
ನವದೆಹಲಿ (ಫೆ.1): ಡೇಟಿಂಗ್ ಮತ್ತು ರಿಲೇಷನ್‌ಷಿಪ್‌ಗಳ ಅಧ್ಯಾಯವನ್ನು ಒಳಗೊಂಡಿರುವ ಸಿಬಿಎಸ್‌ಇಯ 9 ನೇ ತರಗತಿಯ ಮೌಲ್ಯ ಶಿಕ್ಷಣ ಪಠ್ಯಪುಸ್ತಕದ ಸ್ಕ್ರೀನ್‌ಶಾಟ್ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. 'ಡೇಟಿಂಗ್ ಮತ್ತು ರಿಲೇಷನ್‌ಷಿಪ್‌ಗಳು (ನಿಮ್ಮನ್ನು ಮತ್ತು ಇತರ ವ್ಯಕ್ತಿಗಳನ್ನು ಅರ್ಥಮಾಡಿಕೊಳ್ಳುವುದು) ಎಂಬ ಶೀರ್ಷಿಕೆಯ ಅಧ್ಯಾಯವು ಸಿಬಿಎಸ್‌ಇ ಹೈಸ್ಕೂಲ್ ಪಠ್ಯಕ್ರಮದಲ್ಲಿ ಇರುವುದು ಸೋಶಿಯಲ್ ಮೀಡಿಯಾದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಡೇಟಿಂಗ್ ಮತ್ತು ರಿಲೇಷನ್‌ಷಿಪ್‌ಗಳ ಸೂಕ್ಷ್ಮ ವ್ಯತ್ಯಾಸವನ್ನು ವಿದ್ಯಾರ್ಥಿಗೆ ಅರ್ಥವಾಗುವಂತೆ ಮಾಡುವುದರ ಜೊತೆಗೆ, ಅಧ್ಯಾಯವು 'ಘೋಸ್ಟಿಂಗ್', 'ಕ್ಯಾಟ್‌ಫಿಶಿಂಗ್' ಮತ್ತು 'ಸೈಬರ್‌ಬುಲ್ಲಿಂಗ್' ಸೇರಿದಂತೆ ಆಧುನಿಕ ಡೇಟಿಂಗ್ ಪದಗಳನ್ನೂ ವಿವರಿಸಿದೆ. ಎಕ್ಸ್‌ನಲ್ಲಿ ಖುಷಿ ಎಂಬ ಬಳಕೆದಾರರು ಇದನ್ನು ಹಂಚಿಕೊಂಡಿದ್ದು, ಇದರ ಬೆನ್ನಲ್ಲಿಯೇ ಅವರ ಪೋಸ್ಟ್‌ಗೆ ಸಾಕಷ್ಟು ತಮಾಷೆಯ ಪ್ರತಿಕ್ರಿಯೆಗಳು ಬಂದಿವೆ.
"ಹದಿಹರೆಯದ ವರ್ಷಗಳಲ್ಲಿ ಗಂಭೀರವಾದ ರಿಲೇಷನ್‌ಷಿಪ್‌ನಲ್ಲಿ ಇರುವ ದೊಡ್ಡ ತೊಂದರೆಯೆಂದರೆ ಅದು ಉಂಟುಮಾಡಬಹುದಾದ ಹಾರ್ಟ್‌ಬ್ರೇಕ್. ಈ ವಯಸ್ಸಿನಲ್ಲಿ, ಹದಿಹರೆಯದವರು ಬ್ರೇಕ್‌ಅಪ್ ಮತ್ತು ರಿಜೆಕ್ಷನ್ ಎದುರಿಸಲು ಅಗತ್ಯವಾದ ಕೌಶಲ್ಯಗಳನ್ನು ಹೊಂದಿರುವುದಿಲ್ಲ. ವಯಸ್ಕರು ಇದರಿಂದ ಹೊರಬಂದು ತಮ್ಮ ಜೀವನದಲ್ಲಿ ಮುಂದುವರುತ್ತಾರಾದರೂ, ಹದಿಹರೆಯದವರಿಗೆ, ಅಂತಹ ಅನುಭವವು ದೀರ್ಘಾವಧಿಯ ಗಾಯಗಳನ್ನು ಉಂಟುಮಾಡಬಹುದು, ಅದು ಅವರೊಂದಿಗೆ ಹಲವು ವರ್ಷಗಳವರೆಗೆ ಉಳಿಯುತ್ತದೆ' ಎಂದು ಆ ಅಧ್ಯಾಯಗಳಲ್ಲಿ ಬರೆಯಲಾಗಿದೆ.
ಇನ್ನು ಈ ಪಾಠ ಸೋಶಿಯಲ್ ಮೀಡಿಯಾ ಬಳಕೆದಾರರ ಗಮನಸೆಳೆದಿದೆ. ಈಗಾಗಲೇ 7 ಲಕ್ಷಕ್ಕೂ ಅಧಿಕ ವೀವ್ಸ್‌ಗಳು ಈ ಟ್ವೀಟ್‌ಗೆ ಬಂದಿದೆ. ಇದರ ಕುರಿತಾಗಿ ಸಾಕಷ್ಟು ಬಗೆಯ ಪರ ವಿರೋಧದ ಚರ್ಚೆಗಳು ಕೂಡ ಕಾಮೆಂಟ್ ಸೆಕ್ಷನ್‌ನಲ್ಲಿ ನಡೆದಿದೆ. 'ಇದು ಸಿಬಿಎಸ್‌ಸಿ ಸ್ಕೂಲ್‌ಗಳಲ್ಲಿ ಮಾತ್ರ ನಡೆಯುತ್ತದೆ. ಆದರೆ, ನಮ್ಮ ಟೀಚರ್‌ಗಳು ಸಂತಾನೋತ್ಪತ್ತಿ (ರಿಪ್ರೊಡಕ್ಷನ್) ಚಾಪ್ಟರ್‌ಅನ್ನೇ ಸ್ಕಿಪ್ ಮಾಡುತ್ತಾರೆ' ಎಂದು ಒಬ್ಬರು ಬರೆದಿದ್ದರೆ, ಇದು ಜನರೇಷನ್ ಝಡ್ ಜಮಾನ, ಏನ್ ಬೇಕಾದರೂ ನಡೆಯಬಹುದು ಎಂದು ಕಾಮೆಂಟ್ ಮಾಡಿದ್ದಾರೆ.
ಇದಕ್ಕೆ ನಾವು ಆಡ್ಮಿಷನ್ ಎಲ್ಲಿ ಪಡೆದುಕೊಳ್ಳೋದು ಎಂದು ಇನ್ನೊಬ್ಬರು ಪ್ರಶ್ನೆ ಮಾಡಿದ್ದರೆ, ಇದೇ ಕಾರಣಕ್ಕೆ ಇಂದಿನ ಮಕ್ಕಳಿಗೆ ಕ್ರಶ್ ಮತ್ತ ಲವ್ ಇರುತ್ತದೆ. ನಾವು ಮಾತ್ರ ಇನ್ನೂ ಸಿಂಗಲ್ ಆಗಿಯೇ ಇದ್ದೇವೆ. ನಮ್ಮ ಕಾಲದಲ್ಲಿ ಇದನ್ನು ಹೇಳಿಕೊಡಲು ಬುಕ್ ಕೂಡ ಇದ್ದಿರಲಿಲ್ಲ ಎಂದು ಬರೆದಿದ್ದಾರೆ.
ಲಂಡನ್‌ನಲ್ಲಿ ಬಾಲಿವುಡ್ ನಟಿ ಜೊತೆ ಪ್ರೀತಿಲಿ ಬಿದ್ದ ಟೀಂ ಇಂಡಿಯಾ ಸ್ಟಾರ್, 8 ವರ್ಷಗಳ ಡೇಟಿಂಗ್ ಬಳಿಕ ಮದುವೆ
ಇದಲ್ಲಿ ಇನ್ನೊಂದು ಚಾಪ್ಟರ್ ಕೂಡ ಇರಬೇಕು, ಒಂದು ಬಾರಿ ಮೋಸ ಮಾಡಿದಲ್ಲಿ ಅದು ಆಕೆಯಾಗಲಿ, ಅವನಾಗಲಿ ಅವರಿಗೆ ಮತ್ತೊಂದು ಚಾನ್ಸ್ ನೀಡಬಾರದು ಎನ್ನುವ ಚಾಪ್ಟರ್ ಕೂಡ ಇರಬೇಕು ಎಂದು ಹೇಳಿದ್ದಾರೆ. ಈ ವೈರಲ್ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಟಿಂಡರ್ ಇಂಡಿಯಾ, ಮುಂದಿನ ಚಾಪ್ಟರ್‌ನಲ್ಲಿ ಬ್ರೇಕಾಪ್‌ಗಳನ್ನು ಎದುರಿಸುವುದು ಹೇಗೆ ಎಂದಿರಬಹುದು ಎಂದು ಟ್ವೀಟ್ ಮಾಡಿದೆ.
ಸೂಪರ್ ಸ್ಟಾರ್ ಜತೆ ಡೇಟಿಂಗ್‌ನಲ್ಲಿದ್ದು ಬ್ರೇಕಪ್ ಬಳಿಕ ಅದೇ ನಟನ ಕುಟುಂಬ ವೈದ್ಯನನ್ನು ಮದುವೆಯಾದ ಸ್ಟಾರ್ ನಟಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.