಟಿಂಗ್ ಆ್ಯಪ್‌ನಲ್ಲಿ ಹುಡುಗಿ ಪರಿಚಯ ಮಾಡಿಕೊಂಡು ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟ ಹೈಟೆಕ್ ಪ್ರೀತಿಯ ರೋಚಕ ಘಟನೆ ಇಲ್ಲಿದೆ.

ಮಾಸ್ಕೋ(ಫೆ.02) ಡಿಜಿಟಲ್ ಜಗತ್ತಿನ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಪ್ರಾಮುಖ್ಯತೆ ಬಿಡಿಸಿ ಹೇಳಬೇಕಾಗಿಲ್ಲ. ಪ್ರತಿ ಕ್ಷೇತ್ರದಲ್ಲೂ AI(ಕೃತಕ ಬುದ್ಧಿಮತ್ತೆ) ಬಳಸಲಾಗುತ್ತಿದೆ. ಆದರೆ ಸಂಗಾತಿ ಹುಡುಕಲು, ಆಕೆ ಪ್ರೀತಿ ಗಳಿಸಲು ಈ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ನೆರವು ನೀಡಲಿದೆ ಅನ್ನೋದು ಇದೀಗ ಸಾಬೀತಾಗಿದೆ. ಟೆಕ್ಕಿಯೊಬ್ಬ ಡೇಟಿಂಗ್ ಆ್ಯಪ್‌ನಿಂದ ತನಗೆ ಸರಿಹೊಂದು ಹುಡುಗಿಯನ್ನು ಚಾಟ್‌ಜಿಪಿಟಿ ನೆರವಿನಿಂದ ಹುಡುಕಿದ್ದಾನೆ. ಬಳಿಕ ಆಕೆಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಲೂ ಇದೇ ಚಾಟ್‌ಜಿಪಿಟಿ ನೆರವು ಪಡೆದುಕೊಂಡಿದ್ದಾನೆ. ಇಷ್ಟೇ ಅಲ್ಲ, ಡೇಟಿಂಗ್ ಮಾಡಲು ದಿನಾಂಕ ಫಿಕ್ಸ್ ಮಾಡಿದ್ದು ಕೂಡ ಇದೇ ಜಾಟ್‌ಜಿಪಿಟಿ. ಚಾಟ್‌ಜಿಪಿಟಿಯಿಂದ ಗೆಳತಿಯಾದ ಅದೇ ಹುಡುಗಿಯೊಂದಿಗೆ ಮದುವೆ ಕೂಡ ನಡೆದಿದೆ. ಈ ಹೈಟೆಕ್ ಪ್ರೀತಿ, ಚಾಟ್‌ಜಿಪಿಟಿ ಲವರ್ ಬಾಯ್ ರಷ್ಯಾದ ಅಲೆಕ್ಸಾಂಡರ್ ಝದಾನ್. 

ಟಿಂಡರ್ ಡೇಟಿಂಗ್ ಆ್ಯಪ್‌ನಲ್ಲಿನ ಸಕ್ರಿಯವಾಗಿದ್ದ ಅಲೆಕ್ಸಾಂಡರ್ ಬರೋಬ್ಬರಿ 5000 ಯುವತಿಯರಿಗೆ ಸಂದೇಶ ಕಳುಹಿಸಿ ಚಾಟ್ ಮಾಡಿದ್ದ. ಆದರೆ ಯಾರೂ ಕೂಡ ಈತನ ಚಾಟ್‌ಗಾಗಿ ಮಾತಿಗಾಗಲಿ ಮಾರು ಹೋಗಲೇ ಇಲ್ಲ. ಟಿಂಡರ್ ಡೇಟಿಂಗ್ ಆ್ಯಪ್‌ನಲ್ಲಿ ಮೋಸ ಮಾಡುವ, ಮೋಸ ಮಾಡಿರುವ, ಇತರ ವಂಚನೆಗಳಿರುವ ಯುವತಿಯರ ನಡುವಿನಿಂದ ತನಗೆ ಸರಿ ಹೊಂದುವ ಹುಡುಗಿಯ ಆಯ್ಕೆ ಸವಾಲಾಗಿತ್ತು. ಇಷ್ಟೇ ಅಲ್ಲ ಇಂತಹ ಹುಡುಗಿಯ ಬಳಿಕ ಚಾಟ್ ಮಾಡುವುದು, ಮಾತನಾಡುವುದು, ಆಕೆಯ ಪ್ರೀತಿ ಗಳಿಸುವುದು ಮತ್ತಷ್ಟು ಸವಾಲಿನ ಕೆಲಸವಾಗಿತ್ತು. ಹೀಗಾಗಿ ಅಲೆಕ್ಸಾಂಡರ್ ನೇರವಾಗಿ ಚಾಟ್‌ಜಿಪಿಟಿ ಬಳಸಿದ್ದಾನೆ.

ಚಟ್ಟಂಬಡೆ, ದೋಸೆ, ಇಡ್ಲಿ ಸಾಂಬಾರ್, ChatGPT ಮೀರಿಸಿದ ಉಡುಪಿ ಹೊಟೆಲ್ ಮಾಣಿಗೆ ಮನಸೋತ ಮಹೀಂದ್ರ!

ಚಾಟ್‌ಜಿಪಿಟಿ ಹಾಗೂ ಇಥರ ಬೊಟ್ಸ್(Bots) ಮೂಲಕ ತನಗೆ ಸರಿ ಹೊಂದದೇ ಇರುವ ಯುವತಿಯರು, ಹುಡುಗಿಯರನ್ನು ಲಿಸ್ಟ್‌ನಿಂದ ಹೊರಗಿಡುವಂತೆ ಮಾಡಿದ್ದಾನೆ. ತನಗೆ ಸರಿಹೊಂದು, ತನ್ನ ಬೇಡಿಕೆ, ಆಸೆ ಆಸಾಂಕ್ಷೆ, ವ್ಯಕ್ತಿತ್ವಕ್ಕೆ ಹೊಂದುವ ಯುವತಿಯರ ಲಿಸ್ಟ್ ರೆಡಿ ಮಾಡಲು ಚಾಟ್‌ಜಿಪಿಟಿ ನೆರವು ಪಡೆದಿದ್ದಾನೆ. 

ಲಿಸ್ಟ್ ಮಾಡಿದ ಹುಡುಗಿಯರಿಗೆ ಈತ ಫೈನಲ್ ಲಿಸ್ಟ್ ಮಾಡಿದ್ದಾನೆ. ಬಳಿಕ ಚಾಟ್ ಮಾಡಲು ಆರಂಭಿಸಿದ್ದಾನೆ. ಈ ಪೈಕಿ ಕರೈನಾ ಅನ್ನೋ ಯುವತಿಯೇ ತನ್ನ ಸಂಗಾತಿ ಎಂದು ಆಯ್ಕೆ ಮಾಡಿದ್ದಾನೆ. ಇದಕ್ಕೂ ಚಾಟ್‌ಜಿಪಿ ನೆರವು ಪಡೆದಿದ್ದಾನೆ. ತನ್ನ ಮಾತುಗಾರಿಕೆ, ಹುಡುಗಿಯರಲ್ಲಿ ಮಾತನಾಡಲು ಕಷ್ಟಪಡುವ ಸ್ವಭಾವವನ್ನು ಮೂಲವಾಗಿಟ್ಟು ಪ್ರೋಗ್ರಾಂ ಬರೆದಿದ್ದಾನೆ. ಆದರೆ ಆರಂಭದಲ್ಲಿ ಚಾಟ್‌ಜಿಪಿಟಿಯ ಉತ್ತರಗಳು ಅಲೆಕ್ಸಾಂಡರ್ ನಿರೀಕ್ಷೆಗೆ ತಕ್ಕಂತೆ ಇರಲಿಲ್ಲ. ಹೀಗಾಗಿ ಮತ್ತಷ್ಟು ಟೆಕ್ ಸಹಾಯ ಪಡೆದ ಅಲೆಕ್ಸಾಂಡರ್ ಸಂಪೂರ್ಣ ಚಾಟ್‌ಗೆ ಸಿದ್ಧತೆ ಮಾಡಿದ್ದಾನೆ.

17 ವೈದ್ಯರು ಕಂಡುಹಿಡಿಯಲಾಗದ 3 ವರ್ಷದ ನೋವನ್ನು ಕೆಲ ಹೊತ್ತಲ್ಲೇ ಪತ್ತೆಹಚ್ಚಿದ ಚಾಟ್‌ಜಿಪಿಟಿ!

AI Bot ನೆರವಿನಿಂದ ಯವತಿಯ ಪರಿಚಯ ಮಾಡಿಕೊಂಡು ಚಾಟಿಂಗ್ ಆರಂಭಿಸಿದ್ದಾನೆ. ಕರೈನಾಳ ಯಾವುದೇ ಪ್ರಶ್ನೆ ಹಾಗೂ ಪ್ರತಿಕ್ರಿಯೆಗೆ, ಈತನ ರಿಪ್ಲೇ, ಚಾಟ್‌ಜಿಪಿಟಿ ನೀಡಿದ್ದ ಉತ್ತರವಾಗಿತ್ತು. ಎಲ್ಲೀವರೆಗೆ ಹೋಯಿತು ಅಂದರೆ, ಕೊನೆಗೆ ಚಾಟ್‌ಜಿಪಿಟಿ ಸಲಹೆಯಂತೆ ಭೇಟಿಯಾಗಲು,ಡೇಟಿಂಗ್ ಮಾಡಲು ದಿನಾಂಕ ಫಿಕ್ಸ್ ಮಾಡಿದ್ದಾನೆ. 

ಪ್ರೀತಿ ಗಾಢವಾಯಿತು, ಮದುವೆ ದಿನಾಂಕವೂ ಫಿಕ್ಸ್ ಆಯಿತು. ರಿಜಿಸ್ಟರ್ ಆಫೀಸ್‌ನಲ್ಲಿ ಮದುವೆ ಪ್ರಕ್ರಿಯೆ ಮುಗಿದ ಬಳಿಕ ತನ್ನ ಪತ್ನಿ ಕರೈನಾಗೆ ಸತ್ಯವನ್ನು ಬಿಚ್ಚಿಟ್ಟಿದ್ದಾನೆ. ಅತ್ತ ಕರೈನಾ ಆಗಲೇ ಪ್ರೀತಿಯಲ್ಲಿ ಬಿದ್ದಿದ್ದ ಕಾರಣ ಎಲ್ಲವೂ ಸುಖಾಂತ್ಯಗೊಂಡಿದೆ.  ಅಲೆಕ್ಸಾಂಡರ್ , ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು, ಆಧುನಿಕ ಜಗತ್ತಿನಲ್ಲಿ ಆಧುನಿಕ ಪರಿಹಾರ ಹಾಗೂ ಸೂತ್ರಗಳೇ ಸರಿ ಎಂದಿದ್ದಾನೆ.
 

click me!